Author: admin

ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿವಾದ ತೀವ್ರಗೊಂಡಿರುವ ವೇಳೆ, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಇದೆ. ಆ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಈ ವಿಷಯ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಏನೇನು ಆಗುತ್ತಿದೆ, ಬೇರೆ ಬೇರೆ ರಾಜ್ಯಗಳಲ್ಲಿ ಏನು ಆಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದರು. ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಈ ಸಂಬಂಧ ಸಂಜೆಯ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಡಿಸಿ, ಸಿಇಒ ಗಳ ಜತೆ ಸಭೆ ಸುಮಾರು ನಾಲ್ಕು ತಾಸು ನಿನ್ನೆ ಡಿಸಿಗಳ ಜತೆಗೆ ಸಭೆ ಮಾಡಿದ್ದೇನೆ. ಇವತ್ತು ಸಿಇಒಗಳ ಜೊತೆಗೆ ಸಭೆ ಮಾಡಿದ್ದೇನೆ. ಯಾವ ರೀತಿ ರಾಜ್ಯದ ಆಡಳಿತ ಚುರುಕು, ಜನಪರ ಆಗಿರಬೇಕು ಅಂತ ಹೇಳಿದ್ದೇನೆ. ಯೋಜನೆಗಳನ್ನು ದಕ್ಷತೆಯಿಂದ ಸಮಯಬದ್ದವಾಗಿ ಜನರಿಗೆ ಮುಟ್ಟಿಸಬೇಕು ಅಂತ ಹೇಳಿದ್ದೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ…

Read More

ರಾಜ್ಯದಲ್ಲಿ ಆರಂಭವಾಗಿರುವ ಆಜಾನ್ ವಿರುದ್ಧದ ಸುಪ್ರಭಾತ ಅಭಿಯಾನಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದು, ಮೊದಲು ಪ್ರಮೋದ್ ಮುತಾಲಿಕ್ ಅಂತವರನ್ನು ಒದ್ದು ಒಳಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಪ್ರಮೋದ್ ಮುತಾಲಿಕ್ ಮಾಡುತ್ತಿದ್ದಾರೆ. ಇಂತವರನ್ನು ಮೊದಲು ಒದ್ದು ಒಳಗೆ ಹಾಕಬೇಕು. ಇಲ್ಲವಾದಲ್ಲಿ ಸರ್ವಜನಾಂಗದ ಶಾಂತಿಯ ತೋಟವಾಗಿರುವ ರಾಜ್ಯದಲ್ಲಿ ಶಾಂತಿ ಉಳಿಯಲು ಸಾಧ್ಯವಿಲ್ಲ ಎಂದರು. ಮುತಾಲಿಕ್ ಅವರದ್ದು ಶ್ರೀರಾಮಸೇನೆಯೋ ? ರಾವಣ ಸೇನೆಯೋ ? ಎಂದು ಪ್ರಶ್ನಿಸಿರುವ ಹೆಚ್.ಡಿ.ಕೆ, ಅನಗತ್ಯವಾಗಿ ಧಾರ್ಮಿಕ ಸಂಘರ್ಷಗಳನ್ನು ಹುಟ್ಟುಹಾಕಿ, ಶಾಂತಿ ಕದಡುವ ವಾತಾವರಣ ಸೃಷ್ಟಿಸಲಾಗುತ್ತಿದೆ. ಇಂತಹ ಘಟನೆ ನಡೆಯುತ್ತಿದ್ದರು ಸರ್ಕಾರ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಯಾಕೆ ? ಸರ್ಕಾರ ಮೌನವಾಗಿ ಒಪ್ಪಿಗೆ ನೀಡುವುದನ್ನು ನಿಲ್ಲಿಸಬೇಕು. ವಿಷಬೀಜ ಬೆಳೆಯಲು ಬಿಡಬಾರದು ಎಂದು ಒತ್ತಾಯಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ತುರುವೇಕೆರೆ: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಶೀತಲವಾಡಿ ಗ್ರಾಮದ ಮುದ್ದಮ್ಮ ಕೊಂ ತಿಮ್ಮಯ್ಯ ಎಂಬ ವಯೋವೃದ್ದೇಯು ಪ್ರವಾಸಕ್ಕೆ ಬಂದಿದ್ದ ವೇಳೆ ಜನ ಜಂಗುಳಿಯ ಮಧ್ಯೆ ಕುಟುಂಬಸ್ಥರಿಂದ ದೂರವಾಗಿದ್ದಾರೆ. ಇದೇ ವೇಳೆ ತುರುವೇಕೆರೆ ಪೊಲೀಸ್ ಪುನೀತ್ ಅವರಿಗೆ ವೃದ್ಧ ಸಿಕ್ಕಿದ್ದು, ಅವರು, ಠಾಣಾಧಿಕಾರಿಗಳಾದ ಪಿಎಸ್ಐ ಕೇಶವಮೂರ್ತಿ ಅವರ ನೇತೃತ್ವದಲ್ಲಿ ತಾಲೂಕಿನ  ಮಾಯಸಂದ್ರ- ಟಿ-ಬಿ.ಕ್ರಾಸ್ ಸಮೀಪ ಇರುವ ವೃದ್ಧಾಶ್ರಮದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಇನ್ನೂ ವೃದ್ಧ ನಾಪತ್ತೆಯಾಗಿರುವ ಬಗ್ಗೆ ಮುದ್ದಮ್ಮನ ಪುತ್ರ ರುದ್ರಯ್ಯ ತುರುವೇಕೆರೆ ಪೊಲೀಸ್ ಠಾಣೆ ಬಂದು ಮಾಹಿತಿ ನೀಡಿದ್ದು,  ಈ ವೇಳೆ ತಾಯಿ ಪೊಲೀಸರ ಸುಪರ್ದಿಯಲ್ಲಿ ಸುರಕ್ಷಿತರಾಗಿರುವುರುವುದು ತಿಳಿದು ಬಂದಿದ್ದು, ಬಳಿಕ ನಮ್ಮ ಜೊತೆ ತಾಯಿಯನ್ನು ಕಳುಹಿಸಿ ಕೊಡಿ ಎಂದು ಅವರು ಮನವಿ ಮಾಡಿದ್ದು, ಇದೀಗ ತಾಯಿಯನ್ನು ಮಗನ ಜೊತೆಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದೇ ಪೊಲೀಸರು, ಕಳೆದು ಹೋದ ತಾಯಿಯನ್ನು ಪುತ್ರನ ಜೊತೆಗೆ ಕಳುಹಿಸಿ ಕೊಟ್ಟಿದ್ದಾರೆ. ಪೊಲೀಸರ ಸಾರ್ವಜನಿಕ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ: ಸಚಿನ್ ಮಾಯಸಂದ್ರ…

Read More

ತುರುವೇಕೆರೆ: ಹೊನ್ನಾಂಬ ನಾಟಕ ಮಂಡಳಿ ದಂಡಿನಶಿವರ ಮತ್ತು ಯಡಿಯೂರು ಸಾಂಸ್ಕೃತಿಕ ವೇದಿಕೆ, ಮಾಯಸಂದ್ರ ಕಲಾಭಿಮಾನಿ ಬಳಗ ವತಿಯಿಂದ ಭಾನುವಾರ ಸಂಜೆ, ಬಸ್ಟಾಂಡ್ ಸನ್ಮಾನ್ ಹೋಟೆಲ್ ನ ಬಾಣಸಿಗ ಮತ್ತು ಕಲಾವಿದ ಗೋಪಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಈ ವೇಳೆ ಶಿಕ್ಷಕರು ಮತ್ತು ಕಲಾವಿದರಾದ ಪ್ರಕಾಶ್ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಬಡತನದ ಕಲಾವಿದರಿದ್ದಾರೆ,ಆದರೇ  ಕಲೆಗೆ ಬಡತನವಿಲ್ಲ, ಎಂಬ ಉದಾಹರಣೆಗೆ ಕಲಾವಿದ ಗೋಪಿಯೇ ಸಾಕ್ಷಿಯಾಗಿದ್ದಾರೆ. ರಾಮಾಯಣ ಎಂಬ ಪೌರಾಣಿಕ ನಾಟಕದಲ್ಲಿ 51ನೇ ಭಾರಿ ಜಟಾಯು ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.ಮತ್ತು ತುರ್ತು ಸಂದರ್ಭಗಳಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿಯಾಗಿ ಅದ್ಭುತವಾದ ಅಭಿನಯವನ್ನು ಮಾಡಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಬಾಣಸಿಗ ವೃತ್ತಿಯನ್ನು ಮಾಡುತ್ತಾ, ಕಲೆಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ. ಎಷ್ಟು ದೊಡ್ಡ ನಾಟಕವಾದರೂ‌ ಸರಿಯೇ, ಯಾವ ಸ್ಥಳಗಳಲ್ಲಿ ಆದರೂ ಸರಿಯೇ, ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ, ಪೌರಾಣಿಕ ನಾಟಕವನ್ನು ವೀಕ್ಷಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಬಹು ಮುಖ್ಯವಾಗಿದೆ ಎಂದರು. ಈ…

Read More

ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ಸೊಂದು ಅಪಘಾತಕ್ಕೀಡಾದ ಪರಿಣಾಮ 25ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,  ಭಾನುವಾರ ತಡರಾತ್ರಿ  ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ 4 ಮಂದಿಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದ್ದು, 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದು, 45 ಪ್ರಯಾಣಿಕರಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ. ಅಪಘಾತಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತಮೂರು ವರ್ಷಗಳ ನಂತರ ಭಾನುವಾರ ಆಲಿಕಲ್ಲು ಮಳೆ ಸುರಿದಿದ್ದು,  ಆರ್ಭಟ ಹಿರಿಯೂರು ನಗರದಲ್ಲಿ ಜೋರಾಗಿಯೇ ಇತ್ತು. ಬಿರುಗಾಳಿ ಸಹಿತ‌ ಮಳೆಯ ಪರಿಣಾಮ ಮನೆ ಶೀಟುಗಳು , ಹೆಂಚುಗಳು ಹಾನಿಗೊಳಗಾಗಿವೆ. ಇನ್ನೊಂದೆಡೆ ಆಲಿಕಲ್ಲು ಮಳೆಗೆ ಟೊಮೆಟೋ ಸೇರಿದಂತೆ ಹಲವು ತರಕಾರಿ ಬೆಳೆಗಳಿಗೆ ಹಾನಿಯಾಗಿವೆ. ಬೃಹತ್ ಮರಗಿಡಗಳು ಧರೆಗುರುಳಿದ್ದು, ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಹಿರಿಯೂರು ನಗರ ಪ್ರದೇಶದ ಸೇರಿದಂತೆ ಬಹುತೇಕ ರಸ್ತೆಗಳು ನೀರಿನಿಂದ ಜಲವೃತವಾಗಿದ್ದು, ಇದರಿಂದಾಗಿ ಜನರು ಪರದಾಡುವಂತಾಗಿತ್ತು. ಇನ್ನು ಬಿರುಗಾಳಿಯ ರಭಸಕ್ಕೆ ಅಂಗಡಿ ಮುಂಗಟ್ಟುಗಳಲ್ಲಿ ಹಾಕಿದ್ದ  ಶೀಟುಗಳು ಗಾಳಿಗೆ ಹಾರಿಹೋಗಿವೆ. ಹಿರಿಯೂರು ನಗರದಲ್ಲಿ ಮಳೆಯೇ ಇಲ್ಲದ ಬರಡು ಭೂಮಿಯಾಗಿದ್ದು, ಇಂದು ಸುರಿದ ಆಲಿಕಲ್ಲು ಮಳೆಯಿಂದ ಹಾನಿಯಾಗಿದ್ದರೂ ಜನರ ಮುಖದಲ್ಲಿ ಹರುಷ ತುಂಬಿತ್ತು. ವರದಿ: ಮುರುಳಿಧರನ್ ಆರ್.,  ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದಲ್ಲಿ ಶನಿವಾರದಂದು  ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣವು ಆಂಗ್ಲ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಮೂಲಕ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಒತ್ತಾಯಿಸಿತು. ಈ ಸಂದರ್ಭ ಮಾತನಾಡಿದ ತಾಲ್ಲೂಕು ಅಧ್ಯಕ್ಷರಾದ ಉದಯ್ ಶಂಕರ್,  ಕನ್ನಡನಾಡಿನಲ್ಲಿ ಹುಟ್ಟಿ, ಬೆಳೆಯುತ್ತಿರುವ ನಾವುಗಳು ಕನ್ನಡವನ್ನು ಮರೆತು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಉದಯ್ ಶಂಕರ್ ,ಗೌರವಾಧ್ಯಕ್ಷರಾದ ಗೋ ಬಸವರಾಜ್, ಉಪಾಧ್ಯಕ್ಷರಾದ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾದ ಡಿ ಕೆ ಎಸ್ ದಾದಾಪೀರ್, ನಗರ ಉಪಾಧ್ಯಕ್ಷರಾದ ನೂರುಲ್ಲಾ, ನಗರ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್  ಸುಹೇಲ್, ನಗರ ಲಗೇಜ್ ಆಟೋ ಘಟಕ ಅಧ್ಯಕ್ಷರಾದ ಎಂ ಕೆ ಜಾಫರ್, ಸ್ವಾಮಿ, ಗಜ, ಇತರರು ಹಾಜರಿದ್ದರು. ವರದಿ:  ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಹಿರಿಯೂರು:  ಹಿರಿಯೂರು ತಾಲ್ಲೂಕಿನಲ್ಲಿ ನಾನು ಮಾಡಿದ  ಅಭಿವೃದ್ಧಿ  ಕಾರ್ಯಕ್ರಮಗಳ ಬಗ್ಗೆ  ಟೀಕೆ ಮಾಡಲು  ಡಿ. ಸುಧಾಕರ್ ರವರಿಗೆ ಯಾವುದೇ ನೈತಿಕತೆ ಇಲ್ಲ  ಎಂದು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ  ಹುಳಿಯಾರ್  ರಸ್ತೆಯಲ್ಲಿರುವ  ನಗರದ  ಶಾಸಕರ ಕಾರ್ಯಾಲಯದಲ್ಲಿ ನಗರಕ್ಕೆ ವಸತಿ ಸಚಿವ ಸೋಮಣ್ಣ ಪ್ರವಾಸ ಕೈಗೊಂಡಿರುವ ಕುರಿತಂತೆ ವಸತಿ ಯೋಜನೆ ಕಾರ್ಯಕ್ರಮದ ಬಗ್ಗೆ  ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,   ಸ್ಲಂಬೋರ್ಡ್ ವತಿಯಿಂದ 477 ಮತ್ತು 988 ಮನೆಗಳ ನಿರ್ಮಾಣ ಆಗಲಿವೆ, ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಮೂಲಕ 76 ಮತ್ತು 24 ಮನೆಗಳ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಮೇ 10 ರಂದು ಮಂಗಳವಾರ ವಸತಿ ಸಚಿವ ವಿ.ಸೋಮಣ್ಣ ನಗರಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿ+2 ಮಾದರಿಯ 624 ಹಾಗೂ 1248 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ  ಎಂದು  ಶಾಸಕಿ ಪೂರ್ಣಿಮಾ…

Read More

ಪಾವಗಡ:  ತಾಲೂಕು ನಿಡಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಮಂಗಳವಾಡ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ  ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಜನ್ಮದಿನಾಚರಣೆಯನ್ನು ನಾಡಕಛೇರಿ ಮುಂಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕಳಸ ಹೊತ್ತ ಮಹಿಳೆಯರು, ಕುಣಿತ , ತಮಟೆ,  ವಾದ್ಯಗಳು ವಿಶೇಷವಾಗಿ ಗಮನ ಸೆಳೆದವು. ಶಾಸಕ ವೆಂಕಟರವಣಪ್ಪ ಹಾಗೂ ಗಣ್ಯರು ಅಂಬೇಡ್ಕರ್ ಹಾಗೂ ಬುದ್ಧರ ಚಿತ್ರಕ್ಕೆ ಬಣ್ಣ ನೀಡಿ ಮೂಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕ ವೆಂಕಟರಮಣಪ್ಪ , ಮಂಗಳವಾಡ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಯುವಕರು ಬಹಳ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸಿದರು. ನನಗೆ ಬಹಳ ಸಂತೋಷವಾಗಿದೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ನಾವು ಜಾಗದಲ್ಲಿ ಬಂದು ಭಾಷಣ ಮಾಡುತ್ತಿರಲಿಲ್ಲ. ಅಂಬೇಡ್ಕರ್ ಸಂವಿಧಾನ ಕೊಟ್ಟಿರುವುದು ನಮಗೆ ಧೈರ್ಯವಾಗಿ ನಿಂತುಕೊಂಡು ಮಾತನಾಡಬಹುದು ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ  ಬಸವಲಿಂಗಪ್ಪ ಮಾತನಾಡಿ,  ಅಂಬೇಡ್ಕರ್ ಬಗ್ಗೆ…

Read More

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 400 ಕೋಟಿ ರೂ ಬಿಡುಗಡೆ ಮಾಡಲಾಗಿದೆ.  ಈ ವೇಳೆ ಮಾತನಾಡಿದ ಪಿಂಜಾರ ನದಾಫ್ ಜನಾಂಗದ ಅಧ್ಯಕ್ಷರಾದ ಅಬ್ದುಲ್ ಬಶೀರ್,  ಸರ್ಕಾರದಿಂದ ಸುಮಾರು 25 ಜನಾಂಗದವರಿಗೆ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ತುಂಬಾ ಸಂತೋಷವಾಗಿದೆ.  ಆದರೆ ಈವರೆಗೆ ನಮ್ಮ ನದಾಫ್ ಪಿಂಜಾರ ಜನಾಂಗ ನಮ್ಮ ಜಿಲ್ಲೆಯಲ್ಲಿ ನೋಂದಣಿಯಾಗಿಲ್ಲ ಹಾಗೂ ನಮ್ಮ ನದಾಫ್ ಪಿಂಜಾರ ಜನಾಂಗಕ್ಕೆ ಸರ್ಟಿಫಿಕೇಟ್ ಕೊಡಿ ಎಂದರೆ ಮೂಲ ದಾಖಲಾತಿಗಳನ್ನು ಕೇಳುತ್ತಾರೆ  ಎಂದರು. ನಾವು ಪಿಂಜಾರ ನದಾಫ್ ಜಾತಿಯಾಗಿ ಸರ್ಕಾರದ ಅನುಕೂಲ ಪಡೆಯಲು ಆಗುತ್ತಿಲ್ಲ.  ಈ ಬಗ್ಗೆ ಸರ್ಕಾರದ ಗಮನಕ್ಕೆ ಹಲವು ಬಾರಿ ತಂದರೂ ಸಹ ನಮಗೆ ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು. ವರದಿ:  ಎ.ಎನ್. ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More