Author: admin

ಗುಬ್ಬಿ: ಹಮನಾಬಾದ  ತಾಲ್ಲೂಕಿನ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ಮೇಲೆ ಹಲ್ಲೆ ನಡೆಸಿದ ಬಿ.ಎಸ್.ಪಿ.ಪಕ್ಷದ ಮುಖಂಡರ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಗುಬ್ಬಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಛೇರಿಯ ಮುಂಭಾಗ ನೌಕರರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕುರಿತು ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣ್ , ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಅನೇಕ ಒತ್ತಡಗಳ ನಡುವೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ‌ಕರ್ತವ್ಯದಲ್ಲಿದ್ದ  ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಅವರು ಬಿ ಎಸ್ ಪಿ ಮುಖಂಡರ ಮನವಿ ಸ್ವೀಕರಿಸಲು ಬಂದಿಲ್ಲ ಎಂಬ ಕಾರಣ ನೀಡಿ  ಏಕಾಏಕಿ ಅವರ ಮೇಲೆ ಗುಂಪುಕಟ್ಟಿಕೊಂಡು ಹಲ್ಲೆ ಮಾಡಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ವತಿಯಿಂದ ತಹಶೀಲ್ದಾರ್ ಆರತಿ ಯವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ  ಸರ್ಕಾರಿ ನೌಕರರ ಸಂಘದ ಸದಸ್ಯರು. ಗ್ರಾಮ ಲೆಕ್ಕಾಧಿಕಾರಿ ಗಳು ಹಾಜರಿದ್ದರು. ವರದಿ:…

Read More

ಹೆಚ್.ಡಿ.ಕೋಟೆ: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಹಾಗೂ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಸಸಿ ನೆಡುವ ಮತ್ತು ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ವತಿಯಿಂದ ಒಟ್ಟು 20 ಗಿಡಗಳನ್ನು ಕಾಲೇಜಿಗೆ ನೀಡಲಾಯಿತು. ಈ ವೇಳೆ ಮಾತನಾಡಿದ  ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಡಾ.ಕುಮಾರ್ ,  ಪ್ರಬುದ್ಧ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯುವ ವಿದ್ಯಾರ್ಥಿಗಳು ಮುಂದಾಗಬೇಕು  ಎಂದು ಡಾ.ಕುಮಾರ್ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಉಷಾದೇವಿ ಮಾತನಾಡಿ,   ರೆಡ್ ಕ್ರಾಸ್ ಸಮಿತಿಯಿಂದ ಒಟ್ಟು 20 ಗಿಡಗಳನ್ನು ಬಹಳ ಜವಾಬ್ದಾರಿಯುತವಾಗಿ ಪೋಷಣೆ ಮಾಡುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಪ್ರಬಂಧ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಹುಳಿಯಾರ್ ರಸ್ತೆಯಲ್ಲಿನ ವಿದ್ಯುತ್ ಕಂಬಗಳ ದೀಪಗಳು ಕಾರ್ಯನಿರ್ವಹಿಸದೆ ಸುಮಾರು ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದೆ ಎಂದು ತಾಲ್ಲೂಕಿನ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯೂರು ನಗರದಿಂದ ಮೈಸೂರುಗೆ ತೆರಳುವ ಈ ರಸ್ತೆಯು ಪ್ರಧಾನ ರಸ್ತೆಯಾಗಿದ್ದು , ಈ ಮಾರ್ಗದಲ್ಲಿ ಹಿರಿಯೂರು ನಗರದ ಪ್ರಖ್ಯಾತ  ಖಾಸಗಿ ಆಸ್ಪತ್ರೆಯಾದ ಗುರುಮೂರ್ತಿ ಹಾಸ್ಪಿಟಲ್  ಹಾಗೂ ಪುಷ್ಪಾಂಜಲಿ ಚಿತ್ರಮಂದಿರವಿದೆ. ಆದರೆ, ಈ ರಸ್ತೆಯಲ್ಲಿರುವ ಬೀದಿ ದೀಪಗಳು ಸುಮಾರು ಏಳೆಂಟು ತಿಂಗಳುಗಳಿಂದ ಕಾರ್ಯನಿರ್ವಹಿಸದಿದ್ದರೂ ಸಂಬಂಧ ಪಟ್ಟವರು ಇನ್ನೂ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ.  ಘಟನೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಸ್ಥಳೀಯ ಶಾಸಕರಾಗಲಿ ಈವರೆಗೆ ಗಮನ ಹರಿಸಿಲ್ಲ. ಈ ಪ್ರದೇಶದಲ್ಲಿ ಕತ್ತಲು ಆವರಿಸಿದ್ದರಿಂದಾಗಿ ಇದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ರಾತ್ರಿಯಾದರೆ, ಈ ದಾರಿಯಲ್ಲಿ ಸಂಚರಿಸಲು ಮಹಿಳೆಯರು ಹೆದರುವಂತಾಗಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿದೆ. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ  ಸಾಮಾನ್ಯ ಸೇವಾ ಕೇಂದ್ರವನ್ನು ತುರುವೇಕೆರೆ ಗ್ರಾಮಾಂತರ ಯೋಜನಾಧಿಕಾರಿ ಅನಿತಾ ಶೆಟ್ಟಿ, ಮೇಲ್ವಿಚಾರಕರಾದ ಅಕ್ಷತಾ ರವರ ನೇತೃತ್ವದಲ್ಲಿ, ಹೋಬಳಿಯ ಪ್ರಮುಖ ಮುಖಂಡರ ಜೊತೆಗೆ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅನಿತಾ ಶೆಟ್ಟಿ, ಡಾ.ವೀರೇಂದ್ರ ಹೆಗಡೆಯವರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈಗಾಗಲೇ ಹಲವಾರು ಸೇವೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ನೀಡುತಿದ್ದು, ತಾಲೂಕಿನಲ್ಲಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಮಾಡಿ ಹಲವಾರು ಗುಂಪುಗಳನ್ನು ಮಾಡಿ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡಿ ಬಡ ಕುಟುಂಬಗಳ ಅಭಿವೃದ್ಧಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ಕೊಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದೆ. ಈಗ ಅದರ ಸಾಲಿಗೆ ಸಾಮಾನ್ಯ ಸೇವಾ ಕೇಂದ್ರವನ್ನು ನೀಡುವುದರ ಮೂಲಕ ಸರ್ಕಾರದ ಹಲವಾರು ಯೋಜನೆಗಳ ಸೇವೆಗಳನ್ನು ಸ್ಥಳೀಯ ಮಟ್ಟದಲ್ಲಿ ನೀಡಿ ಗ್ರಾಮೀಣ ಭಾಗದ ಜನರು ಕಛೇರಿ ಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಸಂಸ್ಥೆಯು ಸಮಾಜಸೇವೆ ಕಾರ್ಯಕ್ಕೆ…

Read More

ತಿಪಟೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವುಳ್ಳ ಫೋಟೋವನ್ನು ತೆಗೆದು ಅವಮಾನಿಸಿದ, ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ವಜಾ ಮಾಡುವಂತೆ ಒತ್ತಾಯಿಸಿ, ತಿಪಟೂರು ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ರವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ  ಫೋಟೋವನ್ನು ತೆಗೆದು ಅವಮಾನಿಸಿದ ನ್ಯಾಯಾಧೀಶರ ನಡೆಯನ್ನು ಖಂಡಿಸಿ, ನ್ಯಾಯಾಧೀಶ ಸ್ಥಾನದಿಂದ ಅವರನ್ನು ವಜಾ ಮಾಡಿ, ರಾಷ್ಟ್ರದ್ರೋಹ  ಪ್ರಕರಣದಡಿಯಲ್ಲಿ ಕೇಸು ದಾಖಲಿಸಿ, ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ, ತಿಪಟೂರು ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ತಿಪಟೂರು ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಕೆ.ಎಲ್. ಪರಮೇಶ್ವರಯ್ಯ ರವರ  ಮುಖಾಂತರ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು..    ಎಪಿಎಂಸಿ ಸದಸ್ಯ ಬಜಗೂರು ಮಂಜುನಾಥ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಬಿ.ಬಿ. ಬಸವರಾಜ್ ಮತ್ತು ಕರವೇ ನಗರ ಅಧ್ಯಕ್ಷ ವೈ.ವಿ.ವೆಂಕಟೇಶ್ ಮಾತನಾಡಿದರು.  ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಿ.ಟಿ.ಕುಮಾರ್, ಕಾರ್ಯದರ್ಶಿ ಹಿಂಡಿಸ್ಕೆರೆ ರವಿಕುಮಾರ್, ನಗರ…

Read More

ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕರಡಾಳು ಸಂತೆ ಮೈದಾನದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಿಪಟೂರು ವಕೀಲರ ಗೆಳೆಯರ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂಗಳು ಮತ್ತು ಸಾಕ್ಸ್,ಟೈ- ಬೆಲ್ಟ್ ಹಾಗೂ  ಗುರುತಿನ ಪತ್ರಗಳನ್ನು ವಿತರಿಸಿದರು. ಬಳಿಕ ಮಾತನಾಡಿದ  ಹಿರಿಯ ಶ್ರೇಣಿ ನ್ಯಾಯಾಧೀಶರಾದ ನೂರುನ್ನೀಸ, ಪ್ರತಿ ಶಾಲೆಯಲ್ಲೂ ಟಿ.ಕೆ. ಪಟ್ಟಾಭಿರಾಮು ಮತ್ತು ಛಾಯರವರಂತಹ ಶಿಕ್ಷಕರು ಇದ್ದರೆ, ಗುಣಾತ್ಮಕ ಶಿಕ್ಷಣ ಹಾಗೂ ಎಲ್ಲ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯ ಎಂದು ಪ್ರಶಂಶಿಸಿ, ಅಭಿನಂದಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ ಎಂದು ಇದೇ ವೇಳೆ ಕರೆ ನೀಡಿದರು. ಸಿವಿಲ್ ನ್ಯಾಯಾಧೀಶರಾದ ಚಂದನ ಜೆ. ಮಾತನಾಡಿ, ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಶಾಲೆ ಬಿಡಿಸದೆ. ಉತ್ತಮ ಶಿಕ್ಷಣ ನೀಡಿದರೆ, ಪ್ರತಿ ಗ್ರಾಮವು ನಂದನವನ ವಾಗುತ್ತದೆ ಎಂದು ತಿಳಿಸಿದರು.  ವಕೀಲರ ಸಂಘದ ಅಧ್ಯಕ್ಷ ಕೆ. ಆರ್. ದಯಾನಂದ್, ಕಾರ್ಯದರ್ಶಿ…

Read More

ತುಮಕೂರು: ಚಿಕ್ಕನಾಯಕನಹಳ್ಳಿಯ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ತೇಜಸ್ವಿನಿ  ಬಿ. ಅವರು ಅತ್ಯಂತ ಹಿಂದುಳಿದ ವರ್ಗಗಳಾದ ಅಲೆಮಾರಿ ಜನಾಂಗ ಸುಡುಗಾಡು ಸಿದ್ದರು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ನಮಗೆ ಕೊಡುವಂತೆ ಮತ್ತು  ಪರಿಹಾರಗಳನ್ನು ಒದಗಿಸುವಂತೆ ತಹಸೀಲ್ದಾರ್ ಕಚೇರಿಗೆ ತೆರಳಿ  ಕೇಳಲು ಹೋದಾಗ ನಿಂದಿಸಿ ಕಚೇರಿಯಿಂದ ಹೊರದಬ್ಬಿರುವ ಘಟನೆ ಇದೀಗ ತೀವ್ರತೆ ಪಡೆದುಕೊಂಡಿದೆ. ತಹಸೀಲ್ದಾರ್ ತೇಜಸ್ವಿನಿ  ಬಿ. ಅವರು, ನ್ಯಾಯ ಕೇಳಲು ಬಂದಿದ್ದ ಅಮಾಯಕ, ಅನಕ್ಷರಸ್ಥ ಹಿಂದುಳಿದ ವರ್ಗದ ಜನರನ್ನು ಪೋಲಿಸ್ ಕರೆಸಿ ಕಚೇರಿಯಿಂದ ಹೊರ ನೂಕಲು ಪ್ರಯತ್ನಿಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೇ ರೌಡಿಶೀಟರ್ ಹಾಕುವುದಾಗಿ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಗಳನ್ನು  ಬ್ಲಾಕ್ ಮಾಡಿ ಹೇಳಿ ಗಡಿಪಾರು ಮಾಡುವ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ತಹಸೀಲ್ದಾರ್ ವರ್ತನೆಯಿಂದ ನೊಂದ  ವ್ಯಕ್ತಿಗಳು ಸಾಮಾಜಿಕ ಹೋರಾಟಗಾರ ಹಂದ್ರಾಳು ನಾಗಭೂಷಣ  ಅವರನ್ನು ಸಂಪರ್ಕಿಸಿದ್ದು, ಅವರ ನೇತೃತ್ವದಲ್ಲಿ ತೇಜಸ್ವಿ ಬಿ. ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಲು ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ತುಮಕೂರು ಪೊಲೀಸ್ ವರಿಷ್ಠಾಧಿಕಾರಿ…

Read More

ಹೆಚ್.ಡಿ.ಕೋಟೆ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ತೆರವು ಮಾಡುವ ಮೂಲಕ ಉದ್ಧಟತನದ ವರ್ತನೆ ತೋರಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದೇಶದ್ರೋಹದ ದೂರು ದಾಖಲಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕಿನ ಅಂಬೇಡ್ಕರ್ ಭವನದಿಂದ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿ, ಮಲ್ಲಿಕಾರ್ಜುನ ಗೌಡ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಚಾ.ಶಿವಕುಮಾರ್, ರಾಯಚೂರು ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಭಾವ ಚಿತ್ರ ಇದ್ದರೆ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸಣ್ಣಕುಮಾರ್ ಮಾತನಾಡಿ,  ಜಾತಿಯ ಬೇಧ ಭಾವದ ಮನಸ್ಸಿನಲ್ಲಿ ಕೆಲಸ ಮಾಡುವವರು ನ್ಯಾಯಾಧೀಶರ ಹುದ್ದೆಗೆ ಅರ್ಹರಲ್ಲ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು, ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದೊಡ್ಡಸಿದ್ದು ಹಾದನೂರು,  ಸೋಮಣ್ಣ(ಚನ್ನ), ಕೂಡಿಗಿ ಗೊವಿಂದರಾಜು, ಕುಮಾರ್, ರಾಜಪ್ಪ, ಶಿವಯ್ಯ ಕೃಷ್ಣ…

Read More

Covaxin ಮತ್ತು Covishield ಈಗ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅವರು ಗುರುವಾರ ಈ ಎರಡು ಕೋವಿಡ್ ಲಸಿಕೆಗಳಿಗೆ ಷರತ್ತುಬದ್ಧ ಮಾರುಕಟ್ಟೆ ಅನುಮೋದನೆ ನೀಡಿದ್ದಾರೆ. Covaxin, Covishield to be available in hospitals, clinics; apex body gives nod ಕೆಲವು ಷರತ್ತುಗಳಿಗೆ ಒಳಪಟ್ಟು ವಯಸ್ಕ ಜನಸಂಖ್ಯೆಗೆ ಈ ಕೋವಿಡ್-19 ಲಸಿಕೆಗಳಿಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ನೀಡುವಂತೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಈ ಹಿಂದೆ ಶಿಫಾರಸು ಮಾಡಿತ್ತು. ಮಾರುಕಟ್ಟೆಯ ಅನುಮೋದನೆ ನಂತರ ಲಸಿಕೆಗಳು ಮೆಡಿಕಲ್ ಶಾಪ್‌ಗಳಲ್ಲಿ ಲಭ್ಯವಿರುವುದಿಲ್ಲ. ಕೇವಲ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಂದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಖರೀದಿಸಬೇಕಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ DCGI ಗೆ ಲಸಿಕೆ ಡೇಟಾವನ್ನು ಸಲ್ಲಿಸಬೇಕು. CoWIN ಅಪ್ಲಿಕೇಶನ್‌ನಲ್ಲಿಯೂ ಡೇಟಾವನ್ನು ನವೀಕರಿಸಬೇಕಾಗುತ್ತದೆ.ಲಸಿಕೆಗಳ ಬೆಲೆಯನ್ನು ಪ್ರತಿ ಡೋಸ್‌ಗೆ 275 ರೂ ಗೆ ಮಿತಿಗೊಳಿಸಲು ಕೇಂದ್ರವು ಯೋಜಿಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ವರದಿ: ಆಂಟೋನಿ ಬೇಗೂರು…

Read More

ಚಾಮರಾಜನಗರ : ಸೆಲ್ಫಿ ಶೋಕಿಗೆ ವಿದ್ಯಾರ್ಥಿವೊಬ್ಬ ನೀರುಪಾಲಾಗಿರುವ ಘಟನೆ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ. 19 ವರ್ಷದ ಉಮಾಶಂಕರ್ ಮೃತ ವಿದ್ಯಾರ್ಥಿಯಾಗಿದ್ದು, ಮೈಸೂರು ಮೂಲದ ನಿವಾಸಿ ಎಂದು ತಿಳಿದುಬಂದಿದೆ. ನರ್ಸಿಂಗ್ ಓದುತ್ತಿದ್ದ ಉಮಾಶಂಕರ್ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಜತೆ ಗುರುವಾರ ಹೊಗೆನಕಲ್​ ಫಾಲ್ಸ್​ಗೆ ತೆರಳಿದ್ದರು.ಪ್ರವಾಸದ ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್, ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿ ಸ್ನೇಹಿತರಿಗೆ ಫೋಟೋ ತೆಗೆಯುವಂತೆ ಹೇಳಿದ್ದಾನೆ‌. ಇದಾದ ಬಳಿಕ ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ವೇಳೆ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ‌. ವರದಿ: ಆಂಟೋನಿ ಬೇಗೂರು

Read More