Author: admin

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಭಕ್ತರ ಸಾಗರದ ನಡುವೆ ಬಹಳ  ಅದ್ಧೂರಿಯಾಗಿ ನಡೆಯಿತು. ಈ ಜಾತ್ರಾ ಮಹೋತ್ಸವಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋಮಶೇಖರ್ ಬಿ.  ಅವರು ಬೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡು ದೇವರ ಕೃಪೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ಸಹ ಸೋಮಶೇಖರ್ ಬಿ. ಅವರಿಗೆ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಸೋಮಶೇಖರ್ ಬಿ.,  ಈ ಶಕ್ತಿಯುಳ್ಳ ಕಾಲಭೈರವೇಶ್ವರ ಸ್ವಾಮಿ ದರ್ಶನ ಪಡೆದುಕೊಂಡಿದ್ದು ನಿಜಕ್ಕೂ ಸಹ ನನ್ನ ಒಂದು ಸೌಭಾಗ್ಯ ಎಂದು ತಿಳಿಸಿದರು. ಇದೇ ವೇಳೆ ಚಿತ್ರದುರ್ಗ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿ.ಬಿ.ಪಾಪಣ್ಣ ನವರು ಮಾತನಾಡಿ,  ಈ ವದ್ದಿಕೆರೆ ಕಾಲಭೈರವೇಶ್ವರ ಸ್ವಾಮಿಯ ಜಾತ್ರೆಯು ಚಿತ್ರದುರ್ಗ ಜಿಲ್ಲೆಯಲ್ಲೇ  ಬಹಳ ವೈಶಿಷ್ಟ್ಯವಾದ ಜಾತ್ರೆಯಾಗಿದ್ದು,  ಈ ಜಾತ್ರೆಗೆ ನಾನಾ ರಾಜ್ಯಗಳಿಂದ ಲಕ್ಷಾಂತರ ಜನ…

Read More

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ತಾಲೂಕಿನ ಮಾಜಿ ಜೆಡಿಎಸ್ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆ ಕುರಿತು ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಇದೇ ತಿಂಗಳು 25ನೇ ತಾರೀಕು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು, ತಾಲೂಕಿಗೆ ಜನತಾ ಜಲಧಾರೆ ರಥಯಾತ್ರೆ ಬರಲಿದ್ದು, ಪಕ್ಷಕ್ಕೆ ಹೊಸ ಮೆರುಗನ್ನು ಕೊಡುವ ನಿಟ್ಟಿನಲ್ಲಿ.ಜೊತೆಗೆ ಮುಂದಿನ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರ ನಡುವೆ ಈ ಸಭೆಯನ್ನು ಮಾಡಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಈ ಕಾರ್ಯಕ್ರಮಕ್ಕೆ ಸುಮಾರು 500 ಮುತ್ತೈದೆಯರು ಕುಂಭಮೇಳ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಅದ್ದೂರಿ ಯಶಸ್ವಿಗೊಳಿಸಬೇಕು. ಜೊತೆಗೆ ಕಾರ್ಯಕರ್ತರನ್ನು ಒಗ್ಗೂಡಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ರಮೇಶಗೌಡ, ಜೆಡಿಎಸ್ ಮುಖಂಡ ಚಂದ್ರೇಶ್, ಎಸ್ಸಿ ಘಟಕದ ಅಧ್ಯಕ್ಷ ತಿಮ್ಮೇಶ್,  ಎಸ್ ಟಿ ಘಟಕದ ಅಧ್ಯಕ್ಷ ಶಿವಣ್ಣ ಇನ್ನು ನೂರಾರು ಕಾರ್ಯಕರ್ತರು ಈ ಪೂರ್ವಭಾವಿ ಸಭೆಯಲ್ಲಿ…

Read More

ಕೆ.ಆರ್.ಪೇಟೆ: ದ್ವಿತೀಯ ಪಿಯುಸಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಹಬ್ಬದಂತೆ ಎದುರಿಸಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು. ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಶಾರದಾ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವ ಡಾ‌.ನಾರಾಯಣಗೌಡ ಮಾತನಾಡಿದರು. ಯುವಶಕ್ತಿ ಬಲಿಷ್ಠ ಶಕ್ತಿಯಾಗಿದೆ. ಯುವಜನರು ಏಕಾಗ್ರತೆ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಾವುದೇ ಕೆಲಸವನ್ನು ಮಾಡಿ ಗುರಿಯನ್ನು ತಲುಪಬಹುದಾಗಿದೆ. ಆದ್ದರಿಂದ ತಾವುಗಳು ತರಗತಿಗಳಲ್ಲಿ ಕಲಿತ ಪಾಠಪ್ರವಚನಗಳನ್ನು ನೆನಪು ಮಾಡಿಕೊಂಡು ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಚೆನ್ನಾಗಿ ಓದಿ ಪ್ರಶ್ನೆಗೆ ಸರಿಯಾದ ನಿಖರ ಉತ್ತರವನ್ನು ಬರೆಯಬೇಕು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಸಾಧನೆ ಮಾಡಲು ಧೃಡವಾದ ಸಂಕಲ್ಪವನ್ನು ಮಾಡಿ ತಲೆ ಬಗ್ಗಿಸಿ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡರೆ. ಮುಂದೆ ಜೀವನದಲ್ಲಿ ತಲೆ ಎತ್ತಿ ಬದುಕು ನಡೆಸಬಹುದಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು. ಬಿಜಿಎಸ್ ಶಿಕ್ಷಣ…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಸಂದರ್ಭದಲ್ಲಿ, ಗ್ರಾಮದ ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದರು. ಗ್ರಾಮದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವು ಬೆಳ್ಳಿಯ ರಥದಲ್ಲಿ ನೂರಾರು ಜನರ ಸಮ್ಮುಖದಲ್ಲಿ, ಮಧ್ಯಾಹ್ನದ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾವಿನಕೆರೆ ಮುಖ್ಯರಸ್ತೆಯಲ್ಲಿ ಸುಡುಬಿಸಿಲಿನಲ್ಲಿ ನೆರೆದಿದ್ದ ನೂರಾರು ಹಿಂದೂ ಕಾರ್ಯಕರ್ತರಿಗೆ ಗ್ರಾಮದ ಮುಸ್ಲಿಂ ಬಾಂಧವರು ಕುಡಿಯಲು ತಂಪು ಪಾನೀಯಗಳನ್ನು ವಿತರಿಸಿ ಭಾವೈಕ್ಯತೆ ಮೆರೆದರು. ಜೈ ಭೀಮ್ ಘೋಷಣೆಯನ್ನು ಕೂಗುತ್ತಾ, ನಮ್ಮ ಗ್ರಾಮದಲ್ಲಿ ಯಾವುದೇ ಭೇದ ಭಾವಗಳಿಲ್ಲ, ಸಮಾನತೆಯ ಭಾವೈಕ್ಯತೆ, ಎಂದಿಗೂ ಸಹ ಇರಲಿದೆ ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ  ಮುಖಂಡರಾದ ಮಹಮದ್ ಆರೂನ್. ಕಲೀಲ್ ಪಾಷಾ. ಯುವ ಮುಖಂಡರಾದ ರಹಮತ್ ಉಲ್ಲಾ. ಇಬ್ರಾತ್. ಹರ್ಷದ್. ದಿಲ್ಲು.ಮುಬಾರಕ್ (ಬನ್ನ). ಮತ್ತು ಗ್ರಾ.ಪಂ. ಸದಸ್ಯರಾದ ಖದೀರ್ ಪಾಷ. ತಬ್ರೇಜ್. ಸೇರಿದಂತೆ ಮುಂತಾದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ವರದಿ: ಸಚಿನ್…

Read More

ತುಮಕೂರು: ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸರ್ಕಾರವನ್ನು ಒತ್ತಾಯಿಸಿದರು. ತಾಲ್ಲೂಕಿನ ನಾಗವಲ್ಲಿಯಲ್ಲಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಪಂಪು ಮೋಟಾರುಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿವಿಧ ನಿಗಮಗಳ ಅಡಿಯಲ್ಲಿ ಗಂಗಾಕಲ್ಯಾಣ ಯೋಜನೆಗೆ  ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಆಗ ಮಾತ್ರ ನಿಜವಾಗಿಯೂ ರೈತರಿಗೆ ಅನುಕೂಲವಾಗುತ್ತದೆ. ಕೇವಲ ಕೆಲವೇ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ರೈತರಿಗೆ ನ್ಯಾಯ ದೊರೆಕಿಸಿಕೊಡಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ಅಭಿವುದ್ಧಿ ನಿಗಮ ವಾಲ್ಮೀಕಿ ಅಭಿವೃದ್ಧಿ ನಿಗಮ ದೇವರಾಜ ಅರಸು ಅಭಿವೃದ್ಧಿ ನಿಗಮ ಹೀಗೆ ವಿವಿಧ ನಿಗಮಗಳ ಅಡಿಯಲ್ಲಿ ವರ್ಷಕ್ಕೆ ಕನಿಷ್ಟ 50 ಮಂದಿ ರೈತರಿಗೆ ಅವಕಾಶ ನೀಡಿದರೆ ಒಂದು ತಾಲ್ಲೋಕಿನ ಸುಮಾರು 250 ರಿಂದ 300 ಮಂದಿ ರೈತರಿಗೆ ಅನುಕೂಲವಾಗುತ್ತದೆ ಎಂದರು. ಇನ್ನು ಸಕಾಲಕ್ಕೆ ಮೋಟಾರು ಪಂಪ್ ವಿತರಣೆಯ ಕುರಿತು ಮಾತನಾಡಿದ ಶಾಸಕರು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ ಕೊರೆದ ಮೂರು ತಿಂಗಳೊಳಗಾಗಿ ಮೋಟರ್ ಪಂಪ್ ಸೆಟ್ ಗಳನ್ನು ರೈತರಿಗೆ ವಿತರಿಸಿದರೆ…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ 2621 ನೇ ಶ್ರೀ ಭಗವಾನ್ ಮಹಾವೀರ ಜಯಂತಿ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬೆಳ್ಳಿ ರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ, ತಮ್ಮ ಧರ್ಮದ ತತ್ವ ಸಿದ್ಧಾಂತಗಳ ಘೋಷಣೆಯೊಂದಿಗೆ, ಅಹಿಂಸಾ ಪರಮೋಧರ್ಮ, ಬದುಕಿ ಬದುಕಲು ಬಿಡಿ, ಎಂಬ ಸಂದೇಶವನ್ನು ಸಾರುತ್ತ, ಮಹಿಳಾ ಸಮಾಜದ ಪದಾಧಿಕಾರಿಗಳು, ವಿಶೇಷವಾದ ಉಡುಗೆಗಳನ್ನು ಧರಿಸಿ ಬಹಳ ವಿಶೇಷವಾಗಿ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಮಾಯಸಂದ್ರ  ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗೆ, ಮಜ್ಜಿಗೆ, ಕೋಸಂಬರಿ, ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಚಂದ್ರಪ್ರಭು. ಕಾರ್ಯದರ್ಶಿ ಎಂ.ಪಿ.ಮದನ್ ಕುಮಾರ್. ಉಪಾಧ್ಯಕ್ಷ ಮಹಾವೀರ ಬಾಬು. ಮುಖಂಡರಾದ ವಿಪುಲ್ ಜೈನ್. ಎಂ.ಬಿ.ಪ್ರಕಾಶ್ ಮತ್ತು ಮಹಿಳಾ ಸಮಾಜದ ಅಧ್ಯಕ್ಷರಾದ ಸುಮತಿ ಪ್ರಕಾಶ್, ಶಾಂತಲಾ ಪ್ರಭು, ಆಶಾ ಚಂದು, ಆನಂದ ಮದನ್ ಕುಮಾರ್, ಶೈಲ ಪ್ರಸಾದ್ ಜೈನ್, ಸೇರಿದಂತೆ ಇನ್ನೂ…

Read More

ಸರಗೂರು: ಪಟ್ಟಣದ 4 ನೇ ವಾರ್ಡಿನಲ್ಲಿ ಅಂಬೇಡ್ಕರ್  ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಯಿತು. ವಾರ್ಡ್ ನ  ಮನೆ ಮನೆಗಳ ಮುಂದೆ ಹಸಿರು ತೋರಣ, ರಂಗೋಲಿ ಬಿಡಿಸಿ, ಕಾರ್ಯಕ್ರಮಕ್ಕೆ  ಆಗಮಿಸಿದ್ದವರಿಗೆ  ಮಜ್ಜಿಗೆ, ಪಾನಕ ವಿತರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥೋತ್ಸವ ವಾದ್ಯ., ನಗಾರಿ, ಸ್ವಾಂಡ್ಸ್ ಮೂಲಕ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು ಕೂಡ ಭಾಗವಹಿಸಿರುವುದು ವಿಶೇಷವಾಗಿತ್ತು. ಸಭೆಯಲ್ಲಿ ವಾರ್ಡಿನ ಯಜಮಾನರು.ಪಪಂ ಸದಸ್ಯ ಎಸ್ ಎಲ್ ರಾಜಣ್ಣ., ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಬೀಮಯ್ಯ, ಪ.ಪಂ. ಮಾಜಿ ಸದಸ್ಯ ಬಿಲ್ಲಯ್ಯ, ಬೋಗಪ್ಪ, ಸರಗೂರು ಕೃಷ್ಣ,  ಪುಟ್ಟರಾಜು, ಮಧು, ಇಟ್ಪರಾಜಣ್ಣ, ಬಿಡುಗಲು ಶಿವಣ್ಣ, ಕೂಡಿಗಿಗೊವಿಂದರಾಜು, ಶಿವಕುಮಾರ್ ಬಿ ಮಟಕೇರಿ,ಕ  ಮಹೇಂದ್ರ ಹೂವಿನಕೊಳ, ಮೋಹನ್ ಲಿಂಗೇನಹಳ್ಳಿ ಇನ್ನೂ ಅಕ್ಕ ಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ದರು‌‌. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಮಧುಗಿರಿ: ತಾಲೂಕು ದೊಡ್ಡೇರಿ ಹೋಬಳಿ ತಿಪ್ಪನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಜಯಲಕ್ಷ್ಮಿ ಮಾದಿಗ ದಂಡೋರ ತಾಲೂಕು ಅಧ್ಯಕ್ಷರಾದ ಡಾ. ಸಿದ್ದಾಪುರ ಶಾಮಣ್ಣ ಡಾ. ಕ ಣಿ ಮಯ್ಯ ಆದಿಜಾಂಬವದ ಅಧ್ಯಕ್ಷರಾದ ಸಣ್ಣ ರಾಮಯ್ಯ ಭಾರತೀಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ದೊಡ್ಡೇರಿ ಮಹಾಲಿಂಗಯ್ಯ ರಾಜ್ಯ ಕಾರ್ಯದರ್ಶಿಯಾದ ಜೀವಿಕ ಮಂಜುನಾಥ್ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸುನಿಲ್ ದೊಡ್ಡೇರಿ ಗ್ರಂಥಾಲಯ ಶಿವಣ್ಣನವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಮುಖಂಡರು ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

 ಡಾ.ವಡ್ಡಗೆರೆ ನಾಗರಾಜಯ್ಯ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಉಡುಸಲಮ್ಮ ದೇವಿ ಜಾತ್ರೆಯಲ್ಲಿ ನಿನ್ನೆ ದಿನ (16-04-2022) ನಡೆದಿರುವ ಸಿಡಿ ಉತ್ಸವದ ವಿಡಿಯೋ ತುಣುಕು ಇದು.  ಇಂತಹ ಸಿಡಿ ಆಚರಣೆಯನ್ನು ಕುರಿತು ಜನ್ನ ಕವಿ ‘ಯಶೋಧರ ಚರಿತೆ’ ಕಾವ್ಯದಲ್ಲಿ ಹೀಗೆ ಹೇಳಿದ್ದಾನೆ :  ಆ ದೇವಿಯ ಜಾತ್ರೆಗೆ ಮೊಳೆ| ವೋದೆಳವೆರೆ ಸಿರದ ಗಾಳಮುರಿಯುಯ್ಯಲೆ‌ ಕೈ|| ವೋದಸುಕೆ ಕೋಕಿಲಧ್ವನಿ| ಮೂದಲೆಯುಲಿಯಾಗೆ ಬಂದನಂದು ವಸಂತಂ||   ತಾಳುಗೆಯ ನುರ್ಚಿ ನೆತ್ತಿಯ ಗಾಳಂ ಗಗನದೊವಿಲ್ವ ವಾರಿಯ ಬೀರರ್| ಪಾಳಿಯೊಳೆಸೆದರ್ ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ||  ವಸಂತ ಮಾಸದಲ್ಲಿ ಬರುವ ಮಾರಿಜಾತ್ರೆಯ ಸಂದರ್ಭದಲ್ಲಿ ಚಂಡಮಾರಿ ದೇವತೆಗೆ ಅದೇ ದೇವಮಂದಿರದ ಆವರಣದಲ್ಲಿ ನಡೆಯುವ ಸಿಡಿ ಆಚರಣೆಯನ್ನು ಜನ್ನ ಕವಿ ವಿವರಿಸುತ್ತಾನೆ. ಬಾಲಚಂದ್ರನು ಸಿರದ ಗಾಳದಂತೆ (ಸಿಡಿ ಆಚರಣೆಯಲ್ಲಿ ಬಳಸುವ ಕಬ್ಬಿಣದ ಕೊಕ್ಕೆಯಂತೆ), ಚಿಗುರಿದ ಅಶೋಕ ವೃಕ್ಷವು ಉರಿಯ ಉಯ್ಯಾಲೆಯಂತೆ, ಕೋಕಿಲಧ್ವನಿಯು ಮೂದಲೆಯ ಉಲಿಯಂತೆ ತೋರುತ್ತಿರಲು ವಸಂತಮಾಸ ಆಗಮಿಸುತ್ತದೆ. ಇದೇ ವಸಂತ ಮಾಸದಲ್ಲಿ ನಡೆಯುವ ಮಾರಿ  ಜಾತ್ರೆಯ ಆಚರಣಾ ವಿಧಿಗಳಾದ…

Read More

ಕೊರಟಗೆರೆ:  ತಾಲ್ಲೂಕಿನ ಕೋಳಾಲ ಹೋಬಳಿಯ ಅಳಲಸಂದ್ರ  ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಫೋಟೋದಲ್ಲಿ ಕಾಣುವ ಯುವಕ ನೇಣಿಗೆ ಶರಣಾಗಿದ್ದ ಆದರೆ ಕುಟುಂಬಸ್ಥರು ಹೇಳುವ ಹಾಗೆ ನಮ್ಮ ಹುಡುಗ ನೇಣು ಹಾಕಿಕೊಳ್ಳುವ ಹೇಡಿಯಲ್ಲ. ಹುಡುಗನ ಸಹೋದರಿ ಲಕ್ಷ್ಮೀ ಮಾತನಾಡಿ,  ಕೋಳಲ ಪೊಲೀಸ್ ಠಾಣೆಯ ಅಧಿಕಾರಿ ಮಹಾಲಕ್ಷ್ಮಿ ಹಾಗೂ ಕೊರಟಗೆರೆ ಪೋಲಿಸ್ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸುತ್ತಿಲ್ಲ.  ಎಷ್ಟು ಬಾರಿ ಮನವಿ ಮಾಡಿದರೂ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳುತ್ತಾರೆ. ಯಾರಾದರೂ ಕೈ ಕಾಲುಗಳನ್ನು ಹಿಂದಕ್ಕೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂದು ಕೇಳಿದರೆ ನೀವು ಲಾಯರ್ ಗಳ ಎಂದು ನಮಗೆ ಪ್ರಶ್ನಿಸುತ್ತಾರೆ.  ನಮ್ಮ ತಮ್ಮನ ನೇಣು ಬಿಗಿದಿರುವ ಮರದಲ್ಲಿ ಕಣ್ಣಾರೆ ಕಾಣಬಹುದು. ಅದು ಕೊಲೆಯೋ ಆತ್ಮಹತ್ಯೆಯೋ ಎಂದು ಈ ಅಧಿಕಾರಿಗಳು ಏಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ.  ನಮ್ಮ ತಮ್ಮನ ಕೊಲೆಗೆ ಕಾರಣರಾದ ನಮ್ಮ ಚಿಕ್ಕಪ್ಪ ನರಸಿಂಹಯ್ಯ ,ಅದೇ ಗ್ರಾಮದವರಾದ ಗೌರಮ್ಮ ಗಂಗರಾಜು ಮೂರ್ತಿ ಶಿವರಾಜ್ ಪುನೀತ್  ಇವರುಗಳೇ ನನ್ನ…

Read More