ತುಮಕೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಯಮಹಾ RX 135 ಬೈಕ್ ನ್ನು ಕಳ್ಳರು ರಾತ್ರಿ ವೇಳೆಯಲ್ಲಿ ಕದ್ದೊಯ್ದ ಘಟನೆ ನಡೆದಿದೆ.
ನಗರದ ಹನುಮಂತಪುರ ರಸ್ತೆಯ ಕೋತಿತೋಪು ಸರ್ಕಲ್ ನಿನ್ನೆ ರಾತ್ರಿ 1:45ರ ವೇಳೆ ಈ ಘಟನೆ ನಡೆದಿದೆ. ಕಳ್ಳರು ಬೈಕ್ ನ್ನು ಕದ್ದೊಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾಜಿ ನಗರಸಭಾ ಉಪಾಧ್ಯಕ್ಷ ವಾಲೆ ಚಂದ್ರಯ್ಯನವರ ಪುತ್ರ ವಾಸು ಅವರಿಗೆ ಸೇರಿದ ಬೈಕ್ ಇದಾಗಿದ್ದು, ರಾತ್ರೋರಾತ್ರಿ ಆಗಮಿಸಿದ ಕಳ್ಳರು ಬೈಕ್ ನ್ನು ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz