Subscribe to Updates
Get the latest creative news from FooBar about art, design and business.
- ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕ
- ಕಾಲುವೆಯ ಸೇತುವೆಗೆ ಬೈಕ್ ಡಿಕ್ಕಿ: ಇಬ್ಬರು ಸಾವು
- ಹೃದಯಾಘಾತಕ್ಕೆ ಕೋವಿಡ್ ಲಸಿಕೆ ನೇರ ಕಾರಣ ಅಲ್ಲ: ಸಚಿವ ದಿನೇಶ್ ಗುಂಡೂರಾವ್
- ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ: ಡಿ.ಕೆ.ಶಿವಕುಮಾರ್
- ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ!
- ನಾಲ್ಕು ತಿಂಗಳುಗಳಿಂದ ಭೀತಿ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ
- ಉತ್ತಮ ರಸ್ತೆಗಳು ಬೇಕು ಅಂದ್ರೆ, ಗ್ಯಾರೆಂಟಿ ಬಂದ್: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ!
- ಶಿವಾರ್ಚಕ ಎಂದು ಜಾತಿ ಗಣತಿಯಲ್ಲಿ ಬರೆಸಬೇಕು: ವಿದ್ವಾನ್ ಎಂ.ಮಲ್ಲಣ್ಣ ಕರೆ
Author: admin
ಗುಬ್ಬಿ: ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀ ನಿವಾಸ್ ತಿಳಿಸಿದರು. ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಮಸಿಯಮ್ಮನಹಟ್ಟಿ ಗ್ರಾಮದಲ್ಲಿ ಕಾಡಾಯೋಜನೆಯಡಿ 57 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಿದರೂ, ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ ಮೂರನೇ ಅಲೆ ಹರಡುತ್ತಿದ್ದು ಜನತೆ ಸಾಕಷ್ಟು ಜಾಗೃತಿ ವಹಿಸಬೇಕು ಎಂದರು. ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಜನತೆ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲಿ ಸಾಕಷ್ಟು ಸಾವು ಸಂಭವಿಸಿದೆ. ಜನತೆ ಈ ಬಾರಿಯೂ ಸಹ ನಿರ್ಲಕ್ಷ್ಯ ವಹಿಸಿದರೆ, ಮೊದಲಿಗಿಂತ ಹೆಚ್ಚು ಸಾವು ನೋವುಗಳು ಸಂಭಸಲಿದೆ. ಆದರಿಂದ ಜನತೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು. ವರದಿ: ಡಿ.ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಮಸ್ಕಲ್ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿತ ಅಭ್ಯರ್ಥಿ ಮಂಜುಳ ಅವರು ಗ್ರಾ.ಪಂ. ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿ ಮಂಜುಳವೀರೇಶ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರುಗಳಾಗಿದ್ದ ದಿ. ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿಗಳವರ ಪೂರ್ವಾಶ್ರಮದ ತಂದೆಯವರಾದ ರಂಗಸ್ವಾಮಿ(75) ವರ್ಷ ಇಂದು ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರ. ಇವರ ನಿಧನಕ್ಕೆ ತಾಲೂಕು ವಾಲ್ಮೀಕಿ ಸಮಾಜ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹೆಚ್.ಡಿ.ಕೋಟೆ: ಸರಗೂರು ಮೈಸೂರು ಮಾನಂದವಾಡಿಯ ಮುಖ್ಯರಸ್ತೆಯಾಗಿರುವ ಅಂತರಸಂತೆ ಗ್ರಾಮದಲ್ಲಿ ಪೊಲೀಸ್ ಠಾಣೆಯಾದರೆ, ಇದು ಸಾರ್ವಜನಿಕರಿಗೆ ಹೆಚ್ಚಿನ ರೀತಿಯ ಅನುಕೂಲವಾಗಲಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು. ತಾಲ್ಲೂಕಿನ ಅಂತರಸಂತೆ ಗ್ರಾಮದ ನೂತನ ಪೊಲೀಸ್ ಠಾಣೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಂತರಸಂತೆ ಭಾಗದಲ್ಲಿದ್ದ ಉಪ ಪೊಲೀಸ್ ಠಾಣೆಯನ್ನು ಬದಲಾಯಿಸಿ, ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬುದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಆದರೆ ಈ ಬೇಡಿಕೆ ಈಗ ಈಡೇರುತಿದೆ. ಒಂದು ಪೊಲೀಸ್ ಠಾಣೆಗೂ ಉಪ ಠಾಣೆಗೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ, ಬದಲಿಗೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸುತ್ತೇವೆ, ಉಪಠಾಣೆಯಲ್ಲಿ ಎಫ್ ಐ ಆರ್ ಹಾಕುವುದಿಲ್ಲ. ಆದರೆ ಸಮಸ್ಯೆಗಳಿಗೆ ಎರಡು ಕಡೆ ಸ್ಪಂದಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಪೊಲೀಸ್ ಠಾಣೆಯನ್ನು ಮಾಡಲು ಸರ್ಕಾರದ ಸಾಕಷ್ಟು ನಿಯಮಗಳಿವೆ. ಹಳೆ ಠಾಣೆಯಲ್ಲಿ 750 ಕೇಸ್ ಆಗಿರಬೇಕು ಮತ್ತು ಜನಸಂಖ್ಯೆ ಮುಖ್ಯವಾಗಿರುತ್ತದೆ. ಆದ್ದರಿಂದ ಇದು ಮುಖ್ಯ ರಸ್ತೆಯೂ ಸಹ ಹೌದು ಎಂದು…
ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಈಚನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುಷ್ಪ ಜಗದೀಶ್ ಹಿಂದಿನ ಒಡಂಬಡಿಕೆಯ ಪ್ರಕಾರ, ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾಪಂ ಅಧ್ಯಕ್ಷೆ ಶ್ರುತಿ ಜಯದೇವ್, ನಿಕಟಪೂರ್ವ ಉಪಾಧ್ಯಕ್ಷ ಕೆ.ಬಿ.ನವೀನ್ ಕುಮಾರ್, ಸದಸ್ಯರಾದ ಭಾಗ್ಯ,ಗೀತಾ, ಉಮೇಶ್ ನಾಗರಾಜ್, ಸುಧಾ ಮತ್ತು ಗೀತಾ ಸೇರಿದಂತೆ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಭರತ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಹಾಗೂ ಮುಖಂಡ ಈಚನೂರು ರಾಜಶೇಖರ್ ಅಭಿನಂದನೆ ಸಲ್ಲಿಸಿದರು. ನೂತನ ಉಪಾಧ್ಯಕ್ಷೆ ಪುಷ್ಪ ಜಗದೀಶ್ ಮಾತನಾಡಿ, ಎಲ್ಲ ಸದಸ್ಯರುಗಳ ಬೆಂಬಲದೊಂದಿಗೆ ಗ್ರಾಮದ ಮತ್ತು ಪಂಚಾಯಿತಿಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅಫ್ಘಾನಿಸ್ತಾನ: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ, ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬಾದ್ಘಿಸ್ನು ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು, ಇಲ್ಲಿನ ಮನೆಗಳ ಮೇಲ್ಛಾವಣಿ ಕುಸಿದು ಐವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿ ಒಟ್ಟು 26 ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ತಿಳಿಸಿದ್ದಾರೆ. ಈಗಾಗಲೇ ಅಪ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿದ್ದು ಜನರು ಸಾಕಷ್ಟು ನರಳುತ್ತಿದ್ದಾರೆ ಇದರ ಮಧ್ಯೆ ಈ ಭೂಕಂಪನವು ಇನ್ನಷ್ಟು ನೋವು ನೀಡಿದೆ. ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಆಳವಿಲ್ಲದ ಭೂಕಂಪನವು 5.3 ತೀವ್ರತೆಯನ್ನು ಹೊಂದಿದೆ. ಅಪ್ಘಾನಿಸ್ತಾನವು ಆಗಾಗ್ಗೆ ಭೂಕಂಪನಗಳಿಗೆ ಸಾಕ್ಷಿಯಾಗುತ್ತಿದೆ. ವಿಶೇಷವಾಗಿ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚಾಗಿ ಭೂಮಿ ಕಂಪಿಸುತ್ತದೆ. ಇದು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್ಗುಳ ಜಂಕ್ಷನ್ನ್ ಸಮೀಪದಲ್ಲಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಬಡವರು ಆಹಾರಕ್ಕಾಗಿ, ಬಟ್ಟೆಗಾಗಿ ಸಂಕಷ್ಟ ಪಡುತ್ತಿದ್ದಾರೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಡವ ಶ್ರೀಮಂತರ ಅಂತರ ಕೊರೊನಾ ಕಾಲದಲ್ಲಿ ಏರಿಕೆಯಾಗಿದೆ. ಎನ್ ಜಿಒ ಆಕ್ಸ್ ಫ್ಯಾಮ್ ಇಂಡಿಯಾದ ವರದಿಯ ಪ್ರಕಾರ, 2021 ರಲ್ಲಿ ಭಾರತದಲ್ಲಿ ಶೇಕಡಾ 84 ರಷ್ಟು ಕುಟುಂಬಗಳ ಆದಾಯವು ಕುಸಿದಿದೆ. ಆದರೆ ಭಾರತೀಯ ಬಿಲಿಯನೇರ್ ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿದೆ. ಇಂದು ವಿಶ್ವ ಆರ್ಥಿಕ ವೇದಿಕೆ 2022 ರ ಮೊದಲ ದಿನ. ಈ ಸಂದರ್ಭದಲ್ಲಿ, ಆಕ್ಸ್ ಫ್ಯಾಮ್ ಇಂಡಿಯಾ ವಾರ್ಷಿಕ ಅಸಮಾನತೆಯ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಕರೋನಾ ಅವಧಿಯಲ್ಲಿ ಭಾರತೀಯ ಬಿಲಿಯನೇರ್ ಗಳ ಒಟ್ಟು ಸಂಪತ್ತು ದ್ವಿಗುಣಗೊಂಡಿದೆ. ಟಾಪ್-10 ಶ್ರೀಮಂತರು ಮುಂದಿನ 25 ವರ್ಷಗಳ ಕಾಲ ದೇಶದ ಎಲ್ಲಾ ಶಾಲಾ-ಕಾಲೇಜುಗಳನ್ನು ನಡೆಸಬಲ್ಲಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂಬ ಅಂಶದಿಂದ ಅವರ ಸಂಪತ್ತನ್ನು ಅಳೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ…
ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕೈಗೊಂಡಿರುವ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ದಲಿತ ಕಾಲೋನಿಯ ಸಂಪರ್ಕದ ರಸ್ತೆಯಲ್ಲಿ ಕಾಮಗಾರಿ ಮಾಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಇಂದು ಜಿ. ಹೊಸಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮಸ್ಥ ಮುರುಳಿ, ಒಟ್ಟು 900 ಮೀಟರ್ ನಷ್ಟು ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ದಲಿತ ಕಾಲೋನಿ ಸಂಪರ್ಕ ದ 200 ಮೀಟರ್ ರಸ್ತೆ ಕಾಮಗಾರಿ ನಡಸದೆ ಉದ್ದೇಶ ಪೂರ್ವಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮುಂದುವರಿದ ಸಮುದಾಯದವರ ಮನೆಯ ಸಂಪರ್ಕಕ್ಕೆ ರಸ್ತೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಲೋನಿ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಅರ್ಚಕ ಸೋಮಶೇಖರ್ ಮಾತನಾಡಿ, ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ದಲಿತ ಕಾಲೋನಿ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೆ ಪ್ರಯೋಜನವಾಗುತ್ತಿಲ್ಲ. ಈಗ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲೂ ಸಹ ತಾರತಮ್ಯ…
ನವದೆಹಲಿ: ಗಣರಾಜ್ಯೋತ್ಸವ ಪರೇಡ್ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು ಎಂದು ಐಬಿ ಮಂಗಳವಾರ ಎಚ್ಚರಿಕೆ ನೀಡಿದ್ದು, ಉಗ್ರರು ಗುಂಪನ್ನು ಗುರಿಯಾಗಿಸಬಹುದು ಎಂದು ಹೇಳಿದೆ. ಐಬಿ ನಿಷೇಧಿತ ಸಂಘಟನೆಗೆ ಖಲಿಸ್ತಾನಿ ಲಿಬರೇಶನ್ ಫೋರ್ಸ್ ಎಂದು ಹೆಸರಿಸಿದೆ ಮತ್ತು ಈ ಸಂಘಟನೆಯು ದಾಳಿ ನಡೆಸಬಹುದು ಎಂದು ಹೇಳಿದೆ. ಗಾಜಿಪುರದಲ್ಲಿ ವಶಪಡಿಸಿಕೊಂಡಿದ್ದ ಐಎಡಿ ಬಾಂಬ್ ಗಳು ಪಾಕಿಸ್ತಾನದ ಮೂಲದವು ಎಂದು ಗುರುತಿಸಲಾಗಿದೆ. IED ಅಮೋನಿಯಂ ನೈಟ್ರೇಟ್, RDX, ಒಂಬತ್ತು-ವೋಲ್ಟ್ ಬ್ಯಾಟರಿ ಮತ್ತು ಕಬ್ಬಿಣದ ಸಣ್ಣ ತುಂಡುಗಳನ್ನು ಒಳಗೊಂಡಿರುವ ಸ್ಪೋಟಕಗಳನ್ನ ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಸುಮಾರು 3 ಕೆಜಿ ಸ್ಫೋಟಕಗಳನ್ನು ನಾಶಪಡಿಸಿದವು ಮತ್ತು ಉಳಿದವುಗಳನ್ನು ತನಿಖೆಗಾಗಿ ಹರಿಯಾಣದ ಮನೇಸರ್ ನಲ್ಲಿರುವ ರಾಷ್ಟ್ರೀಯ ಬಾಂಬ್ ಡೇಟಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ದೇಶದಲ್ಲಿ ಕೋಮು ಉದ್ವಿಗ್ನತೆಯನ್ನ ಹರಡುವುದಕ್ಕಾಗಿ ಮಾದಕ ವಸ್ತುಗಳ ಹಣದದ ಮೂಲಕ ನಿರಂತರವಾಗಿ ಐಇಡಿಗಳನ್ನ ರವಾನೆ ಮಾಡುತ್ತಿದ್ದಾರೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ನವದೆಹಲಿ: ಎಲ್ಲಾ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಕ್ಕೆ ಸಕಾರಣಗಳನ್ನು ಸಾರ್ವಜನಿಕವಾಗಿ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಹಿರಿಯ ವಕೀಲ ಅಶ್ವಿನ್ ಕುಮಾರ್ ದುಬೆ ಅವರ ಮೂಲಕ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಪ್ರಕಾರ, ಪ್ರತಿ ರಾಜಕೀಯ ಪಕ್ಷವು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಗೆ ಏಕೆ ಆದ್ಯತೆ ನೀಡಿದೆ ಮತ್ತು ಕ್ರಿಮಿನಲ್ ಪೂರ್ವಾಪರಗಳಿಲ್ಲದ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬುದನ್ನು ವಿವರಿಸಬೇಕು. ಈ ವಿಚಾರವನ್ನು ಚುನಾವಣಾ ಆಯೋಗ ಗಮನಿಸಬೇಕು. ಪ್ರತಿಯೊಬ್ಬ ರಾಜಕಾರಣಿಯೂ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿವರಗಳನ್ನು ಪ್ರಕಟಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಪಕ್ಷದ ಅಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.…