nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ

    September 29, 2026

    ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.

    September 29, 2026

    ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ

    September 29, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
    • ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
    • ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
    • ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
    • ಭಗತ್ ಸಿಂಗ್‌ ರವರ 119ನೇ ಜನ್ಮ ದಿನ | ಭಗತ್ ಸಿಂಗ್ ಕನಸಿನ ಭಾರತ ಕಟ್ಟಲು ಮುಂದೆ ಬನ್ನಿ: ಲಕ್ಕಪ್ಪ
    • ಮಧುಗಿರಿ: ನೇರಳೆಕೆರೆ (ಗೇಟು) ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆ ಮತ್ತು ಸೀಮಂತ ಕಾರ್ಯಕ್ರಮ
    • “ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ”: ಮಲ್ಲಪ್ಪನಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಪೋಷಣ್ ಅಭಿಯಾನ ಕಾರ್ಯಕ್ರಮ
    • ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ತುಮಕೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    ತುರುವೇಕೆರೆ August 13, 2026

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    By adminAugust 13, 2026No Comments2 Mins Read
    g parameshwar.jpg

    ತುರುವೇಕೆರೆ: ಜಿಲ್ಲಾದ್ಯಂತ ಬರದ ಭೀಕರತೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ಸಲುವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಾಲೂಕಿಗೆ ಆ. 11ರಂದು ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿ, ಹೆಲಿಕಾಪ್ಟರ್ ನಿಂದಿಳಿಯುತ್ತಿದ್ದಂತೆಯೇ ಬಸ್ ನ್ನೇರಿ ವೀಕ್ಷಣೆ ಮಾಡದೆ ಕೇವಲ ಬಾಗಿಲಲ್ಲಿ ನಿಂತು ಬೀಜ ಬಿತ್ತನೆಯಿದ್ದ ಕೈಗಳಿಗೆ ಸಾಂಕೇತಿಕವಾಗಿ ವಿತರಿಸಿ, ಕೆ.ವಿ.ಆರ್.ಸಿಗೆ ತೆರಳಿದ್ದರಿಂದ ತಾಲೂಕಿನ ರೈತರಿಗೆ ನಿರಾಶೆಯುಂಟಾಯಿತು.

    ಬರ ಅಧ್ಯಯನ ಮಾಡುವ ಸಲುವಾಗಿ ಅಂದು ಬೆಳಗ್ಗೆ 11.30 ಕ್ಕೆ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಡಿಡಿಎಂ ಬರಲಿದ್ದಾರೆ ಎಂದು ಸೂಚಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾಯಿತು. ಗದ್ದೆ ಬದಿಯಲ್ಲಿ ಬರ ಅಧ್ಯಯನ ಮಾಡುವವರು ಎಂದು ತಿಳಿದ ತಾಲೂಕಿನ ರೈತರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು 11 ಗಂಟೆಗೆ ಸ್ಥಳಕ್ಕೆ ಜಮಾಯಿಸಿದ್ದರು. ಆದರೆ ಡಿಡಿಎಂ ಕುಣಿಗಲ್ ನಲ್ಲಿ ಬರ ಅಧ್ಯಯನ ಮುಗಿಸಿ ಮಾಯಾಸಂದ್ರಕ್ಕೆ ಬರುವ ವೇಳೆಗೆ 3 ಗಂಟೆ ತಡವಾಗಿತ್ತು.

    ಉಪ ಮುಖ್ಯಮಂತ್ರಿಗಳ ಬರುವಿಕೆ ನಿರೀಕ್ಷಿಸುತ್ತಿದ್ದಂತಹ ಕಾಯುತ್ತಿದ್ದ ಜನರು ಅವರು ಕಾರಿನಿಂದಿಳಿಯುತ್ತಿದ್ದಂತೆ ಜನರು ಒಮ್ಮೆಲೆ ಅವರನ್ನು ಮುತ್ತಿಗೆ ಹಾಕಿದರು. ಭೂಮಿಯಲ್ಲಿ ಬಿತ್ತಿದ್ದ ಬೀಜ ಬರಲೋ ಬೇಡವೋ ಎಂಬ ಸ್ಥಿತಿಯಲ್ಲಿದ್ದ ಜಾಗಕ್ಕೆ ಕರೆದುಕೊಂಡು ಹೋಗಬೇಕೆನ್ನುವುದು ಅಧಿಕಾರಿಗಳ ಉದ್ದೇಶವಾಗಿದ್ದರೂ ಸಹ ಡಿಡಿಎಂ ಉಪಸಚಿವರು ದಾರಿಯುದ್ದಕ್ಕೂ ಕಾರಿನಿಂದ ಇಳಿಯುತ್ತಿರಲಿಲ್ಲ.

    ಶಾಸಕ ಎಂ.ಟಿ.ಕೃಷ್ಣಪ್ಪನವರು ಮೊದಲೇ ಸಿದ್ಧಪಡಿಸಿದ ಬೀಜ ವಿತರಣೆ ಸ್ಥಳಕ್ಕೆ ಅವರನ್ನು ಕರೆದುಕೊಂಡು ಬಂದು ರೈತ ಫಲಾನುಭವಿಗಳಿಗೆ ಉಪ ಮುಖ್ಯಮಂತ್ರಿಗಳ ಮುಖಾಂತರ ಸಾಂಕೇತಿಕವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು. ಹಸಿವಿನಿಂದ ಬಳಲಿದ ಡಾ.ಜಿ.ಪರಮೇಶ್ವರ್ ಅವರೂ ಸಹ ಜಮೀನಿನತ್ತ ಹೆಜ್ಜೆ ಹಾಕಲು ಮನಸ್ಸು ಮಾಡದೇ ಕೇವಲ 20 ನಿಮಿಷಗಳಲ್ಲಿ ತುರುವೇಕೆರೆ ತಾಲೂಕು ಭೇಟಿ ಮುಗಿಸಿ ಕಾರಿನಲ್ಲಿ ಕೆ.ವಿ.ಆರ್.ಸಿಗೆ ತೆರಳಿದರು.

    ಶಾಸಕ ಎಂ.ಟಿ.ಕೃಷ್ಣಪ್ಪ, ಕುಣಿಗಲ್ ಶಾಸಕ ರಂಗನಾಥ್, ಡಿ.ಜಿ.ಸುಭಾಷ್ ಕುಮಾರ್, ಎ.ಸಿ. ಶಂಭವಿ, ಕೃಷಿ ನಿರ್ದೇಶಕ ಬಿ.ಪ್ರದೀಪ್, ತಹಶೀಲ್ದಾರ್ ಕುಂಞಿ ಅಹಮದ್, ಪಶು ಸಂಗೋಪನಾ ಇಲಾಖಾಧಿಕಾರಿ ಡಾ.ದೇವಾನಂದಪ್ಪ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಂದ್ರ, ಮೃತರ ಪರಿಹಾರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸನ್ನ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಲಾಲ್ ನಾಗರಾಜು, ಎನ್.ಆರ್.ಜಯರಾಮ್, ಕೆಪಿಸಿಸಿ ಸದಸ್ಯ ಗೀತಾ ರಾಜಣ್ಣ, ಎಸ್.ಪಿ.ರಾಜಣ್ಣ, ಬಿ.ಎಸ್.ಸಂತೋಷ್ಕುಮಾರ್, ಎಪಿಎಂಸಿ ಸದಸ್ಯ ಪುಟ್ಟಸ್ವಾಮಿ, ಶ್ರೀಕಂಠೇಗೌಡ, ಕೊಂಪ, ಗಂಗಾಧರಪ್ಪ, ಶಶಿಧರಾಜು, ನಂಜುಂಡಪ್ಪ, ಹರ್ಷತ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ರೈತರು ಪಾಲ್ಗೊಂಡಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ತುರುವೇಕೆರೆ: ಸಮುದಾಯ ಸಂಘಟಕ ಹುದ್ದೆಗೆ ಅರ್ಜಿ ಆಹ್ವಾನ

    September 21, 2026

    ಸಾಂವಿಧಾನಿಕ ಜವಾಬ್ದಾರಿಯಿಂದ ಶಾಸಕರ ಪಲಾಯನ: ತುರುವೇಕೆರೆಯಲ್ಲಿ ಕಾಂಗ್ರೆಸ್ ಮುಖಂಡರ ಆರೋಪ

    September 14, 2026

    ತುರುವೇಕೆರೆ: 25 ಕೋಟಿ ರೂ. ಕಾಮಗಾರಿಗಳ ತನಿಖೆಗೆ ಆಗ್ರಹ: ಕಾಂಗ್ರೆಸ್ ಮುಖಂಡರಿಂದ ಉಪವಾಸ ಸತ್ಯಾಗ್ರಹ

    September 8, 2026

    Leave A Reply Cancel Reply

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ

    September 29, 2026

    ಕೊರಟಗೆರೆ: ಸಾರ್ವಜನಿಕರು ಕಚೇರಿಗಳಿಗೆ ಅಲೆಯ ಬಾರದು ಎನ್ನವ ಉದ್ದೇಶದಿಂದ ಸರ್ಕಾರ ಪ್ರಜಾ ಸೇವಾ ಎನ್ನವ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರ…

    ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.

    September 29, 2026

    ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ

    September 29, 2026

    ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”

    September 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.