nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಾಸರಹಳ್ಳಿ ಚೇತನ್ ಬಿಜೆಪಿ ಮಂಡಲ ಯುವಾಧ್ಯಕ್ಷ

    May 31, 2026

    ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ: ವೆಂಕಟರಮಣಪ್ಪ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ

    May 31, 2026

    ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ: ಜೂನ್ 4 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ

    May 31, 2026
    Facebook Twitter Instagram
    ಟ್ರೆಂಡಿಂಗ್
    • ದಾಸರಹಳ್ಳಿ ಚೇತನ್ ಬಿಜೆಪಿ ಮಂಡಲ ಯುವಾಧ್ಯಕ್ಷ
    • ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ: ವೆಂಕಟರಮಣಪ್ಪ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ
    • ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ: ಜೂನ್ 4 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ
    • ಕಬಡ್ಡಿ ಆಟಗಾರ್ತಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆಗೆ ಆಗ್ರಹಿಸಿ ಸರಗೂರು ಪಟ್ಟಣದಲ್ಲಿ ದಸಂಸ ಪ್ರತಿಭಟನೆ
    • ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಲು ಆರ್ಯ ಈಡಿಗ ಸಮಾಜದ ಯುವ ಮುಖಂಡ ಆರ್ಯ ಮಹೇಶ್ ಮನವಿ
    • ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ ಗೆ ಒತ್ತಾಯ
    • ಸರಗೂರು: ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಲು ಒತ್ತಾಯ
    • ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ: ಜೂ.3ರಂದು ಪ್ರಮಾಣವಚನ ಸ್ವೀಕಾರ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೋಹಿತ್ ಚಕ್ರತೀರ್ಥ ಆರ್‌ ಎಸ್‌ ಎಸ್‌ ಗಂಜಿ ಗಿರಾಕಿ : ರಾಮಲಿಂಗಾರೆಡ್ಡಿ
    ರಾಜ್ಯ ಸುದ್ದಿ June 12, 2022

    ರೋಹಿತ್ ಚಕ್ರತೀರ್ಥ ಆರ್‌ ಎಸ್‌ ಎಸ್‌ ಗಂಜಿ ಗಿರಾಕಿ : ರಾಮಲಿಂಗಾರೆಡ್ಡಿ

    By adminJune 12, 2022No Comments2 Mins Read
    ramalinga reddy

    ಗಂಜಿ ಗಿರಾಕಿ ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್‌ ಗಂಜಿ ಕೇಂದ್ರದಿಂದ ಬಂದವರು. ಸತ್ಯವಲ್ಲದ ವಿಷಯಗಳನ್ನು ಪಠ್ಯದಲ್ಲಿ ಸೇರಿಸಿ ನಾಡಿನ ಚೇತನಗಳಿಗೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರಾದ ನಾಗೇಶ್ ಅವರು ಹೆಸರಿಗೆ ಅಷ್ಟೇ ಮಂತ್ರಿಯಾಗಿದ್ದಾರೆ. ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇವರೆಲ್ಲ ಗೊಂಬೆಗಳಿದ್ದಂತೆ. ಆರ್‍ಎಸ್‍ಎಸ್ ಕೀ ಕೊಟ್ಟಂತೆ ಗೊಂಬೆಗಳು ತಿರುಗುತ್ತದೆ ಎಂದು ವ್ಯಂಗ್ಯವಾಡಿದರು.
    ಸಂವಿಧಾನ ಶಿಲ್ಪಿ ಅಂಬೇಡ್ಕರ್, ನಾರಾಯಣಗುರು ಅವರ ಪಠ್ಯಗಳನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಪಾಠವನ್ನು ತಿರುಚಲಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.


    Provided by
    Provided by

    ಚನ್ನಣ್ಣ ವಾಲಿಕಾರ್ ಅವರು ಬರೆದ 6ನೇ ತರಗತಿಯಲ್ಲಿದ್ದ ಅಂಬೇಡ್ಕರ್ ಪಾಠವನ್ನು ಕೈಬಿಟ್ಟಿದ್ದಾರೆ. 9ನೇ ತರಗತಿಯ ಸಂವಿಧಾನದ ಪಾಠ ತಿರುಚಿ ಅಲ್ಲದೆ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ, ಗೊಂದಲ ಮೂಡಿಸಿದ್ದು, ಪರಿಷ್ಕರಣೆ ನೆಪದಲ್ಲಿ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದು ಆರ್‍ಎಸ್‍ಎಸ್ ಹಿಡನ್ ಅಜೆಂಡಾ. ಪರಿಷ್ಕರಣೆ ನೆಪದಲ್ಲಿ ಹಿಡನ್ ಅಜೆಂಡಾ ಜಾರಿಗೆ ತಂದಿದ್ದಾರೆ.

    ಪರಿಷ್ಕರಣಾ ಸಮಿತಿಯಲ್ಲಿ ತಜ್ಞರು ಇರುತ್ತಿದ್ದರು. ಆದರೆ ರೋಹಿತ್ ಚಕ್ರತೀರ್ಥ ಅವರಿಗೆ ಅಗತ್ಯ ವಿದ್ಯಾರ್ಹತೆಯೇ ಇಲ್ಲ. ಅವರು ಆರ್‍ಎಸ್‍ಎಸ್‍ನಿಂದ ಬಂದವರು ಎಂದು ಹೇಳಿದರು. 10ನೇ ತರಗತಿಯ ಅಂಬೇಡ್ಕರ್ ಪಾಠ ತಿರುಚಲಾಗಿದೆ. ಬುದ್ದ, ಬಸವ, ಅಂಬೇಡ್ಕರ್ ಎಲ್ಲ ಪಾಠಗಳನ್ನು ಸರ್ಕಾರ ಕೈಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಸವಣ್ಣನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತಹ ಕೆಲಸ ಮಾಡಿರುವುದಲ್ಲದೆ, ಕುವೆಂಪು ಅವರನ್ನು ಅವಮಾನ ಮಾಡಿದ್ದಾರೆ. ಬ್ರಹ್ಮ ಸಮಾಜ, ಆರ್ಯ ಸಮಾಜ, ಪೆರಿಯಾರ್, ಸಾವಿತ್ರಿಬಾಯಿ ಫುಲೆ ಪಠ್ಯಗಳನ್ನು ತೆಗೆದು ಹಾಕಿದ್ದಾರೆ ಎಂದು ಹೇಳಿದರು. ರೋಹಿತ್ ಚಕ್ರತೀರ್ಥ ವಿಕೃತ ಮನುಷ್ಯ. ನಾಡಧ್ವಜಕ್ಕೂ ಅವಮಾನ ಮಾಡಿದ್ದಲ್ಲದೆ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇಂಥವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ತಪ್ಪು. ಇವರನ್ನು ಕೂಡಲೇ ಬಂಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

    ಪಠ್ಯ ಪರಿಷ್ಕರಣೆ ಬಗ್ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ಸರ್ಕಾರ ಕ್ರಮ ಜರುಗಿಸಿಲ್ಲ.ಅಕಾರದ ಮುಂದೆ ಎಲ್ಲವೂ ಗೌಣವಾಗಿದೆ. ಬಸವಣ್ಣನವರಿಗೆ ಅನ್ಯಾಯವಾಗಿದ್ದರೂ ಬೊಮ್ಮಾಯಿ ಅವರು ಚಕಾರ ಎತ್ತಿಲ್ಲ. ಕುವೆಂಪು ಅವರಿಗೆ ಅಪಮಾನ ಮಾಡಿದರೂ ಒಕ್ಕಲಿಗ ಸಮುದಾಯದ ಸಚಿವರಾದ ಆರ್. ಅಶೋಕ್, ಅಶ್ವಥ್ ನಾರಾಯಣ್, ಸೋಮಶೇಖರ್ ಮೌನವಹಿಸಿದ್ದಾರೆ.

    ಅಂಬೇಡ್ಕರ್ ಬಗ್ಗೆ ತಿರುಚಿ ಬರೆದರೂ ಸಚಿವರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರುಗಳಾಗಲಿ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಅಂಬೇಡ್ಕರ್ ಹೆಸರೇಳಿ ಶಾಸಕರಾದ ಮಹೇಶ್ ಕೂಡ ಸಾರ್ವಕರ್ ಗುಣಗಾನ ಮಾಡುತ್ತಿದ್ದಾರೆ ಎಂದು ದಲಿತ ಒಕ್ಕಲಿಗ ಲಿಂಗಾಯಿತ ಸಚಿವರ ಬಗ್ಗೆ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

    ಗಣ್ಯರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಯಚಿತ್ರ ತೆಗೆಯಲಾಗಿತ್ತು. ಈಗ ಅವರ ಪಾಠವನ್ನು ತೆಗೆದು ಹಾಕಿದರು. ಅವರದೇ ಸಮುದಾಯದ ಮುಖಂಡರಾದ ಸುನೀಲ್‍ಕುಮಾರ್ ಚಕಾರವೆತ್ತಿಲ್ಲ. ಇಷ್ಟೆಲ್ಲ ಅನ್ಯಾಯವಾದರೂ ಅಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಹೇಳಿದರು.
    ಕೆಂಪೇಗೌಡರನ್ನು ಕಡೆಗಣಿಸಿ ಜಮ್ಮುಕಾಶ್ಮೀರದ ರಾಜನನ್ನು ತಂದಿದ್ದಾರೆ. ಕೆಂಪೇಗೌಡರಿಗೆ ಅನ್ಯಾಯವಾಗಿದ್ದರೂ ಮಂತ್ರಿಗಳು ಮಾತನಾಡುತ್ತಿಲ್ಲ.
    ಸ್ವಾತಂತ್ರ್ಯ ಚಳವಳಿಯಲ್ಲಿ ಇವರ್ಯಾರು ಭಾಗವಹಿಸಿ ರಲಿಲ್ಲ. ಹೆಗ್ಡೇವಾರ್ ಬ್ರಿಟಿಷರ ಸೈನ್ಯಕ್ಕೆ ಸೇರಿಸಿ ಅವರ ಸೈನ್ಯವನ್ನು ಬಲಗೊಳಿಸಿದವರು. ಇವರಿಗೆ ಟೀಕೆ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದರು.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ: ಜೂ.3ರಂದು ಪ್ರಮಾಣವಚನ ಸ್ವೀಕಾರ!

    May 31, 2026

    ಸಿದ್ದರಾಮಯ್ಯ ಸೇವೆ ಮರೆಯಲಾಗದು; ಕರ್ನಾಟಕ ಮತ್ತು ಕಾಂಗ್ರೆಸ್ ಎಂದಿಗೂ ಕೃತಜ್ಞರಾಗಿರುತ್ತದೆ: ಮಲ್ಲಿಕಾರ್ಜುನ ಖರ್ಗೆ

    May 29, 2026

    ಮಾಜಿ ಸಚಿವ ವೆಂಕಟರಮಣಪ್ಪ ನಿಧನ: ಡಾ.ಜಿ.ಪರಮೇಶ್ವರ ಅಂತಿಮ ನಮನ

    May 29, 2026

    Leave A Reply Cancel Reply

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ದಾಸರಹಳ್ಳಿ ಚೇತನ್ ಬಿಜೆಪಿ ಮಂಡಲ ಯುವಾಧ್ಯಕ್ಷ

    May 31, 2026

    ಕೊರಟಗೆರೆ: ಬಿಜೆಪಿ ಪಕ್ಷದ ಕೊರಟಗೆರೆ ಮಂಡಲದ ಸಂಘಟನಾತ್ಮಕ ಹಿತದೃಷ್ಟಿಯಿಂದ ಬಿಜೆಪಿ ಮಂಡಲದ ವಿವಿಧ ಪದಾಧಿಕಾರಿಗಳ ಆಯ್ಕೆಯನ್ನು ನೂತನವಾಗಿ ಮಾಡಲಾಗಿದೆ ಎಂದು…

    ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ: ವೆಂಕಟರಮಣಪ್ಪ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ

    May 31, 2026

    ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ: ಜೂನ್ 4 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ

    May 31, 2026

    ಕಬಡ್ಡಿ ಆಟಗಾರ್ತಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆಗೆ ಆಗ್ರಹಿಸಿ ಸರಗೂರು ಪಟ್ಟಣದಲ್ಲಿ ದಸಂಸ ಪ್ರತಿಭಟನೆ

    May 31, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.