nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!

    November 28, 2026

    ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ

    November 28, 2026

    ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.

    November 28, 2026
    Facebook Twitter Instagram
    ಟ್ರೆಂಡಿಂಗ್
    • ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!
    • ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ
    • ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.
    • ಸಾಮಾಜಿಕ ಅಸಮಾನತೆ ವಿರುದ್ಧ ಕನಕದಾಸರ ಹೋರಾಟ ಅನುಕರಣೀಯ: ಡಾ.ಹನುಮಂತನಾಥ ಸ್ವಾಮೀಜಿ
    • ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ನೆರಳು ಟ್ರಸ್ಟ್ ಬದ್ಧ: ಜಗದೀಶ್ | ಮಾವಿನಹಳ್ಳಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
    • ಡಿ.12ರ ಲೋಕ ಅದಾಲತ್‌ ನಲ್ಲಿ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ: ನ್ಯಾ. ಸುಮಂಗಲ ಎಸ್. ಬಸವಣ್ಣೂರ್
    • WWE ಖ್ಯಾತಿಯ ಕುಸ್ತಿಪಟು ಬ್ರಾನ್ಸನ್ ರೀಡ್ ನಿಧನ
    • ಶಿವಣ್ಣ ಮಾಡಬೇಕಿದ್ದ ಆ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದು ಡಾ.ರಾಜ್‌ ಕುಮಾರ್! ಆ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತಾ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ
    ಮಧುಗಿರಿ November 28, 2026

    ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ

    By Ganesh TumkuruNovember 28, 2026No Comments2 Mins Read

    ಮಧುಗಿರಿ : ಸಮಾಜದಲ್ಲಿ ವ್ಯಕ್ತಿಯ ನಿಜವಾದ ಮೌಲ್ಯ ಹೆಚ್ಚಾಗಬೇಕಾದರೆ ದಾನ, ಧರ್ಮ ಹಾಗೂ ಸಮಾಜಸೇವೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಮಾದೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾವ ಧರ್ಮವು ಸಮಾಜದ ಮನುಕುಲದ ಒಳಿತಿಗಾಗಿ, ದೀನದಲಿತರ ನೆರವಿಗಾಗಿ ಹಾಗೂ ದೈವಿಕ ಕಾರ್ಯಗಳಿಗಾಗಿ ದಾನಧರ್ಮವನ್ನು ಪ್ರೇರೇಪಿಸುತ್ತದೆಯೋ ಅದುವೇ ನಿಜವಾದ ಸನಾತನ ಧರ್ಮವಾಗಿದೆ ಎಂದರು.

    ಪ್ರತಿಯೊಬ್ಬರೂ ತಮ್ಮ ದುಡಿಮೆಯ ಕನಿಷ್ಠ ಭಾಗವನ್ನಾದರೂ ಬಡವರು, ದೀನದಲಿತರು ಹಾಗೂ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮೀಸಲಿಡಬೇಕು. ಚಾತುರ್ವಿಧ ದಾನಗಳ ಮೂಲಕ ಸಮಾಜಕ್ಕೆ ನೆರವಾದಾಗ ವ್ಯಕ್ತಿಯ ಮೌಲ್ಯ ದೇವರ ದೃಷ್ಟಿಯಲ್ಲಿ ಹೆಚ್ಚಾಗುತ್ತದೆ. ಇತ್ತೀಚೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಗೆ ವರ್ಧಮಾನ್ ಜೈನ್ ಅವರು 207 ಕೋಟಿ ರೂ. ಮೌಲ್ಯದ 201 ಕೆ.ಜಿ. ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸಿರುವುದು ದಾನದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

    ಎಲ್ಲರೂ ಅಷ್ಟೊಂದು ಶ್ರೀಮಂತರಾಗಿರಲು ಸಾಧ್ಯವಿಲ್ಲ. ಆದರೆ ತಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ನೀಡುವ ಮನೋಭಾವ ಬೆಳೆಸಿಕೊಂಡರೆ ಅದೇ ನಿಜವಾದ ಧರ್ಮ. ಇಂತಹ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ನಮ್ಮನ್ನು ಸಂಕಷ್ಟದ ಸಂದರ್ಭಗಳಲ್ಲಿ ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸುತ್ತವೆ ಎಂದರು.

    ಗ್ರಾಮದ ಯುವಕರು ಒಗ್ಗಟ್ಟಿನಿಂದ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ಪೀಳಿಗೆಗೆ ದಾನಧರ್ಮ, ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಸನಾತನ ಧರ್ಮದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.

    ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಯುವ ಮುಖಂಡ ಕುರುಬರಹಳ್ಳಿ ಹರ್ಷ, ಗ್ರಾಮಸ್ಥರಾದ ಪುಟ್ಟನರಸಪ್ಪ, ಜವಲಿಂಗಪ್ಪ, ನಾಗಣ್ಣ, ಕರಿಯಣ್ಣ, ಮಲ್ಲಿಕಾರ್ಜುನಯ್ಯ, ರಾಜಣ್ಣ, ಮಹೇಶ್, ಸುರೇಶ್, ಲೋಕೇಶ್, ರಾಕೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಡಿ.12ರ ಲೋಕ ಅದಾಲತ್‌ ನಲ್ಲಿ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ: ನ್ಯಾ. ಸುಮಂಗಲ ಎಸ್. ಬಸವಣ್ಣೂರ್

    November 28, 2026

    ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಮಹಿಳಾ ವಿಚಾರಗೋಷ್ಠಿ — ಕಾನೂನು ಅರಿವು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಂದಿನಿ

    November 28, 2026

    ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮಗಳಿಗೆ ದಿನಸಿ, ಹಣ್ಣು ವಿತರಣೆ

    November 25, 2026

    Leave A Reply Cancel Reply

    Our Picks

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?

    November 27, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!

    November 28, 2026

    ಕುಣಿಗಲ್ :ಪಟ್ಟಣದ ಕೆಆರ್ ‌ಎಸ್ ಅಗ್ರಹಾರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅಡ್ಡಿಪಡಿಸಿ, ದೇವಸ್ಥಾನದ ಆವರಣದಲ್ಲಿದ್ದ ಕಲ್ಲಿನ…

    ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ

    November 28, 2026

    ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.

    November 28, 2026

    ಸಾಮಾಜಿಕ ಅಸಮಾನತೆ ವಿರುದ್ಧ ಕನಕದಾಸರ ಹೋರಾಟ ಅನುಕರಣೀಯ: ಡಾ.ಹನುಮಂತನಾಥ ಸ್ವಾಮೀಜಿ

    November 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.