ಪತ್ನಿ ಐಂದ್ರಿತಾ ಜೊತೆ ಗೋವಾ ಪ್ರವಾಸದಲ್ಲಿದ್ದ ದಿಗಂತ್ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಅಪಘಾತ ಸಂಭವಿಸಿದ್ದು, ಕುತ್ತಿಗೆಗೆ ಭಾರೀ ಪೆಟ್ಟಾಗಿದೆ. ಗೋವಾದ ಸಮುದ್ರ ದಡದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವಾಗ ಬಿದ್ದು ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡೊಸಿ ಅವರನ್ನು ಗೋವಾದಿಂದ ಬೆಂಗಳೂರಿಗೆಏರ್ ಲಿಫ್ಟ್ ಮಾಡಲಾಗಿದೆ.
ಮಗನ ಆರೋಗ್ಯ ಸ್ಥಿತಿಯ ಬಗ್ಗೆ ತಂದೆ ಹೇಳಿದ್ದೇನು?
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ.ವಿದ್ಯಾಧರ್ ದಿಗಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ದಿಗಂತ್ ತಂದೆ, ತಾಯಿ ಹಾಗೂ ನಿರ್ದೇಶಕ ಯೊಗರಾಜ್ ಭಟ್ ಆಗಮಿಸಿದ್ದಾರೆ. ಪುತ್ರ ದಿಗಂತ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ತಂದೆ ಕೃಷ್ಣಮೂರ್ತಿ, ಜಿಮ್ನಾಸ್ಟಿಕ್ ಕರಗತ ಮಾಡಿಕೊಂಡಿದ್ದ. ಹೆದರುವ ಅವಶ್ಯಕತೆ ಇಲ್ಲ. ಆಯತಪ್ಪಿ ಬಿದಿದಾನೆ ಅಷ್ಟೇ ಏನು ಆಗಿಲ್ಲ. ಅವನು ಆರಾಮಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಇವತ್ತೇ ದಿಗಂತ್ ಅವರಿಗೆ ಆಪರೇಷನ್:
ಏರ್‌ಲಿಫ್ಟ್ ಮಾಡಿದ ಸಂದರ್ಭದಿಂದಲೂ ದಿಗಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬೆನ್ನು ಮೂಳೆ ಮತ್ತು ಸ್ಪೈನಲ್ ಕಾರ್ಡ್‌ಗೆ ಗಂಭೀರ ಪೆಟ್ಟು ಎಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಅಪರೇಷನ್ ಮಾಡಲೇಬೇಕು ಎಂದು ಗೋವಾ ವೈದ್ಯರು ಹೇಳಿದ್ದರಂತೆ. ಗೋವಾ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಸಫೆಸ್ಟಿಕೇಟೆಡ್ ವ್ಯವಸ್ಥೆ ಇರಲಿಲ್ಲ. ಈ ಹಿನ್ನೆಲೆ ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದಿಗಂತ್ ಸಹೋದರ ಅಕಾಶ್ ಖಾಸಗಿ ಜೆಟ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಅಪಘಾತವಾದ ಸಂದರ್ಭದಿಂದಲೂ ದಿಗಂತ್ ಪತ್ನಿ ಐಂದ್ರಿತಾ ಜೊತೆಯಲ್ಲೇ ಇದ್ದಾರೆ. ದಿಗಂತ್ ಅವರಿಗೆ ಇವತ್ತು ಸಂಜೆಯೇ ಆಪರೇಷನ್ ಮಾಡಲಾಗುತ್ತೆ ಎಂದು ಮಾಹಿತಿ ಲಭ್ಯವಾಗಿದೆ.
ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ:
ಮಣಿಪಾಲ್ ಆಸ್ಪತ್ರೆಗೆ 4.30ಕ್ಕೆ ನಟ ದಿಗಂತ್ ಬಂದಿದ್ದಾರೆ. ಬೆನ್ನುಮೂಳೆ ವಿಭಾಗದ ಮುಖ್ಯಸ್ಥರಾದ ಡಾ.ವಿದ್ಯಾಧರ್ ಎಸ್ ರವರ ನೇತೃತ್ವದಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿದೆ. ದಿಗಂತ್ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. 2 ದಿನಗಳ ಹಿಂದೆ ಗೋವಾದಲ್ಲಿ ಸ್ಪೋರ್ಟ್ಸ್ ಇಂಜುರಿ ಆಗಿದೆ. ಗೋವಾದಲ್ಲಿದ್ದ ಮಣಿಪಾಲ್ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆ ನಡೆಯುತ್ತಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz