Author: admin

ಸರಗೂರು :  ಪಟ್ಟಣ ಪಂಚಾಯಿತಿಗೆ ಬರಬೇಕಾದ ಕಂದಾಯಗಳನ್ನು ನಿಗತ ಸಮಯಕ್ಕೆ ಸರಿಯಾಗಿ ವಸೂಲಿ ಮಾಡಿ ಇದರಿಂದ ಬಂದ ಹಣದಿಂದ ಪಟ್ಟಣದ ಅಭಿವೃದ್ಧಿಗಳಿಗೆ ಬಳಸಿಕೊಳ್ಳಬಹುದು ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು. ಸರಗೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸರಗೂರು ಪಟ್ಟಣದ ಅಭಿವೃದ್ಧಿ ಸಂಬಂಧ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ಪಟ್ಟಣ ವ್ಯಾಪ್ತಿಯಲ್ಲಿ ಈ ಬಾರಿ ಸಂಗ್ರಹವಾದ ಕಂದಾಯ, ಏನೆಲ್ಲಾ ಖರ್ಚು ವೆಚ್ಚಗಳಾಗಿವೆ. ತಿಂಗಳಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಖರ್ಚಾಗುವ ಹಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಸೇರಿದಂತೆ ಸಭೆಯ ಅಂಜೆಡಾಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಮುಖ್ಯಾಧಿಕಾರಿ ಬಿ.ಜಿ.ಸತೀಶ್ ರವರನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಕಂದಾಯ ವಸೂಲಿಯನ್ನು ಮಾಡಬೇಕು ಇದಕ್ಕಾಗಿ ಒಂದು ಕಂದಾಯ ಅದಾಲತ್ ಕಾರ್ಯಕ್ರಮ ಮಾಡಿ ಇದರಿಂದ ಪಂಚಾಯಿತಿಗೂ ಹೆಚ್ಚಿನ ಆದಾಯ ಬಂದು ಪಟ್ಟಣದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು ಎಂದರು. ಸರ್ಕಾರದಿಂದ ಈಗಾಗಲೇ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುತ್ತಿದ್ದಾರೆರೆ. ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಎಷ್ಟು…

Read More

ತುಮಕೂರು: ತುಮಕೂರು ನಗರದ ಶಿರಾಗೇಟ್ ಕನಕ ವೃತ್ತದಲ್ಲಿ ಬಳಿ ಇರುವ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ವ್ಯಕ್ತಿ ನೇಣುಬಿಗಿದುಕೊಂಡಿರುವ ಘಟನೆ ನಡೆದಿದ್ದು ಪಾರ್ಕಿಗೆ ಸಹಜವಾಗಿ ಜನರು ಆಗಮಿಸಿದಾಗ ನೇಣುಬಿಗಿದುಕೊಂಡಿರುವ ಪ್ರಕರಣ ಬಯಲಿಗೆ ಬಂದಿದೆ ಮೃತಪಟ್ಟ ವ್ಯಕ್ತಿ ಮಧ್ಯವಯಸ್ಕನಾಗಿದ್ದು ಮೃತಪಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ವರದಿ: ರಾಜೇಶ್ ರಂಗನಾಥ್ ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ಜನಸ್ಪಂದನ ಟ್ರಸ್ಟ್ ನ ನೂತನ ಕಚೇರಿಯಲ್ಲಿ ಡಾ. ಸಿಬಿ ಶಶಿಧರ್ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ತಾಲೂಕಿನ ಹೆಸರಾಂತ ಐತಿಹಾಸಿಕ ಸ್ಥಳಗಳು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಾರುವ ತಿಪಟೂರು ತಾಲೂಕಿನ ಐತಿಹಾಸಿಕ ಸ್ಥಳಗಳ ವಿನೂತನವಾದ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇನ್ನು ಹಲವಾರು ಪ್ರಮುಖ ಕ್ಷೇತ್ರಗಳಾದ ಯಕ್ಷಗಾನ ಸೋಮನ ಕುಣಿತ ಸಾಂಸ್ಕೃತಿಕ ಕಲೆಗಳನ್ನು  ಸಾರುವ ಹಾಗೂ ಇವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಜನಸ್ಪಂದನ ಟ್ರಸ್ಟ್ ಸದಸ್ಯರುಗಳು ಇದ್ದೇವೆ ಎಂದರು. ಒಂದು ವಿನೂತನ ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ ಕೆಲಸ ನಿರ್ವಹಿಸಿದ ಶ್ರೀಕಾಂತ್ ಕೆಳ ಹಟ್ಟಿ ಮಮದ್ ಗೌಸ್ ಇವರುಗಳು 12 ತಿಂಗಳ ವರ್ಷದ ಕ್ಯಾಲೆಂಡರ್ ನ್ನು ಸಿದ್ಧಪಡಿಸಿದ್ದು,  ತಿಪಟೂರು ತಾಲೂಕಿನ ಐತಿಹಾಸಿಕ ಒಂದೊಂದು ತಿಂಗಳಿಗೆ ಒಂದೊಂದು ಸ್ಥಳದ ಮಾಹಿತಿಯನ್ನು ನೀಡಿ ಕಾರ್ಯನಿರ್ವಹಿಸಿ 2022ರ ಬಹುರೂಪಿಯಾಗಿ ಕ್ಯಾಲೆಂಡರ್ ಮೂಡಿಬಂದಿದೆ ಎಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು. ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಕುಂದೂರು ತಿಮ್ಮಯ್ಯ, ಮನೋಹರ್…

Read More

ತುರುವೇಕೆರೆ: ತಾಲ್ಲೂಕಿನ ಇತಿಹಾಸದಲ್ಲಿಯೇ ಚೊಚ್ಚಲ ಬಾರಿಗೆ ತಿಪ್ಪೇಸ್ವಾಮಿ’ಯವರ ಮಾಲೀಕತ್ವದ ಕೇಕ್ ಪಾಯಿಂಟ್ ವತಿಯಿಂದ ಹೊಸವರ್ಷದ ಪ್ರಯುಕ್ತ ” ಕೇಕ್ ಷೋ ” ಅನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಮಾತನಾಡಿದ ಆಯೋಜಕರು ಮತ್ತು ಕೇಕ್ ಪಾಯಿಂಟ್ ಮಾಲೀಕರಾದ ತಿಪ್ಪೇಸ್ವಾಮಿ’ಯವರು  ” ಇದು ನಮ್ಮ ಕೇಕ್ ಪಾಯಿಂಟ್ ಬಳಗದ ಬಹುದಿನದ ಕನಸು ಮತ್ತು ಪ್ರತಿ ಹೊಸವರ್ಷದ ಸಂಭ್ರಮಾಚರಣೆಯನ್ನು ಯಾವುದೇ ನಗರಗಳಿಗೆ ಕಮ್ಮಿ ಇಲ್ಲದಂತೆ ನಮ್ಮ ತಾಲ್ಲೂಕಿನಲ್ಲೂ ಆಚರಿಸಬೇಕೆಂಬುದೇ ನಮ್ಮ ಬಯಕೆ ” ಎಂದು ತಿಳಿಸಿದರು. ಇಂದಿನಿಂದ(ಡಿ.30) ಆರಂಭವಾದ ಈ ಪ್ರದರ್ಶನ ಭಾನುವಾರದವರೆಗೂ ಇರಲಿದೆ. ಕೇಕ್ ಪ್ರಿಯರು ಮತ್ತು ಮಕ್ಕಳು ಇಲ್ಲಿಗೆ ಬೇಟಿ ಕೊಟ್ಟು ಉಚಿತವಾಗಿಯೇ ವೀಕ್ಷಿಸಬಹುದಾಗಿದೆ. ಇಲ್ಲಿ ಬಗೆ ಬಗೆಯ ಕೇಕ್’ಗಳಿವೆ. ಅದರಲ್ಲಿ ಬಹು ಆಕರ್ಷಕವಾಗಿ ಕಾಣಿಸುತ್ತಿರುವ ಐಫಿಲ್ ಟವರ್ ಕೇಕ್ ಈ ಪ್ರದರ್ಶನದ ಕೇಂದ್ರ ಬಿಂದುವಾಗಿದೆ. ಇದಲ್ಲದೇ ಬಾರ್ಬಿ ಗರ್ಲ್ ,  ಮಿಕ್ಕಿ ಮೌಸ್ , ಗೀಟರ್ , ಕಲ್ಲಂಗಡಿ ಮತ್ತು ಇನ್ನಿತರ ವೈವಿಧ್ಯಮಯ ಕೇಕ್’ಗಳು ಜನರ ಗಮನ ಸೆಳೆಯುತ್ತಿದೆ. ಇಲ್ಲಿ ಕೇವಲ…

Read More

ಬೆಂಗಳೂರು: ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ನಾಳೆ ಕರೆ ಕೊಟ್ಟಿದ್ದ ‘ಕರ್ನಾಟಕ ಬಂದ್’ ನ್ನ ವಾಟಾಳ್ ನಾಗರಾಜ್ ಅವರು ಹಿಂಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಕನ್ನಡ ಧ್ವಜ ಸುಟ್ಟು ಹಾಕಿರುವುದನ್ನ ಖಂಡಿಸಿ ಡಿಸೆಂಬರ್ 31(ನಾಳೆ) ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿದ್ದವು. ಆದರೆ, ಕರ್ನಾಟಕ ಬಂದ್ ಗೆ ಹಲವು ಕನ್ನಡ ಪರ ಸಂಘಟನೆಗಳು ಬಂದ್ ಹಿಂಪಡೆದ ಹಿನ್ನೆಲೆಯಲ್ಲಿ  ಇಂದು ಸಂಜೆ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಹಾಗೂ ಉಮೇಶ್ ಬಣಕಾರ್ ಸೇರಿ ಹಲವು ಮುಖಂಡರು ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಭೇಟಿ ಬಳಿಕ ನಾಳೆ ಕರ್ನಾಟಕ ಬಂದ್ ಮಾಡುವ ನಿರ್ಧಾರವನ್ನ ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ನಗರಸಭೆ ಚುನಾವಣೆಯಲ್ಲಿ ಸಿರಾ ಶಾಸಕರಾದ ಸಿ.ಎಂ. ರಾಜೇಶ್ ಗೌಡ ರವರ ನೇತೃತ್ವದ ಬಿಜೆಪಿಯ ನಾಲ್ಕು ಜನ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಮೊದಲನೇ ವಾರ್ಡಿನ ರಂಗರಾಜು , 27ನೇ ವಾರ್ಡಿನ ಅಂಬುಜಾಕ್ಷಿ,  28ನೇ ವಾರ್ಡಿನ ಉಮಾ ವಿಜಯರಾಜ್, 30 ನೇ ವಾರ್ಡಿನ ಸ್ವಾತಿ ಮಂಜೇಶ್ ಜಯಭೇರಿ ಬಾರಿಸಿದ್ದಾರೆ ವರದಿ : ಸಿದ್ದರಾಜು ಟಿ.ಎಚ್. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಏಳು ಜನ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಮೂರನೇ ವಾರ್ಡಿನ ಮಂದಾರ ಉಗ್ರೇಶ್,  ನಾಲ್ಕನೇ ವಾರ್ಡಿನ ತ್ರಿವೇಣಿ,  ಐದನೇ ವಾರ್ಡಿನ ಅಂಜಿನಪ್ಪ, ಒಂಬತ್ತನೇ ವಾರ್ಡಿನ ರವಿಶಂಕರ್, ಹದಿಮೂರನೇ ವಾರ್ಡಿನ ಮಹಮದ್ ಸಫೀರ್,  ಇಪ್ಪತ್ತೈದನೇ ವಾರ್ಡಿನ ರಾಮಣ್ಣ  29ನೇ ವಾರ್ಡಿನ ವಿಜಯಲಕ್ಷ್ಮೀ  ಜಯಭೇರಿ ಬಾರಿಸಿದ್ದಾರೆ ವರದಿ : ಸಿದ್ದರಾಜು ಟಿ.ಎಚ್. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ನಗರಸಭೆಯ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಅವರ ನೇತೃತ್ವದ ಕಾಂಗ್ರೆಸ್ ಪಕ್ಷದ 11 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ . 31 ನೇ ವಾರ್ಡಿನ ಪೂಜಾ, 26 ನೇ ವಾರ್ಡಿನ ಲಕ್ಷ್ಮಿಕಾಂತ್, 7ನೇ ವಾರ್ಡಿನ ಶಿವಶಂಕರ್, 16ನೇ ವಾರ್ಡಿನ ಸೈಯದ್ ಮರ್ಜಿಯ ಪೀರ್ ದೋಸ್, 17 ನೇ ವಾರ್ಡಿನ ಕಿಶನ್ ಮಹಮದ್, 18 ನೇ ವಾರ್ಡಿನ ಬುರ್ಹಾನ್ ಮಹಮದ್,  19ನೇ ವಾರ್ಡಿನ ರುಖ್ಖ್ ಯಾ ಪರ್ವೀನ್, 20ನೇ ವಾರ್ಡಿನ ರೆಹನಾ ಕಾನಂ, 11ನೇ ವಾರ್ಡಿನ ಮಹಮ್ಮದ್ ಜಾಫರ್, ಎರಡನೇ ವಾರ್ಡಿನ ತೇಜು ಭಾನುಪ್ರಕಾಶ್ ಜಯಭೇರಿ ಬಾರಿಸಿದ್ದಾರೆ  ವರದಿ: ಸಿದ್ದರಾಜು ಟಿ.ಎಚ್.  ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ : ನಗರಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮಹಿಳಾ ಮೀಸಲು ಅಭ್ಯರ್ಥಿಯಾದ ಗಿರಿಜಾ ಎಸ್ ವಿಜಯಕುಮಾರ್ ಜಯಭೇರಿ ಬಾರಿಸಿದರು. ಬಳಿಕ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ನಳ್ಳಿ, ನೀರು, ರಸ್ತೆ, ವಿದ್ಯುತ್ ಸಂಪರ್ಕ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಗಿರಿಜಾ ಎಸ್ ವಿಜಯಕುಮಾರ್ ಭರವಸೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಂಜಾಬ್‌ನ ಲುಧಿಯಾನ ನಗರದ ಚಂಡೀಗಢ ರಸ್ತೆಯಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 24 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ.  ಇದುವರೆಗೆ ಸುಮಾರು 100 ಅಗ್ನಿಶಾಮಕ ವಾಹನಗಳನ್ನ  ಬಳಸಿದರೂ ಬೆಂಕಿ ಹತೋಟಿಗೆ ತರಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಬೆಂಕಿ ನಂದಿಸುತ್ತಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಈ ದೊಡ್ಡ ಕಾರ್ಖಾನೆಯಲ್ಲಿ ಬೆಂಕಿಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಹಾಗೂ ಪೌರಾಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಸಮೀಪದ ಕಟ್ಟಡಗಳನ್ನು ತೆರವು ಮಾಡಲಾಗಿದೆ.A massive fire broke out at Garments Factory on Chandigarh Road in Ludhiana, Punjab, with 24 firefighters on site. ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಕಾರ್ಖಾನೆಯಿಂದ ಸಂಜೆ 4 ಗಂಟೆಗೆ ಹೊಗೆ ಬರಲಾರಂಭಿಸಿದೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ಕಟ್ಟಡದಿಂದ ಹೊರಗೆ ಬರಲು ಆರಂಭಿಸಿದ ನೌಕರರು, ನಂತರ ಬೆಂಕಿ ಹೊತ್ತಿಕೊಳ್ಳಲಾರಂಭಿಸಿದರು. 7 ಅಂತಸ್ತಿನ ಈ ಕಾರ್ಖಾನೆಯಲ್ಲಿ ರೆಡಿಮೇಡ್ ಬಟ್ಟೆ ಮತ್ತಿತರ ವಸ್ತುಗಳು…

Read More