Author: admin

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯವು ಗಬ್ಬುನಾರುತ್ತಿದ್ದ ಹಿನ್ನಲೆ ಸಾರ್ವಜನಿಕರ ದೂರಿನ ಪ್ರಕಾರ ನಮ್ಮ ತುಮಕೂರು ಮಾಧ್ಯಮವು ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ನಮ್ಮ ತುಮಕೂರು ಮಾಧ್ಯಮ ವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಹಿರಿಯೂರು ತಾಲ್ಲೂಕಿನ ನೂತನವಾಗಿ ಆಯ್ಕೆಗೊಂಡಿರುವ. ಶಿವರಂಜನಿ ಯಾದವ್ ಅವರು ನಗರಸಭೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಅಶೋಕ್, ಮೀನಾಕ್ಷಿ ಹಾಗೂ ಸಂಧ್ಯಾ ಅವರೊಡನೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ಸಂಸ್ಥೆಯ ಗಣಕಿ ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು. ನಾನಾ ಕಡೆಗಳಿಂದ ಬಂದಂತಹ ಪ್ರಯಾಣಿಕರು ಹಿರಿಯೂರು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಸಾರಿಗೆ ಸಂಸ್ಥೆಯ ಆವರಣದಲ್ಲಿರುವ ಶೌಚಾಲಯವು ಸಹ ತೀರ ಅವ್ಯವಸ್ಥಿತ ಗೊಂಡಿದ್ದು ಶೌಚಾಲಯವು ಸಹ ತೀರ ಹದಗೆಟ್ಟಿದೆ. ಇದರಿಂದ ನಾನಾ ಖಾಯಿಲೆಗಳಿಗೆ ಇಲ್ಲಿಗೆ ಬರುವಂತಹ ಪ್ರಯಾಣಿಕರು, ಸಾರ್ವಜನಿಕರು ತುತ್ತಾಗುತ್ತಿದ್ದಾರೆ. ಆದರಿಂದ ಈ…

Read More

ಕೊರಟಗೆರೆ: ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ಭೀಮೇಗೌಡನ ಮಗ ರಾಮಕೃಷ್ಣಪ್ಪ 65 ವರ್ಷದ ವ್ಯಕ್ತಿ ಪಟ್ಟಣಕ್ಕೆ ಹೋಗಲು ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ತೋವಿನಕೆರೆ ಮಾರ್ಗದಿಂದ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ತನ್ನ ದ್ವಿಚಕ್ರ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೆ ಏಕಾಏಕಿ ವಿಶ್ರಾಂತಿ ಗೃಹದ ಬಳಿ ನಿಂತಿದ್ದ ರಾಮಕೃಷ್ಣಪ್ಪ ಅವರಿಗೆ ಗುದ್ದಿದ್ದಾನೆ. ದ್ವಿಚಕ್ರ ವಾಹನ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೃತ  ರಾಮಕೃಷ್ಣಪ್ಪನ ಜೊತೆಯಲ್ಲಿದ್ದ ಸಂಬಂಧಿ ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.  ಕೊರಟಗೆರೆ ಪೋಲಿಸ್ ಠಾಣಾ ನೂತನ ಅಧಿಕಾರಿ ಸಿಪಿಐ ಸುರೇಶ್ ಹಾಗೂ ಪಿಎಸ್ ಐ ನಾಗರಾಜು ಪ್ರಕರಣ ದಾಖಲಿಸಿಕೊಂಡು  ಘಟನೆ ನಡೆದ  ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ…

Read More

ಹಲಸಿನ ಕಾಯಿ  ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಲ್ಲದೇ ನಮ್ಮ ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳ ಅತ್ಯುತ್ತಮ ಆಹಾರ ಇದಾಗಿದೆ ಎಂದು ತಜ್ಞರು ಹೇಳುತ್ತಾರೆ. ಹಲಸಿನ ಹಣ್ಣನ್ನು ದೋಸೆ, ಇಡ್ಲಿ ಮೊದಲಾದ ರೂಪದಲ್ಲಿ ಸೇವಿಸುತ್ತೇವೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಅನ್ನ, ಗೋಧಿ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು ಎನ್ನಲಾಗಿದೆ. ಹಲಸಿನ ಹಣ್ಣನ್ನು ಹಿಟ್ಟಿನ ರೂಪದಲ್ಲಿ ಬಳಕೆ ಮಾಡುವುದರಿಂದ ಕಾರ್ಬೋಹೈಡ್ರೇಟ್ ಗಳು ಕಡಿಮೆ ಆಗುತ್ತವೆ. ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಲು ನೆರವಾಗುತ್ತವೆ. ಇದೊಂದು ಸ್ಥಳೀಯ ಆಹಾರವೂ ಆಗಿರುವುದರಿಂದ ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹೆಚ್ಚು ಉಪಕಾರಿಯಾದವು ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಹಲಸಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ಶಕ್ತಿ ಬಲವರ್ಧನೆ ಆಗುವುದರ ಜೊತೆ ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಕೆಯಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಶಿವಮೊಗ್ಗ: ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ, ಇಲ್ಲವಾದ್ರೆ ಇಲ್ಲ ಎಂದಿದ್ದಾರೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ, ನೀವೂ ಕೂಡ ನಿವೃತ್ತಿ ತಗೋತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು. ನಾನು ಮೊದಲು ಎಂಎಲ್‌ಎ ಆದಾಗಲೂ ನಾನೇ ಸ್ವಯಂ ಇಚ್ಛೆಯಿಂದ ಶಾಸಕನಾಗಿದ್ದಲ್ಲ. ಹಿರಿಯರೆಲ್ಲಾ ಕೂತು ನನ್ನನ್ನು ಆಯ್ಕೆ ಮಾಡಿದರು. ನಂತರ ಯುವ ಮೋರ್ಚಾ ರಾಜ್ಯಾಧ್ಯಕ್ಷ ಆಗಬೇಕು ಎಂದು ಹೇಳಿದರು. ನಾನು ಅದನ್ನೂ ನಿರ್ವಹಿಸಿದೆ. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಕೆಲಸ ಮಾಡಿದೆ. ನಂತರ ಅನೇಕ ಮಂತ್ರಿ ಪದವಿಗಳನ್ನ ನೋಡಿದ್ದೇನೆ, ಉಪ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಈಗಲೂ ಅಷ್ಟೇ ಪಕ್ಷ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ,…

Read More

ಉಡುಪಿ : ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು, ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧೀ ಮೈದಾನದ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ಪಡೆಯುವ ಮೂಲಕ ಗುರುರಾಜ ಪೂಜಾರಿ ಅವರು ಉಡುಪಿ ಜಿಲ್ಲೆಯ ಸಂಭ್ರಮವನ್ನು ಹೆಚ್ಚಿಸಿದ್ದು, ದೇಶದಲ್ಲಿ ಜಿಲ್ಲೆಯ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಉನ್ನತ…

Read More

ನಾನು ಕಾಫಿ ನಾಡು ಚಂದು ಪುನೀತಣ್ಣನ್ ಶಿವಣ್ಣನ್ ಅಭಿಮಾನಿ ಅನ್ನುತ್ತಾ ಹಾಡು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಕಾಫಿ ನಾಡು ಚಂದುಗೆ ಬಿಗ್ ಬಾಸ್ ಗೆ ಎಂಟ್ರಿ ಸಿಕ್ಕಿಲ್ಲ. ಸಾಕಷ್ಟು ಜನರು ಕಾಫಿನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಅನ್ನೋ ನಿರೀಕ್ಷೆಯಿಟ್ಟಿದ್ದರು. ಆದ್ರೆ ಅವರ ನಿರೀಕ್ಷೆಗಳು ಸುಳ್ಳಾಗಿವೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ 16 ಸ್ಪರ್ಧಿಗಳಲ್ಲಿ ಕಾಫಿ ನಾಡು ಚಂದು ಕಾಣಿಸಿಕೊಳ್ಳದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹಾಡು ಹಾಗೂ ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿರುವ ಕಾಫಿನಾಡು ಚಂದುಗೆ ಬಿಗ್ ಬಾಸ್ ಪ್ರವೇಶ ಸಿಗೋದು ಖಚಿತ ಎಂದೇ ಹೇಳಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಅತ್ಯುತ್ತಮ ಮನರಂಜನೆ ನೀಡುತ್ತಿರುವ ಚಂದು ಬಿಗ್ ಬಾಸ್ ಗೆ ಸೂಕ್ತ ವ್ಯಕ್ತಿ. ಎಲ್ಲರೂ ಮನರಂಜನೆಯನ್ನು ಬಯಸಿ ಬಿಗ್ ಬಾಸ್ ನೋಡುತ್ತಾರೆ. ಇದೀಗ ಆಯ್ಕೆಯಾಗಿರುವ ಸ್ಪರ್ಧಿಗಳಿಗಿಂತ ಚಂದು ಅತ್ಯುತ್ತಮ ಎಂಟರ್ಟೈನರ್. ಹೀಗಾಗಿ ಕಾಫಿನಾಡು ಚಂದುಗೆ ಅವಕಾಶ ನೀಡಬೇಕಿತ್ತು ಎಂದು ಸಾಕಷ್ಟು ಜನರು…

Read More

ಕೊರಟಗೆರೆ: ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ ಯುವಕ ಜುಲೈ 29 ರಂದು ಕಾಣೆಯಾಗಿದ್ದಾನೆ. ಗ್ರಾಮದ ಮಂಜುಳ ಶ್ರೀ ಕಂಠಯ್ಯನವರ ಮೊದಲನೇಯ ಮಗ ನಂದೀಶ್(23) ಕಾಣೆಯಾದ ಯುವಕನಾಗಿದ್ದಾನೆ. ಜುಲೈ 29 ರ ಬೆಳಿಗ್ಗೆ  ಕೊರಟಗೆರೆಯಲ್ಲಿ ತನ್ನ ತಂದೆ ನಡೆಸುತ್ತಿರುವ ಟೀ ಸ್ಟಾಲ್ ಗೆ ಹೋಗುವುದಾಗಿ ಹೇಳಿ,  ತನ್ನ ತಂದೆಯ ಟೀ ಸ್ಟಾಲ್ ನಲ್ಲಿ ಟೀ ಕುಡಿದಿದ್ದಾನೆ. ಬಳಿಕ  ಮನೆಗೆ ಹೋಗುವುದಾಗಿ ಹೇಳಿ ಹೋದ ಯುವಕ ಸಂಜೆಯಾದರು ಮನೆಗೆ ಹೊಂದಿರುವುದಿಲ್ಲ. ನಂದೀಶ್ ರವರ ಎಡಗೈಯಲ್ಲಿ “ಅಮ್ಮ”ಎಂದು ಹಚ್ಚೆ ಗುರುತು ಇರುತ್ತದೆ.  5ಅಡಿ 6ಅಂಗುಲ ಎತ್ತರ, ಎಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು,ಮಾತು ಬರುವುದಿಲ್ಲ ಮೂಕ ಹಾಗೂ ಕಿವುಡನಾಗಿರುತ್ತಾನೆ. ಕಾಣೆಯಾದ ದಿನ ಹಳದಿ ಬಣ್ಣದ ಕೆಂಪು ಗೀರಿನ ರೇಡಿಮೇಡ್ ಶರ್ಟ್  ಸಿಮೆಂಟ್ ಬಣ್ಣದ ಬರ್ಮುಡಾ ಧರಿಸಿರುತ್ತಾನೆ. ಈತನನ್ನು ಸಾರ್ವಜನಿಕ ಸ್ಥಳದಲ್ಲಿ ಹೋಟೆಲ್ ಗಳಲ್ಲಿ ಬಸ್ ಸ್ಟ್ಯಾಂಡ್ ಗಳಲ್ಲಿ ಅಥವಾ ಯಾವುದೇ ಟೀ ಸ್ಟಾಲ್ ಅಂಗಡಿಗಳ ಮುಂದೆ ನೋಡಿದವರು ಕೆಳಗಂಡ ನಂಬರ್ ಗಳಿಗೆ ಕರೆ ಮಾಡಿ ತಿಳಿಸಬೇಕೆಂದು ಅಥವಾ…

Read More

ತಿಪಟೂರು: ಬೈಪಾಸ್ ರಸ್ತೆಯ ನೀರಿನ ಚರಂಡಿಯ ಅವ್ಯವಸ್ಥೆಯಿಂದಾಗಿ R R ಆಗ್ರೋ ಪ್ರಾಡಕ್ಟ್ಸ್ ಫ್ಯಾಕ್ಟರಿಗೆ ನೀರು ನುಗ್ಗಿದ್ದು, ಫ್ಯಾಕ್ಟರಿಯಲ್ಲಿ ತಯಾರಿಸುವ ಲಕ್ಷಾಂತರ ರೂಪಾಯಿ ಮೌಲ್ಯದ ಕಾಯಿ ಪೌಡರ್ ಹಾಳಾಗಿ ಹೋಗಿದೆ. ಘಟನೆಯಲ್ಲಿ ಫ್ಯಾಕ್ಟರಿ ಮಾಲಿಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಸ್ತೆಯಿಂದ ನೇರವಾಗಿ ಫ್ಯಾಕ್ಟರಿ ಕಡೆಗೆ ನೀರು ಹರಿದಿದ್ದು, ಪರಿಣಾಮವಾಗಿ ಫ್ಯಾಕ್ಟರಿ ಮಾಲಿಕರಿಗೆ ತೀವ್ರ ನಷ್ಟವಾಗಿದೆ. ಇಂಜಿನಿಯರ್ ಗೆ ಈ ಬಗ್ಗೆ ಅನೇಕ ಬಾರಿ ಮಾಹಿತಿ ನೀಡಿದರೂ ಅವರು ನಮ್ಮ ಮಾತಿಗೆ ಬೆಲೆ ಕೊಡದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ರಸ್ತೆ ನೀರಿನಿಂದ ಇಲ್ಲಿನ ಸುತ್ತಮುತ್ತಲಿನ ಸಾಕಷ್ಟು ಪ್ರದೇಶಗಳ ಜನರಿಗೆ ತೊಂದರೆಯಾಗಿದ್ದು, ಯಾರ ಬಳಿ ಸಮಸ್ಯೆ ಹೇಳಬೇಕು ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ. ವರದಿ: ಆನಂದ್,  ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಪಾವಗಡ: ಬಟ್ಟೆ ಒಗೆಯಲು ಹೋಗಿದ್ದ ವೇಳೆ ಮಹಿಳೆಯೊಬ್ಬರು ನೀರುಪಾಲಾದ ಘಟನೆ ಪಾವಗಡ ತಾಲೂಕಿನ ಬ್ಯಾಡನೂರು ನೀರಿನ ಹಳ್ಳದಲ್ಲಿ ನಡೆದಿದೆ. ಇಂದು ಬೆಳಗ್ಗೆ ಬಟ್ಟೆಗಳನ್ನು ತೊಳೆಯುವ ವೇಳೆ ನೀರಿನಲ್ಲಿ ಗ್ರಾಮದ ಗೋವಿಂದಪ್ಪ ಎನ್ನುವವರ ಪತ್ನಿ 35 ವರ್ಷದ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದೇವಿರಮ್ಮ ಅವರಿಗಾಗಿ ಇದೀಗ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದು, ಈವರೆಗೆ ಅವರ ಪತ್ತೆ ಸಾಧ್ಯವಾಗಿಲ್ಲ. ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮದಲ್ಲಿ ಇರುವಂತಹ ಶಂಕರಲಿಂಗನಕೆರೆ ಇತ್ತೀಚಿಗೆ ಕೋಡಿ ಬಿದ್ದಿತ್ತು. ಈ ಹಳ್ಳದ ನೀರು ಹರಿಯುವ ಸ್ಥಳದಲ್ಲಿ ದೇವಿರಮ್ಮ ಎನ್ನುವರು ಬಟ್ಟೆ ಸ್ವಚ್ಛಗೊಳಿಸಲು ಇಂದು ಬೆಳಗ್ಗೆ ತೆರಳಿದಾಗ ಈ ಘಟನೆ ಸಂಭವಿಸಿದೆ. ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ತಾಲೂಕು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕಲಬುರ್ಗಿ:  ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ಕಾಲೇಜು ಕ್ಯಾಂಟೀನ್ ನಲ್ಲಿ ಬಡಿದಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ವರದಿ ಪ್ರಕಾರ,  ಒಂದು ಗುಂಪಿನ ಯುವತಿಯನ್ನು ಮತ್ತೊಂದು ಗುಂಪಿನ ಹುಡುಗರು ಚುಡಾಯಿಸಿದ್ದೇ ಹೊಡೆದಾಟಕ್ಕೆ ಕಾರಣ ಎನ್ನಲಾಗದೆ. ವಿದ್ಯಾರ್ಥಿ ಗ್ಯಾಂಗ್ ನ ಹೊಡೆದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರಳ, ಮಹಾರಾಷ್ಟ್ರ,ತೆಲಂಗಾಣ, ದೆಹಲಿ ಮೂಲದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದು, ಇದೀಗ ಕಾಲೇಜ್ ನಲ್ಲಿಯೇ ಹೊಡೆದಾಡಿಕೊಂಡಿರುವ ವಿಚಾರ ಭಾರಿ ಸುದ್ದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More