Author: admin

ಬೆಂಗಳೂರು : ಧರ್ಮ ಸಂಘರ್ಷ ಸೃಷ್ಟಿ ಮಾಡುತ್ತಿರುವ ಘಟನೆಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಹತ್ವದ ಸಲಹೆ ನೀಡಿದ್ದಾರೆ ಸಿಎಂ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಸಮಾಜದ ಗುರುಗಳನ್ನು ಕರೆದು ವಿಧಾನಸೌಧದಲ್ಲಿ ಸಭೆ ಮಾಡಲಿ, ಯಾವ ಧರ್ಮವರು ಯಾವ್ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದನ್ನು ಸ್ವಷ್ಟವಾದ ಸಂದೇಶ ರವಾನೆ ಮಾಡಲಿ ಎಂದು ಅವರು ಸಲಹೆ ನೀಡಿದ್ದಾರೆ. ಈ ನಾಡಿನ ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಲಿ. ಅಜಾನ್‌ ವಿವಾದ ಇತ್ಯರ್ಥಕ್ಕೆ ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು:  ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಮತ್ತೊಮ್ಮೆ ಅರ್ಥಹೀನವಾಗಿ ಮಾತನಾಡಿದ್ದಾರೆ. ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಟ ಮಟ್ಟ ತಲುಪಿದೆ‌.‌ ಸಗಟು ಹಣದುಬ್ಬರ ದರ 4 ತಿಂಗಳ ಗರಿಷ್ಠ ಮಟ್ಟ ತಲುಪಿದೆ.ಇಷ್ಟಾದರೂ ಹಣದುಬ್ಬರ ಅತಿಯಾಗಿ ಏರಿಕೆಯಾಗಿಲ್ಲ ಎಂದರೆ ಏನರ್ಥ? ಎಂದು  ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವೀಟ್  ಮೂಲಕ ತರಾಟೆಗೆತ್ತಿಕೊಂಡಿದ್ದಾರೆ.   ಏರುತ್ತಿರುವ ಸಗಟು ಹಣದುಬ್ಬರ ಭವಿಷ್ಯದಲ್ಲಿ ಚಿಲ್ಲರೆ ಹಣದುಬ್ಬರದ ಮೇಲೂ ನೇರ ಪರಿಣಾಮ ಬೀರಲಿದೆ.ಈಗಾಗಲೇ ಬೆಲೆಯೇರಿಕೆಯಿಂದ ಜನಸಾಮಾನ್ಯ ತತ್ತರಿಸಿದ್ದಾನೆ. ಹಣದುಬ್ಬರ ಹೀಗೆ ಏರುತ್ತಿದ್ದರೆ ಜನರ ಬದುಕು ಏನಾಗಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.   ಹಣದುಬ್ಬರದ ಬಗ್ಗೆ ಆರ್ಥಿಕ ತಜ್ಞರ ಆತಂಕ ಭಾರತದ ಮಟ್ಟಿಗೆ ಎಚ್ಚರಿಕೆಯ ಕರೆಗಂಟೆ.ಅರ್ಥ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಲಿ  ಎಂದು ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಾವಗಡ: ತಾಲ್ಲೂಕು ನೀಡಗಲು ಹೋಬಳಿಯ ವಾಪ್ತಿಯಲಿ ಬರುವ ಚನ್ನಕೇಶವಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚನ್ನಕೇಶವಸ್ವಾಮಿ. ಮತ್ತು ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ತೇರು ಉತ್ಸವ ಬಹಳ ಅದ್ದೂರಿಯಾಗಿ ಜಾತ್ರಾ  ಮಹೋತ್ಸವ ನಡೆಯಿತು. ಈ ಜಾತ್ರೆಯ ವಿಶೇಷವೇನೆಂದರೆ. ಪ್ರತಿವರ್ಷವೂ ಈ ಜಾತ್ರೆಯ ಕೊನೆಯ ದಿನವಾಗಿ. ಹುಟ್ಟಲು ಪರಿಷೆಯನ್ನು ಕಳೆದ ಏಳು ದಿನಗಳಿಂದ ನಡೆಯುತ್ತಿದ್ದಂತಹ ಜಾತ್ರೆ ಇಂದು ತೆರೆ ಬಿದ್ದಿದೆ. ಈ ಸಂದರ್ಭದಲ್ಲಿ ವೆಂಕಟಭೀಮ ರಾವ್  ವಂಶಸ್ಥರು ಆದಂತಹ  ಸಿ.ಎನ್ ಆನಂದರಾವ್. ಗೋಪಾಲ್ ರಾವ್ ನಾಗರಾಜ ಸ್ವಾಮಿ .ಅಜಯ್ ನಾಗೇಶ್.  ಬಿಂದು ಮಾಧವ ರಾವ್. ಶೇಷಗಿರಿರಾವ್. ಯರ್ರಪ್ಪ ಕೆಇಬಿ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಮ್ಮ ಈರಣ್ಣ. ಹನುಮಂತರಾಯಪ್ಪ ಗೌಡರು. ನೀರಗಂಟೆ ಶಿವಪ್ಪ. ಪಾಂಡುರಂಗಪ್ಪ ತಳವಾರ್ ಮತ್ತು  ಊರಿನ ಕೈವಾಡಸ್ಥರು. ಅಕ್ಕಪಕ್ಕದ ಗ್ರಾಮಸ್ಥರು  ಭಕ್ತಾದಿಗಳು ಪಾಲ್ಗೊಂಡಿದ್ದರು ವರದಿ :ರಾಮಪ್ಪ ಸಿ. ಕೆ. ಪುರ, ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ತಿಪಟೂರು:  ನಗರಕ್ಕೆ ಆಗಮಿಸಿದ ಜನತಾ ಜಲಧಾರೆ ಯಾತ್ರೆ ವಾಹನವನ್ನು ಜೆಡಿಎಸ್ ಮುಖಂಡರು ಗ್ರಾಮದೇವತೆ ಕೆಂಪಮ್ಮದೇವಿ ಸಮ್ಮುಖದಲ್ಲಿ ಬರಮಾಡಿಕೊಂಡು, ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ ಮಾತನಾಡಿ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆ ಇದ್ದರೂ, ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜಲಕ್ಷಾಮದಿಂದಾಗಿ ರೈತರು ಕೃಷಿ ಮಾಡಲು ಹಿಂದೇಟು ಹಾಕುವಂತಾಗಿದೆ . ರೈತರ ಬದುಕು ಹಸನು ಮಾಡಲು ಜೆಡಿಎಸ್ ಪಕ್ಷ ಜಲಧಾರೆ ಯೋಜನೆ ಯನ್ನು ಜಾರಿಗೆ ತಂದಿದೆ ಎಂದರು. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಕಲಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ ತುಂಗಭದ್ರ ಕಬಿನಿ ಕೃಷ್ಣ ಕಾವೇರಿ ಪ್ರಮುಖ ನದಿಗಳು ಹುಟ್ಟಿ ಹರಿಯುತ್ತಿದ್ದರೂ, ನಮ್ಮ ಜನರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ.  ತಮಿಳುನಾಡು ಕೇರಳಕ್ಕೆ ಆಂಧ್ರಕ್ಕೆ ನಮ್ಮ ನೀರುಕೊಟ್ಟು ನಾವು ನೀರಿಗಾಗಿ ಹಾಹಾಕಾರ ಪಡುತ್ತಿದ್ದೇವೆ.  ರಾಷ್ಟ್ರೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಅಭಿವೃದ್ಧಿಯಾಗಬೇಕಾದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ…

Read More

ತುಮಕೂರು: ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಚೇತರಿಸಿಕೊಂಡಿದ್ದು, ತಮ್ಮ ಆರೋಗ್ಯದ ಬಗ್ಗೆ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ. ಕಾರಿನ ಟೈರ್ ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಕಾರು ಮಗುಚಿ ಬಿದ್ದಿದ್ದು, ಪರಿಣಾಮವಾಗಿ ನನಗೆ ಗಾಯಗಳಾಗಿವೆ. ಸದ್ಯ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಕ್ಷೇಮವಾಗಿದ್ದೇನೆ. ಸಂಪೂರ್ಣವಾಗಿ ಗುಣಮುಖವಾಗಲು 1 ತಿಂಗಳುಗಳ ಕಾಲ ಬೇಕಾಗಬಹುದು ಎಂದು ತಿಳಿಸಿದರು. ತಿಮ್ಮಮಾನಹಳ್ಳಿ ಬೋರಯ್ಯ ಜಯಚಂದ್ರರವರು. ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಜೆ.ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜುಂಜಪ್ಪ ಸ್ವಾಮಿ, ಚಿತ್ರಲಿಂಗೇಶ್ವರ, ಗೊಡ್ಢಗಾಳಮ್ಮದೇವಿ, ಕರಿಯಮ್ಮ ದೇವಿ ಮತ್ತು ಭೂತಪ್ಪ ಸ್ವಾಮಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬರುವ ವೇಳೆ ಕಲ್ಲಂಬೆಳ್ಳ ಬಳಿ ಅವರ ಕಾರು ಅಪಘಾತಕ್ಕೀಡಾಗಿತ್ತು. ವರದಿ: ಮುರುಳಿಧರನ್ ಆರ್ ಹಿರಿಯೂರು ( ಚಿತ್ರದುರ್ಗ – ದಾವಣಗೆರೆ ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಮಧುಗಿರಿ: ಬಡವನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಜಲದಿ ಉತ್ಸವ   ಅದ್ದೂರಿಯಾಗಿ ನಡೆಯಿತು. ಮಧುಗಿರಿ ತಾಲೂಕು  ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ಉತ್ಸವ ಹಾಗೂ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಮೆರವಣಿಗೆ ಮತ್ತು ಬಡವನಹಳ್ಳಿ ಗ್ರಾಮದ ಸುತ್ತಮುತ್ತಲಿನ ರಂಗನಾಥಸ್ವಾಮಿಯ ಪೂಜಾ ಭಕ್ತರಿಂದ ಸ್ನಾನ ಮಾಡಿ ಪೂಜೆ ಸಲ್ಲಿಸುವ ಮುಖಾಂತರ ಲಕ್ಷ್ಮಿ ರಂಗನಾಥ ಕೃಪೆಗೆ ಪಾತ್ರರಾದರು. ಬಡವನಹಳ್ಳಿ ಗ್ರಾಮದ ಸುವರ್ಣಮುಖಿ ನದಿಯಲ್ಲಿ ಶ್ರೀ ಲಕ್ಷ್ಮೀ ರಂಗನಾಥನ ಗಂಗೆ ಸ್ನಾನ ಪೂಜೆ ಪುರಸ್ಕಾರ ಬಾಣ ಯಾತ್ರೆ ಹಾಗೂ ಭೂತನ ಸೇವೆ ನಡೆಯಿತು. ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಸೇರಿದ್ದರು ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ: ತಾಲ್ಲೂಕು ಮಾಯಸಂದ್ರ ಹೋಬಳಿಗೆ ಸೇರಿದ ಶೆಟ್ಟಿಗೊಂಡನಹಳ್ಳಿ ರೈತರಾದ  ಗಂಗನರಸಮ್ಮ ಎಂಬವರಿಗೆ ಸೇರಿದ 14 ಕುರಿ ಮತ್ತು16 ಮೇಕೆಗಳನ್ನು ಕದ್ದೊಯ್ದಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 2ರಿಂದ 2:30 ರ ಸಮಯದಲ್ಲಿ ಗಂಗನರಸಮ್ಮನವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳ್ಳರು ಚಾಣಾಕ್ಷತನದಿಂದ ಕಳವು ಮಾಡಿದ್ದಾರೆ. ಕಳವಿಗೂ ಮೊದಲು ಅಕ್ಕ ಪಕ್ಕದ,ಮನೆಗಳಿಗೆ ಕಳ್ಳರು ಹೊರಗಿನಿಂದ  ಚೀಲಕವನ್ನು ಹಾಕಿ. ನಂತರ ಈ ಕೃತ್ಯ ನಡೆಸಿದ್ದಾರೆ . ಈ ಘಟನೆ ಸಂಬಂಧ ತುರುವೇಕೆರೆ  ಪೊಲೀಸ್  ಠಾಣೆಯ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿ ತನಿಖೆ ನಡೆಸಲು  ಮುಂದಾಗಿದ್ದಾರೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿತ್ರದುರ್ಗ:  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣವೇ  ಬಂಧಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರಾದ ಪಾಪಣ್ಣ,  ನಮ್ಮ  ದೇಶದಲ್ಲಿ ಎಂದಿಗೂ ಸಹ ಕಂಡು ಅರಿಯದಂತಹ  ಭ್ರಷ್ಟಾಚಾರದ ವಾತಾವರಣ ನಿರ್ಮಾಣವಾಗುತ್ತಿದೆ. ಬಡವರು ಕೊಂಡುಕೊಳ್ಳುವ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಸಹ ಏರಿಕೆಯಾಗುತ್ತಲೇ ಇದೆ . ಪೆಟ್ರೋಲ್, ಡಿಸೇಲ್ , ಇಂಧನಗಳ ಬೆಲೆಯು ಸಹ ದಿನಕ್ಕಿಂತ ದಿನ ಗಗನಕ್ಕೇರುತ್ತಲೇ ಇದೆ. ಇದು ಇಂದಿನ ಬಿ ಜೆ ಪಿ ಸರ್ಕಾರದ ದುರಾಡಳಿತದ ವ್ಯವಸ್ಥೆಯಾಗಿದೆ ಎಂದರು. ಹಿರಿಯೂರು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ ಮಾತನಾಡಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯ ಸಚಿವರಾದಂತಹ  ಕೆ.ಎಸ್. ಈಶ್ವರಪ್ಪ ನವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ದು, ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ…

Read More

ಹೆಚ್.ಡಿ.ಕೋಟೆ: ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿ ಜಾಥಾದ ಮೇಲೆ ಬಜರಂಗದಳ ನಡೆಸಿದ ದಾಳಿಯ ವಿರುದ್ಧ  ತಕ್ಷಣದ ಕ್ರಮಕ್ಕೆ ಸಿಪಿಐ ಮತ್ತು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿ  ತಾಲ್ಲೂಕಿನ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಬಜರಂಗದಳದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಜೌಡಹಳ್ಳಿ ಜವರಯ್ಯ ಮಾತನಾಡಿ, ಏಪ್ರಿಲ್14ರಂದು ದೇಶಾದ್ಯಂತ ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ಅಚರಿಸಿದ್ದಾರೆ. ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿಯ  ಪ್ರಯುಕ್ತ ದಲಿತ ಯುವಕರು ನಡೆಸುತ್ತಿದ್ದು ಬೈಕ್ ರ್ಯಾಲಿ ಮೇಲೆ ಬಜರಂಗದಳದ ಅಧ್ಯಕ್ಷ ಭೀಕರ ದಾಳಿ ನಡೆಸಿ ದಲಿತ ಯುವಕರ ಮೇಲೆ ಚಾಕುಗಳು,ಗಾಜಿನ ಬಾಟಲಿಗಳು ಮತ್ತು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎಂದರು. ನಂತರ ತಾಲ್ಲೂಕು ಕಾರ್ಯದರ್ಶಿ ಹೆಗ್ಗನೂರು ಪುಟ್ಟಮಾದು ಮಾತನಾಡಿ, ದಾಳಿಕೋರರು ಅಂಬೇಡ್ಕರ್ ಅವರ ಭಾವಚಿತ್ರಗಳಿರುವ ಬ್ಯಾನರ್ ಗಳು ಧ್ವಜಗಳನ್ನು ಹರಿದು ಹಾಕಿ ಅವುಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಮತ್ತು ರ್ಯಾಲಿಗೆ…

Read More

ತುಮಕೂರು: ರಾಜ್ಯದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದು ಬೆಲೆ ಏರಿಕೆ ಸೇರಿದಂತೆ ಬಿಜೆಪಿಯ ರಾಜಕಾರಣಕ್ಕೆ ಸಾಮಾನ್ಯ ಜನರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಮುಂಬರುವ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಿದ್ದು,  ಗ್ಯಾಸ್ ಡೀಸೆಲ್-ಪೆಟ್ರೋಲ್ ಕಟ್ಟಡ ಸಾಮಗ್ರಿಗಳ ಬೆಲೆ ದುಸ್ತರವಾಗಿದ್ದು, ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ ಪಕ್ಷ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಸಿಲುಕಿ ನರಳುತ್ತಿದ್ದಾರೆ. ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಅತಿ ಹೆಚ್ಚಿನ ಸಾಮಾನ್ಯ ಜನರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ…

Read More