Subscribe to Updates
Get the latest creative news from FooBar about art, design and business.
- ಶಿವಾರ್ಚಕ ಎಂದು ಜಾತಿ ಗಣತಿಯಲ್ಲಿ ಬರೆಸಬೇಕು: ವಿದ್ವಾನ್ ಎಂ.ಮಲ್ಲಣ್ಣ ಕರೆ
- ನಾಮಧಾರಿ ಗೌಡ ಯುವಕರ ಸಂಘದ 15ನೇ ವರ್ಷದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
- ಶಿಕ್ಷಣದಿಂದ ಭಾರತ ವಿಶ್ವದ ಗಮನ ಸೆಳೆದಿದೆ: ಸಚಿವ ಜಿ.ಪರಮೇಶ್ವರ
- ಬಾಬು ಜಗಜೀವನ್ ರಾಮ್ ಪ್ರತಿಮೆ ಕೊಡುಗೆಯಾಗಿ ನೀಡುತ್ತೇನೆ: ಸಚಿವ ಪರಮೇಶ್ವರ
- ತುಮಕೂರು: ದಾವಣಗೆರೆ ಪಿಎಸ್ ಐ ನೇಣಿಗೆ ಶರಣು!
- ಹಣಕಾಸು ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ: ಹಾಡ ಹಗಲೇ ಬರ್ಬರ ಹತ್ಯೆ
- ತಿಪಟೂರು: ‘ನೇಸರ’ ನೂತನ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
- ಬೀದರ್ | ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ
Author: admin
ಗುಬ್ಬಿ: ತಾಲ್ಲೂಕಿನ ಬಾನಿಹಟ್ಟಿ ಗ್ರಾಮದಲ್ಲಿ ರೈತರು ಶೇಖರಣೆ. ಮಾಡಲಾಗಿದ್ದ ರಾಗಿಯ ಹುಲ್ಲಿನ ಬಣವೆಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಮಾರು 4 ಟ್ರಾಕ್ಟರ್ ನಷ್ಟ ರಾಗಿ ತೆನೆಯ ಬಣವೆ ಬೆಂಕಿಗಾಹುತಿ ಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿತ್ತು. ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ.ಕೃಷ್ಣ ಪ್ಪ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು. ಬಳಿಕ ನೊಂದ ರೈತ ಕುಟುಂಬದವರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು. ಬಾನಿಹಟ್ಟಿ ಗ್ರಾಮದ ರೈತರಾದ ನಾಗಣ್ಣ, ಬಲ್ಲಯ್ಯ, ಶಾರದಮ್ಮ ಎಂಬುವರು, ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 4 ಟ್ರಾಕ್ಟರ್ ರಾಗಿ ತೆನೆಯನ್ನು, ಕಣ ಮಾಡಲು ಸಂಗ್ರಹಿಸಿದ್ದರು. ಆದರೆ ಯಾರೋ ಕಿಡಿಗೇಡಿಗಳು ರಾಗಿ ಬಣವೆಗೆ ಬೆಂಕಿ ಹಚ್ಚಿದ್ದು, ಪರಿಣಾಮವಾಗಿ ರೈತರಿಗೆ ತೀವ್ರ ನಷ್ಟವುಂಟಾಗಿತ್ತು. ವರದಿ: ಡಿ.ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ವ್ಯಕ್ತಿಯೋರ್ವ ಕೈಕಾಲು ಚೆನ್ನಾಗಿದ್ದರೂ, ಕೈ ಇಲ್ಲದಂತೆ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದು, ವ್ಯಕ್ತಿಯೊಬ್ಬರು ಆತನನ್ನು ತಡೆದು, ಆತನಿಗೆ ಕೈ ಇರುವುದನ್ನು ಬಯಲುಗೊಳಿಸಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಜಯನಗರದ ಸೌತ್ ಅಂಡ್ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ. ಜೊತೆಗೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ತಡೆದ ವ್ಯಕ್ತಿ ಯಾರು ಎನ್ನುವುದೂ ತಿಳಿದು ಬಂದಿಲ್ಲ. ಕೈ ಇದ್ದರೂ ಅಂಗವಿಕಲನಂತೆ ನಟಿಸುತ್ತಾ, ಜನರ ಅನುಕಂಪಗಿಟ್ಟಿಸುತ್ತಿದ್ದ ವ್ಯಕ್ತಿಯನ್ನು ತಡೆದ ವ್ಯಕ್ತಿಯೋರ್ವ, ನಿನ್ನ ಕೈ ತೋರಿಸು, ಷರ್ಟ್ ಬಿಚ್ಚು ಎಂದು ಗದರಿ ಬಿಚ್ಚಿಸಿದ್ದು, ಈ ವೇಳೆ ಆತನಿಗೆ ಕೈಗಳಿರುವುದು ಪತ್ತೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು, “ಕೈಕಾಲು ಚೆನ್ನಾಗಿದ್ದರೂ ದುಡಿದು ತಿನ್ನಬಾರದೇ? ಈ ರೀತಿಯಾಗಿ ಬೀದಿಯಲ್ಲಿ ಭಿಕ್ಷೆ ಬೇಡಬೇಕೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, “ಸಣ್ಣಪುಟ್ಟ ಭಿಕ್ಷುಕರನ್ನು ಹಿಡಿದು ಬಣ್ಣ ಬಯಲು…
ಪಾವಗಡ: ಪಾವಗಡ ತಾಲ್ಲೂಕು ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಮ್ಮನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯ ನೀರಿನ ಘಟಕ ಕೆಟ್ಟು ನಿಂತು 5 ತಿಂಗಳಾದರೂ ಇದನ್ನು ಸರಿಪಡಿಸಲು ಇನ್ನೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಮುಂದಾಗಿಲ್ಲ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಆಕ್ರೋಶ ವ್ಯಕ್ತಪಡಿಸದ್ದಾರೆ. ಸುಮಾರು ಒಂದು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಪಾನ್ ಏಷ್ಯಾ ವರ್ಲ್ಡ್ ವೈಡ್ ಕಂಪೆನಿಯ ಸಹಭಾಗಿತ್ವದಲ್ಲಿ ಶುದ್ಧ ಕುಡಿಯ ನೀರಿನ ಘಟಕ ಪ್ರಾರಂಭಿಸಿದ್ದು, ಇದು ಕಳಪೆ ಗುಣಮಟ್ಟಾದ್ದಾಗಿರುವುದರಿಂದ ಆಗಾಗ್ಗೆ ಕೆಟ್ಟು ಹೋಗುತ್ತಿದೆ ಎಂದು ಅವರು ದೂರಿದರು. 5 ತಿಂಗಳಿಂದ ಶುದ್ಧ ಕುಡಿಯ ನೀರಿನ ಘಟಕ ಕೆಟ್ಟು ನಿಂತಿದ್ದು, ಇಲ್ಲಿನ ಜನತೆ ಕುಡಿಯುವ ನೀರಿಗಾಗಿ ಐದಾರು ಕಿ.ಮೀ. ಹೋಗಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಸ್ಥಳೀಯ ಜನ ಪ್ರತಿನಿದಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದೇ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಕೂಡ ದೂರಿದ್ದಾರೆ. ಸಾರ್ವಜನಿಕರ ದೂರಿನ…
ಪಾವಗಡ: ತಾಲೂಕಿನ ಶ್ರೀ ಕ್ಷೇತ್ರ ನಾಗಲಮಡಿಕೆ ಸುಬ್ರಮಣ್ಯಸ್ವಾಮಿ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಬೇಕಾಗಿತ್ತು. ಆದರೆ ಕೊರೊನಾ ಮೂರನೇ ಅಲೆಯ ಭೀತಿಯಿಂದ ಈ ವರ್ಷ ತಾಲೂಕು ಆಡಳಿತ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯನ್ನು ರದ್ದುಪಡಿಸಲಾಗಿತ್ತು. ದೇವಸ್ಥಾನದಲ್ಲಿ ಪೂಜೆ ಅಭಿಷೇಕ ನಡೆದರು ಭಕ್ತಾದಿಗಳಿಗೆ ಅವಕಾಶ ನೀಡಲಾಗಿರಲಿಲ್ಲ. ಇನ್ನು ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದಾಗಿದೆ ಎಂದು ಮಾಹಿತಿಯನ್ನು ತಿಳಿಯದ ಕೆಲವು ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರಿಂದ ಯಾವುದೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಲಿಲ್ಲ. ದೂರದಿಂದ ಬಂದಂತಹ ಭಕ್ತಾದಿಗಳು ರಸ್ತೆಯ ಬದಿಯಲ್ಲಿರುವ ರಕ್ಷಣಾ ಗೋಡೆಗೆ ತೆಂಗಿನಕಾಯಿ ಒಡೆದು ಹೂ ಹಾಕಿ ದಾರಿಯಿಂದಲೇ ಸುಬ್ರಮಣ್ಯ ಸ್ವಾಮಿ ಕೈಮುಗಿದು ಹಿಂದೆ ತಿರುಗಿ ಹೋಗಿರುವುದು ಈ ವೇಳೆ ಕಂಡುಬಂದಿದೆ. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬುದ್ಧಗುರುವಿನ ಪಂಚಶೀಲ ತತ್ವಗಳು ಬಸವಾದಿ ಪ್ರಮಥ ಶರಣರಲ್ಲೂ ರೂಪಧಾರಣೆ ಮಾಡಿಕೊಂಡಿರುವುದನ್ನು ಗಮನಿಸಬಹುದು. ಬಸವಣ್ಣನವರು ರೂಪಿಸಿದ ಶರಣ ಚಳವಳಿ ಧಮ್ಮ ತತ್ವಾಧಾರಿತವಾದದ್ದು. ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದ ಬುಧ್ಧ ಗುರುವು ಸಮಾಜದ ಎಲ್ಲಾ ವರ್ಗಗಗಳ ಜನರನ್ನು ಧಮ್ಮ ರಕ್ಷಕರನ್ನಾಗಿ- ಸಂಘರಕ್ಷಕರನ್ನಾಗಿ ಪ್ರಜ್ಞೆ- ಶೀಲ- ಸಮಾಧಿಗಳ ವಿಗ್ಗ ಪಜ್ಞಾ ತತ್ವದಲ್ಲಿ ನಿಯಮಿಸುವಂತೆ, ಬಸವಣ್ಣನವರೂ ಸಹ ‘ಅನ್ನ ದಾಸೋಹ ಕಾಯಕ ದಾಸೋಹ- ಜ್ಞಾನ ದಾಸೋಹ’ ಎಂಬ ತ್ರಿವಿಧ ದಾಸೋಹ ಪರಿಕಲ್ಪನೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಮಾನತೆ ಭಾವದಲ್ಲಿ ಲಿಂಗ ದೀಕ್ಷೆ ತತ್ವಾನುಸಾರ ಲಿಂಗಾಯತರನ್ನಾಗಿಸುತ್ತಾರೆ. ಬುದ್ಧ ಮತ್ತು ಬಸವಣ್ಣ ಇಬ್ಬರೂ ತಮ್ಮ ಜನರನ್ನು ದೈವಾರಾಧನೆ ಧಾರ್ಮಿಕ ಶ್ರದ್ದೆಯಿಂದ ನಿಸರ್ಗಾರಾಧನೆಯ ಜೀವ ಪ್ರೀತಿಯ ಮಾನವನ ಶ್ರದ್ಧೆಗೆ ಒಲಿಸಿ ದಯಾದರ್ಶನ ಮೌಲ್ಯಗಳನ್ನು ತಿಳಿಸಿಕೊಡುತ್ತಾರೆ. ಬುದ್ಧ ಗುರುವಿನ ಪ್ರಕಾರ ಯಾವುದು ಜೀವೋತ್ಪತ್ತಿಯೋ ಅದಕ್ಕೆ ಹುಟ್ಟು ಇರುವಂತೆ ಸಾವು ಇದೆಯೋ ಹಾಗೆ, ಬಸವಣ್ಣನವರ ಪ್ರಕಾರ ಯಾವುದು ಸ್ಥಾವರವೋ ಅದು ಅಳಿಯುತ್ತದೆ. ಅದರ ಉಬಯ ಭೇದಗಳನ್ನು ಅರಿಯಲೆಂದೇ ಸ್ಥಾವರ ಲಿಂಗ ಮತ್ತು…
ತುಮಕೂರು: ಕೊವಿಡ್ ಹಾಗೂ ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ವಿಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ತುಮಕೂರು ಶನಿವಾರ ಮಧ್ಯಾಹ್ನದ ಸುಮಾರಿಗೆ ಸಂಪೂರ್ಣ ಸ್ಥಬ್ದವಾಗಿದ್ದು, ನಗರವೇ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕೆಲವೇ ಕೆಲವು ಮಂದಿ ದೂರದ ಊರುಗಳಿಂದ ಬಂದು ಬೇರೆಡೆಗೆ ಪ್ರಯಾಣಿಸಲು ಬಸ್ಸಿಗಾಗಿ ಕಾಯುತ್ತಾ ಕುಳಿತಿರುವುದು ಕಂಡು ಬಂತು. ತುಮಕೂರು ನಗರದ ಹೃದಯ ಭಾಗದಲ್ಲಿರುವ ಎಂ.ಜಿ. ರಸ್ತೆಯಲ್ಲಿ ಸದಾ ಜನ ಜಂಗುಳಿಯಿಂದ ಇರುತ್ತಿದ್ದ ಎಂ.ಜಿ.ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು. ತುಮಕೂರು ನಗರಕ್ಕೆ ಬರುವ ಹಾಗೂ ತುಮಕೂರು ನಗರದಿಂದ ಹೊರ ಹೋಗುವ ಜನಸಾಮಾನ್ಯರನ್ನು ಪೋಲಿಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವುದು ಕಂಡುಬಂತು. ತುಮಕೂರಿನ ಮಾರುಕಟ್ಟೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು ಗ್ರಾಹಕರಿಲ್ಲದೆ ವರ್ತಕರು ಗ್ರಾಹಕರಿಗಾಗಿ ಕಾದು ಕುಳಿತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮಾರುಕಟ್ಟೆಯಲ್ಲಿ ಜನರಿಲ್ಲದೆ ಖಾಲಿ ಖಾಲಿಯಾಗಿ ಕಾಣತೊಡಗಿತು. ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ…
ಸರಗೂರು: ಆಲನಹಳ್ಳಿ ಹಾಡಿಯ ಕುರುಬ ಜನಾಂಗದವರಿಗೆ ಸರಿಯಾದ ಮಸಣ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೂ ಪರದಾಡಿದ ಘಟನೆಗೆ ಸಂಬಂಧಿಸಿದಂತೆ ‘ನಮ್ಮತುಮಕೂರು.ಕಾಂ ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. “ಮಸಣಕ್ಕೂ ಜಾಗ ಇಲ್ಲ: ಆಲನಹಳ್ಳಿ ಹಾಡಿಯ ಜನರ ಕಷ್ಟ ಕೇಳುವವರು ಯಾರು?” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಸುದ್ದಿಯ ಬೆನ್ನಲ್ಲೇ ತಾಲ್ಲೂಕಿನ ತಹಶೀಲ್ದಾರ್ ಚಲುವರಾಜು ಮತ್ತು ಸಿಬ್ಬಂದಿ ಹಾಡಿಗೆ ಭೇಟಿ ನೀಡಿ ಕುರುಬ ಜನಾಂಗದ ಸಮಸ್ಯೆಯನ್ನು ಆಲಿಸಿದ್ದಾರೆ. ಹಾಡಿಗೆ ಆಗಮಿಸಿದ ತಹಶೀಲ್ದಾರ್ ಅವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಇವರು ಕಾಡು ಕುರುಬರು, ಕಾಡಿನಿಂದ ನಾಡಿಗೆ ಬಂದು ಜೀವನವನ್ನು ಸಾಗಿಸುತ್ತಿದ್ದಾರೆ. ಇವರಿಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿಲ್ಲ. ಇವರು ಜೀವನ ಮಾಡಬೇಕಾದರೆ ಕಾಡಿನಿಂದ ಸೌಧೆ ಇತರ ಪದಾರ್ಥಗಳನ್ನು ತೆಗೆದುಕೊಂಡು ಬರುವುದು ಅನಿವಾರ್ಯವಾಗಿದೆ ಎಂದರು. ಹಾಡಿ ಮಹಿಳೆಯೊಬ್ಬರು ಮಾತನಾಡಿ, “ನಮಗೆ ಬಾಳ ತೊಂದ್ರಿ ಕೊಡ್ತಾರ. ಈ ಸೋಲರ್ ತಂತಿ ಇರಕೂಡದು ಇಲ್ಲಿ. ನಾವು ಹಿಂಗೆ ಮೃತದೇಹ…
ಹಿರಿಯೂರು: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಆವರಿಸಿಕೊಂಡಿರುವ ಒಮಿಕ್ರಾನ್ ನಿಂದಾಗಿ ಜನ ಸಾಮಾನ್ಯರ ಜೀವನ ಚಿಂತಾಜನಕವಾಗಿದೆ ಎಂದು ವೀಕೆಂಡ್ ಕರ್ಫ್ಯೂ ನಿಂದ ಬೇಸತ್ತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಬಿಜೆಪಿ ಸರ್ಕಾರದ ಆಡಳಿತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ದುಡಿದು ತಿನ್ನುವ ಕೈಗಳು ಇದೀಗ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ಕೂಲಿಯಿಂದ ಜೀವನ ಸಾಗಿಸುತ್ತಿದ್ದು ಈ ಬಿಜೆಪಿ ಸರ್ಕಾರದ ದುರಾಡಳಿತದ ವ್ಯವಸ್ಥೆಯಿಂದ ಬೀದಿ ವ್ಯಾಪಾರಿಗಳು ಒಂದು ಹೊತ್ತು ಊಟಕ್ಕೂ ಸಹ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ಪರಿಣಾಮ ಕೂಲಿ ನಾಲಿ ಮಾಡಿ, ಜೀವನ ಸಾಗಿಸುತ್ತಿರುವ ಕುಟುಂಬಗಳು ಬೀದಿ ಪಾಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಪಶ್ಚಾತಾಪ ಇಲ್ಲದಂತೆ ವರ್ತಿಸುತ್ತಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ . ವರದಿ: ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ತುರುವೇಕೆರೆ: ತುರುವೇಕೆರೆ ವೃತ್ತ ನಿರೀಕ್ಷ ರಾದ ನವೀನ್ ಕುಮಾರ್ ಹಾಗೂ ಪಿ.ಎಸ್.ಐ. ಕೇಶವಮೂರ್ತಿ ಅವರ ಮಾರ್ಗದರ್ಶನದೊಂದಿಗೆ ತುರುವೇಕೆರೆ ಪಟ್ಟಣದಲ್ಲಿರುವ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ತುರುವೇಕೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಮೊದಲ ವಾರದ ಕರ್ಫ್ಯೂ ಪ್ರಯುಕ್ತ ಕೊರೊನಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಸ್ವಯಂ ಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಂಡರು ಈ ಸಂದರ್ಭದಲ್ಲಿ ತುರುವೇಕೆರೆಯ ಪೊಲೀಸ್ ಠಾಣೆಯ ಎ.ಎಸ್.ಐ. ಶಿವಲಿಂಗಪ್ಪ., ಎ. ಎಸ್.ಐ. ನಾಗರಾಜ್, ಮುಖ್ಯಪೇದೆಗಳಾದ ಉಮೇಶ್, ಶಂಭುಲಿಂಗಯ್ಯ, ಗುರುಮೂರ್ತಿ, ಪೋಲೀಸ್ ಗಳಾದ ಸುಪ್ರೀತ್, ಜಯರಾಮ್ ಹಾಗೂ ಮಹಿಳಾ ಸಿಬ್ಬಂದಿ ಜಲಜಾಕ್ಷಿ ಮುಂತಾದವರು ಹಾಜರಿದ್ದರು. ವರದಿ: ಸುರೇಶ್ ಬಾಬು.ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೋಟೆ/ಸರಗೂರು: ಸರ್ವಧರ್ಮದ ಹೃದಯವಂತರು ಸೇವಾಸಂಸ್ಥೆಯ ಕಚೇರಿಯಲ್ಲಿ ಸೇವಾಸಂಸ್ಥೆಯ ಕ್ಯಾಲೆಂಡರ್ ಅನ್ನು ಶಾಸಕರಾದ ಅನಿಲ್ ಚಿಕ್ಕಮಾದು ಬಿಡುಗಡೆ ಮಾಡಿದರು, ಬಳಿಕ ಮಾತನಾಡಿದ ಅವರು, ಸೇವಾಸಂಸ್ಥೆಯು ಚಿಕ್ಕದೇವ್ ಹೆಚ್. ಜಿ. ಹೆಗ್ಗಡಾಪುರ ರವರ ನೇತೃತ್ವದಲ್ಲಿ ನೂರಾರು ಸರ್ವಧರ್ಮದ ಸ್ನೇಹಿತರು ಸೇರಿ ಸರ್ವಧರ್ಮದ ಮಹಾನ್ ನಾಯಕರ ಆದರ್ಶಗಳನ್ನು ಇಟ್ಟುಕೊಂಡು ಉತ್ತಮವಾದ ಸಾಮಾಜಿಕ ಕಳಕಳಿಯ ಸೇವಾಕಾರ್ಯಗಳನ್ನು ಮಾಡುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗಿದೆ. ಇಂತಹ ಉತ್ತಮ ಕಾರ್ಯಗಳು ಹೆಚ್ಚೆಚ್ಚು ಆಗಬೇಕು. ಮುಂದಿನ ದಿನಗಳಲ್ಲಿ ಸೇವಾಸಂಸ್ಥೆಗೆ ಕೈಲಾದ ಸಹಕಾರ ನೀಡುವುದಾಗಿ ತಿಳಿಸುತ್ತಾ,ಈ ಸೇವಾಸಂಸ್ಥೆಯನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸತೀಶ್ ಆರಾಧ್ಯ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಗಳು ಕಡಿಮೆ ಆಗುತ್ತಿದ್ದು ಸರ್ವಧರ್ಮದವರು ಸೇರಿ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುತ್ತಾ, ಮಾನವೀಯತೆ ಮೆರೆಯುತ್ತಿರುವ ಹೃದಯವಂತರು ಸೇವಾಸಂಸ್ಥೆಯ ಕಾರ್ಯವನ್ನು ಪ್ರಶಂಶಿಸಿದರು. ಪತ್ರಕರ್ತರು ಬಸವರಾಜು, ಚಾ.ಶಿವಕುಮಾರ್, ಅಧ್ಯಕ್ಷ ಡಾ.ಜವರನಾಯಕ ಆಗತ್ತೂರು ರವರು ಮಾತಾನಾಡಿದರು. ಇದೇ ಸಂಧರ್ಭದಲ್ಲಿ ಸೇವಾಸಂಸ್ಥೆಯ ವತಿಯಿಂದ ಶಾಸಕರಾದ ಅನಿಲ್ ಚಿಕ್ಕಮಾದು, ಪತ್ರಕರ್ತರ ಸಂಘದ…