Author: admin

ತುಮಕೂರು: ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ದಲಿತರ ಮೇಲೆ  ಅಮಾನವೀಯ ಕೃತ್ಯ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾ ಸಚಿವರು ಎಂಬುದೇ ಮರೆತಿದ್ದಾರೋ ಅಥವಾ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ತಾಳಿದ್ದರೋ ಎಂದು  ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಈಚೆಗೆ ಹತ್ಯೆಗೀಡಾದ ಗಿರೀಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಪೊಲೀಸ್ ಇಲಾಖೆಯ ಇತ್ತೀಚಿನ ವಿದ್ಯಮಾನ ಅಚ್ಚರಿ ತಂದಿದೆ. ಮೇಲ್ನೋಟಕ್ಕೆ ತನಿಖೆ ನಡೆಸದೆ,  ಗಂಭೀರತೆ ಇಲ್ಲಿ ಕಾಣಬೇಕಿದೆ. ದಲಿತ ವಿರೋಧಿತನ ಮಟ್ಟ ಹಾಕಿ ನ್ಯಾಯ ಒದಗಿಸುವ ಗೃಹ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದರು. ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಈ ಹತ್ಯಾಕಾಂಡ ಬಗ್ಗೆ ಬೇಜವಾಬ್ದಾರಿತನ ಪ್ರದರ್ಶಿಸದೆ, ನ್ಯಾಯಯುತ ತನಿಖೆ ನಡೆಯಬೇಕು. ಈಗಾಗಲೇ 20 ಕ್ಕೂ ಅಧಿಕ ಮಂದಿ ಆರೋಪಿಗಳ ಬಂಧನವಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವ ಗಿರೀಶ್ ಎಂಬ ಇಬ್ಬರು ದಲಿತ ಯುವಕರ ಕೊಲೆಯ ಸಂಚು ಹೊರತರಬೇಕಿದೆ ಎಂದು ಅವರು ಒತ್ತಾಯಿಸಿದರು. ಘಟನೆಗೆ ಮೂಲ ಕಾರಣಕರ್ತರ ಹೆಸರು…

Read More

ಮೈಸೂರು: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇಂದು ಮೈಸೂರಿನ ಟಿ. ನರಸೀಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಕಾನೂನು ಎಲ್ಲರಿಗೂ ಕಾನೂನು ಒಂದೇ. ರಾಜಕೀಯ ಲಾಭಕ್ಕಾಗಿ ಒಂದು ಧರ್ಮವನ್ನ ಟಾರ್ಗೆಟ್ ಮಾಡುವುದು ತಪ್ಪು. ಯಾವ ಧರ್ಮದವರು ತಪ್ಪು ಕ್ರಮ ಕೈಗೊಳ್ಳಬೇಕು. ಒಂದು ಧರ್ಮದ ಜನರನ್ನು ಟಾರ್ಗೆಟ್ ಮಾಡಿದರೆ ಮತ ದೃವೀಕರಣ ಆಗತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಅದು ಅಸಾಧ್ಯ. ಈಗಾಗಲೇ ಅವರಿಗೆ ತಿರುಗುಬಾಣ ಆಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಸಿದ್ದರಾಮಯ್ಯ ಸೋನಿಯಾ ಗಾಂಧಿಯ ಗುಲಾಮ ಎಂಬ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗೂ ಗುಲಾಮರಲ್ಲ ಎಂದು ತಿಳಿಸಿದ್ದಾರೆ.ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ ಎಂಬ ಸಚಿವ ಅಶೋಕ್ ಹೇಳಿಕೆ ವಿಚಾರ ಟೀಕೆ ಮಾಡಿದ ಅಶೋಕ ಏನ್ ಮಾಡ್ತಾ ಇದ್ದರು. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿತ್ತು. ಆಗ ಯಾಕೆ…

Read More

ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಆರೋಪಿ ಮೊಹಮ್ಮದ್ ಆರೀಫ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು. ಹಳೇ ಹುಬ್ಬಳ್ಳಿ ಠಾಣೆಯಲ್ಲಿರುವ ಗಲಬೆ ಆರೋಪಿ , ತನ್ನ ಕಾಲಿಗೆ ಗಾಯವಾಗಿದೆ, ಹಾಗಾಗಿ ಟರ್ಪಂಟೈನ್ ಕೊಡಿ ಎಂದು ಕೇಳಿದ್ದ ಕಾರಣ ಪೊಲೀಸರು ಟರ್ಪಂಟೈನ್ ತಂದುಕೊಟ್ಟಿದ್ದರು. ಬಳಿಕ ಮೊಹಮ್ಮದ್ ಆರಿಪ್ ಟರ್ಪಂಟೈನ್ನ್ನು ಕುಡುದು ಪ್ರಯತ್ನಿಸಿದ್ದಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಮೊಹಮ್ಮದ್ ಆರಿಫ್ ಜತೆಗಿದ್ದ ಇನ್ನೊಬ್ಬ ಆರೋಪಿ ಎಐಎಂಐಎಂ ಕಾರ್ಪೋರೇಟರ್ ನಜೀರ್ ಅಹಮದ್ ಹೊನ್ಯಾಳ ಕೂಡಲೇ ಆರಿಫ್ರನ್ನು ತಡೆದಿದ್ದು ಮಾತ್ರವಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ. ಕೂಡಲೇ ಮೊಹಮ್ಮದ್ ಆರೀಫ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸ್ಆಯಪ್ ಸ್ಟೇಟಸ್ನಿಂದ ದೊಡ್ಡಮಟ್ಟದಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 10-12 ಜನರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಮೌಲ್ವಿ ವಸೀಂ ಪಠಾಣ್ ನನ್ನು ಪೊಲೀಸರು ಬಂಧಿಸಿದ್ದ, ಆತನ…

Read More

ತುಮಕೂರು: ಹಿರಿಯ ಪೊಲೀಸ್ ಅಧಿಕಾರಿ ,ಹಾಗೂ ಸಹಾಯಕ ನಿರ್ದೇಶಕರು ರಾಜ್ಯ ಗುಪ್ತವಾರ್ತೆ ತುಮಕೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಎಂ ಶಿವಕುಮಾರ್ (54) ರವರು ಕಳೆದ ರಾತ್ರಿ 1 ಗಂಟೆ ಸಮಯದಲ್ಲಿ ತುಮಕೂರು ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಮೃತ ಶಿವಕುಮಾರ್ ರವರು ಪತ್ನಿ ವಿಜಯಲಕ್ಷ್ಮಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಿವಕುಮಾರ್ ಅವರ ಸ್ವಗೃಹ ಚಿಂಗೂಬನನಹಳ್ಳಿ ,ಜಗಳೂರು ಹೋಬಳಿ ,ಚಿತ್ರದುರ್ಗ ಜಿಲ್ಲೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಇನ್ನು ಶಿವಕುಮಾರ್ ರವರ ನಿಧನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕಂಬನಿ ಮಿಡಿದಿದ್ದು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ವರದಿ : ಮಾರುತಿ ಪ್ರಸಾದ್ ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ನವದೆಹಲಿ: ನವದೆಹಲಿಯಲ್ಲಿಂದು ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕಾಗಿದೆ ಇದು ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸುತ್ತದೆ. ಇದು ನ್ಯಾಯ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಸುಗಮ ಸಂಪರ್ಕಕ್ಕೆ ಸಹಾಯವಾಗಲಿದೆ ಎಂದು ಅವರುತಿಳಿಸಿದ್ದಾರೆ. ಭಾರತವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಆಚರಿಸುತ್ತಿರುವಾಗ ಎಲ್ಲರಿಗೂ ಸುಲಭವಾಗಿ, ನ್ಯಾಯ ದೊರೆಯುವ ವ್ಯವಸ್ಥೆಯನ್ನು ರಚಿಸುವತ್ತ ಗಮನಕೊಂಡಬೇಕು ಎಂದು ಸಂದೇಶ ನೀಡಿದರು. ಭಾರತದಲ್ಲಿ ನ್ಯಾಯಾಂಗ ಸಂವಿಧಾನ ರಕ್ಷಕನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಶಾಸಕಾಂಗ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಸುಪ್ರಿಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ಸಂವಿಧಾನ ಮೂರು ಅಂಗಗಳ ನಡುವೆ ಅಧಿಕಾರವನ್ನು ಪ್ರತ್ಯೇಕಗೊಳಿಸಿ ಸ್ಪಷ್ಟತೆ ನೀಡಿದೆ. ಪ್ರತಿಯೊಂದು ಅಂಗವೂ ಕರ್ತವ್ಯ ನಿರ್ವಹಿಸುವಾಗ ಲಕ್ಷ್ಮಣ ರೇಖೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.ನ್ಯಾಯಾಂಗ ತೀರ್ಪುಗಳ ಹೊರತಾಗಿಯೂ ಸರ್ಕಾರಗಳ ಉದ್ದೇಶಪೂರ್ವಕ ನಿಷ್ಕ್ರಿಯತೆ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವಿನ ಸಾಮರಸ್ಯ ಪ್ರಜಾಪ್ರಭುತ್ವವನ್ನು…

Read More

ದೇಶದಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟ ತಲುಪಿದೆ ಎಂಬ ಊಹಾಪೋಹಗಳ ಮಧ್ಯೆ ದೇಶದ ಅನೇಕ ಮಹಾನಗರಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಇನ್ನು ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಎಂಎಸ್‌ಎಂಇಗಳು ಏಪ್ರಿಲ್‌ 25ರಂದು ಮನವಿ ಮಾಡಿದ್ದಾರೆ. ಈ ಬಳಿಕ ವಿಷಯದ ಚರ್ಚೆಯು ಮಹತ್ವ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು, ಆರರಿಂದ ಏಳು ಗಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆಗಳನ್ನು ನಡೆಸಿವೆ. ಮತ್ತೊಂದೆಡೆ ಎಎಪಿ ನೇತೃತ್ವದ ದೆಹಲಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಕಲ್ಲಿದ್ದಲು ಕೊರತೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿರುವ 173 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 106 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ. ಉತ್ತರ ಭಾರತದಲ್ಲಿ ಬೀಸುವ ಬಿಸಿಗಾಳಿಯಿಂದಾಗಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಕಲ್ಲಿದ್ದಲು ಸಂಗ್ರಹಣೆಯ ಕೊರತೆಯಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಗುರುವಾರ ತಡರಾತ್ರಿ ಕೇಂದ್ರೀಯ…

Read More

ಚಿತ್ರದುರ್ಗ : ಒಮ್ಮೆ ಅನ್ಯಾಯ ಆಗಿದೆ ಅಂದರೆ ವ್ಯಾಪಕತೆ ಗೊತ್ತಾಗಲ್ಲ. ಅದೇ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡುತ್ತೇವೆ. ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪಿಎಸ್ಐ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಬೀಮಸಮುದ್ರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಯಾವುದೇ ಕಳಂಕಿತ ಎಡಿಜಿಪಿ ಅವರಲ್ಲ, ಸಿದ್ದರಾಮಯ್ಯ ಅವರು ಹೇಳುತ್ತಾರೆ. ಕೇವಲ ವರ್ಗಾವಣೆ ಮಾತ್ರ ಅಷ್ಟೇ, ಕಳಂಕಿತರಲ್ಲ ಎಂದು ಪ್ರತಿಕ್ರಿಯೆಯಿಸಿದ್ದಾರೆ. ಭಾಷ ರಾಜಕಾರಣ ಬಿಜೆಪಿ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಸಿದ್ದರಾಮಯ್ಯ ಸುದೀಪ್ ಟ್ವೀಟ್ ಗೆ ಹಸಿವಿನಿಂದ ಭಾಷೆ ಬಗ್ಗೆ ಮಾತಾಡಿದ್ದಾರೆ. ನಾವು ಭಾಷೆ ಬಗ್ಗೆ ಅಭಿಮಾನದಿಂದ ಮಾತನಾಡಿದ್ರು ಸಹಿಸಲ್ಲ ಎಂದು ಗುಡುಗಿದರು. ರಾಗಿ ಖರೀದಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಈ ಕುರಿತು ಚರ್ಚೆ ಮಾಡಿದ್ದೇನೆ, ನಾಳೆ ನಾನು ಹೋಗುತ್ತಿದ್ದೇನೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ನಾಳೆ ನಾಡಿದ್ದು ತೀರ್ಮಾನ ಮಾಡುತ್ತೇವೆ. ಒಪ್ಪಿಗೆ ನೀಡಿದ ಬಳಿಕ…

Read More

ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ಬಾಬಾ ಪಟಾಯಿಸಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹಮದ್ ಅಫ್ಘಾನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬಾ ನಕಲಿ ಬಾಬಾನ ಬಳಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾಗ ಚಿಕಿತ್ಸೆ ನೆಪದಲ್ಲಿ ಪತ್ನಿ ತಾನ್ಜೇನಿಯಾ ಕೌಸರ್ ಳನ್ನು ಖುರ್ರಾಂ ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದನಂತೆ. ಮನನೊಂದ ಮಹಮದ್ ಅಫ್ಘಾನ್ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ತನ್ನ ಸಾವಿಗೆ ಮೈಸೂರಿನ ಡೋಂಗಿ ಬಾಬಾ ಖುರ್ರಾಂ ಪಾಷಾ ಮತ್ತು ಈತನ ಇಬ್ಬರು ಸಹಚರರೂ ಕಾರಣ. ನನ್ನ ಪತ್ನಿಯ ತಲೆ ಕೆಡಿಸಿ ಡೋಂಗಿ ಬಾಬಾಗೆ ತಲೆಹಿಡಿದಿದ್ದಾರೆ. ಇವರನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಬರೆದು ಸಹಿ ಮಾಡಿ ನೇಣು ಹಾಕಿಕೊಂಡಿದ್ದು ಈ ಸಂಬಂಧ ಮೃತನ ಸಂಬಂಧಿಕರು ದೂರು ನೀಡಿದ್ದಾರೆ‌. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಮೇ 1 ರಂದು ಸೇನಾ ಸಿಬ್ಬಂದಿಯ ಮುಂದಿನ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೆಫ್ಟಿನೆಂಟ್ ಜನರಲ್ ರಾಜು ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ, ಅವರು ಶನಿವಾರ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಅವಧಿಯನ್ನು ಪೂರ್ಣಗೊಳಿಸಿದ ನಂತರ 1.3 ಮಿಲಿಯನ್ ಸೈನ್ಯದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.ಲೆಫ್ಟಿನೆಂಟ್ ಜನರಲ್ ರಾಜು ಅವರು ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪೂರ್ವ ಲಡಾಖ್‌ನಲ್ಲಿ ಸೇನೆಯ ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ನೋಡಿಕೊಳ್ಳುತ್ತಾರೆ. ಸೈನಿಕ್ ಸ್ಕೂಲ್ ಬಿಜಾಪುರ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಲೆಫ್ಟಿನೆಂಟ್ ಜನರಲ್ ರಾಜು ಅವರು ಡಿಸೆಂಬರ್ 15, 1984 ರಂದು ಜಾಟ್ ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು.ತಮ್ಮ ಒಟ್ಟು 38 ವರ್ಷಗಳ ವೃತ್ತಿಜೀವನದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ‘ಆಪರೇಷನ್ ಪರಾಕ್ರಮ್’ ಸಮಯದಲ್ಲಿ ತಮ್ಮ ಬೆಟಾಲಿಯನ್‌ಗೆ ಕಮಾಂಡರ್ ಆಗಿದ್ದರು. ಲೆಫ್ಟಿನೆಂಟ್ ಜನರಲ್…

Read More

ಎಚ್.ಡಿ.ಕೋಟೆ:  ಬಲಿಷ್ಠ ಭಾರತದ ಸಂವಿಧಾನವನ್ನು ಇನ್ನೂ ನೂರಾರು ವರ್ಷ ಕಳೆದರು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ವತಿಯಿಂದ ನಡೆದ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಕರಾರು ಒಕ್ಕಾಗಿ ಬರೆದು ಭಾರತಕ್ಕೆ ಒಪ್ಪಿಸದಂತಹ  ಕಾಲದಲ್ಲಿ ಅದನ್ನು ಯಥಾವತ್ತಾಗಿ ಜಾರಿಗೆ ತಂದವರು ಬಾಬು ಜಗಜೀವನ್ ರಾಮ್. ಭಾರತದ ಶ್ರೇಷ್ಠವಾದ ಗ್ರಂಥ ಅದು ಸಂವಿಧಾನ, ಕೇವಲ ಒಂದು ವರ್ಗ, ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ ಭಾರತ ದೇಶದ ಪ್ರತಿ ಪ್ರಜೆಗೂ ಸಂಬಂಧಿ ಸಿದ್ದು ಎಂದರು. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ಈ ದೇಶದ ದಲಿತ ಸಮುದಾಯದ ಎರಡು ಕಣ್ಣುಗಳು ಎಂದರು. ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರ ಕನಸುಗಳನ್ನು…

Read More