ಪಾವಗಡ: ತಾಲೂಕಿನ ಪ್ರಾರ್ಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತಿ ವತಿಯಿಂದ ಹಾಗೂ ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಸಹಕಾರ ಸಂಘಗಳಿಗೆ ತಾಲೂಕಿನ ಪಟ್ಟಣದ ಎಸ್. ಎಸ್. ಕೆ. ಸಮುದಾಯಭವನದಲ್ಲಿ ಪೀಠೋಪಕರಣಗಳ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕರಾದ ಆರ್. ರಾಜೇಂದ್ರ ಭಾಗವಹಿಸಿ ಮಾತನಾಡಿ, ಪಾವಗಡ ಪಾವಗಡ ತಾಲೂಕು ಅತೀ ಹಿಂದುಳಿದಿದ್ದು, ತಾಲೂಕಿನ ಅಭಿವೃದ್ಧಿಗೆ ಪಕ್ಷತೀತವಾಗಿ ಕೆಲಸ ಮಾಡಲಾಗುವುದು ಹಾಗೂ ತಾಲೂಕಿನ ಸಹಕಾರ ಸಂಘಗಳ ಅಭಿವೃದ್ದಿಗೆ ಶಕ್ತಿ ತುಂಬಿ ಅಭಿವೃದ್ಧಿಪಡಿಸುತ್ತೇವೆ ಮತ್ತು ತಾಲೂಕಿನ ಸಮಗ್ರ ನೀರಾವರಿ ಯೋಜನೆಗೆ ಜಾರಿಗೆ ತರಲು ಸರ್ಕಾರ ಮಟ್ಟದಲ್ಲಿ ಒತ್ತಾಯಿಸಲಾಗುವುದು ಮುಂದಿನ ದಿನಗಳಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ವೆಂಕಟರವಣಪ್ಪ , ಸಹಕಾರ ಸಂಘಗಳು ರೈತರಿಗೆ ಸಾಲ ಸೌಲಭ್ಯ ನೀಡಿ ಕೃಷಿ ಚಟುವಟಿಕೆಗಳಿಗೆ ಸಹಾಯ ಸಹಕಾರ ಮಾಡಬೇಕು . ಸಹಕಾರ ಸಂಘಗಳ ಮೂಲಕ ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿ ಮಾಡಬೇಕು ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತಾಧಿಕಾರಿಗಳು ಸಂಘದ ಅಭಿವೃದ್ದಿಗೆ ದುಡಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾಂಕ್ ಸಲಹೆಗಾರರಾದ ಜಂಗಮಪ್ಪ ಮಾತನಾಡಿ, ಜಿಲ್ಲಾ ಸಹಕಾರ ಬ್ಯಾಂಕಿನಿಂದ ತಾಲೂಕಿನ ಎಲ್ಲಾ ಸಹಕಾರಿ ಪ್ರಾರ್ಥಮಿಕ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯವನ್ನು ನೀಡಿದ್ದೇವೆ ಹಾಗೂ ಸ್ತ್ರೀಶಕ್ತಿ ಸಂಘದ ಸಂಘಗಳಿಗೆ ಆರ್ಥಿಕ ನೆರವು ನೀಡಿದ್ದು ರೈತರು ಮತ್ತು ಸ್ವಸಹಾಯ ಸಂಘಗಳ ಮಹಿಳೆಯರು ಸಾಲ ಸೌಲಭ್ಯವನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು. ರಾಜ್ಯದಲ್ಲಿ ಪ್ರಥಮ ಬಾರಿಗೆ ತುಮಕೂರು ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಕೆ.ಎನ್. ರಾಜಣ್ಣ ರೈತರು ಬೆಳೆ ಸಾಲ ಪಡೆದು ಮರಣ ಹೊಂದಿದ ರೈತರಿಗೆ 1 ಲಕ್ಷದವರೆಗೆ ಸಾಲ ಮನ್ನಾ ಮಾಡಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲಾ ಬ್ಯಾಂಕ್ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿ ಮಾದರಿಯಾಗಿದೆ ಹಾಗೂ ಪ್ರಾಥಮಿಕ ಸಹಕಾರ ಸಂಘಗಳು ಕೇವಲ ಬರೀ ಪಡಿತರ ವಿತರಿಸುವುದು ಹಾಗೂ ಡಿ.ಸಿ.ಸಿ .ಬ್ಯಾಂಕ್ ನಿಂದ ನೀಡುವ ಕೆ.ಪಿ.ಸಿ.ಸಿ. ಸಾಲ ವಿತರಿಸುವುದರ ಜೋತೆಗೆ ಸಹಕಾರ ಸಂಘದ ಮೂಲಕ ಇತರ ಚಟುವಟಿಕೆಗಳನ್ನು ಕೈಗೊಂಡು ಸಹಕಾರ ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಸಿ.ಇ.ಓ ರವರುಗಳಿಗೆ ತಿಳಿಸಿದರು
ಪಾವಗಡ ತಾಲೂಕಿನ ಪ್ರತಿ ವ್ಯವಸಾಯ ಸೇವಾ ಪ್ರಾಥಮಿಕ ಸಹಕಾರ ಸಂಘಗಳಿಗೆ 30 ಸಾವಿರ ರೂಪಾಯಿ ವೆಚ್ಚದ ಪೀಠೋಪಕರಣಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ತಾಳೆಮರದಲ್ಲಿ ನರಸಿಂಹಯ್ಯ ಹಾಲು ಒಕ್ಕೂಟ ನಿರ್ದೇಶಕರಾದ ಚೆನ್ನಮಲ್ಲಯ್ಯ, ಸಹಕಾರ ಮಂಡಳಿ ತಾಲೂಕ್ ನಿರ್ದೇಶಕ ಕೇಶವಚಂದ್ರ ದಾಸ್, ಜಿಲ್ಲಾ ಬ್ಯಾಂಕ್ ಸಿ.ಇ.ಓ. ಶ್ರೀಧರ್ ಜಿಲ್ಲಾ ಬ್ಯಾಂಕ್ ನ ರಾಮಕೃಷ್ಣ ನಾಯಕ, ಮೇಲ್ವಿಚಾರಕ ಸೇವಾ ನಾಯ್ಕ, ತಾಲೂಕಿನ ವ್ಯವಸಾಯ ಸೇವಾ ಪ್ರಾಥಮಿಕ ಸಹಕಾರ ಸಂಘಗಳ ಅಧ್ಯಕ್ಷರುಗಳು ಹಾಗೂ ಸಿ.ಇ.ಓ.ಗಳು ಮತ್ತು ನಿರ್ದೇಶಕರುಗಳು ಮುಂತಾದವರು ಭಾಗವಹಿದ್ದರು
ವರದಿ ರಾಮಪ್ಪ. ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB