Author: admin

ಗುಬ್ಬಿ:  ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ ಅಳಿಲಘಟ್ಟ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ನಡುವೆ ವೈಭವದಿಂದ ಜರುಗಿತು. ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ಸುಪ್ರಭಾತಸೇವೆ, ಪಂಚಾಮೃತ ಸೇವೆ, ವಿಶೇಷ ಅಲಂಕಾರ ಮಾಡಲಾಯಿತು. ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಆಗಮನದೊಂದಿಗೆ ಬ್ರಹ್ಮ ರಥೋತ್ಸವಕ್ಕೆ ಲಕ್ಷ್ಮೀವೆಂಕಟರಮಣಸ್ವಾಮಿ ಹಾಗೂ ಶ್ರೀ ಕೆಂಪಮ್ಮ ದೇವಿಯ ಉತ್ಸವದೊಂದಿಗೆ ರಥೋತ್ಸವಕ್ಕೆ ಆಗಮಿಸಿದವು. ರಥೋತ್ಸವದಲ್ಲಿ ಹೋಮ ಪುಜಾ ಕಾರ್ಯಕ್ರಮಗಳು ಜರುಗಿದವು ನಂತರ  ಮಧ್ಯಾಹ್ನ 1ಗಂಟೆಗೆ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಕೋವಿಡ್ ನಿಂದ ಎರಡು ವರ್ಷ ಸ್ವಾಮಿಯ ಜಾತ್ರೆ ಸರಳವಾಗಿ ನಡೆಯುತ್ತು.ಈ ಭಾರಿ ಅದ್ದೂರಿಯಾಗಿ ಭಕ್ತರು ಸೇರಿ ಜಾತ್ರೆ ಮಾಡಿದರು. ಜಿಲ್ಲೆಯ ವಿವಿಧಡೆಗಳಿಂದ ಅಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದರು.‌ಸುಡು ಬಿಸಿಲು ಲೆಕ್ಕಿಸದೇ ಜಯಘೋಷ ಕೂಗುತ್ತ ರಥವನ್ನು ಎಳೆದರು. ಭಕ್ತಾಧಿಗಳಿಗೆ ಅಲ್ಲಲ್ಲಿ ಪಾನಕ , ಮಜ್ಜಿಗೆ  ಫಲಹಾರ ಸೇವೆ  ಮಾಡಲಾಯಿತ್ತು.ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದು ಸ್ವಾಮಿಯ ಕೃಪೆಗೆ ಪಾತ್ರರಾದರು. ಭಕ್ತಾಧಿಗಳಿಗೆ ಮಹಾ ದಾಸೋಹ…

Read More

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಭಕ್ತಿ-ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ನೆರವೇರಿತು. ಒಂದೆಡೆ ಬದುಕಿಗೆ ಕೃಷಿ ನಂಬಿರುವ ರೈತರು ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು ಒಳ್ಳೆಯ ಮಳೆ-ಬೆಳೆಗೆ ಪ್ರಾರ್ಥಿಸುತ್ತಿದ್ದರೆ, ಮತ್ತೊಂದೆಡೆ ನವ ವಿವಾಹಿತೆಯರು ತವರಿನಿಂದ ಹಸಿರು ಬಳೆ-ಮಡಿಲಕ್ಕಿ ಉಡುಗೊರೆ ಸ್ವೀಕರಿಸಿದರು. ಈ ನಡುವೆ ಎಳೆಯ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಸಡಗರದಿಂದ ಓಡಾಡಿದರು. ಜಲಾಶಯದಲ್ಲಿ ನೀರಿನಮಟ್ಟ ಕುಸಿದಿರುವ ಕಾರಣ ಜಾತ್ರೆಗೆ ಬಂದ ಭಕ್ತರಲ್ಲಿ ಸ್ವಲ್ಪಮಟ್ಟಿನ ಬೇಸರ ಕಂಡುಬಂತು. ಇವು ಶುಕ್ರವಾರ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳು. ನೂರಾರು ವರ್ಷದ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯದ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಅಣೆಕಟ್ಟೆ ನಿರ್ಮಿಸಲಾಗಿದೆ. ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ…

Read More

ರಾತ್ರಿ ವೇಳೆ ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಐವರು ಆಸಾಮಿಗಳನ್ನು ಬಂಧಿಸಿರುವ ಘಟನೆ ಹನೂರು ಸಮೀಪ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ತಾಲ್ಲೂಕಿನ ರಾಮಾಪುರ ಗ್ರಾಮದ ಲಕ್ಷ್ಮಣ (55), ಕಾಂಚಳ್ಳಿ ಗ್ರಾಮದ ಮುತ್ತಪ್ಪ (40), ಮುತ್ತುರಾಜ (35), ಅಜ್ಜೀಪುರದ ಗೋವಿಂದರಾಜು (27), ನಾಗಣ್ಣ ನಗರದ ಪೆರಿಯಣ್ಣ (23) ಬಂಧಿರಾಗಿದ್ದು, ಪರಾರಿಯಾಗಿರುವ ಮತ್ತೊಬ್ಬ ಕಾಂಚಳ್ಳಿ ಗ್ರಾಮದ ಸತೀಶ್‍ಗಾಗಿ ಬಲೆ ಬೀಸಲಾಗಿದೆ. ಮಲೆ ಮಹದೇಶ್ವರ ವನ್ಯಜೀವಿ ವಲಯದ ಹನೂರು ಗಸ್ತಿನ ಹುಬ್ಬೇ ಹುಣಸೆ ಡ್ಯಾಮ್ ಬಳಿಯ ಬೆಳ್ಳತ್ತೂರು ಗುಡ್ಡದ ಕಾಡಿನಲ್ಲಿ ನಾಡ ಬಂದೂಕಿನ ಸಹಾಯದಿಂದ ಮೂರು ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ತುಂಡರಿಸಿ ಪಾಲು ಹಂಚಿಕೊಳ್ಳವ ವೇಳೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಎಫ್‍ಒ ಏಡುಕೊಂಡಲು ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮತ್ತೊಬ್ಬ ಆರೋಪಿ ಕಾಂಚಳಿ ಸತೀಶ್ ಕಣ್ತಪ್ಪಿಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಜಿಂಕೆ ಮಾಂಸ ಚರ್ಮ, 2…

Read More

ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 50ರೂ. ಏರಿಕೆಯಾಗಿದೆ. ಈಗಾಗಲೇ ದೇಶದಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಶ್ರೀಸಾಮಾನ್ಯರಿಗೆ ಸಿಲಿಂಡರ್ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಲಿಂಡರ್ ಬೆಲೆ ಏರಿಕೆ ದರವು ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ. ಕಳೆದ ಮಾ.22ರಂದು ಅಡುಗೆ ಅನಿಲದ ಬೆಲೆಯನ್ನು 50ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 50ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದೂವರೆ ತಿಂಗಳಲ್ಲಿ ಅಡುಗೆ ಅನಿಲ ದರ ನೂರು ರೂ. ಹೆಚ್ಚಳ ಮಾಡಿದಂತಾಗಿದೆ. ಪೆಟ್ರೋಲ್, ಡೀಸೆಲ್ ದರ ಖಾದ್ಯ ತೈಲ, ದಿನ ನಿತ್ಯದ ವಸ್ತುಗಳ ಬೆಲೆ, ಹಣ್ಣು, ತರಕಾರಿ ಬೆಲೆಗಳು ಕೂಡ ಗಗನಮುಖಿಯಾಗುತ್ತಿದ್ದು, ಜನ ಸಾಮಾನ್ಯರು ಬೆಲೆ ಏರಿಕೆಯಿಂದ ಪರಿತಪಿಸುತ್ತಿದ್ದಾರೆ. ಕಳೆದ ವಾರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 104 ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಈಗ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 50ರೂ.ಗೆ ಏರಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್ 990.5ರೂ.ಗೆ ಲಭ್ಯವಾಗಲಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕ್ಯೂಬಾದ ರಾಜಧಾನಿ ಹವಾನಾದ ಹೃದಯಭಾಗ ಸರಟೋಗಾದ ಐಷಾರಾಮಿ ಹೋಟೆಲ್‍ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟ ದುರಂತದಲ್ಲಿ ಗರ್ಭಿಣಿ ಮಹಿಳೆ ಮತ್ತು ಮಗು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ನವೀಕರಣಗೊಳ್ಳುತ್ತಿದ್ದ ಹವಾನಾದ 96 ಕೊಠಡಿಗಳ ಹೋಟೆಲ್ ಯಾವುದೇ ಪ್ರವಾಸಿಗರು ಇರಲಿಲ್ಲ ಎಂದು ಹವಾನಾ ಗವರ್ನರ್ ರೆನಾಲ್ಡೊ ಗಾರ್ಸಿಯಾ ಜಪಾಟಾ ತಿಳಿಸಿದರು.ಹೋಟೆಲ್‍ನ ಕೆಲ ಗೋಡೆ ಕುಸಿದಿದ್ದು ಅದರಡಿ ಸಿಲುಕಿ ಕೆಲವರು ಸಾವನ್ನಪ್ಪಿದ್ದಾರೆ. ಭಾರಿ ಶಬ್ಧ ಉಂಟಾದ ಕಾರಣ ಜನರು ಆತಂಕಗೊಂಡರು ಕೆಲವೇ ಕ್ಷಣದಲ್ಲಿ ಇದು ಬಾಂಬ್ ಅಥವಾ ಉಗ್ರದಾಳಿಯಲ್ಲ. ಇದು ದುರಂತ ಅಪಘಾತ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ ಮಿಗುಯೆಲ್ ಡಿಯಾಜï-ಕನೆಲ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಹೋಟೆಲ್‍ಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದ್ದ ಟ್ರಕ್‍ನಿಂದ ಸ್ಫೋಟ ಸಂಭವಿಸಿದೆ ಎಂದು ಕ್ಯೂಬಾದ ಸ್ಟೇಟ್ ಟಿವಿ ವರದಿ ಮಾಡಿದೆ, ಆದರೆ ಅನಿಲವು ಹೇಗೆ ಹೊತ್ತಿಕೊಂಡಿತು ಎಂಬುದರ ಕುರಿತು ವಿವರಗಳನ್ನು ನೀಡಿಲ್ಲ. ಸ್ಫೋಟ ವು ಹೋಟಲ್‍ನ ಸುತ್ತ ಬಿಂಕಿ ದಟ್ಟ ಹೊಗೆ ಆವರಿಸಿತು…

Read More

ಅಪ್ಲಿಕೇಶನ್ ಇಲ್ಲದೆ ಕರೆ ರೆಕಾರ್ಡಿಂಗ್ ಮಾಡುವುದು ಹೇಗೆ: ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ತನ್ನ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮೇ 11 ರಿಂದ ಜಾರಿಗೆ ಬರಲಿವೆ. ಥರ್ಡ್ ಪಾರ್ಟಿ ಅಪ್ಲಿಕೇಶನ್‌ ಗಳಿಂದ ಕರೆ ರೆಕಾರ್ಡಿಂಗ್ ಅನ್ನು ನಿಲ್ಲಿಸುವುದು ಇದರಲ್ಲಿ ಪ್ರಮುಖವಾಗಿದೆ. ಅಂದರೆ, ಈಗ ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಿಂದ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ತನ್ನದೇ ಆದ ಕರೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ. ಈ ವೈಶಿಷ್ಟ್ಯವು ಆಪಲ್‌ ನಂತೆಯೇ ಇರುತ್ತದೆ. ಆಪಲ್ ತನ್ನ ಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಸೌಲಭ್ಯವನ್ನು ಒದಗಿಸುವುದಿಲ್ಲ. ಈಗ ಯಾರಿಗೆ ಕಾಲ್ ರೆಕಾರ್ಡಿಂಗ್ ಅವಶ್ಯವೋ ಅಂತಹವರು ಈಗ ಕಾಲ್ ರೆಕಾರ್ಡಿಂಗ್ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಸಹಜವಾಗಿಯೇ ಮೂಡಲಿದೆ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ ಈ ಲೇಖನದಲ್ಲಿ ನಾವು ಉತ್ತರವನ್ನು ನೀಡುತ್ತೇವೆ. ಕರೆ ರೆಕಾರ್ಡ್ ಮಾಡಲು ನಿಮ್ಮ ಆಯ್ಕೆಗಳು ಯಾವುವು ಎಂದು ತಿಳಿಯೋಣ. ಇದು…

Read More

ಬೆಂಗಳೂರು: ಯತ್ನಾಳ್ ಅವರ ಹೇಳಿಕೆಗೆ ನಾನು ಏನೂ ರಿಯಾಕ್ಟ್ ಮಾಡೋದಕ್ಕೆ ಆಗಲ್ಲ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರು ಸಿಕ್ಕಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಸಿಎಂ ಹುದ್ದೆ ಬೇಕಾದರೆ 2,500 ಕೋಟಿ ರೂಪಾಯಿ ನೀಡಿ ಎಂದು ದೆಹಲಿಯಿಂದ ಬಂದವರು ಬೇಡಿಕೆ ಇಟ್ಟಿದ್ದರು ಎನ್ನುವ ಯತ್ನಾಳ್ ಹೇಳಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗಳಿಗೆ ತುಮಕೂರಿನಲ್ಲಿ ಉತ್ತರಿಸಿದ ಗೃಹ ಸಚಿವರು,  ರಾಜಕಾರಣದಲ್ಲಿ ಇಂತಹ ಹೇಳಿಕೆಗಳೆಲ್ಲವೂ ಸಹಜ. ಇಂತಹದ್ದೆಲ್ಲ ರಾಜಕಾರಣದಲ್ಲಿರುತ್ತದೆ ಎಂದು ಅವರು ಹೇಳಿರಬಹುದು. ನಿರ್ದಿಷ್ಟವಾಗಿ ಇದೇ ಪಕ್ಷ ಎಂದು ಅವರು ಹೇಳಿಲ್ಲ ಎಂದರು. ಒಂದು ವೇಳೆ ಪಕ್ಷದ ವಿರುದ್ಧವೇ ಅವರು ಹೇಳಿಕೆ ನೀಡಿದ್ದಾದರೆ, ಪಕ್ಷಕ್ಕೆ ಮುಜುಗರ ಉಂಟಾಗುವ ವಿಚಾರವಾಗುತ್ತದೆ. ಪಕ್ಷದ, ಸಂಘಟನೆಯ ನೇತಾರರು ಅವರನ್ನು ಕರೆದು ಮಾತನಾಡಿಸುತ್ತಾರೆ ಎಂದು ಇದೇ ವೇಳೆ ಅರಗ ಜ್ಞಾನೇಂದ್ರ ಹೇಳಿದರು. ಇನ್ನೂ ಪಿಎಸ್ ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವರು, ಯಾವುದೋ ಒಂದು ಕೇಂದ್ರದಲ್ಲಿ ಅಕ್ರಮ ನಡೆದಿದ್ದರೆ, ಆ…

Read More

ಮಧುಗಿರಿ: ಸ್ನೇಹಿತರ ಜೊತೆಗೆ ಸಿದ್ದಾಪುರ ಕೆರೆಯಲ್ಲಿ ಈಜಲು ಬಂದಿದ್ದ  ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ರಂಜಾನ್ ಹಿನ್ನೆಲೆಯಲ್ಲಿ ತುಮಕೂರು  ಗುಬ್ಬಿ ಗೇಟ್ ನಿಂದ ಮಧುಗಿರಿ  ಮಸೀದಿಗೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಯುವಕ, ಸ್ನೇಹಿತರ ಜೊತೆಗೆ ಕೆರೆಗೆ ಈಜಲು ತೆರಳಿದ್ದು, ಈ ವೇಳೆ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ಸರ್ದಾರ್ ಖಾನ್ ಹಾಗೂ ಅಗ್ನಿಶಾಮಕದಳದ ಇನ್ಸ್ ಪೆಕ್ಡರ್ ಅಣ್ಣಪ್ಪ ಸ್ಥಳಕ್ಕೆ ಆಗಮಿಸಿ ತಂಡ ರಚಿಸಿ ಯುವಕನ ಮೃತದೇಹವನ್ನು ಕೆರೆಯಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮೋಹನ್ ಅವರ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.  ನೂರಾರು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರ ಮಾಡಿರುವ ಮೋಹನ್ ಅವರು ಹಾಸ್ಯ ಪಾತ್ರದಲ್ಲಿ ಹೆಚ್ಚು ಮಿಂಚಿದ್ದರು. ಕೆಜಿಎಫ್ ಚಿತ್ರದಲ್ಲಿ ಕೂಡ ಪಾತ್ರ ಮಾಡಿದ್ದ ಮೋಹನ್ ಅವರು ಜನರ ಮನಸ್ಸನ್ನು ಗೆದ್ದಿದ್ದರು.  ನಿನ್ನೆ ರಾತ್ರಿ ಮೋಹನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರನ್ನು ತಕ್ಷಣವೇ ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಕುಣಿಗಲ್ ರಸ್ತೆಯ ಸುಲದ ಅನುಮಂತ ರಾಯಿ ದೇವಸ್ಥಾನದ ಸಮೀಪದಲ್ಲಿ ನಡೆದ ಭೀಕರ ಅಪಘಾತದಲ್ಲಿ ಪಾದಚಾರಿ ಹಾಗೂ ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಟೆಂಪೋ ಟ್ರಾವೆಲ್ಲರ್  ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು,   ರಸ್ತೆಯಲ್ಲಿ ಯೂಟರ್ನ್ ಮಾಡುತ್ತಿದ್ದ ಟೆಂಪೋ ಟ್ರಾವೆಲ್ಲರ್ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಇದೇ ವೇಳೆ ಈ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಟೆಂಪೋ ಟ್ರಾವೆಲ್ಲರ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ  ಬೈಕ್ ಸವಾರ ಹಾಗೂ ಪಾದಚಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More