ಸರಗೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಶುಕ್ರವಾರ ರಾತ್ರಿ ಕಬ್ಬೇಪುರ ಹಾಡಿಯ ಆಶ್ರಾಮ ಶಾಲೆಯಲ್ಲಿ ವ್ಯಾಸ್ತವ್ಯ ಹೂಡಿದರು.
ಬಿ ಮಟಕೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ನಂತರ ಶಾಸಕರ ಜೊತೆಗೂಡಿ ಮೊಳೆಯೂರು ಗ್ರಾಮದ ಶಾಲೆಯಲ್ಲಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಮತ್ತು ಶಾಸಕರು ಅನೀಲ್ ಚಿಕ್ಕಮಾದು ಗಣ್ಯರು ಜೊತೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷ ರು ರೂಪಾಬಾಯಿ ಉಪಾಧ್ಯಕ್ಷ ದೇವದಾಸ್ ಬೆಟ್ಟಸ್ವಾಮಿ ಸದಸ್ಯರು ಸಾಥ್ ನೀಡಿದರು.
ಆ ಗ್ರಾಮದಲ್ಲಿ ಮಳೆಯಿಂದ ಮನೆಗಳು ಕುಸಿದು ಬಿದ್ದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ರಸ್ತೆಗಳು ಅಳಗುಂಡಿ ಇರುವುದನ್ನು ಗಮನಿಸಿ ಪಂಚಾಯಿತಿ ಅಧಿಕಾರಿಗಳಿಗೆ ನರೇಗಾಯಡಿ ಕಾಮಗಾರಿ ಮಾಡಲು ಸೂಚನೆ ನೀಡಿದರು.
ಸರಗೂರು ತಾಲ್ಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಳೆಯೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಹಲವು ಅರ್ಜಿಗಳನ್ನು ಸ್ವೀಕರಿಸಿದರು. ಮತ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
ಇದೇ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ಲಂಕೆ ಲಕ್ಷ್ಮಣ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮನೆಯಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರಲ್ಲದೇ ಈ ಭಾಗದ ಜನರಿಗೆ ಸ್ಮಶಾನ ಕೂಡ ಇಲ್ಲವಾಗಿದೆ ಎಂಬ ಬಗ್ಗೆ ಗಮನ ಸೆಳೆದರು.
ಭೀಮರಾಜು ಮಟಕೆರಿ ಮುಖಂಡ ಮಾತನಾಡಿ, ಈ ಭಾಗದಲ್ಲಿ ಕಾಡಂಚಿನ ಪ್ರದೇಶವಾಗಿದ್ದು, ಕಾಡು ಪ್ರಾಣಿಗಳಿಂದ ನಾನಾ ಸಮಸ್ಯೆಗಳು ಬರುತ್ತಿವೆ. ನಾವು ಬೆಳೆಗಳು ನಾಶವಾಗುತ್ತಿವೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಇಲ್ಲದೇ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ದೇವದಾಸ್ ಮಾತನಾಡಿ, ರಸ್ತೆಗಳು ಗುಂಡಿಗಳಿದ್ದು, ಸರಗೂರಿಗೆ ಹೋಗುವ ರಸ್ತೆ ಕಬಿನಿ ಬಲದಂಡೆ ಸೇತುವೆ ಬಳಿ ಗುಂಡಿಗಳಾಗಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಪರಿಸ್ಥಿತಿ ಇದೆ. ಕಂದಲಿಕ್ಕೆ ಹೋಬಳಿಯ ಬಿ ಮಟಕೇರಿಯಲ್ಲಿ ನಾಡಕಚೇರಿಗೆ ಸರಿಯಾದ ಕಚೇರಿಇಲ್ಲ, ಮಳೆ ಬಂದಾಗ ಸೋರುತ್ತದೆ ಅಧಿಕಾರಿಗಳು ಬಂದು ಕುಳಿತುಕೊಳ್ಳೋಕೆ ಜಾಗನೇ ಇಲ್ಲ. ಒಬ್ಬರು ಮಾತ್ರ ಕುಳಿತುಕೊಳ್ಳಬಹುದಷ್ಟೆ. ತಕ್ಷಣವೇ ನೂತನ ಕಚೇರಿ ನಿರ್ಮಿಸುವಂತೆ ಮನವಿ ಮಾಡಿದರು.
ಸಭೆ ಕುರಿತು ಜಿಲ್ಲೆ ಕವಿ ಜಿಲ್ಲಾಧಿಕಾರಿಗಳಾದ ಡಾ ಬಗದಿ ಗೌತಮ್ ಅವರು ಮಾತನಾಡಿ, ಮಳೆಯಿಂದ ಮನೆಗಳು ಕುಸಿದಿರುವುದು ಮತ್ತು ರಸ್ತೆಗಳು ಇದರ ಬಗ್ಗೆ ಹೆಚ್ಚಿನ ಸಮಸ್ಯೆಗಳು ಕಂಡು ಬರುತ್ತಿವೆ. ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳು, ರಾಜ ನಿರೀಕ್ಷಕರು ಹಳ್ಳಿಗಳಿಗೆ ಭೇಟಿ ನೀಡದೆ ನಿರ್ಲಕ್ಷ ಮಾಡಬಾರದು ಎಂದು ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಬಸ್ ಸಮಸ್ಯೆ ನಿವಾರಿಸಲು ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಮಾಡಿ ಎಂದು ಡಿಪೋ ಮ್ಯಾನೇಜರ್ ತಿಳಿಸಿದರು.
ಈ ಭಾಗದಲ್ಲಿ ಕಾಡಾನೆಗಳು ಹಾವಳಿ ದೊಡ್ಡ ಪ್ರಮಾಣದಲ್ಲಿ ತೊಂದರೆ ಇದೆ. ಅದನ್ನು ನಾನು ಗಮನಿಸಿದ್ದಿನಿ. ನಾಗರಹೊಳೆ ಉದ್ಯಾನವನದಲ್ಲಿ ತಮಿಳುನಾಡಿನಲ್ಲಿ ಮಾಡಿದ್ದಾರೆ. ಅಂದೇ ರೀತಿಯಲ್ಲಿ ಮಾಡಲು ಆನೆಗಳು ತಡೆಯಲು ತಯಾರಿ ಮಾಡಿದ್ದು, ಅದನ್ನು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಿದ್ದೇವೆ. ಸುಮಾರು ರಸ್ತೆಗಳು ಹದಗೆಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಒಂದೇ ಸಲ ಎಲ್ಲಾ ರಸ್ತೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಗ್ರಾ.ಪಂ.ಗೆ ಕಾಲ ಅವಕಾಶ ನೀಡಬೇಕು. ನರೇಗಾ ಅಡಿಯಲ್ಲಿ ಗ್ರಾಮದ ಓಣಿಗಳನ್ನು ಹಂತ ಹಂತವಾಗಿ ಮಾಡಬೇಕು. ಕಾರ್ಯನಿರ್ವಾಹಕ ಮುಖ್ಯಾಧಿಕಾರಿ ಗಮನಕ್ಕೆ ತಿಳಿಸುತ್ತಾನೆ ಎಂದರು. ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪಿಂಚಣಿ ಮೊದಲಾದ ಸಮಸ್ಯೆಗಳನ್ನು ಪರಿಹರಿಸುವುದಾಗಿ ಇದೇ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz