nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    August 14, 2026

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!

    August 14, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್
    • ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ
    • ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!
    • ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ
    • ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
    • ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    • ಆ.29: ಪಾವಗಡದಲ್ಲಿ ಉದ್ಯೋಗ ಮೇಳ
    • ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್
    ರಾಜ್ಯ ಸುದ್ದಿ August 14, 2026

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    By Ganesh TumkuruAugust 14, 2026No Comments2 Mins Read
    prajwal revanna.jpg (1)

    ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ಕಾರ್ಯಾಚರಣೆ ಹಾಗೂ ಇಲಾಖಾ ತನಿಖೆಯಲ್ಲಿ ಹಲವು ಆಘಾತಕಾರಿ ಮತ್ತು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

    ಪ್ರಜ್ವಲ್ ರೇವಣ್ಣ ಜೈಲಿನ ಬ್ಯಾರಕ್ ನಲ್ಲಿ ನಿಷೇಧಿತ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಬಳಸುತ್ತಿರುವುದು ದೃಢಪಟ್ಟಿದ್ದು, ತನಿಖೆ ತೀವ್ರಗೊಂಡಿದೆ.

    ತಂದೆ-ತಾಯಿಯ ನಂಬರ್ಗೆ ಕೋಡ್ ನೇಮ್:

    ಸಿಕ್ಕಿಬಿದ್ದ ಆಂಡ್ರಾಯ್ಡ್ ಮೊಬೈಲ್ನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ತಂದೆ ಹೆಚ್.ಡಿ. ರೇವಣ್ಣ ಅವರ ಮೊಬೈಲ್ ಸಂಖ್ಯೆಯನ್ನು ‘ಶಿವ’ ಹಾಗೂ ತಾಯಿ ಭವಾನಿ ರೇವಣ್ಣ ಅವರ ಸಂಖ್ಯೆಯನ್ನು ‘ಪಾರ್ವತಿ’ ಎಂದು ಗೌಪ್ಯವಾಗಿ ಸೇವ್ ಮಾಡಿಕೊಂಡಿರುವುದು ಪತ್ತೆಯಾಗಿದೆ.  ಪ್ರಜ್ವಲ್ ಬಳಿಯಿದ್ದ ನೋಟ್ಬುಕ್ನಲ್ಲಿ 40ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು, ಆಪ್ತರು ಹಾಗೂ ಅಪರಿಚಿತರ ಫೋನ್ ನಂಬರ್ಗಳನ್ನು ಬರೆದಿಟ್ಟುಕೊಂಡಿರುವುದು ಪತ್ತೆಯಾಗಿದೆ.

    ಸಿಸಿಬಿ ದಾಳಿ ವೇಳೆ ಹಾಸಿಗೆ ಕೆಳಗೆ ಮೊಬೈಲ್ ಸಿಕ್ಕ ತಕ್ಷಣ, ಪ್ರಜ್ವಲ್ ಅದನ್ನು ‘ನನ್ನದೇ ಮೊಬೈಲ್’ ಎಂದು ಒಪ್ಪಿಕೊಂಡಿದ್ದರು. ಆದರೆ, ಪಾಸ್ವರ್ಡ್ ಅನ್ಲಾಕ್ ಮಾಡಲು ಸೂಚಿಸಿದಾಗ “ಇದು ನನ್ನದಲ್ಲ, ಆಗಾಗ ಮನೆಯವರ ಬಳಿ ಮಾತನಾಡಲು ಮಾತ್ರ ಬಳಸುತ್ತಿದ್ದೆ” ಎಂದು ಮಾತು ಬದಲಿಸಿದ್ದರು. ಪತ್ತೆಯಾದ ಮೊಬೈಲ್ ಫೋನ್ ಹಾಗೂ ಪೆನ್ಡ್ರೈವ್ಗಳನ್ನು ಹೆಚ್ಚಿನ ವಿಧಿವಿಜ್ಞಾನ ತನಿಖೆಗಾಗಿ ಎಫ್ ಎಸ್ಎಲ್ಗೆ (FSL) ಕಳುಹಿಸಲಾಗಿದೆ.

    2 ವರ್ಷಗಳಿಂದ ಮೊಬೈಲ್ ಬಳಕೆ?

    ಇಲಾಖಾ ತನಿಖೆಯಲ್ಲಿ ತಿಳಿದುಬಂದ ಮತ್ತೊಂದು ಸ್ಫೋಟಕ ಅಂಶವೆಂದರೆ, ಪ್ರಜ್ವಲ್ ರೇವಣ್ಣ ಕಳೆದ 2024ರಿಂದಲೂ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.  2024ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಅವರ ರೂಮ್ಮೇಟ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದು ಈಗ ವೈರಲ್ ಆಗಿದೆ.

    ಜೈಲಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಂಡಗಳು ಪದೇ ಪದೇ ಪರಿಶೀಲನಾ ದಾಳಿ ನಡೆಸಿದ್ದರೂ, ಜೈಲಿನ ಕೆಲವು ಭ್ರಷ್ಟ ಸಿಬ್ಬಂದಿಯ ಮುನ್ಸೂಚನೆ ಹಾಗೂ ಸಹಕಾರದಿಂದ ಪ್ರಜ್ವಲ್ ಒಟ್ಟು 6 ಬಾರಿ ಸಿಸಿಬಿ ಮತ್ತು ಜೈಲು ಅಧಿಕಾರಿಗಳ ದಾಳಿಯಿಂದ ಬಚಾವ್ ಆಗುವಲ್ಲಿ ಯಶಸ್ವಿಯಾಗಿದ್ದರು ಎಂದು ವರದಿಯಾಗಿದೆ.

    ಕಟ್ಟುನಿಟ್ಟಿನ ಕ್ರಮ:

    ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಪೂರೈಸಲು ಹಾಗೂ ಭದ್ರತಾ ಪರಿಶೀಲನೆಯ ವೇಳೆ ಮಾಹಿತಿ ಸೋರಿಕೆ ಮಾಡಲು ಸಹಕರಿಸಿದ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ.

    ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಯಾಗುತ್ತಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳು (VIP ರಾಜ್ಯಾತಿಥ್ಯ) ಮತ್ತು ಭದ್ರತಾ ವೈಫಲ್ಯದ ಕುರಿತು ಉನ್ನತ ಮಟ್ಟದ ತನಿಖೆ ಚುರುಕುಗೊಂಡಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!

    August 14, 2026

    ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

    August 13, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    August 14, 2026

    ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್…

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!

    August 14, 2026

    ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ

    August 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.