Subscribe to Updates
Get the latest creative news from FooBar about art, design and business.
- ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ
- ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣ ಮಾಡಲು ಸಿಎಂಗೆ ಮನವಿ: ಶಾಸಕ ಅನಿಲ್ ಚಿಕ್ಕಮಾದು
- ಚಿಪ್ಸ್ ಖರೀದಿಸಲು ಬಂದಿದ್ದ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ಕಿರುಕುಳ!
- ಭೂಸ್ವಾಧೀನ ವಿರುದ್ಧದ ಪ್ರತಿಭಟನೆಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
- ಪತಿಯಿಂದಲೇ ಮಹಿಳಾ ಕೌನ್ಸಿಲರ್ ಬರ್ಬರ ಹತ್ಯೆ!
- ತಿಪಟೂರು: ಆರ್ಥಿಕ ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ
- ಜುಲೈ 6ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
- ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
Author: admin
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರದಲ್ಲಿ ಇಂದು 9ನೇ ವರ್ಷದ ಹನುಮ ಜಯಂತ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವಕರು ಮತ್ತು ಹಿರಿಯರು ಎಲ್ಲರೂ ಸೇರಿ ಕಳೆದ ಒಂದು ವಾರದಿಂದ ಹನುಮ ಜಯಂತಿ ಆಚರಣೆಗೆಂದು ಇಡೀ ಊರನ್ನು ಕೇಸರಿ ಬಂಟಿಂಗ್ಸ್ ಮತ್ತು ಬಾವುಟಗಳನ್ನು ಕಟ್ಟುವುದರ ಮೂಲಕ ಕೇಸರಿಮಯಗೊಳಿಸಿದ್ದಾರೆ. ಇಷ್ಟಲ್ಲದೇ ಹನುಮ ಜಯಂತಿಯಾದ ಇಂದು ಸರ್ವ ಧರ್ಮದವರಿಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿ ಸಾವಿರಾರು ಜನರಿಗೆ ಊಟ ಉಣಬಡಿಸಿದರು. ಈ ಕಾರ್ಯಕ್ರಮವು ತಾಲ್ಲೂಕಿನಲ್ಲಿ ಬಹಳ ಮೆಚ್ಚುಗೆ ಗಳಿಸಿತು. ತಾಲ್ಲೂಕಿನ ಶಾಸಕರಾದ ಮಸಾಲ ಜಯರಾಮ್ ರವರು ಹನುಮ ದೇವಸ್ಥಾನಕ್ಕೆ ಆಗಮಿಸಿ ಹನುಮನ ಕೃಪೆಗೆ ಪಾತ್ರರಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಜಿಲ್ಲೆ ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆ ಪೊಲೀಸ್ ಠಾಣೆಯ ಎದುರಿನಲ್ಲಿರುವ A. V. S. S, ಕಛೇರಿಯಲ್ಲಿ ತುರುವೇಕೆರೆ ತಾಲ್ಲೂಕಿನ ಛಲವಾದಿ ಮಹಾ ಸಭಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ 204 ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು. ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಡೊಂಕಿಹಳ್ಳಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕುಣಿಕೆನಹಳ್ಳಿ ಜಗದೀಶ್ ಮಾತನಾಡಿ, ಈ ಒಂದು ಹೋರಾಟದಲ್ಲಿ ಮಡಿದ ಮಹರ್ ಸೈನಿಕರ ಸ್ವಾಭಿಮಾನ ಮತ್ತು ಪೇಶ್ವೆಯವರ ದುರಾಡಳಿತ ಹಾಗೂ ಅಸ್ಪೃಶ್ಯತೆ, ಸಾಮಾಜಿಕ, ಹಕ್ಕಿಗಾಗಿ ಮಡಿದಂತಹ ದಿನ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಡಗಿಹಳ್ಳಿ ಹನುಮಂತಯ್ಯ,ಬೀಚನಹಳ್ಳಿ ಮಹಾದೇವಯ್ಯ, ಪುರ ರಾಮಚಂದ್ರಯ್ಯ, ಶಂಕರಪ್ಪ, ನರಸಿಂಹ, ಕಾಚಿಹಳ್ಳಿ ಪುಟ್ಟರಾಜು, ಪ್ರಸನ್ನಕುಮಾರ್, ಶಿವಲಿಂಗಯ್ಯ ಮುಂತಾದವರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಮಾಯಸಂದ್ರದ ಪ್ರತಿಷ್ಠಿತ ಕಾನ್ವೆಂಟ್’ಗಳಲ್ಲಿ ಒಂದಾಗಿರುವ ಸೌರಭ ಕಾನ್ವೆಂಟ್ , 2022ರ ಹೊಸ ವರ್ಷವನ್ನು ಪುಟಾಣಿ ಮಕ್ಕಳ ಕೈನಲ್ಲಿ ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಲಾಯಿತು. ಇತ್ತೀಚೆಗಷ್ಟೇ ಹೊಸ ಪೈಂಟಿಂಗ್’ನಿಂದ ನವೀಕರಣಗೊಂಡಿದ್ದ ಕಾನ್ವೆಂಟ್ ಬಗ್ಗೆ ಮಾತನಾಡಿದ ಶಾಲಾ ಕಾರ್ಯದರ್ಶಿಗಳಾದ ಶ್ರೀಮತಿ ಕಲ್ಪನಾ ಮುನಿರಾಜು’ರವರು ” ಹೊಸವರ್ಷ ಎಲ್ಲರಿಗೂ ಹೊಸ ಹರ್ಷ ತರಲಿ, ಮಕ್ಕಳಿ ಆ ದೇವರು ಉತ್ತಮ ಆರೋಗ್ಯ ಮತ್ತು ವಿದ್ಯೆ ನೀಡಲಿ ” ಎಂದು ಹಾರೈಸಿದರು. ಕಾರ್ಯಕ್ರಮದ ನಂತರ ಸಿಹಿಹಂಚಿಕೆ ಮಾಡಲಾಯಿತು ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುನಿರಾಜು.ಆರ್,ಸಹಶಿಕ್ಷಕರಾದ ಗಿರೀಶ್ ಬಿ.ಜಿ.ಲೀಲಾವತಿ ಡಿ.ಕೆ., ನುಸ್ರತ್ ಝಬೀನ್ ಮತ್ತು ಗುರುಪ್ರಸಾದ್’ರವರು ಹಾಜರಿದ್ದರು. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಎಲ್ಲಾ ಪದಾಧಿಕಾರಗಳಿಗೆ ಯುವಮುಖಂಡ ಅಂತೋಣಿ ಜೆ . ಹೊಸ ವರ್ಷದ ಶುಭಾಶಯಗಳು ತಿಳಿಸಿದ್ದಾರೆ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು , ಸಚಿವರು ಹಾಗೂ ಹಾಲಿ ಡಿ. ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಡಿ.ಸುಧಾಕರ್ ರವರ ಪಕ್ಷದ ಪರವಾಗಿ ವಾರ್ಡ್ ನಂ 28ರ ಬೂತ್ ಕಮಿಟಿಯ ಪದಾಧಿಕಾರಿಗಳಿಗೆ ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ನೀಡುವ ಮೂಲಕ ಅಂತೋಣಿ ಜೆ. ರವರು ಹೊಸವರ್ಷದ ಶುಭಾಶಯಗಳನ್ನು ತಿಳಿಸಿದರು . ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 9ರಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಇಂದು ವರ್ಷದ ಮೊದಲನೆಯ ದಿನ ಪ್ರಯುಕ್ತ ವಿಶೇಷ ಪೂಜೆ, ದೇವಿಗೆ ಹೂವಿನ ಅಲಂಕಾರ ಹಾಗೂ ಭಕ್ತರಿಂದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿಸಲ್ಪಟ್ಟಿತ್ತು . ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರ ಕುಟುಂಬಸ್ಥರು , ಹಾಗೂ ಹೆಚ್ವಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಿ ದುರ್ಗಾ ಪರಮೇಶ್ವರಿಯ ಕೃಪೆಗೆ ಪಾತ್ರರಾದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ನಗರಸಭೆ ಕಾರ್ಯಾಲಯದಲ್ಲಿ 2022 ರ ಹೊಸ ವರ್ಷದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶಂಶುನ್ನಿಸಾ ರವರು ಕೇಕ್ ಕಟ್ ಮಾಡುವುದರ ಮೂಲಕ ನಗರಸಭೆಯ ಸಿಬ್ಬಂದಿ ವರ್ಗದವರಿಗೆ ಹೊಸ ವರ್ಷದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ , ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಪೌರಾಯುಕ್ತರಾದ ಉಮೇಶ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿತ್ರಜಿತ್ ಯಾದವ್ ಹಾಗೂ ನಗರಸಭಾ ಸದಸ್ಯರುಗಳಾದ ಸಣ್ಣಪ್ಪ ( ಸೊಸೈಟಿ ) ಹಾಗೂ ನಗರಸಭೆ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸಿರಾ: ಮಿನಿ ವಿಧಾನಸೌಧದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ನಗರ ಸಭಾ ಆಯುಕ್ತ ಶ್ರೀನಿವಾಸ್, E O ಅನಂತರಾಜು, BEO ಶಂಕರ್, ಲಕ್ಷೀಶ್, R I ಮಂಜುನಾಥ್, ವಿಶ್ವ ಕರ್ಮ ಸಮಾಜದ ಅಧ್ಯಕ್ಷರು ನಟರಾಜ್ ಆಚಾರು, ಕೃಷ್ಣ ಕುಮಾರ್, ನರಸಿಂಹಚಾರು, ಗಿರೀಶ್ ಚಾರು, ಮಂಜುನಾಥ್, ಸುಶೀಲಮ್ಮ,ಮಲ್ಲಚಾರು,ಮುಂತಾದ ಸಮಾಜದ ಮುಖಂಡರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
1818 ಜನವರಿ 1 ರಂದು ನಡೆದ ಭೀಮ ಕೊರೆಗಾಂವ್ ಯುದ್ಧದ ಗೆಲುವಿಗೆ 204 ವರ್ಷ ತುಂಬಿದೆ. ಇದನ್ನು ಮೂರನೇ ಆಂಗ್ಲೋ ಮರಾಠ ಯುದ್ಧ ಎಂದೂ ಕರೆಯುತ್ತಾರೆ. ಈ ಯುದ್ಧ ಪೇಶ್ವೆ ಎರಡನೇ ಬಾಜಿರಾವ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವಿನ ಯುದ್ಧವಾಗಿರುತ್ತದೆ. 28,000 ಸೈನಿಕರುಳ್ಳ ಬಲಿಷ್ಠ ಮರಾಠ ಸೇನೆಯನ್ನು 500ರಿಂದ 800 ಸೈನಿಕರುಳ್ಳ ಈಸ್ಟ್ ಇಂಡಿಯಾ ಕಂಪನಿ ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಬ್ರಿಟೀಷರ ಈ ಸೈನ್ಯದಲ್ಲಿ ಹೆಚ್ಚಿನವರು ಮಹರ್ ಜನಾಂಗದವರಾಗಿಯೇ ಇದ್ದರು. ಅಂದಿನ ಕಾಲದಲ್ಲಿ ಮಹರ್ ಜನಾಂಗದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಪೇಶ್ವೆಗಳ ಸೇನೆಯಲ್ಲಿ ಮೇಲ್ಜಾತಿಯವರೇ ತುಂಬಿದ್ದರು. ಆಗ ನಡೆಯುತ್ತಿದ್ದ ಮೇಲು ಕೀಳಿನ ಮನೋಭಾವದಿಂದ ನೊಂದಿದ್ದ ಮಹರ್ ಜನರು ಈ ಗೆಲುವನ್ನು ಮೇಲ್ಜಾತಿಯವರ ಮೇಲಿನ ಕೆಳಜಾತಿಯವರ ಗೆಲುವೆಂದೆ ಪರಿಗಣಿಸಿದರು. ಈ ಯುದ್ಧದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯದ 50 ಜನ ಪ್ರಾಣತೆತ್ತರು. ಅದರಲ್ಲಿ 22 ಜನ ಮಹರ್ ಆಗಿದ್ದರು, 16 ಜನ ಮರಾಠಿಗರು, 8 ಜನ ರಜಪೂತರು, ಇಬ್ಬರು ಮುಸ್ಲಲ್ಮಾನರು ಮತ್ತು…
1968 ರಿಂದ 2020ರವರೆಗೆ ಕಾರ್ಯನಿರತ ಪತ್ರಕರ್ತನಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ವಿವಿಧ ಸಂಘಟನೆಗಳ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಐ ಎಫ್ ಡಬ್ಲೂ ಜೆ ಕಾರ್ಯಕಾರಿ ಸಮಿತಿ ಸದಸ್ಯನಾಗಿ, ಕೆ ಯು ಡಬ್ಲ್ಯೂ ಜೆ ಯಿಂದ ಮ.ರಾಮಮೂರ್ತಿಪ್ರಶಸ್ತಿ ಹಾಗೂ ಎಚ್.ಕೆ. ವೀರಣ್ಣ ಗೌಡ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರನಾಗಿರುವ ನಾನು ಕವಿ- ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಪತ್ರಕರ್ತರ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಬರೆದಿರುವ ಅಭಿಪ್ರಾಯವನ್ನು ಅನುಮೋದಿಸುತ್ತೇನೆ. ಪತ್ರಕರ್ತರಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ಪ್ರತಿಷ್ಠೆ ಮೆರಯುವ ಸಲುವಾಗಿ ಖೊಟ್ಟಿ ಡಾಕ್ಟರೇಟ್ ನೀಡಿ ಹಣ ಮಾಡುವ ದಂಧೆಗೆ ಇಳಿದಿರುವ ಖೊಟ್ಟಿ ವಿಶ್ವವಿದ್ಯಾ ಲಯಗಳಿಂದ ಹಣತೆತ್ತು ಖೊಟ್ಟಿ ಡಾಕ್ಟರೇಟ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಅಕ್ರಮ ವ್ಯವಹಾರವನ್ನು ಬಯಲು ಮಾಡಿ ಆರೋಗ್ಯಕರ ಸಮಾಜವನ್ನು ಕಟ್ಟುವಾಗ ಹೊಣೆಗಾರಿಕೆ ಹೊಂದಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೪…
ಹೊಸ ಕನಸು… ಹೊಸ ಹುರುಪು… ಹೊಸ ಭರವಸೆ… ಹೊಸ ಗುರಿ… ಹೊಸ ಸಾಹಸ… ಹೀಗೆ ಹೊಸತನವನ್ನು ಹೊತ್ತು ತರುವ ಹೊಸ ವರ್ಷ ಮತ್ತೆ ಬಂದಿದೆ. ಇದು 2021ಕ್ಕೆ ವಿದಾಯ ಹೇಳಿ 2022ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ. ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಮಾತ್ರ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಸಿಂಹಾವಲೋಕನ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ…