Author: admin

ಸರಗೂರು:  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವಂತೆ, ಹಾಗೂ ಪರಿಶಿಷ್ಟರು, ಹಿಂದುಳಿದವರ ಕಲ್ಯಾಣಕ್ಕಾಗಿ ನ್ಯಾ.ಎಚ್.ಎನ್.ನಾಗಮೋಹನ್‍ದಾ ಸ್ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ನಾಯಕ ಸಮಾಜದ ಸ್ವಾಮೀಜಿಗಳು ನಡೆಸುತ್ತಿರುವ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಪಟ್ಟಣದಲ್ಲಿ ತಾಲ್ಲೂಕಿನ ನಾಯಕ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮೊದಲ ಮುಖ್ಯರಸ್ತೆ, ಎರಡನೇ ಮುಖ್ಯರಸ್ತೆ ನಂತರ ಸಂತೇಮಾಳದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಳಿಕ ಬಸ್‍ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.  ನಂತರ ತಾಲ್ಲೂಕು ಕಚೇರಿಗೆ ಆಗಮಿಸಿ ತಾಹಸೀಲ್ದಾರ್ ಚಲುವರಾಜು ರವರು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಬಿಜೆಪಿ ಸರಕಾರ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಂವಿಧಾನ ಬದ್ಧವಾಗಿ ಸರಕಾರ ನೀಡಬೇಕಾಗಿರುವ ಪರಿಶಿಷ್ಟರ ಶೇ.7.5, ಪರಿಶಿಷ್ಟ ಜಾತಿಗೆ ಶೇ.17 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಪಪಂ…

Read More

ತಿಪಟೂರು:  ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲಾತಿ ಹೆಚ್ಚಳ ಮಾಡಬೇಕು ಸಂವಿಧಾನ ಬದ್ದವಾಗಿ ದೊರೆಯಬೇಕಾದ ಮೀಸಲಾತಿಯನ್ನ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ತಿಪಟೂರಿನಲ್ಲಿ ಮಹಶ್ರೀವಾಲ್ಮೀಕಿ ಸಂಘ ಹಾಗೂ ಮದಕರಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ನಗರಸಭಾ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ಸಾಗಿ ತಿಪಟೂರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು ಪತ್ರಿಭಟನಾಕಾರರನ್ನುದ್ದೇಶಿಸಿ  ಮಾತನಾಡಿದ ಮದಕರಿ ನಾಯಕ ಸಂಘದ ಅಧ್ಯಕ್ಷ ಮಹೇಶ್,  ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು ಪರಿಶಿಷ್ಠ ಪಂಗಡಗಳಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿನಾಯಕ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 3% ಮೀಸಲಾತಿಯನ್ನು 7.5%ಕ್ಕೆ ಹೆಚ್ಚಳ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ ಮೀಸಲಾಯಿಯನ್ನ ಶೇಕಡ 15ರಿಂದ 17ಕ್ಕೆ ಹೆಚ್ಚಿಸಬೇಕು  ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಯಥವತ್ ಜಾರಿಗೊಳಿಸಬೇಕು   ಎಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲು ಹಣ ಕಾಯ್ದೆ 2017 ಕಲಂ 7ಡಿ ಯನ್ನು…

Read More

ಹಿರಿಯೂರು: ಹಾವುಗಳು ಎಂದಾಕ್ಷಣ ಮಾರುದ್ದ ಓಡುವವರೇ ಹೆಚ್ಚು. ಇಂತಹವರ ಮಧ್ಯೆ ಚಿತ್ರದುರ್ಗ ನಗರದಲ್ಲಿ ಮಹಾನಾಯಕ ವಾರಪತ್ರಿಕೆ ಸಂಪಾದಕರಾಗಿ ಪತ್ರಿಕೆ  ನಡೆಸುತ್ತಿರುವ  ವ್ಯಕ್ತಿಯೊಬ್ಬರು ಯಾವ ಭಯವೂ ಇಲ್ಲದೆ 100ಕ್ಕೂ ಅಧಿಕ ವಿಷದ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.. ಚಾಕಚಕ್ಯತೆಯಿಂದ ಹಾವುಗಳನ್ನು ಹಿಡಿಯುವ ಇವರ ಧೈರ್ಯ, ಸಾಹಸಕ್ಕೆ ನಿಬ್ಬೆರಗಾಗಲೇಬೇಕು. ಚಿತ್ರದುರ್ಗ ನಗರದಲ್ಲಿ ವಾರಪತ್ರಿಕೆ ನಡೆಸುತ್ತಿರುವಂತಹ  ಶಿವಕುಮಾರ್ ಅವರೇ ಈ ರೀತಿ ಸಾಧನೆ ಮಾಡುತ್ತಿರುವವರು. ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಪುರ ಸೇರಿದಂತೆ  ಎಲ್ಲೇ ವಿಷದ ಹಾವು ಇರುವ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಆ ಪ್ರದೇಶಕ್ಕೆ ತೆರಳಿ ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ.  ಕನ್ನಡಿ ಹಾವು, ಹೆಬ್ಬಾವು, ಕೆರೆ ಹಾವು, ನೀರು ಹಾವು ಸೇರಿದಂತೆ ನಾನಾ ಜಾತಿಯ ಹಾವುಗಳನ್ನು ಪಳಗಿಸಿದ ಹೆಗ್ಗಳಿಕೆ ಇವರದು. ವಾಣಿವಿಲಾಸಪುರ ಗ್ರಾಮದ ಜಮೀನಿನಲ್ಲಿ  ಸಿಕ್ಕಿಹಾಕಿಕೊಂಡಿದ್ದ  ಸುಮಾರು ಆರು ಅಡಿ ಉದ್ದದ ಕೆರೆ ಹಾವನ್ನು  ರಕ್ಷಣೆ ಮಾಡಿದ ಶಿವಕುಮಾರ್ ಅವರು,  ಹಾವನ್ನು ರಕ್ಷಿಸಿ ಎಂಬ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರಿಗೆ …

Read More

ಕೆನಡಾ ದೇಶದ ಸಂಸತ್ತಿನಲ್ಲಿ ತುಮಕೂರು ಮೂಲದ ಸಂಸದ ಚಂದ್ರ ಆರ್ಯ ಅವರು ತಮ್ಮ ಮಾತೃ ಭಾಷೆ ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದು,  ಕನ್ನಡದಲ್ಲಿ ಮಾತನಾಡಲು ಕೆನಡಾ ಸಂಸತ್ ನಲ್ಲಿ ಅವಕಾಶ ದೊರಕಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ, ಮತ್ತು ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ರಾಷ್ಟ್ರ ಕವಿ ಕುವೆಂಪು ಬರೆದಿರುವ ಮತ್ತು ನಟ ಸರ್ವಭೌಮ ಡಾ.ರಾಜ್ ಕುಮಾರ್ ಹಾಡಿರುವ ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಸಾಲುಗಳನ್ನು ಅವರು ಓದಿ ಹೇಳಿದರು. ಇನ್ನೂ ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಚಂದ್ರ ಆರ್ಯ ಅವರು,  ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ…

Read More

ಹುಳಿಯಾರಿನ ಜ್ಞಾನಜ್ಯೋತಿ ಆಂಗ್ಲ ಪ್ರೌಢಶಾಲೆಗೆ ಇಂದು ಪ್ರಕಟವಾದ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭ್ಯವಾಗಿದೆ. ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅತ್ಯುನ್ನತ ಶ್ರೇಣಿಯಲ್ಲಿ(A+) 12 ವಿದ್ಯಾರ್ಥಿಗಳು ,ಪ್ರಥಮ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೆ.ಎಮ್.ಪ್ರೀತಿ- 610,ಕಲ್ಯಾಣ ಪ್ರಭು M.V.- 609, ವಚನ- 603, ಶ್ವೇತಾ ಡಿ.ವಿ.-602 ಇವರುಗಳು 600 ಮೇಲೆ ಅಂಕಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ. ಸುಮನ್- 599, ಪ್ರಜ್ವಲ್- 598 ,ಗೌತಮಿ- 594,ಇಂಚರ- 593,ದೀಪ್ತಿ- 585, ಸಹನ ಶಂಕರ್- 573, ಸ್ನೇಹ- 566,ಕಿರಣ್- 563, ಶ್ವೇತಾ- 562 ,ವರ್ಷ- 560, ಸುಮಿತ್- 560, ಪ್ರಜ್ವಲ್- 558, ಧ್ರುವ- 558 , ಮುತ್ತುರಾಜ್- 557, ಮಿಥುನ್ -557, ಆಕಾಶ- 553 ,ವಿಜಯ್ ಸಾಗರ- 546, ತೇಜಸ್ವಿನಿ- 537, ಕನಕಲಕ್ಷ್ಮಿ- 533 ,ಶಶಾಂಕ್- 528, ಪುಟ್ಟೇಗೌಡ- 521 ,ಹರ್ಷ- 518 ,ಕಲಂದರ್- 509, ಶ್ರೀನಿವಾಸ್ -505 ಈ ವಿದ್ಯಾರ್ಥಿಗಳು 500ರ ಮೇಲೆ ಅಂಕಗಳಿಸಿದವರಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ…

Read More

ಕೊರಟಗೆರೆ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಲಹೆ ಮತ್ತು ಸೂಚನೆಯಂತೆ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಗೆ ನೂತನ ಅಧ್ಯಕ್ಷರಾಗಿ ಸುನಂದ ಶಶಿಧರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್ ತಿಳಿಸಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಯಲ್ಲಿ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್  ನ ಸಮಗ್ರ ಅಭಿವೃದ್ದಿಗೆ ನಮ್ಮ ಶಾಸಕರಾದ ಡಾ.ಜಿ.ಪರಮೇಶ್ವರ್ ಆರ್ಶಿವಾದ ಸದಾ ಇರಲಿದೆ. ಕ್ಯಾಮೇನಹಳ್ಳಿ ಗ್ರಾಪಂಗೆ ನೂತವಾಗಿ ಆಯ್ಕೆಯಾದ ಅಧ್ಯಕ್ಷರು ತಮ್ಮ ಸದಸ್ಯರ ಜೊತೆಗೂಡಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು. ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆ ಸುನಂದ ಶಶಿಧರ್ ಮಾತನಾಡಿ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಗೆ ನಾನು ಪ್ರಥಮವಾಗಿ ಅವಿರೋಧ ಆಯ್ಕೆ ಆಗಿದ್ದೇನೆ. ನಮ್ಮ ಶಾಸಕರು ಮತ್ತು ಗ್ರಾಮ ಪಂಚಾಯತ್  ಸರ್ವಸದಸ್ಯರ ಜೊತೆ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ನನಗೆ ಪ್ರತ್ಯಕ್ಷ…

Read More

ಡಾ.ವಡ್ಡಗೆರೆ ನಾಗರಾಜಯ್ಯ  “ವೀರಶೈವ- ಲಿಂಗಾಯತರು” ಎಂದು ವಿಚಿತ್ರ ಜಾತಿಯ ಹೆಸರನ್ನು ಘೋಷಿಸುವ ವಿದ್ಯಮಾನ ಸಂಭವಿಸಿರುವುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಇಂತಹ ಜಾತಿ ಹಿಂದೆಂದೂ ಅಸ್ತಿತ್ವದಲ್ಲಿ ಇರಲಿಲ್ಲ. ಈಗಲೂ ಅಸ್ತಿತ್ವದಲ್ಲಿರದ “ವೀರಶೈವ ಲಿಂಗಾಯತ” ಎಂಬ ಹೆಸರಿನ ಹೊಸ ಜಾತಿಯನ್ನು ಏಕೆ ಘೋಷಿಸಿಕೊಂಡರೋ ತಿಳಿಯದು. ಹೀಗೊಂದು ಹೊಸ ಜಾತಿ ಹುಟ್ಟು ಪಡೆಯಲು ಸಾಧ್ಯವೇ? ಲಿಂಗಾಯತರೇ ಬೇರೆ, ವೀರಶೈವರೇ ಬೇರೆ. ಇಬ್ಬರೂ ಒಬ್ಬರೇ ಹೇಗಾಲು ಸಾಧ್ಯ?  ಲಿಂಗಾಯತ ಧರ್ಮವನ್ನು ಸಾಂಸ್ಥೀಕರಣಗೊಳಿಸಿ ಜಾತಿಯ ಹಂತಕ್ಕೆ ಕುಗ್ಗಿಸಿದ್ದು ವೀರಶೈವರು. ಲಿಂಗಾಯತ ಎಂಬ ಪದ ಬಸವಣ್ಣನಿಗೂ ಪೂರ್ವದ್ದು. ಲಿಂಗಾಯತವನ್ನು ಧರ್ಮವನ್ನಾಗಿ ಸ್ಥಾಪಿಸಿದ್ದು, ಬೆಳಗಿದ್ದು ಮತ್ತು ಬೆಳೆಸಿದ್ದು ಮಾತ್ರ ಬಸವಣ್ಣ. ಕನ್ನಡಿಗರೇ ರೂಪಿಸಿದ ಲಿಂಗಾಯತ ಧರ್ಮಕ್ಕೆ ಹೊರಗಿನ ಆಂಧ್ರಪ್ರದೇಶ ಮೂಲದಿಂದ ಬಂದ ತೆಲುಗುಬಾಳು ಆರಾಧ್ಯ ಜಂಗಮರು, ಸಂಸ್ಕೃತ ಭಾಷೆ- ಪಂಚಾಂಗ- ಜ್ಯೋತಿಷ್ಯ- ಸಂಸ್ಕೃತ ಭಾಷೆಯ  ‘ಶಿದ್ಧಾಂತ ಶಿಖಾಮಣಿ’ ಕೃತಿ ಮುಂತಾದವುಗಳನ್ನು ಹೇರುವ ಮೂಲಕ ಲಿಂಗಾಯತವನ್ನು ಸ್ವತಂತ್ರ ಧರ್ಮವಾಗದಂತೆ ನೋಡಿಕೊಂಡರು. ವೀರಶೈವರು ಬಸವಣ್ಣನನ್ನು ಗುರುವೆಂದು ಎಂದಿಗೂ ಒಪ್ಪಿದವರಲ್ಲ. ತೀರಾ ಇತ್ತೀಚಿನವರೆಗೂ ವೀರಶೈವ ಪಂಚಾಚಾರ್ಯರ ಮನೆಗಳಲ್ಲಾಗಲೀ,…

Read More

ತುಮಕೂರು: ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದ್ದು,  ತಿಪಟೂರಿನಿಂದ ಒಂದೂವರೆಯಿಂದ ಎರಡು ಸಾವಿರ ಜನ ಸಮಾವೇಶದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಕಾಂಗ್ರೆಸ್ ನ ಕೆ.ಷಡಕ್ಷರಿಯವರು ತಿಳಿಸಿದರು. ತಿಪಟೂರು ನಗರದಲ್ಲಿ ಮಾತನಾಡಿದ ಅವರು , ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ , ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ.  22ರಂದು ತುಮಕೂರಿನ ಜಿಲ್ಲಾಮಟ್ಟದಲ್ಲಿ ಅಲ್ಪಸಂಖ್ಯಾತರ ಸಮಾವೇಶ ಏರ್ಪಡಿಸಲಾಗಿದೆ. ಅಲ್ಪಸಂಖ್ಯಾತರೆಂದರೆ ಮುಸಲ್ಮಾನರು ಮಾತ್ರವಲ್ಲ,  ಕ್ರೈಸ್ತರು,  ಸಿಖ್ಖರು ಇನ್ನೂ ಅನೇಕ ಪಂಗಡಗಳು ಬರುತ್ತದೆ.  ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ  ಎಂದು ತಿಳಿಸಿದರು. ಬಿಜೆಪಿ ಸರ್ಕಾರವು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ದೇ ಅಗತ್ಯವಸ್ತುಗಳ ಬೆಲೆಗಳನ್ನು ಗಗನಕ್ಕೇರುತ್ತಿದ್ದು ಅನಾವಶ್ಯಕವಾಗಿ ಸಾವಿರಾರು ವರ್ಷಗಳ ಹಿಂದಿನ ವಿಷಯವನ್ನು ಮುಖ್ಯವಾಗಿಸಿಕೊಂಡು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಪರವಿಲ್ಲ ಎಂದರು ಇನ್ನು ಆರು ತಿಂಗಳಲ್ಲಿ ಸರ್ಕಾರ ವಿಸರ್ಜನೆ ಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ್…

Read More

ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶ್ವರದ ಕೆರೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿರುವುದನ್ನು ಕಂಡು ಸ್ಥಳೀಯರು ಕೊರಟಗೆರೆ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಕೊರಟಗೆರೆಯ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ನಾಗರಾಜು ,ಎ ಎಸ್ ಐ ಗೋವಿಂದ ನಾಯ್ಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ಮಹಿಳೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಮಧುಗಿರಿ: ಮೇ 22 ರಂದು ತುಮಕೂರು ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಅಲ್ಪ ಸಂಖ್ಯಾತರ ಸಮಾವೇಶ ಯಶಸ್ವಿಗೊಳಿಸಲು ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಖ್ ಅಹಮದ್ ಕರೆ ನೀಡಿದರು. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅಲ್ಪ ಸಂಖ್ಯಾತರ ರಾಜ್ಯ ಹಾಗೂ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲೀಂ ಭಾಂದವರು ಈ ದೇಶದಲ್ಲಿ ಅಣ್ಣ-ತಮ್ಮಂದಿರ ಹಾಗೆ ಜೀವನ ನಡೆಸುತ್ತಿದ್ದಾರೆ. ಆದರೆ ನಮ್ಮ ಮಧ್ಯ ಬಿಜೆಪಿ ಸರ್ಕಾರ ಕೋಮು ಗಲಭೆ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಹಾಗೂ ಮುಸ್ಲಿಂ ಸಮುದಾಯದ ವಿಧ್ಯಾರ್ಥಿಗಳಿಗೆ ಅನಾನುಕೂಲವಾಗುವಂತಹ ಕಾರ್ಯಕ್ಕೆ ಕೈ ಹಾಕಿದ್ದು, ಇದರ ವಿರುದ್ದ ಮೇ 22 ರಂದು ತುಮಕೂರು ನಗರದಲ್ಲಿ ಬೃಹತ್ ಸಮಾವೇಷ ಹಮ್ಮಿಕೊಳ್ಳಲಾಗಿದೆ ಎಂದರು. ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದು, ಮುಸ್ಲೀಂ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಮುದರ್…

Read More