Author: admin

ಕೊರಟಗೆರೆ: ವಯೋವೃದ್ಧರಿಗೆ 10 ಸಾವಿರ ರೂಪಾಯಿಯ ಆಸೆ ತೋರಿಸಿ, ಸುಮಾರು 5 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದ್ದು, ಇದೀಗ ಒಡವೆಗಳನ್ನು ಕಳೆದುಕೊಂಡ ವೃದ್ಧರು ಕಂಗಾಲಾಗಿದ್ದಾರೆ. ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿಯ ಮನೆಗೆ ಬಂದ  ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ರೂಪಾಯಿ ಉಚಿತ ಹಣವನ್ನು ಕೊಡುತ್ತಾರೆ ಎಂದು ವೃದ್ಧರನ್ನು ನಂಬಿಸಿದ್ದಾನೆ. ಇವರ ಆಧಾರ್ ಕಾರ್ಡ್ ನಂಬರ್ ಪೆನ್ಷನ್ ಕ್ಲಿಪ್ ಪಡೆದುಕೊಂಡು ವೃದ್ಧರನ್ನು ನಂಬಿಸಿದ್ದಾನೆ. ಇದಾದ ಬಳಿಕ ಅಜ್ಜಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು  ಆಸ್ಪತ್ರೆಯ ಬಳಿಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಒಡವೆಯನ್ನು ಯಾರಾದರೂ ಕೊಂಡುಹೋಗುತ್ತಾರೆ. ನನ್ನ ಬಳಿಯಲ್ಲಿ ಕೊಡಿ ನಾನು ನೋಡಿಕೊಳ್ಳುತ್ತೇನೆ ಎಂದು ಅಜ್ಜಿಯನ್ನು ನಂಬಿಸಿದ್ದಾನೆ. ಈತನ ಮಾತು ನಂಬಿ ಅಜ್ಜಿ ತಮ್ಮ 5 ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆಯನ್ನು ಕಳ್ಳನ ಕೈಗೆ ನೀಡಿದ್ದಾರೆ. ಈ…

Read More

ಕೊರಟಗೆರೆ: ನಾವು ಕಾಡಿನಲ್ಲಿಯೇ ಸುಖವಾಗಿ ಜೀವನ ಮಾಡುತ್ತಿದ್ವಿ. ಈಗ ನಾಡಿಗೆ ನೋವು  ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸರಕಾರ ನಮಗೆ ನೀಡಿದ ಭರವಸೆಯು ಈಗ ಹುಸಿಯಾಗಿದೆ. ಕಳೆದ 50 ವರ್ಷಗಳಿಂದ ನಮ್ಮ ಹಕ್ಕಿಪಿಕ್ಕಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗವು ಮರೀಚಿಕೆ ಆಗಿದೆ ಎಂದು ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್  ಸರ್ಕಾರದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ಪಟ್ಟಣದ ಕಂದಾಯ ಆವರಣದಲ್ಲಿ ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆಯ ವಿರುದ್ದ ಹಕ್ಕಿಪಿಕ್ಕಿ ಸಮುದಾಯದ ಜನತೆಯ ಜೊತೆಗೂಡಿ ಆಕ್ರೋಶ ವ್ಯಕ್ತಪಡಿಸಿ ಮನೆಗಳ ಹಕ್ಕುಪತ್ರ ನೀಡುವಂತೆ ಉಪತಹಶೀಲ್ದಾರ್ ನರಸಿಂಹಮೂರ್ತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 50 ವರ್ಷದಿಂದ ಕೊರಟಗೆರೆ ಕ್ಷೇತ್ರದ ಗಡಿಭಾಗದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 150 ಕುಟುಂಬಗಳು ವಾಸವಿದ್ದಾರೆ. ಇಲ್ಲಿನ 150 ಕುಟುಂಬಕ್ಕೆ ಮನೆಯ ಹಕ್ಕುಪತ್ರವೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಶಿಕ್ಷಣ ವಂಚಿತ ಕುಟುಂಬಕ್ಕೆ ಮನೆಯ ಹಕ್ಕುಪತ್ರವು ಮರೀಚಿಕೆ ಆಗಿದೆ. ರಾಜಕೀಯ ನಾಯಕರು ಚುನಾವಣೆಗೆ ಮಾತ್ರ ನಮ್ಮನ್ನು…

Read More

ಬೆಂಗಳೂರು: 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಲ್ಲೇಶ್ವರದಲ್ಲಿರುವ ಫ್ರೌಡಶಾಲಾ ಪರೀಕ್ಷಾ ಮಂಡಳಿಯಲ್ಲಿ ನಿಗದಿಪಡಿಸಿದ್ದ ಪತ್ರಿಕಾಗೋಷ್ಟಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಚಿವ ಬಿ.ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 8,53,436 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 3,72,279 ವಿದ್ಯಾರ್ಥಿನಿಯರು, 3,58,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು 309 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆಯುವ ಮೂಲಕ 2ನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶವನ್ನು http://kseeb.kar.ini.in ಅಥವಾ http://sslc.karnataka.gov.in ಅಥವಾ http://karresults.nic.in. ಮೂಲಕ ವೀಕ್ಷಿಸಬಹುದಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೊ ಬೆಲೆ ಮತ್ತೆ ಗಗನಕ್ಕೇರಿದೆ. ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದ್ದು, ಇದ್ದರಿಂದ ರೈತರು ಕಂಗಲಾಗಿದ್ದಾರೆ. ಅದರಲ್ಲೂ ಟೊಮೆಟೊ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಹೀಗಾಗಿ ಟೊಮೆಟೊ ದರ ಗಗನಕ್ಕೇರಿದೆ. ದಿಢೀರನೇ ಒಂದು ಕೆಜಿ ಟೊಮೆಟೊಗೆ ೯೦ ರಿಂದ ೧೦೦ ರೂಪಾಯಿ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ಹೆಬ್ಬೂರು, ಗುಬ್ಬಿ, ಹೊನ್ನುಡಿಕೆ, ಉರ್ಡಿಗೆರೆ, ಕೊರಟಗೆರೆ, ತಿಪಟೂರು ಕಡೆಯಿಂದ ಅತಿಹೆಚ್ಚು ಮಾರುಕಟ್ಟೆಗೆ ಟೊಮೆಟೊ ಬರುತ್ತಿತ್ತು. ಮಾರುಕಟ್ಟೆಗೆ ದಿನಕ್ಕೆ ಐದಾರು ಲಾರಿಯಲ್ಲಿ ಟೊಮೆಟೊ ಬರುತ್ತಿತ್ತು. ಆದರೆ ಸದ್ಯ ಒಂದು ಲಾರಿಯಲ್ಲಿ ಮಾತ್ರ ಬರುತ್ತಿದೆ. ಟೊಮೆಟೊ ದರ ಏರಿಕೆಯಾಗಿರುವ ಕಾರಣ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆದರೆ, ಮತ್ತೆ ಟೊಮೆಟೊ ದರ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲೂ ಕೂಡ ಟೊಮೆಟೊ ಬೆಲೆ…

Read More

ವಾಯುಭಾರ ಕುಸಿತದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಅವಾಂತರಕ್ಕೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯ ಕೈಗೊಳ್ಳಲಾಗದೆ ಇಬ್ಬರು ಕಾರ್ಮಿಕರ ಮೃತದೇಹ ರಾತ್ರಿ ಇಡೀ ಪೈಪ್‌ನಲ್ಲಿ ಉಳಿದಿತ್ತು. ರಾಜ್ಯದಲ್ಲಿ ಇನ್ನು ೫ ದಿನ ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಲ್ಲಾಳ ಉಪನಗರದ ಉಪಕಾರ್ ಬಡಾವಣೆಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿತ್ತು. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೃತಪಟ್ಟವರನ್ನು ಬಿಹಾರ ಮೂಲದ ದೇವ್‌ಭರತ್ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನನಿಂದಲೇ ಆರಂಭವಾದ ಮಳೆರಾಯ ಬಿಟ್ಟು ಬಿಡದೆ ರಾತ್ರಿಯಿಡಿ ಸುರಿದಿದೆ. ನಗರದ ಕೆಲವು ಪ್ರದೇಶಗಳಲ್ಲಿ ೧೦೦ ಮಿ.ಮೀ ಮಳೆಯಾಗಿದೆ. ಬಹುತೇಕ…

Read More

ಭಾರತ ನೆರಯ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆ ಎದುರಿಸಲು ರಷ್ಯಾದಿಂದ ಪಡೆದ ಎಸ್-400 ಕ್ಷಿಪಣಿಯನ್ನು ತನ್ನ ಸೇನಾ ಬತ್ತಳಿಕೆಗೆ ಸೇರಿಸಲು ಉದ್ದೇಶಿಸಿದೆ ಎಂದು ಅಮೆರಿಕದ ಪೆಂಟಗನ್ ಗೂಢಚಾರರು ತಿಳಿಸಿದ್ದಾರೆ. ಭಾರತವು ಕಳೆದ ವರ್ಷ ಡಿಸೆಂಬರ್‍ನಲ್ಲಿ ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪಡೆಯಲು ಪ್ರಾರಂಭಿಸಿತು ಎಂದು ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬೆರಿಯರ್ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರಿಗೆ ತಿಳಿಸಿದರು. ಅಕ್ಟೋಬರ್ 2021 ರಿಂದ ಭಾರತದ ಮಿಲಿಟರಿ ತನ್ನ ಭೂಮಿ ಮತ್ತು ಸಮುದ್ರದ ಗಡಿಗಳನ್ನು ಬಲಪಡಿಸಲು ಮತ್ತು ಅದರ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸೈಬರ್ ಸಾಮಥ್ರ್ಯಗಳನ್ನು ಹೆಚ್ಚಿಸಲು ಸುಧಾರಿತ ಕಣ್ಗಾವಲು ವ್ಯವಸ್ಥೆಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಡಿಸೆಂಬರ್‍ನಲ್ಲಿ ಭಾರತವು ರಷ್ಯಾದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಆರಂಭಿಕ ವಿತರಣೆಯನ್ನು ಸ್ವೀಕರಿಸಿದೆ ಮತ್ತು ಜೂನ್ ವೇಳೆಗೆ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಗಳ ವಿರುದ್ಧ ರಕ್ಷಿಸಲು ವ್ಯವಸ್ಥೆಯನ್ನು ನಿರ್ವಹಿಸಲು ಉದ್ದೇಶಿಸಿದೆ ಎಂದು ಬೆರಿಯರ್ ಹೇಳಿದರು. ಭಾರತವು ತನ್ನದೇ ಆದ ಹೈಪಸಾರ್‍ನಿಕ್,…

Read More

ಬೆಂಗಳೂರು:  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಗುಂಪುಕಟ್ಟಿಕೊಂಡು ರಸ್ತೆಯಲ್ಲಿಯೇ ಹೊಡೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯರ ವರ್ತನೆಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರು ಇನ್ಸ್ಟಾಗ್ರಾಮ್ ನಲ್ಲಿ ಗಲಾಟೆ ಆರಂಭಿಸಿದ್ದು, ಪರಸ್ಪರ ಸವಾಲು ಹಾಕಿಕೊಂಡು ಕೈಕೈ ಮಿಲಾಯಿಸಿದ್ದು, ರಕ್ತ ಬರುವಂತೆ ಪರಸ್ಪರ ಹೊಡೆದಾಟ ನಡೆಸಿದ್ದು, ಈ ವೇಳೆ ಸಾರ್ವಜನಿಕರು ವಿದ್ಯಾರ್ಥಿನಿಯರ ಜಗಳವನ್ನು ಬಿಡಿಸಿ, ಎಚ್ಚರಿಸಿ ಸ್ಥಳದಿಂದ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಸುಮಾರು 20ರಷ್ಟಿದ್ದ ವಿದ್ಯಾರ್ಥಿನಿಯರು ಪರಸ್ಪರ ಹಲ್ಲೆ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿನಿಯರು ಯೂನಿಫಾರ್ಮ್ ಧರಿಸಿದ್ದರೆ, ಇನ್ನು ಕೆಲವು ವಿದ್ಯಾರ್ಥಿನಿಯರು ಕಲರ್ ಡ್ರೆಸ್ ಧರಿಸಿರುವುದು ಕಂಡು ಬಂದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಸಂಸ್ಥೆ ಪೋಷಕರನ್ನು ಕರೆಸಿ ಸಭೆ ನಡೆಸಿದೆ ಎನ್ನಲಾಗುತ್ತಿದೆ. ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ವರದಿ:  ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಮಾಡು ಇಲ್ಲ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ರನ್‍ಗಳ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ಸನ್‍ರೈಸರ್ಸ್ ಹೈದ್ರಾಬಾದ್‍ ನ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವ ತೊರೆಯುವ ಮೂಲಕ ಆಘಾತ ನೀಡಿದ್ದಾರೆ.ಕೇನ್ ವಿಲಿಯಮ್ಸನ್ ಅವರ ಪತ್ನಿ ಮಗುವಿಗೆ ಜನ್ಮ ನೀಡುತ್ತಿರುವು ದರಿಂದ ಐಪಿಎಲ್‍ನಲ್ಲಿ ಉಳಿದಿರುವ ಪಂದ್ಯಗಳಿಂದ ಅವರು ತಂಡವನ್ನು ತೊರೆದಿದ್ದಾರೆ ಎಂದು ಎಸ್‍ಆರ್‍ಎಚ್‍ನ ಫ್ರಾಂಚೈಸಿಗಳು ತಿಳಿಸಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಕೇನ್ ವಿಲಿಯಮ್ಸನ್ ಹಾಗೂ ಆತನ ಪತ್ನಿ ಸಾರಾ ರಹೀಂಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಕೇನ್ ವಿಲಿಯಮ್ಸ್ ಅವರು ತಂಡವನ್ನು ತೊರೆದಿರುವುದರಿಂದ ಸನ್‍ ರೈಸರ್ಸ್‍ನ ಮುಂದಿನ ನಾಯಕರಾಗಿ ವೆಸ್ಟ್‍ಇಂಡೀಸ್‍ನ ಸೀಮಿತ ಓವರ್‍ಗಳ ನಾಯಕ ನಿಕೋಲಸ್ ಪೂರನ್ ಅಥವಾ ಭಾರತದ ವೇಗದ ಬೌಲರ್ ಭುವನೇಶ್ವರ್‍ಕುಮಾರ್ ಅವರ ಹೆಗಲಿಗೆ ನಾಯಕನ ಜವಾಬ್ದಾರಿ ಬೀಳಲಿದೆ.ಸನ್‍ ರೈಸರ್ಸ್ ಹೈದ್ರಾಬಾದ್ ಮೇ 22 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಪಂದ್ಯ ಆಡಲಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಚಿತ್ರರಂಗಕ್ಕೂ ಕ್ರಿಕೆಟ್ ರಂಗಕ್ಕೂ ಬಿಡಿಸಲಾಗದ ಬಂಧವಿದೆ, ಎಷ್ಟೋ ನಟರು, ಕಲಾವಿದೆಯರನ್ನು ಮದುವೆ ಆಗಿದ್ದರೆ, ಕೆಲವು ಕ್ರೀಡಾಪಟುಗಳು ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ, ಈಗ ಭಾರತ ತಂಡದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‍ರ ಸರದಿ. ಶಿಖರ್ ಧವನ್ ಅವರು ಡ್ರೀಮ್ 11 ಸೇರಿದಂತೆ ಎಷ್ಟೋ ಜಾಹೀರಾತುಗಳಲ್ಲಿ ತಮ್ಮ ನಟನಾ ಹಾಗೂ ನೃತ್ಯದ ಕೌಶಲ್ಯ ಮೆರೆದಿದ್ದು ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗ ನೇರವಾಗಿಯೇ ಬಾಲಿವುಡ್‍ನ ಚಿತ್ರವೊಂದರಲ್ಲಿ ನಟಿಸುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಶಿಖರ್ ಧವನ್ ಅವರು ಇತ್ತೀಚೆಗೆ ಅಕ್ಷಯ್‍ಕುಮಾರ್ ನಟನೆಯ ರಾಮ್‍ಸೇತು ಚಿತ್ರೀಕರಣದ ವೇಳೆ ಅಕ್ಕಿಯೊಂದಿಗೆ ಕಾಣಿಸಿಕೊಂಡಿದ್ದರು, ಶಿಖರ್ ಧವನ್ ಅವರು ಈ ಚಿತ್ರದಲ್ಲೇ ನಟಿಸುತ್ತಿದ್ದಾರೋ ಎಂದು ಅಂದಾಜಿಸಲಾಗುತ್ತಿದೆಯಾದರೂ ಗಬ್ಬರ್ ನಟಿಸುತ್ತಿರುವುದು ಬೇರೊಂದು ಚಿತ್ರದಲ್ಲಿ ಅಂತೆ. ಈ ಚಿತ್ರವನ್ನು ಬಾಲಿ ವುಡ್‍ನ ಖ್ಯಾತ ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿದ್ದು ಸಿನಿಮಾದ ಟೈಟಲ್ ಅನ್ನು ಸದ್ಯದಲ್ಲೇ ತಿಳಿಸಲಿದ್ದಾರಂತೆ. ಅಂದಹಾಗೆ ಈ ಚಿತ್ರದಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಯಾವುದೋ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ,…

Read More

ಮಳೆಯಿಂದಾಗಿ ಬೆಂಗಳೂರು ಈಜುಕೊಳ ದಂತಾಗಿರುವುದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಕೆರೆಗಳನ್ನೇ ನುಂಗಿ ಬಡಾವಣೆಗಳನ್ನು ನಿರ್ಮಿಸಿದ್ದರ ಪರಿಣಾಮವಿದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಯಶವಂತಪುರ ಮೆಟ್ರೋ ನಿಲ್ದಾಣದ ಬಳಿಯ ಅರವಿಂದ್ ಮೋಟಾರ್ಸ್‍ನಿಂದ ಪಂಚರತ್ನ ಕಾರ್ಯಕ್ರಮಕ್ಕಾಗಿ ಖರೀದಿಸಿದ 123 ಎಲ್‍ಇಡಿ ವಾಹನಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಏಳು ಜನ ಸಚಿವರಿದ್ದರೂ ಮಳೆ ಬಂದಾಗ ನೀರು ನುಗ್ಗಿ ಅವಾಂತರ ಉಂಟುಮಾಡುವ ಪರಿಸ್ಥಿತಿ ತಪ್ಪಿಸದೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. 2006-07ರಲ್ಲಿ ಪುಟ್ಟೇನಹಳ್ಳಿ ನಿವಾಸಿಗಳ ಅನುಕೂಲಕ್ಕಾಗಿ ತಾವು ಕೈಗೊಂಡ ನಿರ್ಧಾರದಿಂದ ಅಲ್ಲಿನ ನಿವಾಸಿಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ನಮಗೆ 100 ವೋಟು, ಬಿಜೆಪಿಗೆ 600 ವೋಟು ಕೊಟ್ಟಿದ್ದಾರೆ ಎಂದರು. ಜನತಾ ಜಲಧಾರೆಯಿಂದ ಕಾಂಗ್ರೆಸ್-ಬಿಜೆಪಿಗೆ ನಡುಕ ಉಂಟಾಗಿದೆ. ನಮ್ಮ ಪಂಚರತ್ನ ಯೋಜನೆ ಬಗ್ಗೆ ಟೀಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೇ ಎಂದು ಕಿಡಿಕಾರಿದರು.ಹುಡುಗಾಟಿಕೆಗಾಗಿ ಪಂಚರತ್ನ ಯೋಜನೆ ಹಮ್ಮಿ ಕೊಂಡಿಲ್ಲ. ಈಗಾಗಲೇ ಸಮಾವೇಶದ ಮೂಲಕ ನಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದೇವೆ. 123 ಅಭ್ಯರ್ಥಿಗಳಿಲ್ಲ ಎಂದು ಲಘುವಾಗಿ ಆರೋಪಿಸಿದ್ದಾರೆ.…

Read More