Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ಬೆಂಗಳೂರು: ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದನ್ನು ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಬಹು ಧರ್ಮ, ಬಹುಭಾಷೆ, ಬಹು ಸಂಸ್ಕೃತಿಗಳನ್ನೊಳಗೊಂಡ ಬಹುತ್ವವನ್ನು ಒಪ್ಪಿಕೊಂಡ, ಅಪ್ಪಿಕೊಂಡ ಪಕ್ಷ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವುದು ಜನವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿ ಕೂಡ ಆಗಿದೆ. ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಬಿಜೆಪಿ ನಾಯಕರ ಕುತಂತ್ರದ ರಾಜಕಾರಣವನ್ನು ಸ್ವಾಭಿಮಾನಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. ನಮ್ಮೆದುರಿಗೆ ಗೋಕಾಕ್ ಹೋರಾಟದ ಮಾದರಿ ಇದೆ’ ಎಂದು ಟ್ವೀಟ್ ಮಾಡಿದ್ದಾರೆ. ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದನ್ನು ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ.‘ಧರ್ಮ ರಾಜಕಾರಣದ ಹಸು…
ಗುಬ್ಬಿ: ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಪ್ರತಿನಿಧಿಯಾಗಿ ಯಾವ ರಾಜಕಾರಣಿ ಸೌಜನ್ಯಕ್ಕಾದರೂ ಭೇಟಿ ನೀಡದೇ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕಿಡಿಕಾರಿದರು. ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮದಲ್ಲಿ ಹತ್ಯೆಯಾದ ಗಿರೀಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಸಂತೈಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೂವರು ಮಂತ್ರಿಗಳಿದ್ದು ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ವಹಿಸಿದ್ದು ತೀರ ಖಂಡನೀಯ. ಈ ಜೊತೆಗೆ ಸ್ಥಳೀಯ ಶಾಸಕರೂ ಇತ್ತ ಕಡೆ ಸುಳಿಯದಿರುವುದು ಅವರ ಬೇಜವಾಬ್ದಾರಿ ತೋರುತ್ತದೆ ಎಂದು ಕಿಡಿಕಾರಿದರು. ಪೂರ್ವ ನಿಯೋಜಿತ ಹತ್ಯೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇಷ್ಟಾದರೂ ಬಿಜೆಪಿ ಸರ್ಕಾರ ಇಂತಹ ಅಮಾನವೀಯ ಕೃತ್ಯದ ಬಗ್ಗೆ ಮಾತನಾಡದಿರುವುದು ಅವರ ದಲಿತ ವಿರೋಧಿತನ ಪ್ರದರ್ಶನವಾಗುತ್ತಿದೆ. ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದಲ್ಲಿ ಇಡೀ ಸರ್ಕಾರವೇ ಅಲ್ಲಿತ್ತು. ಆದರೆ ಇಲ್ಲಿ ಬಡ ದಲಿತರ ಕೊಲೆ ಬಗ್ಗೆ ನಿರಾಸಕ್ತಿ ತೋರುತ್ತಿರುವ…
ತುಮಕೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗುಬ್ಬಿ ತಾಲೂಕಿನಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಗ್ರಾಮದ ಸುಮಾರು 20 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಪ್ರಮುಖ ಆರೋಪಿ ಕೂಡ ಸೇರಿದ್ದಾನೆ ಎಂದು ಹೇಳಲಾಗಿದೆ. ಏಪ್ರಿಲ್ 22ರಂದು ಈ ಘಟನೆ ನಡೆದಿದ್ದು, ಪೆದ್ದನಹಳ್ಳಿಯಲ್ಲಿ ಗಿರೀಶ್ ಹೆಸರಿನ ಇಬ್ಬರು ಸ್ನೇಹಿತರನ್ನು ಚಿತ್ರ ಹಿಂಸೆ ನೀಡಿ ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಹಿಂದಿನ ದಿನ ಪ್ರಮುಖ ಆರೋಪಿ ಗಿರೀಶ್ ನನ್ನು ಮನೆಯಿಂದ ಕರೆದುಕೊಂಡು ಹೋಗಿರುವುದಾಗಿ ಮೃತನ ಸಂಬಂಧಿಕರು ಹೇಳುತ್ತಿದ್ದಾರೆ. ಮರುದಿನ ಗಿರೀಶ್ ಹಾಗೂ ಆತನ ಸ್ನೇಹಿತ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಹತ್ಯೆಯ ಬಳಿಕ ಪಂಪ್ ಸೆಟ್ ಕಳವಿನ ಕಥೆ ಹೆಣೆಯಲಾಗಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿತ್ತು. ವರದಿಗಳ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ಸೇರಿದಂತೆ ಒಂದೇ ಗ್ರಾಮದ 20 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನವನ್ನು ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ಸುನಿಲ್ ಚಿಕ್ಕಮಾದು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಅಂತರಸಂತೆ ಸಾರನಾಥ ಬುದ್ಧವಿಹಾರದ ಮಾತೇ ಗೌತಮಿ ಬಂತೇಜಿ, ಆದಿಕರ್ನಾಟಕ ಮಹಾಸಭಾದ ನೂತನ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ರವಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗ್ಯಲಕ್ಷ್ಮಿ ನಿಂಗರಾಜು, ಸಂವಿಧಾನ ರಕ್ಷಣಾ ಸಮಿತಿ ಅಧ್ಯಕ್ಷರಾದ ಸರಗೂರುಶಿವಣ್ಣ, ಜೆಡಿಎಸ್ ಪಕ್ಷದ ಅಧ್ಯಕ್ಷ ಗೋಪಾಲಸ್ವಾಮಿ, ಜೆಡಿಎಸ್ ಪಕ್ಷದ ಯುವನಾಯಕ ಜೈ ಪ್ರಕಾಶ್, ಹಂಚಿಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯರಾಜ್, ಸದಸ್ಯರಾದ ನಟರಾಜು, ಸದಸ್ಯರಾದ ಮಂಜುಳಾ ಶಿವರಾಜ, ಮಸಹಳ್ಳಿ ಅಂಬೇಡ್ಕರ್ ಭವನ ಸಮುದಾಯ ಟ್ರಸ್ಟ್ ನ ಅಧ್ಯಕ್ಷರಾದ ಪುಟ್ಟಮಾದಯ್ಯ, ಯಜಮಾನರು ಮಹದೇವಯ್ಯನವರ, ಸೂರ್ಯ ಕುಮಾರ್, ಎಂಪಿ.ನವೀನ್, ಮಸಹಳ್ಳಿ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ವರದಿ:…
ಬೆಂಗಳೂರು, ಏ. 29: ಕರ್ನಾಟಕದ 545 ಪಿಎಸ್‌ಐಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷೆ ರದ್ದು ಮಾಡಿದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮರ್ಥನೆ ಮಾಡಿದ್ದಾರೆ.ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಾಗೂ ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಿದ್ದೇವೆ.ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದರು. ಇದೀಗ ಪಿಎಸ್‌ಐ ಅಕ್ರಮ ತನಿಖೆಯ ಹಂತದದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ರದ್ದು ಪಡಿಸಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಪರೀಕ್ಷೆ ರದ್ದು ಪಡಿಸಿ ಮರು ಪರೀಕ್ಷೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಲಾಗಿದೆ.…
ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 2ನೇ ಖೇಲೋ ಮಾಸ್ಟರ್ ಗೇಮ್ ಗೆ ಕರ್ನಾಟಕದಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತುಮಕೂರು ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಕ್ರೀಡಾಪಟುಗಳು 30/04/2022, 3/05/2022 ರಂದು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ಈ ಒಂದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರ ವಿವರ ಈ ಕೆಳಗಿನಂತಿದೆ. *ಉದಯಕುಮಾರ್ ಚಿಕ್ಕಮರಳಿ ದೈಹಿಕ ಶಿಕ್ಷಣ ಶಿಕ್ಷಕರು SBG ವಿದ್ಯಾಲಯ ಮಾಯಸಂದ್ರ * ಗಿರಿಧರ್KS ದೈಹಿಕ ಶಿಕ್ಷಣ ಶಿಕ್ಷಕರು SBG ವಿದ್ಯಾಲಯ ಮಾಯಸಂದ್ರ *ಶ್ರೀಧರ್ H ಸಹಶಿಕ್ಷಕರು NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ *ವೆಂಕಟೇಶ್ T NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ *ಕಿರಣ್ ಕುಮಾರ್ Y S SKBRHS ಡಿ ಕಲ್ಕೆರೆ ತುರುವೇಕೆರೆ * ವಿಶ್ವನಾಥ್ B H ಸಹಶಿಕ್ಷಕರು SSRHS ಪುರ ತುರುವೇಕೆರೆ *ರಕ್ಷಿತ್ C B ಸಹಶಿಕ್ಷಕರು ಶಂಕರಾನಂದ ಭಾರತಿ ವಿದ್ಯಾಪೀಠ ಕುವೆಂಪು ಪ್ರೌಢಶಾಲೆ ಕುಂತಿಬೆಟ್ಟ,ಪಾಂಡವಪುರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುರುವೇಕೆರೆ: ಮದುವೆಯಾದ 11ನೇ ದಿನಕ್ಕೆ ನವವಿವಾಹಿತ ಸಾವಿಗೀಡಾಗಿದ್ದು ವಧುವಿನ ಸ್ಥಿತಿ ಚಿಂತಾಜನಕವಾಗಿದೆ.ಮದುವೆ ಸಂಭ್ರಮವಿದ್ದ ಮನೆ ಶೋಕ ಸಾಗರದಲ್ಲಿ ಮುಳುಗಿದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಅರಸೀಕೆರೆ ತಾಲೂಕು ಕಾಮ್ಲಾಪುರದ ನಂಜುಂಡಯ್ಯ ಅವರ ಪುತ್ರ ಪ್ರಸನ್ನ ಮತ್ತು ಮಂದಾರ ನವದಂಪತಿಗಳು. ಇವರ ಮದುವೆ 10 ದಿನದ ಹಿಂದೆ ನಡೆದಿದ್ದು,ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಪ್ರಸ್ತುತ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿ ಎಂಬಲ್ಲಿಗೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲೇ ಮೃತಪಟ್ಟಿದ್ದು, ಸಂತೋಷ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಸನ್ನನ ಪತ್ನಿ ಮಂದಾರ ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ತುರುವೇಕರೆ ಪೋಲಿಸ್…
ದೆಹಲಿ: ಕಲ್ಲಿದ್ದಲು ಅಭಾವದ ಹಿನ್ನೆಲೆಯಲ್ಲಿ ತುರ್ತು ಪೂರೈಕೆಗಾಗಿ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಿ ಕಲ್ಲಿದ್ದಲು ತುಂಬಿದ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಬಿಸಿಲು ಪ್ರಮಾಣ ಹೆಚ್ಚಾಗಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ದೆಹಲಿಯಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ.ದೇಶದೆಲ್ಲೆಡೆ ಕಲ್ಲಿದ್ದಲು ಪೂರೈಕೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಹಲವು ಪ್ರಮುಖ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕಲ್ಲಿದ್ದಲು ಪೂರೈಕೆಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ 1000 ಬೋಗಿಗಳನ್ನು ವ್ಯವಸ್ಥೆ ಮಾಡಿದೆ. ಅಲ್ಲದೇ ಇದು ಅತ್ಯಂತ ವೇಗವಾಗಿ ನಿಗದಿತ ಸ್ಥಳ ತಲುಪಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ.ವಿದ್ಯುತ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶೇ.17ರಷ್ಟು ಕಲ್ಲಿದ್ದಲು ಬೇಡಿಕೆ ದಿಢೀರ್ ಹೆಚ್ಚಾಗಿರುವುದರಿಂದ ಕಲ್ಲಿದ್ದಲು ಕೊರತೆ ಎದುರಿಸುವಂತಾಗಿದೆ. ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆ ನಡೆಸಿದ್ದು, ರಾಷ್ಟ್ರ ರಾಜಧಾನಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು…
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಪ್ರಮುಖ ಆರೋಪಿಗಳಾದ ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಳಕುಂದಿಗೆ ತಾವು ಒಟ್ಟಾರೆ ₹ 90 ಲಕ್ಷ ಕೊಟ್ಟಿದ್ದಾಗಿ ಬಂಧಿತ ಮೂವರು ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಐಡಿ ಕಸ್ಟಡಿಯಲ್ಲಿರುವ ಅಭ್ಯರ್ಥಿಗಳಾದ ವಿಶಾಲ್ ಶಿರೂರ ₹ 40 ಲಕ್ಷ ಹಾಗೂ ಎನ್.ವಿ. ಸುನೀಲಕುಮಾರ ₹ 40 ಲಕ್ಷ ಹಾಗೂ ಹಯ್ಯಾಳಿ ದೇಸಾಯಿ ₹ 10 ಲಕ್ಷ ಹಣವನ್ನು ಇವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ ಹಾಗೂ ಮಂಜುನಾಥ ಮೇಳಕುಂದಿ ತಮಗೆ ಶಾಲೆಯ ಮೇಲ್ವಿಚಾರಕಿಯರ ನೆರವು ಪಡೆದು ಬ್ಲೂಟೂತ್ ಮೂಲಕ ಉತ್ತರ ಬರೆಸಿದ್ದಲ್ಲದೇ, ಓಎಂಆರ್ ಶೀಟ್‌ನಲ್ಲಿ ಸರಿಯಾದ ಉತ್ತರಗಳನ್ನು ಬರೆಯಲು ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಈ ಅಭ್ಯರ್ಥಿಗಳು ವಿಚಾರಣೆ ವೇಳೆ ತಿಳಿಸಿದ್ದಾಗಿ ಸಿಐಡಿ ಮೂಲಗಳು ಹೇಳಿವೆ. ನಾಲ್ವರಿಗೆ ಹಣ: ‘ಅಭ್ಯರ್ಥಿಗಳು ನೀಡಿದ ಹಣವನ್ನು ಅಣ್ಣ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಹಾಗೂ ತಾನು ಪಡೆದಿರುವುದಾಗಿ…
ಅಜಯ್ ದೇವಗನ್, ಸುದೀಪ್ ಕನ್ನಡ-ಹಿಂದಿ ಭಾಷೆ ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ. ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ. ನಮ್ಮ ಭಾಷೆಗೆ ನಮ್ಮದೆ ಆದಂತಹ ಗೌರವ ಇದೆ. ನಾವು ಎಲ್ಲಾ ಭಾಷೆಯನ್ನ ಗೌರವಿಸುತ್ತೇವೆ. ಆದ್ರೆ ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಗುಡುಗಿದ್ದಾರೆ. ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ…