Author: admin

ಬೆಂಗಳೂರು: ಪರಸ್ಪರ ನಿಂದನೆ ಮಾಡಿಕೊಂಡು ಕನ್ನಡ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ. ಎಂಇಎಸ್ ನಿಷೇಧಿಸಬೇಕೆಂದು ಒತ್ತಾಯಿಸಿ ಕರೆ ಕೊಟ್ಟಿರುವ ಡಿ.31ರ ಕರ್ನಾಟಕ ಬಂದ್‍ ಗೆ ಬೆಂಬಲ ನೀಡುವ ಮೂಲಕ ಕನ್ನಡಿಗ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ. ಎಂಇಎಸ್ ನಿಷೇಧಿಸಬೇಕೆಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್‍ ಗೆ ಬೆಂಬಲಿಸುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದ ಮುಖಂಡರಾದ ಡಾ.ರಾಜ್‍ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ.ಗೋವಿಂದ್, ಕನ್ನಡ ಸೇನೆ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್‍ಶೆಟ್ಟಿ ನೇತೃತ್ವದಲ್ಲಿ ಮಲ್ಲೇಶ್ವರಂ ವೃತ್ತದಲ್ಲಿ ಉರುಳುಸೇವೆ ಹಾಗೂ ಗೊರಗುಂಟೆಪಾಳ್ಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಎಂಇಎಸ್ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಕನ್ನಡ ಧ್ವಜ ಸುಟ್ಟು ಅಪಮಾನ ಮಾಡಿದ್ದಾರೆ. ಬಸವಣ್ಣನ ಪ್ರತಿಮೆಗೆ ಮಸಿ ಹಚ್ಚಿದ್ದಾರೆ. ಸರ್ಕಾರದ ವಾಹನಗಳಿಗೆ ಬೆಂಕಿ ಹಚ್ಚಿ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲವನ್ನೂ ನಾವು ಸಹಿಸಿಕೊಂಡಿರಬೇಕೆ? ಎಂದು…

Read More

ನವದೆಹಲಿ: ರಾತ್ರಿ ವೇಳೆ ಕರ್ಫ್ಯೂ ಹೇರುವುದು ಮತ್ತು ಹಗಲು ಚುನಾವಣಾ ರಾಲಿಗಳಿಗೆ ಲಕ್ಷಾಂತರ ಜನರನ್ನು ಸೇರಿಸುವುದು, ಇದು ಜನಸಾಮಾನ್ಯರ ಗ್ರಹಿಕೆಯನ್ನು ಮೀರಿದ್ದಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧವೇ ಪಿಲಿಭಿಟ್ ಸಂಸದ ವರುಣ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಗಾಂಧಿ,  ಉತ್ತರಪ್ರದೇಶದಲ್ಲಿರುವ ನಿಗದಿತ ಆರೋಗ್ಯ ಕೇಂದ್ರಗಳನ್ನು ಗಮನಿಸಿದರೆ, ನಮ್ಮ ಆದ್ಯತೆ ಗಂಭೀರ ಸ್ವರೂಪದ ಒಮಿಕ್ರಾನ್ ಹರಡುವುದನ್ನು ತಡೆಗಟ್ಟುವುದಾಗಿದೆಯೋ ಅಥವಾ ಚುನಾವಣಾ ಕಣದ ಶಕ್ತಿಯ ಪ್ರದರ್ಶನ ಮಾಡುವುದೇ ನಮ್ಮ ಆದ್ಯತೆಯಾಗಿದೆಯೇ ಎಂಬುದನ್ನು ನಾವು ಪ್ರಾಮಾಣಿಕವಾಗಿ ನಿರ್ಧರಿಸಬೇಕಾಗಿದೆ ಎಂದು ಗಾಂಧಿ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 25ರಂದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನ್ ವಿಶ್ವಾಸ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಭೆಗಳಲ್ಲಿಯೂ ಯೋಗಿ ಭಾಗವಹಿಸುತ್ತಾರೆ. ಇದು ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆಯುತ್ತಿದೆ ಎಂದು ವರುಣ್ ಗಾಂಧಿ ಅಸಮಧಾನ…

Read More

ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು. ವೈರಸ್‌ ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ. ಎರಡು ವರ್ಷದ ಎಳೆಯ ಮಕ್ಕಳು ಹೊರತುಪಡಿಸಿ ಬಹುತೇಕ ಎಲ್ಲರೂ ಭಯದ ನೆರಳಲ್ಲೇ ಬದುಕುತ್ತಿದ್ದಾರೆ. ಶಾಲೆಗೆ ಹೋಗಬೇಕಾದ ಪುಟ್ಟ ಮಕ್ಕಳಿಗೆ ಶಾಲೆ ಎಂದರೆ ಮೊಬೈಲ್ ಒಳಗಿನ ಕಲಿಕೆ ಎಂಬಂತಾಗಿದೆ. ಮಾಧ್ಯಮಿಕ ಮತ್ತು ಪ್ರೌಡ ಶಾಲೆಯ ಮಕ್ಕಳಿಗೆ ಒಂದಷ್ಟು ನಿರುತ್ಸಾಹ ಮತ್ತು ಓದಿನ ಬಗೆಗಿನ ಗೊಂದಲ. ಕಾಲೇಜು ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ… ಈ ನಡುವೆ ಕೆಲವು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಬಲಿಯಾದರೆ ಇನ್ನೊಂದಿಷ್ಟು ಗಂಡು ಹುಡುಗರು ಶಾಲೆ ತೊರೆದು ಕೆಲಸಕ್ಕೆ ಸೇರಿದರು. ಕೇವಲ ಎರಡು ವರ್ಷಗಳ ಹಿಂದೆ ಆರ್ಥಿಕವಾಗಿ ಮೇಲ್ ಮಧ್ಯಮ ವರ್ಗದಲ್ಲಿದ್ದವರು ಮಧ್ಯಮ ವರ್ಗಕ್ಕೂ, ಮಧ್ಯಮ ವರ್ಗದವರು ಕೆಳ ಮಧ್ಯಮವರ್ಗಕ್ಕೂ ರೂಪಾಂತರ ಹೊಂದಿದ ಅನೇಕ ಘಟನೆಗಳನ್ನು ನೋಡಬಹುದು. ವೃತ್ತಿ ಬದಲಾಯಿಸಿಕೊಂಡವರೆಷ್ಟೋ, ವಲಸೆ ಹೋದವರೆಷ್ಟೋ ನಿರುದ್ಯೋಗಿಗಳಾದವರೆಷ್ಟೋ ಲೆಕ್ಕಕ್ಕೆ ಸಿಗುತ್ತಿಲ್ಲ ಅನಾಥರಾದವರು, ವಿದುವೆ ವಿಧುರರಾದವರು, ಒಂಟಿಯಾದವರು, ಆತ್ಮಹತ್ಯೆಗೆ ಶರಣಾದವರು,…

Read More

ಹೆಚ್ ಡಿ ಕೋಟೆ/ ಸರಗೂರು: ಮನುಷ್ಯ ಮನುಷ್ಯನನ್ನು ಪ್ರೀತಿಸಿ ಗೌರವಿಸಬೇಕು, ಮನುಷತ್ವ ಮೆರೆದು ಮಾನವೀಯತೆ ಉಳಿಸಿ ಬೆಳೆಸಬೇಕಿದೆ ಎಂದು DCP ಸಿದ್ದರಾಜು ಹೇಳಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ 21-22 ನೇ ಸಾಲಿನ ಸರ್ವಧರ್ಮದ ಸಮಾಜ ಸೇವೆಗಾಗಿ ಹೃದಯವಂತರು ಸೇವಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಕರ ಮಾತುಗಳನ್ನಾಡಿದ ಅವರು,  ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಇಂತಹ ಸಂದರ್ಭದಲ್ಲಿ ಸರ್ವಧರ್ಮದ ಹೃದಯವಂತರು ಸೇವಾಸಂಸ್ಥೆ ಹಲವಾರು ಕಷ್ಟದ ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಮೆರೆಯುತ್ತಿದೆ ಎಂದು ಶ್ಲಾಘಿಸಿದರು. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾಗಿ ಆಗತ್ತೂರು ಜವರನಾಯಕರನ್ನು ಆಯ್ಕೆ ಮಾಡಲಾಯಿತು. ಬಳಿಕ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾಸಂಸ್ಥೆಯ ಬೆಳವಣಿಗೆ ಮತ್ತು ಸೇವಾಕಾರ್ಯ ಹಾಗೂ ಸೇವಾಸಂಸ್ಥೆಯ ನೂರಾರು ಹೃದಯವಂತ ಸದಸ್ಯರ ಸಹಕಾರದ ಬಗ್ಗೆ ವಿವರಿಸಿದರು. ಸಂಸ್ಥಾಪಕ ಅಧ್ಯಕ್ಷ…

Read More

ಚಿಕ್ಕಮಗಳೂರು: ನಗರ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಅವರು ವಾರ್ಡ್ ನಂಬರ್ 28ರ  ಎಸಿಜಿ ಪಾಲಿಟೆಕ್ನಿಕ್ ಬೂತ್ ನಂಬರ್ 87 ರಲ್ಲಿ ಪತ್ನಿ ಪಲ್ಲವಿ ಜೊತೆ ಆಗಮಿಸಿ ಮತದಾನ ಮಾಡಿದರು. ಮತದಾನ ಆರಂಭಗೊಂಡ ವೇಳೆಯಲ್ಲಿಯೇ ಮಂದ ಗತಿಯಲ್ಲಿ ಮತದಾನ ಆರಂಭಗೊಂಡಿತ್ತು. ಮತದಾನದಲ್ಲಿ ಮತದಾರರ ನಿರುತ್ಸಾಹ ಕಂಡು ಬಂದಿತು. ಇನ್ನೂ ಕೆಲವೆಡೆಗಳಲ್ಲಿ ಅಭ್ಯರ್ಥಿಗಳ ಪರ ಕಾರ್ಯಕರ್ತರು ಮನೆ ಮನೆಗಳಿಂದ ಜನರನ್ನು ವೋಟು ಹಾಕಿಸಲು ಕರೆತರುತ್ತಿರುವುದು ಕಂಡು ಬಂತು. ಇನ್ನೂ ಅಂಡೆ ಛತ್ರದಲ್ಲಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್  ನಡೆಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

35 ವರ್ಷದ ಅಂಗಡಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನ ‘ಅಂಕಲ್‌ʼ ಎಂದು ಕರೆದದ್ದಕ್ಕೆ ಕಾರಣಕ್ಕೆ 18 ವರ್ಷದ ಯುವತಿ ಅಮಾನುಷವಾಗಿ ಥಳಿಸಿ ಥಳಿಸಿದ ಆಘಾತಕಾರಿ ಘಟನೆ ಉತ್ತರಾಖಂಡ್‌ನ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ವರದಿಯಾಗಿದೆ. ಮಂಗಳವಾರ ನಡೆದ ಘಟನೆಯಲ್ಲಿ ನಿಶಾ ಅಹ್ಮದ್ ಎಂದು ಗುರುತಿಸಲಾದ ಸಂತ್ರಸ್ತ ಮಹಿಳೆಗೆ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಐಪಿಸಿ ಸೆಕ್ಷನ್ 354 , ಸೆಕ್ಷನ್ 323 ಮತ್ತು ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವರದಿಗಳ ಪ್ರಕಾರ, “ನಿಶಾ ಅಹ್ಮದ್ ಅವರು ಡಿಸೆಂಬರ್ 19 ರಂದು ಖರೀದಿಸಿದ ಬ್ಯಾಡ್ಮಿಂಟನ್ ರಾಕೆಟ್ ಅನ್ನು ಬದಲಾಯಿಸಲು ಖತಿಮಾ ರಸ್ತೆಯಲ್ಲಿರುವ ಅಂಗಡಿಗೆ ಹೋಗಿದ್ದರು, ಅದರ ಕೆಲವು ನೆಟ್ಸ್‌ ಹಾಳಾಗಿದ್ದವು. ಆ ಸಮಯದಲ್ಲಿ ಅಂಗಡಿಯವನನ್‌ ಅಂಕಲ್‌ ಎಂದು ಸಂಬೋಧಿಸಿದಾಗ ಸಿಟ್ಟಿಗೆದ್ದ ವ್ಯಕ್ತಿ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಿಶಾಳನ್ನು ಚಿಕಿತ್ಸೆಗೆಂದು ಕರೆದೊಯ್ದ ಆಸ್ಪತ್ರೆಯಿಂದ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಪೊಲೀಸರ ಮಧ್ಯಪ್ರವೇಶದ ನಂತರ ನಿಶಾಳ…

Read More

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಸೋಂಕಿನಿಂದ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವ ಸಾಧ್ಯತೆಯಿದೆ. ಕರೋನಾ ಪರಿಸ್ಥಿತಿಯ ಬಗ್ಗೆ ಭಾರತದ ಚುನಾವಣಾ ಆಯೋಗವು (ಇಸಿಐ) ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಆಯೋಗವು ಡಿಸೆಂಬರ್ 27 ಸೋಮವಾರ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೂಡ ಉಪಸ್ಥಿತರಿರುವರು. ಮೂರು ದಿನಗಳ ಹಿಂದೆ, ಕರೋನಾ ಪರಿಸ್ಥಿತಿಯನ್ನು ನೋಡಿದ ಅಲಹಾಬಾದ್ ಹೈಕೋರ್ಟ್, ಸದ್ಯಕ್ಕೆ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಮಾಡಿತು. ಇದರ ನಂತರ, ಮುಖ್ಯ ಚುನಾವಣಾ ಆಯುಕ್ತರು ಮುಂದಿನ ವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಿಸಿದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಬೆಂಗಳೂರು: ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಗೆ ಹೊಟೇಲ್ ಮಾಲಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೊರೊನಾ ಬಳಿಕ ಹೊಟೇಲ್ ಉದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ನೈಟ್ ಕರ್ಫ್ಯೂ ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಹೊಟೇಲ್ ಗಳ ಮೇಲೆ ನಿರ್ಬಂಧ ಹಾಕಿರುವುದಕ್ಕೆ ಗ್ರಾಹಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ನೈಟ್ ಕೆಲಸ ಮುಗಿಸಿಕೊಂಡು ಬರುವವರಿಗೆ ಊಟದ ಸಮಸ್ಯೆಯಾಗುತ್ತೆ. ಸರ್ಕಾರದ ಈ ರೂಲ್ಸ್​ನಿಂದ ರಾತ್ರಿ 9ಗಂಟೆಯೊಳಗೆ ಊಟ ಮುಗಿಸಿಕೊಳ್ಳಬೇಕು. ಈ ನಿರ್ಧಾರದಿಂದ ಪ್ರಯೋಜನವೂ ಇದೆ, ಸಮಸ್ಯೆಯೂ ಆಗುತ್ತೆ ಎಂದು ಗ್ರಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರ್ಕಾರ ಹೋಟೆಲ್ ಉದ್ಯಮದ ಸಮಸ್ಯೆ ಅರ್ಥಮಾಡಿಕೊಳ್ಳಬೇಕು. ನೈಟ್ ಕರ್ಫ್ಯೂನಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕೊವಿಡ್ ನಿಯಂತ್ರಣದ ಹೆಸರಿನಲ್ಲಿ ನಾಳೆ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ  ಓಲಾ, ಉಬರ್ ಚಾಲಕರು, ಫುಡ್ ಶಾಪ್ಸ್ ಮಾಲಿಕರು ಸಂಕಷ್ಟಕ್ಕೀಡಾಗಿದ್ದು, ನೈಟ್ ಕರ್ಫ್ಯೂ ಜಾರಿಯಾದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹಾಗಾಗಿ ನೈಟ್ ಕರ್ಫ್ಯೂನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ನಾವು 2 ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾತ್ರಿ ವೇಳೆಯೇ ಹೆಚ್ಚು ಬಾಡಿಗೆಗಳು ಬರುವುದು. ನೈಟ್ ಕರ್ಫ್ಯೂ ಜಾರಿಯಾದರೆ ನಮಗೆ ಲಾಸ್ ಆಗುತ್ತದೆ. ಹೀಗಾಗಿ ದಯವಿಟ್ಟು ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಓಲಾ, ಉಬರ್ ಚಾಲಕರು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಬೀದಿಬದಿ ಫುಡ್ ಶಾಪ್ಸ್ ಮಾಲೀಕರು ಕೂಡ ನೈಟ್ ಕರ್ಫ್ಯೂವನ್ನು ವಿರೋಧಿಸಿದ್ದು, ರಾತ್ರಿ ವೇಳೆಯೇ ನಮ್ಮ ವ್ಯಾಪಾರ ವಹಿವಾಟು ನಡೆಯುವುದು. ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ನಮಗೆ ನಷ್ಟವಾಗುತ್ತೆ. ರಾತ್ರಿ ವೇಳೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನೈಟ್ ಕರ್ಫ್ಯೂ ಆದೇಶ ಹಿಂಪಡೆಯಬೇಕು ಎಂದು ಮನವಿ…

Read More

ಬೆಂಗಳೂರು: ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದು ನೀಡಿರುವ ಗಡುವು ಮುಗಿಯಲು ಇನ್ನು ಎರಡು ದಿನಗಳು ಮಾತ್ರವೇ ಬಾಕಿ ಇದೆ. ಡಿ.29ರೊಳಗೆ ಸರ್ಕಾರ ಯಾವುದೇ ನಿರ್ಧಾರ‌ ಕೈಗೊಳ್ಳದಿದ್ದರೆ ಕರ್ನಾಟಕ ಬಂದ್ ನಡೆಯುತ್ತದೆ. ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಾಟಾಳ್ ನಾಗರಾಜ್ ಖಚಿತ ಪಡಿಸಿದ್ದಾರೆ. ವಾಟಾಳ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಮಾಡಲಿದ್ದು, ಸರ್ಕಾರ ಮಾತ್ರ ವಾಟಾಳ್ ನಾಗರಾಜ್ ರನ್ನು ಇನ್ನೂ ಕೂಡ ಮಾತುಕತೆಗೆ ಆಹ್ವಾನಿಸಿಲ್ಲ. ಸದ್ಯ ವಾಟಾಳ್ ತಮ್ಮ ಬಂದ್ ಯಶಸ್ವಿಯಾಗಲೆಂದು ಪ್ರತಿ ದಿನ ಹೋರಾಟಕ್ಕೆ ಇಳಿದಿದ್ದಾರೆ. ಮೊನ್ನೆ ಫಿಲ್ಮ್ ಚೇಂಬರ್ ವಿರುದ್ಧ ಹೋರಾಟ ಮಾಡಿದರು. ನಿನ್ನೆ ಮಾಲ್ ಗಳಿಗೆ ತೆರಳಿ ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಈಗ ಬಂದ್ ಗೆ ಬೇಕಾದ ಸಿದ್ಧತೆಗಳಲ್ಲಿ ಸಂಘಟನೆಗಳು ತೊಡಗಿಕೊಂಡಿವೆ. ನೈತಿಕ ಬೆಂಬಲ ಅನ್ನೋರಿಂದ…

Read More