Subscribe to Updates
Get the latest creative news from FooBar about art, design and business.
- ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’
- ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ
- ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!
- ಕೊರಟಗೆರೆ: ಜಿ.ಎಂ.ಕಾಮರಾಜ್ ಪಶ್ಚಿಮ ರೈಲ್ವೆ ಬೋರ್ಡ್ ನಿರ್ದೇಶಕರಾಗಿ ಆಯ್ಕೆ
- ಭ್ರಷ್ಟಾಚಾರ ಆರೋಪ: ಶ್ರವಣೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ತಮಟೆ ಚಳವಳಿ
- ಚಿರತೆ ದಾಳಿಯಿಂದಾಗಿ ಮಹಿಳೆ ಸಾವು: ದಾಳಿ ನಡೆದ 24 ಗಂಟೆ ಒಳಗೆ ಚಿರತೆ ಸೆರೆ
- ತಿಪಟೂರು: ಡಿಸೆಂಬರ್ 24ರಂದು ‘ಸಾಂಸ್ಕೃತಿಕ ವೈಭವ’ ಬೃಹತ್ ಕಾರ್ಯಕ್ರಮ
- ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Author: admin
ಫೇಸ್ ಬುಕ್ ನಲ್ಲಿ ಚೆಂದ ಚೆಂದದ ಹುಡುಗಿಯರು ಸಿಕ್ರು ಅಂತ ಸ್ನೇಹ ಬೆಳೆಸೋಕೆ ಮುಂಚೆ ಕೊಂಚ ಜೋಕೆ. ಫೇಸ್ಬುಕ್ ಅಲ್ಲಿ ಫ್ರೆಂಡ್, ಲವ್ ಅಂತ ನಂಬಿಕೊಂಡ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.ಇಲ್ಲೊಬ್ಬ ವ್ಯಕ್ತಿಯ ಕಥೆ ಅದೇ ಆಗಿದೆ. ಫೇಸ್ಬುಕ್ನಿಂದಾದ ಮಹಿಳೆ ಜತೆಗಿನ ಪರಿಚಯಕ್ಕೆ 35 ಲಕ್ಷ ಬೆಲೆ ತೆತ್ತಿದ್ದಾರೆ.ಬೆಂಗಳೂರಿನ ನಿವಾಸಿಯಾಗಿರುವ 48 ವರ್ಷದ ವಿನ್ಸೆಂಟ್ ಎಂಬುವರು ಬಜಾಜ್ ಫೈನಾನ್ಸ್ ಯೂನಿಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.ಫೇಸ್ಬುಕ್ನಲ್ಲಿ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ ಇವರಿಂದ 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ. ನ್ಯಾನ್ಸಿ ವಿಲಿಯಂ ಫೇಸ್ಬುಕ್ನಲ್ಲಿ ಮೊದಲಿಗೆ ವಿನ್ಸೆಂಟ್ಗೆ ಫ್ರೆಂಡ್ ರಿಕ್ವೆಸ್ ಕಳಿಸಿದ್ದಾಳೆ.ನಂತ್ರ ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾಳೆ.ಈ ಸ್ನೇಹ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಳ್ಳುವಲ್ಲಿವರೆಗೂ ಹೋಗಿದೆ. ನಂತ್ರ ಇಬ್ಬರ ನಡುವೆ ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್, ಕಾಲಿಂಗ್ ಎಲ್ಲ ನಡೆಯುತ್ತೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್ ಆರಂಭಿಸೋಣ ಅಂತ ಡಿಸ್ಕಸ್ ಆಗಿ…
ಪಾವಗಡ: ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದುವುದರಿಂದ ಹೆಚ್ಚು ಹೆಚ್ಚು ಅಂಕ ಗಳಿಸಲು ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಕಾರ್ಯದರ್ಶಿಗಳಾದ ಡಾ.ಜಿ. ವೆಂಕಟರಾಮಯ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟಾ ನರಸಿಂಹ ಮೂರ್ತಿ ಮಾತನಾಡಿ, ಮಾನಂ ಶಶಿಕಿರಣ್ ಅಧ್ಯಕ್ಷತೆಯ ಹೆಲ್ಪ್ ಸೊಸೈಟಿ ಸಂಸ್ಥೆ ಸದಾ ಸಮಾಜ ಮುಖಿ ಸೇವೆಯ ಜೊತೆಗೆ, ಶಿಕ್ಷಣಕ್ಕೆ ಹೆಚ್ಚು ಪ್ರಾತಿನಿದ್ಯ ನೀಡುತ್ತಿದೆ. ಇಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಪಿ ಯು ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ತಾಲ್ಲೂಕಿಗೆ ಹಾಗೂ ಸಂಸ್ಥೆಗೆ ಕೀರ್ತಿ ದಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಸನ್ಮಾನಿಸುತ್ತಿರುವುದು ಅಭಿನಂದನರ್ಹ ಎಂದರು. ಈ ಸಂದರ್ಭದಲ್ಲಿ ರೋಟರಿ…
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು.ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ನಲ್ಲಿರು ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ.ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು. ಇದೇ ವೇಳೆ ಮಾತನಾಡಿದ ವಿಶ್ವನಾಥ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲು ಮರದ ತಿಮ್ಮಕ್ಕ…
ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ಮಾಜಿ ಕೋಚ್ ರವಿಶಾಸ್ತ್ರಿ ಕಾರಣ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಶೀದ್ ಲತಿದ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಲತೀಫ್ ಅವರು ಟೀಮ್ ಇಂಡಿಯಾ ಕೋಚ್ ಆಗಲು ಶಾಸ್ತ್ರಿ ಅವರಿಗೆ ಮಾನ್ಯತೆ ಇದೆಯೇ ಅಥವಾ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ. ಅವರನ್ನೇ ನಾಯಕರನ್ನಾಗಿ ನೇಮಿಸುವ ನಿರ್ಧಾರಕ್ಕೆ ಈಗ ಹಿನ್ನಡೆಯಾಗಿದೆ ಎಂದರು. ಅನಿಲ್ ಕುಂಬ್ಳೆಯಂತಹ ಆಟಗಾರನನ್ನು ಬದಿಗೆ ಸರಿಸಿ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನಕ್ಕೆ ಸೇರಿಸಿಕೊಳ್ಳುವುದು ತಪ್ಪು, ರವಿಶಾಸ್ತ್ರಿ ಅವರಿಂದಲೇ ಇದು ಸಂಭವಿಸಿದೆ, 2019 ರಲ್ಲಿ ಕುಂಬ್ಳೆಯಂತಹ ಆಟಗಾರನನ್ನು ಬದಿಗಿಟ್ಟು ರವಿಶಾಸ್ತ್ರಿ ಬಂದಿದ್ದಾರೆ, ಆದರೆ ಅವರಿಗೆ ಮಾನ್ಯತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ”ಎಂದು ರಸೀದ್ ಲತಿಫ್ ಅಭಿಪ್ರಾಯಪಟ್ಟಿದ್ದಾರೆ. ‘ಅವರು ಕಾಮೆಂಟರಿ ಮಾಡುತ್ತಿದ್ದರು, ಆದ್ದರಿಂದ ಅವರು ಕೋಚಿಂಗ್‌ನಲ್ಲಿ ಒಳಗೊಳ್ಳುವ ಅವಶ್ಯಕತೆ ಇರಲಿಲ್ಲ, ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಶಾಸ್ತ್ರಿ ಅವರನ್ನು ಒಳಗೊಳ್ಳುವಲ್ಲಿ ಇತರರ ಪಾತ್ರವು ಇರಬಹುದು ಎನ್ನುವುದರ ಖಾತ್ರಿ…
ದಕ್ಷಿಣ ಭಾರತದ ಕೇರಳದಿಂದ ಪ್ರವೇಶಿಸಿರುವ ಮಾನ್ಸೂನ್ ಈಗ ದೇಶದ ಹಲವು ರಾಜ್ಯಗಳನ್ನು ತಲುಪಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಪೂರ್ವ ಮಳೆ ಆಗುತ್ತಿದೆ. ಆದರೆ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಮುಂಗಾರು ಮಳೆಗಾಗಿ ಇನ್ನೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಭಾರತೀಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳವರೆಗೆ ದೇಶದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನಗಳವರೆಗೆ ಈ ಭಾಗಗಳಲ್ಲಿ ಧಾರಾಕಾರ ಮಳೆ: ನೈಋತ್ಯ ಮಾನ್ಸೂನ್ ಭಾರತದ ಬಹುಭಾಗವನ್ನು ಆವರಿಸುತ್ತದೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ದೆಹಲಿ-ಎನ್‌ಸಿಆರ್‌ನ ಹವಾಮಾನದಲ್ಲೂ ಗಮನಾರ್ಹ ಬದಲಾವಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 23 ಮತ್ತು 24 ರಂದು ಪಶ್ಚಿಮ ಬಂಗಾಳದಲ್ಲಿ, ಜೂನ್ 23 ರಿಂದ 26 ರಂದು ವಿದರ್ಭ, ಜೂನ್ 24ರಂದು ಬಿಹಾರದಲ್ಲಿ ಮತ್ತು ಜೂನ್ 25 ರಂದು ಜಾರ್ಖಂಡ್ ರಾಜ್ಯಗಳಲ್ಲಿ…
ಲಕ್ನೋ: 70ರ ವಯಸ್ಸಿನಲ್ಲಿ ಮದುವೆಯಾಗಲು ಹೊರಟ ವೈದ್ಯನಿಗೆ ಮಹಿಳೆಯೊಬ್ಬರು ಬರೋಬ್ಬರಿ1 ಕೋಟಿ 80 ಲಕ್ಷ ರೂ. ವಂಚಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ಖ್ಯಾತ ಹೃದಯ ತಜ್ಞ ವೈದ್ಯರೊಬ್ಬರು ಪತ್ನಿಯ ನಿಧನದ ಹಿನ್ನೆಲೆ ಒಂಟಿತನ ನಿವಾರಿಸಲು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ. ಇವರು ಅಂದುಕೊಂಡಂತೆಯೇ 40 ವರ್ಷ ವಯಸ್ಸಿನ ಕ್ರಿಶ ಎಂಬ ಮಹಿಳೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು . ಮದುವೆ ಕಥೆ ಹೇಳಿಯೇ ವೈದ್ಯನಿಂದ ಕ್ರಿಶ ಹಣ ವಸೂಲಿ ಮಾಡಲು ಆರಂಭಿದಿದ್ದು, ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದಾಳೆ. ಮಹಿಳೆ ಸಂಪರ್ಕಕ್ಕೆ ಸಿಗದೇ ಇರುವಾಗ ತಾನು ಮೋಸ ಹೋಗಿರುವುದು ವೈದ್ಯನ ಅರಿವಿಗೆ ಬಂದಿದೆ. ಬಳಿಕ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿವಾಹ ಜಾಹೀರಾತು ಮೂಲಕ ತನಗೆ ಮಹಿಳೆಯ ಪರಿಚಯವಾಗಿತ್ತು ಎಂದು ವೈದ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ತಿಪಟೂರು: ಪಠ್ಯಪುಸ್ತಕವನ್ನು ಸಮಾಲೋಚನೆ ನಡೆಸದೆ ಪರಿಷ್ಕರಿಸಿದ ಸರಕಾರದ ನಡೆ ಮತ್ತು ಆರೆಸ್ಸೆಸ್ ವಿಚಾರಧಾರೆಗಳ ವಿರುದ್ಧ ಚಡ್ಡಿ ಸುಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದ್ದಾರೆ. ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್ ವಿಚಾರಧಾರೆಗಳನ್ನು ವಿರೋಧಿಸುವುದು ನಮ್ಮ ಉದ್ದೇಶವಾಗಿತ್ತು. ನಾವು ಶಿಕ್ಷಣ ಸಚಿವರ ಗೃಹ ಕಚೇರಿ ಎದುರು ಪ್ರತಿಭಟನೆ ಶುರು ಮಾಡಿ, ಅರ್ಧ ಗಂಟೆ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಗೃಹಸಚಿವರು ಆಪಾದಿಸಿರುವ ಅಂತೆ ನಮಗೆ ಸಚಿವರ ಮನೆಗೆ ಬೆಂಕಿ ಹಚ್ಚುವ ಉದ್ದೇಶವಿದ್ದರೆ ಪೊಲೀಸರು ಬರುವವರೆಗೂ ನಾವು ಕಾಯಬೇಕಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ವಿನಾಕಾರಣ ನಮ್ಮ ವಿರುದ್ಧ ಸ್ಪೋಟಕ ಕಾಯ್ದೆಯಂತಹ ಕಠಿಣ ಕಾಯ್ದೆ ದಾಖಲಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಇನ್ನುಮುಂದೆ ಆರೆಸ್ಸೆಸ್ ವಿಚಾರಧಾರೆಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು. ತಾಲೂಕು ಅಧ್ಯಕ್ಷ ಹೇಮಂತ್ , ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು, ಕೆಪಿಸಿಸಿ ಸದಸ್ಯ…
ಇಂದಿನ ಬದಲಾಗುತ್ತಿರುವ ಜೀವನಶೈಲಿಯಲ್ಲಿ, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ತುಂಬಾ ಮುಖ್ಯ. ಇದು ನಿಮ್ಮ ದೇಹವನ್ನು ಬಲಪಡಿಸುವುದಲ್ಲದೆ, ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ ನಾವು ನಮ್ಮ ದೇಹದ ಆಮ್ಲಜನಕದ ಮಟ್ಟದ ಬಗ್ಗೆಯೂ ಕೂಡ ವಿಶೇಷ ಗಮನಹರಿಸಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ.ಹೀಗಿರುವಾಗ ನಾವು ನಮ್ಮ ಆಹಾರದ ಬಗ್ಗೆಯೂ ಕೂಡ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ನಾವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಬದಲಿಗೆ, ನಮ್ಮ ಆಹಾರದಲ್ಲಿ ನಾವು ಕೆಲವು ಹಣ್ಣುಗಳನ್ನು ಸೇರಿಸಿಕೊಳ್ಳಬೇಕು ಅಷ್ಟೇ. ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸರಿಪಡಿಸಲು ಯಾವು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ: ಪಿಯರ್ ಹಣ್ಣು -ನಾವು ನಮ್ಮ ಆಹಾರದಲ್ಲಿ ಪಿಯರ್ ಹಣ್ಣನ್ನು ಸೇರಿಸುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಅದು ಸಹಾಯ ಮಾಡುತ್ತದೆ, ಪಿಯರ್ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಪ್ರೋಟೀನ್, ಫೈಬರ್ ಮತ್ತು ತಾಮ್ರದಂತಹ ಪೋಷಕಾಂಶಗಳಿವೆ. ಇವು ನಮ್ಮ ಆರೋಗ್ಯಕ್ಕೆ…
ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪೂರ್ವಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಅದರ ಬಗ್ಗೆಯೂ ಅರಿವಿದೆ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಏನೇ ಆದರೂ ನಾವು ನಮ್ಮ ನಾಯಕರ ಜತೆ ಇರುತ್ತೇವೆ, ಕಷ್ಟಕಾಲದಲ್ಲಿ ಅವರ ಜತೆ ನಿಂತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ…
ಪತ್ನಿ ಐಂದ್ರಿತಾ ಜೊತೆ ಗೋವಾ ಪ್ರವಾಸದಲ್ಲಿದ್ದ ದಿಗಂತ್ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಅಪಘಾತ ಸಂಭವಿಸಿದ್ದು, ಕುತ್ತಿಗೆಗೆ ಭಾರೀ ಪೆಟ್ಟಾಗಿದೆ. ಗೋವಾದ ಸಮುದ್ರ ದಡದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವಾಗ ಬಿದ್ದು ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡೊಸಿ ಅವರನ್ನು ಗೋವಾದಿಂದ ಬೆಂಗಳೂರಿಗೆಏರ್ ಲಿಫ್ಟ್ ಮಾಡಲಾಗಿದೆ. ಮಗನ ಆರೋಗ್ಯ ಸ್ಥಿತಿಯ ಬಗ್ಗೆ ತಂದೆ ಹೇಳಿದ್ದೇನು? ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ.ವಿದ್ಯಾಧರ್ ದಿಗಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ದಿಗಂತ್ ತಂದೆ, ತಾಯಿ ಹಾಗೂ ನಿರ್ದೇಶಕ ಯೊಗರಾಜ್ ಭಟ್ ಆಗಮಿಸಿದ್ದಾರೆ. ಪುತ್ರ ದಿಗಂತ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ತಂದೆ ಕೃಷ್ಣಮೂರ್ತಿ, ಜಿಮ್ನಾಸ್ಟಿಕ್ ಕರಗತ ಮಾಡಿಕೊಂಡಿದ್ದ. ಹೆದರುವ ಅವಶ್ಯಕತೆ ಇಲ್ಲ. ಆಯತಪ್ಪಿ ಬಿದಿದಾನೆ ಅಷ್ಟೇ ಏನು ಆಗಿಲ್ಲ. ಅವನು ಆರಾಮಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇವತ್ತೇ ದಿಗಂತ್ ಅವರಿಗೆ ಆಪರೇಷನ್: ಏರ್‌ಲಿಫ್ಟ್ ಮಾಡಿದ ಸಂದರ್ಭದಿಂದಲೂ ದಿಗಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬೆನ್ನು ಮೂಳೆ ಮತ್ತು ಸ್ಪೈನಲ್ ಕಾರ್ಡ್‌ಗೆ ಗಂಭೀರ…