Author: admin

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಪಟ್ಟಣದಲ್ಲಿ ಸಮಾಜ ಸೇವಕ ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾದ ಕೆ.ಎಂ.ಮುನಿಯಪ್ಪನವರು ಸ್ಪರ್ಧಿಸಲಿದ್ದು, ತಮ್ಮ ಅಭಿಮಾನಿ ಗೆಳೆಯರ ಬಳಗದ ಹೋಬಳಿ ಮಟ್ಟದ ಕಚೇರಿಯನ್ನು ಉದ್ಘಾಟನೆ ಮಾಡಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ನಿರ್ಗತಿಕರ, ಬಡವರ, ರೈತರ ಪಾಲಿಗೆ ಕಾಮಧೇನುವಾಗಿ ನಿಷ್ಕಲ್ಮಶವಾದ ಮನಸ್ಸಿನಿಂದ ಕೆಲಸ ಮಾಡುತ್ತಿರುವ ಬಿಜೆಪಿ ಪಕ್ಷದ ಮುಖಂಡ ಕೆ.ಎಂ.ಮುನಿಯಪ್ಪ, ಬಿಜೆಪಿ ಪಕ್ಷದ ಸಂಘಟನೆ ಮಾಡಲು ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ಮತ್ತು ಅಭಿಮಾನಿ ಗೆಳೆಯರ ಬಳಗದ ಕಚೇರಿ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಮಿನಿ ಸೇವಾ ಕೇಂದ್ರವನ್ನು ತೆರೆಯುವುದರ ಮೂಲಕ ಬಡವರಿಗೆ ರೈತರಿಗೆ, ನಿರಾಶ್ರಿತರಿಗೆ ಹತ್ತಿರವಾಗುತ್ತಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಕಚೇರಿ ಸ್ಥಾಪನೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಹಣಿ, ಎಮ್.ಆರ್., ಇ ಶ್ರಮ್ ಕಾರ್ಡ್, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನೀಡಿ ಜನರ…

Read More

ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಇಂದು ಮತ್ತೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಿಂದ ಪುನಾರಂಭಗೊಳ್ಳಲಿದ್ದು, ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಆರಂಭವಾದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಜ್ಜೆ ಹಾಕಲಿದ್ದಾರೆ. ಮಂಡ್ಯದ ಬೆಳ್ಳಾಳೆಯಿಂದ ಪಾದಯಾತ್ರೆ ಪ್ರಾರಂಭವಾಗಿದೆ. ರಾಹುಲ್ ಗಾಂಧಿ ಮತ್ತು ಜೊತೆ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಬಿನಿ ಬಳಿಯ ಆರೆಂಜ್‌ ಕೌಂಟಿ ರೆಸಾರ್ಟ್‌ನಿಂದ ವಾಟರ್‌ವುಡ್‌ ರೆಸಾರ್ಟ್​ಗೆ ಬೋಟ್‌ ಮೂಲಕ ಪ್ರಯಾಣ ಬೆಳೆಸಿ ಅಲ್ಲಿಂದ ಹೆಲಿಕಾಪ್ಟರ್‌ ನಲ್ಲಿ ಪ್ರಯಾಣಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ . ಯಾತ್ರೆ ಬೆಳಗ್ಗೆ 11 ಗಂಟೆಗೆ ಖಾರದ್ಯಾ ಕೆರೆ ತಲುಪಲಿದೆ. ಸಂಜೆ 4 ಗಂಟೆವರೆಗೆ ನಾಯಕರು ವಿಶ್ರಾಂತಿ ಪಡೆಯಲಿದ್ದು ಸಂಜೆ 4 ಗಂಟೆಗೆ ಭಾರತ್ ಜೋಡೋ ಯಾತ್ರೆ ಪುನಾರಂಭವಾಗುತ್ತೆ. ಸಂಜೆ 7ಕ್ಕೆ ಬ್ರಹ್ಮದೇವರ ಹಳ್ಳಿಗೆ ತಲುಪಿ ರಾತ್ರಿ ವಿಸ್ಡಮ್​ ಶಾಲೆಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ.…

Read More

ಬಾಗಲಕೋಟೆ: ಗಂಡು ಮೇಕೆ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ಪರಶುರಾಮ ಭಜಂತ್ರಿ ಎನ್ನುವವರಿಗೆ ಸೇರಿದ ಮೂರು ವರ್ಷದ ಗಂಡು ಮೇಕೆಯೊಂದು ನಿತ್ಯ ಹಾಲು ಕೊಡುತ್ತಿದೆ. ಪ್ರತಿನಿತ್ಯ ಒಂದು ಸಣ್ಣ ಬಟ್ಟಲಿನಷ್ಟು ಹಾಲನ್ನು ಕುರಿಗಾಹಿ ಪರಶುರಾಮ ಅವರು ಕರೆಯುತ್ತಿದ್ದಾರೆ. ಪರಶುರಾಮ ಅವರು ಗಂಡು ಮೇಕೆಯಿಂದ ಹಾಲು ಕರೆಯುತ್ತಿರುವ ದೃಶ್ಯ ವೈರಲ್​ ಆಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗದಗ: ನೈರುತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜೈ ಮಹಾರಾಷ್ಟ್ರ ಎಂದು ನಮೂದಾಗಿರುವಂತ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ವಿತರಿಸಿದ ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ನಡೆದಿದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇಂದು ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ವಿತರಿಸಿರುವಂತ ಟಿಕೆಟ್ ಗಳಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ಇದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿತರಿಸಿದಂತ ಈ ಟಿಕೆಟ್ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂಬುದಾಗಿ ನಮೂದಿಸಬೇಕಿದ್ದಂತ ಟಿಕೆಟ್ ಪೇಪರ್ ನಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ನಮೂದಿಸಿರೋ ರೋಲ್ ನ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಟಿಕೆಟ್ ವೈರಲ್ ಆಗುತ್ತಿದಂತೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಗದಗ ವಿಭಾಗದ ರೋಣಾ ಮತ್ತು ಗದ ಘಟಕದಲ್ಲಿ ಇಟಿಎಂ ಟಿಕೆಟ್ ಗಳು ಮಹಾರಾಷ್ಟ್ರ ಸಾರಿಗೆ…

Read More

ತಿಪಟೂರು: ವೀರಶೈವ ಲಿಂಗಾಯತ ನೌಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಕ್ಟೋಬರ್ 9ರಂದು  ತಿಪಟೂರು ಗುರುಕುಲಾನಂದ ಆಶ್ರಮದಲ್ಲಿ ಲಿಂಗಾಯಿತ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಲಿಂಗಾಯಿತ ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು ಎಂದು ವೀರಶೈವ ಲಿಂಗಾಯಿತ ನೌಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಸ್ವಾಮಿ ತಿಳಿಸಿದರು ಈ ಕಾರ್ಯಕ್ರಮಕ್ಕೆ ಸಿರಿಗೆರೆ ಬೃಹನ್ಮಠ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಶ್ರೀ ಇಮ್ಮಡಿ ಕರಿಬಸವ ದೇಶಿಯ ಕೇಂದ್ರ ಸ್ವಾಮೀಜಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು. ಮಾಜಿ ಶಾಸಕ ಕೆ. ಷಡಕ್ಷರಿ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವರು, ಕಾಂಗ್ರೆಸ್ ಮುಖಂಡ ಲೋಕೇಶ್ವರ್ ನಿವೃತ್ತ ನೌಕರರನ್ನು ಸನ್ಮಾನಿಸಲಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ನವೀನ್…

Read More

ಅರುಣಾಚಲ ಪ್ರದೇಶ : ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನವಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಅವಘಡದಲ್ಲಿ ಸಹ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ : ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮತ್ತು ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಪ್ರೌಢಶಾಲೆಗಳ ಒಟ್ಟಾರೆ 92677 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅನ್ನಪೂರ್ಣ ಪೌಷ್ಟಿಕ ಆರೋಗ್ಯ ಮಿಕ್ಸ್ ವಿತರಿಸುವ ಯೋಜನೆ ಕಾರ್ಯಕ್ರಮವನ್ನು ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಮತ್ತು ಜಪಾನಂದ ಸ್ವಾಮಿ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಜಪಾನಂದ ಸ್ವಾಮಿಜಿ ಮಾತನಾಡಿ, ನಾವು ತಿನ್ನುವ ಆಹಾರ ಎಷ್ಟು ಪೌಷ್ಟಿಕವಾಗಿದೆ ಅಥವಾ ನಮ್ಮ ಮಕ್ಕಳಿಗೆ ತಿನ್ನಲು ಕೊಡಿಸುತ್ತಿರುವ ತಿನಿಸು ಅವರ ಆರೋಗ್ಯಕ್ಕೆ ಪೂರಕವೇ ಎಂಬ ಬಗ್ಗೆ ಒಮ್ಮೆ ಕೂಡ ನಾವು ಯೋಚಿಸುವುದಿಲ್ಲ. ಇಂತಹ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ನಾವು ಸಾರಾಸಗಟಾಗಿ ನಿರ್ಲಕ್ಷಿಸಿದ್ದೇವೆ. ಅಪೌಷ್ಟಿಕತೆ ಮಕ್ಕಳ ಮೇಲೆ ತೀರಾ ಪ್ರಮಾಣ ಬೀರುತ್ತಿದೆ ಆದ್ದರಿಂದ ಮಕ್ಕಳ ಪೌಷ್ಟಿಕತೆಯ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಕಾಳಜಿವಹಿಸಿ…

Read More

ಮಧುಗಿರಿ: ಕಳೆದ ಹಲವಾರು ವರ್ಷಗಳಿಂದ ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ದೇಶಾದ್ಯಂತ ಇಂದು ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ, ರಾಜಕೀಯವಾಗಿ ಬೆಳೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ, ಸಂಘಟನಾ ಹಾಗೂ ದೇಶದ ಜನರ ಮೇಲೆ ಮೋದಿ ಅವರು ವಿಶ್ವಾಸ ಇಟ್ಕೊಂಡು ದೇಶದಲ್ಲಿ ಪರಿವರ್ತನೆ ಆಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ದಿಂದಯಲ್ ಜಿ ಕಂಡ ಅಂತ್ಯೋದಯ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು ಎಂದಾಗ ಜನರು ಸಂಪೂರ್ಣ ಬೆಂಬಲ ಸೂಚಿಸಿ ಅಧಿಕಾರ ಕೊಟ್ಟಿದ್ದಾರೆ. ಹಿಂದೆ ಅಟಲ್ಜಿ ಅವರು ದೇಶದ ಪ್ರಧಾನಿಯಾಗಿದ್ದಾಗ ಈ ದೇಶವನ್ನು ಮುನ್ನಡೆಸಿ ಸಾಲದಲ್ಲಿ ಮುಳುಗಿದ ದೇಶವನ್ನು ಸಾಲ ಮುಕ್ತವಾಗಿ ಮಾಡಿ ದೇಶದ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿಪಡಿಸಲು ಚಿಂತೆ ಮಾಡಿದರು. ಅದೇ ರೀತಿ ಮೋದಿಯವರು ಸಹ ದೇಶದ ಜನಸಾಮಾನ್ಯರ ನೆಮ್ಮದಿಗೆ, ಅಭಿವೃದ್ಧಿಗೆ ಸಹಕರಣ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ದೇಶಭಕ್ತರ ಆಧಾರದ ಮೇಲೆ ದೇಶ ಕಟ್ಟಲು ಮುಂದಾಗಿದ್ದು ಆದ್ದರಿಂದ ನಮ್ಮ ಪಕ್ಷವು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ,…

Read More

ನವದೆಹಲಿ, ಖಾಸಗಿ ಏಜೆನ್ಸಿಗಳ ಮೂಲಕ ಎಫ್‌ಎಂ ರೇಡಿಯೊ ಪ್ರಸಾರ ಸೇವೆಗಳ ವಿಸ್ತರಣೆಯ ನೀತಿ ಮಾರ್ಗಸೂಚಿಗಳಲ್ಲಿ ಒಳಗೊಂಡಿರುವ ಕೆಲವು ನಿಬಂಧನೆಗಳ ತಿದ್ದುಪಡಿಗಳನ್ನು ಸರ್ಕಾರ ಮಂಗಳವಾರ ಅನುಮೋದಿಸಿದೆ. ದೇಶದಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ಗೆ ದಾರಿ ಮಾಡಿಕೊಡುವ ಸಲುವಾಗಿ ತಿದ್ದುಪಡಿಗಳನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂರು ತಿದ್ದುಪಡಿಗಳು ಒಟ್ಟಾಗಿ ಖಾಸಗಿ ಎಫ್‌ಎಂ ರೇಡಿಯೊ ಉದ್ಯಮವು ಆರ್ಥಿಕತೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಹಾಯ ಮಾಡುತ್ತದೆ. ಎಫ್‌ಎಂ ರೇಡಿಯೊ ಮತ್ತು ಮನರಂಜನೆಯನ್ನು ದೇಶದ ಮೂರನೇ ಶ್ರೇಣಿ ನಗರಗಳಿಗೆ ಮತ್ತಷ್ಟು ವಿಸ್ತರಿಸಲು ದಾರಿ ಮಾಡಿಕೊಡುತ್ತದೆ ಎಂದು ಸರ್ಕಾರ ಹೇಳಿದೆ. ಮಾರ್ಗಸೂಚಿಗಳಲ್ಲಿನ ತಿದ್ದುಪಡಿಗಳು ಇಂತಿವೆ. 15 ವರ್ಷಗಳ ಪರವಾನಗಿ ಅವಧಿಯಲ್ಲಿ ಅದೇ ಮ್ಯಾನೇಜ್‌ಮೆಂಟ್‌ ಗ್ರೂಪ್‌ನೊಳಗೆ ಎಂಎಫ್ ರೇಡಿಯೊ ಅನುಮತಿಗಳ ಪುನರ್ ರಚನೆಗಾಗಿ 3 ವರ್ಷದ ವಿಂಡೋ ಅವಧಿಯನ್ನು ತೆಗೆದುಹಾಕುವುದು. ಚಾನಲ್ ಹಿಡುವಳಿಯಲ್ಲಿ ಶೇಕಡಾ 15ರಷ್ಟು ರಾಷ್ಟ್ರೀಯ ಮಿತಿಯನ್ನು ತೆಗೆದುಹಾಕುವುದು. ಎಫ್‌ಎಂ ರೇಡಿಯೊ ನೀತಿಯಲ್ಲಿ…

Read More

ಉತ್ತರ ಪ್ರದೇಶದ ಔರೈಯಾದಲ್ಲಿನ ದಿಬಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿ ಹೊಲವೊಂದರಲ್ಲಿ ಸೋಮವಾರ 17 ವರ್ಷದ ಬಾಲಕಿಯ ಬೆತ್ತಲೆ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಮನೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಬಾಲಕಿಯ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಬೆಳಗ್ಗೆ ಮಲ ವಿಸರ್ಜನೆಗೆಂದು ಹೊರ ಹೋಗಿದ್ದ ಆಕೆ ಎಷ್ಟೋ ಹೊತ್ತಾದರೂ ಮನೆಗೆ ಬಾರದೇ ಇದ್ದುದರಿಂದ ಆಕೆಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಘಟನೆ ಬಳಿಕ ಔರೈಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ ಪಿ) ಚಾರು ನಿಗಮ್ ಅವರು ವಿಧಿವಿಜ್ಞಾನ ತಜ್ಞರೊಂದಿಗೆ ಗ್ರಾಮಕ್ಕೆ ಆಗಮಿಸಿದ್ದಾರೆ ಮತ್ತು ಪ್ರಕರಣವನ್ನು ಭೇದಿಸಲು ವಿಶೇಷ ಕಾರ್ಯಾಚರಣೆ ಗುಂಪು ಸೇರಿದಂತೆ 10 ಪೊಲೀಸ್ ತಂಡಗಳನ್ನು ನಿಯೋಜಿಸಿದರು. ಪೊಲೀಸರು ಶವವನ್ನು ಹೊತ್ತೊಯ್ಯುವ ಮತ್ತು ಬಾಲಕಿ ಹಿಂದೆ ಕುಟುಂಬಸ್ಥರು ಹೋಗುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ಔರೈಯಾದಲ್ಲಿ 17 ವರ್ಷದ ಬಾಲಕಿಯ ಬೆತ್ತಲೆ…

Read More