Author: admin

ಸಮಾಜಕ್ಕೆ ಪಿಡುಗಾಗಿರುವ ಮದ್ಯಪಾನವನ್ನು ಬಿಡಿಸುವ ಸಲುವಾಗಿ 1,549 ಮದ್ಯವರ್ಜನಾ  ಶಿಬಿರಗಳನ್ನು ನಡೆಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ‘ನ ವತಿಯಿಂದ ಇಂದು ಮದ್ಯಾವರ್ಜನಾ ಶಿಬಿರದ ಪೂರ್ವಭಾವಿ ಸಭೆಯನ್ನು ರಾಜೀಮತಿ ಭವನವನ್ನು ನಡೆಸಲಾಯಿತು. ಸಭೆಯನ್ನು ಉದ್ಘಾಟಿಸಿದ   ಚೌದ್ರಿ ಟಿ.ರಂಗಪ್ಪ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಂಗಳ ಗೌರಮ್ಮ’ನವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ಮದ್ಯಾವರ್ಜನಾ ಶಿಬಿರದ ತಾಲ್ಲೂಕು ಯೋಜನಾಧಿಕಾರಿಯಾದ  ಗಣೇಶ್ ಮಾತನಾಡಿ ಶಿಬಿರದ ರೂಪು ರೇಷೆಗಳನ್ನು ವಿವರಿಸಿದರು. ನಂತರ ಸಭೆಯಲ್ಲಿ ಶಿಬಿರದ ಉಸ್ತುವಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲ್ಲೂಕು ಯೋಜನಾಧಿಕಾರಿ  ಅನಿತಾ ಶೆಟ್ಟಿ , ಸುತ್ತಮುತ್ತಲಿನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸಾರ್ವಜನಿಕರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್’ನಾ ಸಿಬ್ಬಂದಿ ಭಾಗವಹಿಸಿದ್ದರು. ವರದಿ : ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಸರಗೂರು ಮತ್ತು ನಂಜನಗೂಡು ತಾಲ್ಲೂಕಿನ ಜೀವನದಿ ನುಗು ಜಲಾಶಯ ಭರ್ತಿ ಯಾಗಿದ್ದು, ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದೆ. ಕಳೆದ ಒಂದು ವಾರದಿಂದ ಸತತವಾಗಿ ಕೇರಳದ ವಯನಾಡು ಜಿಲ್ಲೆ ಹಾಗೂ ಗುಂಡ್ಲುಪೇಟೆ ತಾಲ್ಲೂಕು ಮತ್ತು ತಾಲ್ಲೂಕಿನ ಗಡಿಭಾಗದ ಮಲಬಾರ್ ಅರಣ್ಯ ಪ್ರದೇಶದಲ್ಲಿ ಅಧಿಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 3420 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈ ವರ್ಷ ಅವಧಿಗಿಂತ ಬೇಗ ಜಲಾಶಯ ಭರ್ತಿಯಾಗಿದೆ. ಜಲಾಶಯದ ನೀರಿನ ಸರಾಸರಿ ಮಟ್ಟ 110 ಅಡಿ ಇದ್ದು, ಪ್ರಸ್ತುತ 108.5 ಅಡಿ ಇದ್ದು ಜಲಾಶಯದ ಭದ್ರತಾ ದೃಷ್ಟಿಯಿಂದ 1.5 ಅಡಿ ಬಾಕಿ ಉಳಿಸಿಕೊಂಡು ಜಲಾಶಯಕ್ಕೆ ಬಂದಷ್ಟು ನೀರನ್ನು ನದಿಗೆ ಬಿಡಲಾಗಿದೆ. ಶನಿವಾರ ಸಂಜೆಗೆ 3,420 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 3,390 ಕ್ಯೂಸೆಕ್ ನೀರನ್ನು ಜಲಾಶಯದ ಕ್ರಸ್ಟ್ ಗೇಟ್ ಮೂಲಕ 500 ಕ್ಯೂಸೆಕ್ ಹಾಗೂ 300 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನಾ ಘಟಕದಿಂದ ನದಿಗೆ ಬಿಡಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಡವಾಗಿ ಮಳೆ…

Read More

ಕಾಫಿನಾಡಿನಲ್ಲಿ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರ ಕುಸಿದು ಬಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ಈ ಬೃಹತ್ ಗಾತ್ರದ ಮರ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ವಾಹನ ಸವಾರರು ಪರದಾಡುವಂತಾಗಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಚಾರ್ಮಾಡಿ ಘಾಟ್‌ನ ೮ನೇ ತಿರುವಿನಲ್ಲಿ ಮರ ಬಿದ್ದ ಕಾರಣ ೧ ಕಿ.ಮೀ.ಗೂ ಹೆಚ್ಚಯ ಟ್ರಾಫಿಕ್‌ಜಾಮ್ ಆಗಿದೆ. ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮದ ರಸ್ತೆಯ ಮೇಲೆ ಗುಡ್ಡ ಕುಸಿದಿದೆ. ಇದರಿಂದಾಗಿ ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಪರಿಹಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ. ೪-೫ ಮನೆಗಳ ಮೇಲೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಕೂಲಿ ಕಾರ್ಮಿಕರು ಆತಂಕದಲ್ಲಿದ್ದಾರೆ. ಚಂದ್ರ-ದ್ರೋಣ ಪರ್ವತ ಶ್ರೇಣಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮರ, ಮಣ್ಣು, ಬಂಡೆಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಕೊಳಗಾಮೆ-ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆಯಲ್ಲಿ ಭೂ ಕುಸಿತ…

Read More

ಭಾರತ- ಪಾಕಿಸ್ತಾನದ ಗಡಿ ಭಾಗವಾದ ಅಟ್ಟಾರಿಯ ವಾಘಾಗಡಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್‌ಗಳು ಈದ್ ಅಲ್-ಅಧಾ ಹಿನ್ನೆಲೆ ಸಂದರ್ಭದಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಬಿಎಸ್‌ಎಫ್ ಕಮಾಂಡೆಂಟ್ ಜಸ್ಬೀರ್ ಸಿಂಗ್, “ಈದ್ ಅಲ್ ಅಧಾ ಸಂದರ್ಭದಲ್ಲಿ, ಜಂಟಿ ಚೆಕ್ ಪೋಸ್ಟ್ ಅಟ್ಟಾರಿ ಗಡಿಯಲ್ಲಿ ಬಿಎಸ್‌ಎಫ್ ಪಾಕಿಸ್ತಾನ ರೇಂಜರ್‌ಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿವೆ ಎಂದರು. ಎರಡೂ ದೇಶಗಳ ಗಡಿ ಕಾವಲು ಪಡೆಗಳ ನಡುವಿನ ಸಾಂಪ್ರದಾಯಿಕ ಸೂಚಕವಾಗಿದೆ. ಇದು ಸ್ನೇಹದ ಸಂಪ್ರದಾಯ, ಸದ್ಭಾವನೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದಿದ್ದಾರೆ. ಈದ್ ಅಲ್-ಅಧಾ ಅಥವಾ ಬಕ್ರಾ ಈದ್ ಅನ್ನು ’ತ್ಯಾಗದ ಹಬ್ಬ’ ಎಂದೂ ಕರೆಯಲಾಗುತ್ತದೆ . ಹಬ್ಬದ ಸಂದರ್ಭದಲ್ಲಿ ಮಟನ್ ಬಿರಿಯಾನಿ, ಘೋಷ್ಟ್ ಹಲೀಮ್, ಶಮಿ ಕಬಾಬ್ ಮತ್ತು ಮಟನ್ ಕೊರ್ಮಾದಂತಹ ಹಲವಾರು ಭಕ್ಷ್ಯಗಳು, ಜೊತೆಗೆ ಖೀರ್ ಮತ್ತು ಶೀರ್ ಖುರ್ಮಾದಂತಹ ಸಿಹಿಭಕ್ಷ್ಯಗಳನ್ನು ಈ ದಿನ ತಯಾರು ಮಾಡಲಾಗುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದಾನವನ್ನು…

Read More

ನಟಿ ಪಾಯಲ್ ರೋಹಟಗಿ ಮತ್ತು ಕುಸ್ತಿಪಟು ಸಂಗ್ರಾಮ್ ಸಿಂಗ್ ಆಗ್ರಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್‌ನಲ್ಲಿ ಕಾಣಿಸಿಕೊಂಡ ಪಾಯಲ್, ತಮ್ಮ ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭಕ್ಕಾಗಿ ಕೆಂಪು ಲೆಹೆಂಗಾ ಚೋಲಿ ಸೆಟ್ ಧರಿಸಿದ್ದರು. ಭಾರವಾದ ಆಭರಣಗಳು ಮತ್ತು ಕನಿಷ್ಠ ಮೇಕಪ್‌ನೊಂದಿಗೆ ಅವಳು ತನ್ನ ವಧುವಿನ ನೋಟವನ್ನು ಕಂಗೋಳಿಸುವಂತೆ ಮಾಡಿತ್ತು.ಪಾಯಲ್ ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ,ಪಾಯಲ್ ಮತ್ತು ಸಂಗ್ರಾಮ್ ತಮ್ಮ ಮದುವೆಗೆ ಮೊದಲು ಸುಮಾರು ೧೨ ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದರು. ಉತ್ತಮ ವಿವರಗಳೊಂದಿಗೆ ಕಸೂತಿ ಮಾಡಲಾದ ತನ್ನ ಲೆಹೆಂಗಾದಲ್ಲಿ ಪಾಯಲ್ ವಧುವಿನಂತೆ ಸುಂದರವಾಗಿ ಕಂಡುಬಂದರೆ, ಸಂಗ್ರಾಮ್ ತನ್ನ ಕ್ರೀಮ್ ಶೇರ್ವಾನಿ ಮತ್ತು ಮ್ಯಾಚಿಂಗ್ ಸಫಾದಲ್ಲಿ  ದಟ್ಟವಾಗಿ ಕಾಣುತ್ತಿದ್ದರು. ಅವರು ಹಂಚಿಕೊಂಡ ಫೋಟೋಗಳಲ್ಲಿ, ಪಾಯಲ್ ಮತ್ತು ಸಂಗ್ರಾಮ್ ವಿವಿಧ ವಿವಾಹ ಆಚರಣೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಚಿತ್ರಗಳು ಪಾಯಲ್ ಮತ್ತು ಸಂಗ್ರಾಮ್ ಅವರ ವರ್ಮಾಲಾ ಅಥವಾ ಜಯಮಾಲಾ ಸಮಾರಂಭವನ್ನು ಬಿಂಬಿಸುವಂತಿತ್ತು. ಅಲ್ಲಿ ಅವರು…

Read More

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ರಾಜಕುಮಾರ ಚಿತ್ರದಲ್ಲಿ ನಟಿಸಿದ್ದ ನಟಿ ಪ್ರಿಯಾ ಆನಂದ್ ನಿತ್ಯಾನಂದನ ಜತೆ ವಿವಾಹವಾಗುವುದಾಗಿ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾ ಆನಂದ್ ಇತ್ತೀಚೆಗೆ ಯು ಟೂಬ್ ಚಾನಲ್‌ಗೆ ಸಂದರ್ಶನ ನೀಡಿರುವ ವೇಳೆ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಿತ್ಯಾನಂದ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಅವರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಆದರೆ, ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾ ಆನಂದ್ ಈ ಹೇಳಿಕೆಯನ್ನೇ ಹಂಚಿಕೊಂಡರು. ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನಿತ್ಯಾನಂದನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಪ್ರಿಯಾ ಆನಂದ್, ದೊಡ್ಡ ಅಭಿಮಾನಿಗಳನ್ನು ಹೊಂದಿದ್ದು, ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರದಲ್ಲೂ ಅವರು ನಟಿಸಿದ್ದಾರೆ. ವರದಿ…

Read More

ತುಮಕೂರು: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಅಠವಳೆ) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಹೆಚ್. ರಾಮಯ್ಯ ಅವರನ್ನು ನೇಮಿಸಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಆದೇಶಿಸಿದರು. ಡಿ.ಹೆಚ್. ರಾಮಯ್ಯನವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಶಿಸ್ತು ಹಾಗೂ ಸಿದ್ಧಾಂತಕ್ಕೆ ಬದ್ಧರಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಈ ವೇಳೆ ನೂತನ ಪ್ರಧಾನ ಕಾರ್ಯದರ್ಶಿ ಡಿ.ಹೆಚ್.ರಾಮಯ್ಯ ಮಾತನಾಡಿ, ಪಕ್ಷ ನನ್ನನ್ನು ಗುರುತಿಸಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಕಾಯ ವಾಚಾ ಮನಸಾ ಪಕ್ಷ ಕಟ್ಟಲು ದುಡಿಯುವುದಾಗಿ ತಿಳಿಸಿದರು. ಆದೇಶ ಪತ್ರ ನೀಡಿದ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ರಾಮಯ್ಯನವರು ಪಕ್ಷ ಸಂಘಟನೆಗೆ ಶ್ರಮಿಸಿ ಪಕ್ಷವನ್ನು ರಾಜ್ಯದ ಎಲ್ಲಾ ಭಾಗಗಳಲ್ಲೂ ಕಟ್ಟಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಕನಸು ನನಸು ಮಾಡಲಿ ಎಂದು ಹಾರೈಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢ ಮಾಡುವ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕ ಆಗಿದ್ದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಇದು ನನಗೆ ತೃಪ್ತಿ ತಂದಿದ್ದು, ಕಾರ್ಯಕರ್ತರು ಹಾಗೂ ಹೆಚ್ಚಿನದಾಗಿ ಯುವಕರು ಮನೆ ಮನೆಗೂ ತೆರಳಿ ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಈಗಿನ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸಿ ಮನವೊಲಿಸಬೇಕು. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿ ಮಾಡುವುದು, ಮಧುಗಿರಿ ಯನ್ನು ಜಿಲ್ಲೆ ಮಾಡುವುದು, ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದ ಅವರು ಮತದಾರರು ಯಾವುದೇ ಅಮೀಶಕ್ಕೆ ಒಳಗಾಗದೆ…

Read More

ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ. ನಿಮಗೆ ಈ ಪಕ್ಷಗಳು ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುತ್ತದೆ. ಹೀಗಾಗಿ ಇಂತಹ ಪಕ್ಷಗಳು ನಿಮಗೆ ಬೇಕಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ದಾಸರಹಳ್ಳಿಯ ಅಬ್ಬಿಗೆರೆ ಹಾಗೂ ಹೊಸಕೆರೆಹಳ್ಳಿಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಬೆಂಗಳೂರಿನಲ್ಲಿ ನೆಲೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಗರದಲ್ಲಿ ನೆಲೆ ಇದೆಯೋ ಇಲ್ಲವೋ ಎಂಬುದನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇನೆ ಎಂದರು. ಬಡವರನ್ನು ಹಿಂಸೆ ಮಾಡುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುವ ಪಕ್ಷಗಳು ನಿಮಗೆ ಬೇಕಾ ಎಂದು ಎಚ್‌ ಡಿಕೆ ಪ್ರಶ್ನೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಎಂಟು ವರ್ಷದ ಬಾಲಕನೊಬ್ಬ ತನ್ನ 2 ವರ್ಷದ  ತಮ್ಮನ ಮೃತದೇಹವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶನಿವಾರ ಮಧ್ಯಪ್ರದೇಶದ ಮೊರೆನಾ ಬೀದಿಯಲ್ಲಿ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವದೊಂದಿಗೆ  ಅಸಹಾಯಕತೆಯಿಂದ ಕುಳಿತಿದ್ದು, ಭಾರತದಲ್ಲಿರುವ ಬಡತನದ ಇನ್ನೊಂದು ಮುಖದ ಪರದೆ ಸರಿಸಿದಂತೆ ಕಂಡು ಬಂದಿದೆ. ಪೂಜಾರಾಮ್ ಜಾಧವ್ ತನ್ನ ಕಿರಿಯ ಮಗ ರಾಜಾ(2) ಮೊರೆನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ರಕ್ತಹೀನತೆಯಿಂದಾಗಿ ಆತ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಎತ್ತ ಕೊಂಡೊಯ್ಯಬೇಕು ಎನ್ನುವುದು ತಿಳಿಯದೇ ಬಾಲಕ ತನ್ನ ಮಡಿಲಲ್ಲೇ ಇಟ್ಟುಕೊಂಡು ಕುಳಿತುಕೊಂಡಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More