Author: admin

ತಿಪಟೂರು: ವಾಹನಗಳನ್ನು ಕಳವು ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು  ತಿಪಟೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಾಹನಗಳನ್ನು ಬೆಂಗಳೂರು, ಹೊಸದುರ್ಗ, ಶಿವಮೊಗ್ಗ ,ತರೀಕೆರೆ, ದಾವಣಗೆರೆ ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದೆ ಓಡಿಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು,  ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಬೈಕ್ ಕಳವು ಜಾಲದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಭದ್ರಾವತಿ, ಸಂಜಯ್, ಕಾರ್ತಿಕ್, ಉಮೇಶ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಿಂದ 10 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಸಿದ್ದಾರ್ಥ ಗೋಯಲ್ , ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀಶೈಲಮೂರ್ತಿ,  ಸಬ್ ಇನ್ಸ್ಪೆಕ್ಟರ್ ದ್ರಾಕ್ಷಾಯಿಣಿ ಕೆ.,  ಎಸ್ ಐ ನಿಶಾ,  ಅಹ್ಮದ್ ಎ.,  ಶ್ರೀರಾಮಣ್ ಪೇದೆಗಳಾದ…

Read More

ಬೆಂಗಳೂರು: ಬೇಡಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಲುವಾಗಿ ಹೋರಾಟ ಹಿನ್ನೆಲೆ ಬೆಂಗಳೂರಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ಶಿರಾ ಟೋಲ್ ಗೇಟ್ ಬಳಿ ಪೊಲೀಸರು ತಡೆದಿದ್ದಾರೆ. ಇಂದು  ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆಂದು ತೆರಳುತ್ತಿದ್ದವರನ್ನು ಪೊಲೀಸರು  ಶಿರಾ ಟೋಲ್ ಗೇಟ್ ಬಳಿ ತಡೆದಿದ್ದಾರೆ. ಪ್ರತಿಭಟನಾಕಾರರ ಪೈಕಿ ಮಠಾಧೀಶರು ಕೂಡ ಇದ್ದು, ಮಠಾಧೀಶರನ್ನೂ  ಪೊಲೀಸರು ತಡೆದು ನಿಲ್ಲಿಸಿದ್ದಾರೆ. ನೂರಾರು ವಾಹನಗಳ ಮೂಲಕ ಪ್ರತಿಭಟನಾಕಾರರು ಬೆಂಗಳೂರಿಗೆ ಹೊರಟಿದ್ದರು. ಪ್ರತಿಭಟನಾಕಾರರನ್ನು ತಡೆದಿದ್ದರಿಂದ ಆಕ್ರೋಶಗೊಂಡ ಸಾವಿರಾರು ಪ್ರತಿಭಟನಾಕಾರರು ಸ್ಥಳದಲ್ಲೇ ಧರಣಿ ನಡೆಸುವ ಮೂಲಕ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟವನ್ನು  ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಗುಬ್ಬಿ: ವಿದ್ಯುತ್ ಲೈನ್ ಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ಬೆಳೆದು ನಿಂತ ಅಡಿಕೆ ಹಾಗೂ  ಎಲೆ ಅಂಬುಗಳನ್ನು ಬೆಸ್ಕಾಂ ಅಧಿಕಾರಿಗಳು  ಕತ್ತರಿಸಿ ಹಾಕಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಗುಬ್ಬಿ ತಾಲೂಕು ಕಸಬಾ ಹೋಬಳಿಯ ಹಳೇಗುಬ್ಬಿ ಗ್ರಾಮದ  ಗಂಗ ರೇವಣ್ಣ ರವರಿಗೆ ಸೇರಿದ ಸರ್ವೆ ನಂಬರ್ 101/4 ರಲ್ಲಿ ಬೆಸ್ಕಾಂನ ವಿದ್ಯುತ್ ತಂತಿಗಳು ತೋಟದ ಮಧ್ಯೆ ಭಾಗದಲ್ಲಿ ಸುಮಾರು ವರ್ಷಗಳಿಂದ ಇದ್ದರು ಸಹ ಅದನ್ನು ಪರ್ಯಾಯವಾಗಿ ಸ್ಥಳಾಂತರ ಮಾಡದೇ ಇಂದು ಬೆಸ್ಕಾಂ ಸಿಬ್ಬಂದಿ ತೋಟದಲ್ಲಿ ಕಾಡು ತೆರವುಗೊಳಿಸುವ ನೆಪದಲ್ಲಿ   ಲೈನ್ ಮ್ಯಾನ್ ಗಳು ಹಾಗೂ ಎಸ್. ಓ ಜಮೀನಿನ ಮಾಲೀಕರಿಗೆ ಯಾವುದೇ  ಯಾವುದೇ ಮಾಹಿತಿ ನೀಡದೆ ಏಕಾಏಕಿ ಸುಮಾರು ಎಂಟರಿಂದ 10 ಫಲ ಬಿಡುವ ಅಡಿಕೆ ಮರಗಳನ್ನು ಹಾಗೂ ಅಡಿಕೆ ಮರಕ್ಕೆ ಎಬ್ಬಿಸಿರುವ ಎಲೆ ಅಂಬು ಗಳನ್ನು ಸಹ ಮಾನವೀಯತೆ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿ ದುರ್ವತನೆ ತೋರಿದ್ದಾರೆ ಎಂದು ರೈತ  ಗಂಗ ರೇವಣ್ಣ ಮತ್ತು ಕುಟುಂಬದವರು ಅಳಲಲು ತೊಂಡಿಕೊಂಡಿದ್ದಾರೆ. ಸುಮಾರು…

Read More

ಗುಬ್ಬಿ: ತಾಲೂಕಿನ ಬೋಚಿಹಳ್ಳಿ ಗ್ರಾಮದಲ್ಲಿ ಸುಮಾರು 35 ವರ್ಷದ ಮಹಿಳೆಯ  ಮೃತದೇಹ ಪತ್ತೆಯಾಗಿದ್ದು, ಬಾಯಿಗೆ ಬಟ್ಟೆಯನ್ನು ತುರುಕಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಮಹಿಳೆಯ ಬಾಯಿಗೆ ಬಟ್ಟೆ ತುರುಕಿಸಿ ಹತ್ಯೆ ಮಾಡಲಾಗಿರುವ ಸ್ಥಿತಿ ಕಂಡು ಬಂದಿದ್ದು, ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ.  ಯಾರಿಗಾದರೂ ಚಹರೆ ತಿಳಿದು ಬಂದಲ್ಲಿ ಗುಬ್ಬಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ  ಪೊಲೀಸ್ ವೃತ್ತ ನಿರೀಕ್ಷಕ ನದಾಫ್ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ. ಜಿ ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯು ನಡೆಯಿತು. ತಾಲ್ಲೂಕು ದಂಡಾಧಿಕಾರಿ ನಹೀದಾ ಜಮ್ ಜಮ್, ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಜಿ ದೀಪಶ್ರೀ, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ, ಸಿ ಪಿ ಐ ಸಿದ್ದರಾಮೇಶ್ವರ್ ಮತ್ತು ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಶಾಸಕರ ಡಾ.ಜಿ.ಪರಮೇಶ್ವರ್ ಆದೇಶ ನೀಡಿದರು. ಮೊದಲಿಗೆ ಕೃಷಿ ಇಲಾಖೆಯ ಎಡಿಎ ನಾಗರಾಜು ತಮ್ಮ ಇಲಾಖೆಯಲ್ಲಿ ಬರುವಂತಹ ಅನುದಾನಗಳನ್ನು ಮತ್ತು ಪೂರ್ಣಗೊಂಡಿರುವ ಅಭಿವೃದ್ಧಿ ಸಭೆಯಲ್ಲಿ ತಿಳಿಸಿದರು. ಕೃಷಿ ಹೊಂಡಗಳನ್ನು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಸದ್ಯಕ್ಕೆ ಬಂದ್ ಮಾಡಲಾಗಿದೆ, ಕೃಷಿ ಹೊಂಡಗಳ ಅಭಿವೃದ್ಧಿಗೆ ಕಾರ್ಯ ಆಗುತ್ತಿಲ್ಲವೆಂದು ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ಪರಮೇಶ್ವರ್ ಅವರು ಪ್ರತಿಕ್ರಿಯಿಸಿ ಕೂಡಲೇ ನನಗೆ ಪತ್ರವನ್ನು ಬರೆಯಿರಿ, ನಾನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ…

Read More

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ವಿಜೇತ  ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ  ಡಾ.ಮೋಹನ್, ಸಮಾಜ ಸೇವಕ ಬಿ.ಆರ್.ಶಶಿಧರ್   ಮತ್ತು ಸೋಮಶೇಖರ್ (ಕೆಇಬಿ)   ಮಾತನಾಡಿದರು. ಆಯೋಜಕ ಮತ್ತು ಅಧ್ಯಕ್ಷ ಬಿ.ಟಿ.ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಸದಸ್ಯ ರಮೇಶ್,  ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಗರ ಕಾರ್ಯದರ್ಶಿ ಲೋಕೇಶ್, ಅಲ್ಪಸಂಖ್ಯಾತರ ಘಟಕದ ಅನ್ವರ್, ಎಪಿಎಂಸಿ ಮಾಜಿ ಸದಸ್ಯ ಶಿವಕುಮಾರ್ ಮುಖಂಡರಾದ ಲಿಂಗರಾಜ್, ಗಂಗಾಧರ್,ಸಂಗೀತ ರಮೇಶ್,ಈಶ್ವರಪ್ಪ, ಜಯಣ್ಣ, ರೋಟರಿ ನಿರ್ದೇಶಕ ಗವಿಯಣ್ಣ, ಲಕ್ಷ್ಮಿ ಕ್ರಿಕೆಟರ್ಸ್ ನ ಚಿರಂಜೀವಿ ಮತ್ತು ರವಿ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಹಾಗೂ  ಕ್ರೀಡಾಭಿಮಾನಿಗಳು  ಭಾಗವಹಿಸಿದ್ದರು. ಈ ಪಂದ್ಯಾವಳಿಗೆ ಸುಮಾರು ಇಪ್ಪತ್ತಾರು ತಂಡಗಳು ಭಾಗವಹಿಸಿದ್ದು, ಮೊದಲನೇ ಬಹುಮಾನ 10.000/- ರೂಗಳನ್ನು ಸಾರ್ಥವಳ್ಳಿಯ ಲಕ್ಷ್ಮಿ ಕ್ರಿಕೆಟರ್ಸ್ ತಂಡ, ದ್ವಿತೀಯ ಬಹುಮಾನ 7,000/-ರೂಗಳನ್ನು ತಿಪಟೂರು…

Read More

ಕೊರಟಗೆರೆ: ತಿನ್ನುವ ಅನ್ನದಲ್ಲೂ ಧೂಳು, ಕುಡಿಯುವ ನೀರಿನಲ್ಲೂ  ಧೂಳು.. ಹೌದು ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ  ಬಿಕ್ಕೆಗುಟ್ಟೆ ಗ್ರಾಮದ ಬಳಿ ನಡೆಯುತ್ತಿರುವ ಕ್ರಷರ್‍ ಗಳ ಹಾವಳಿಯಿಂದ  ಜನರು ಮಣ್ಣನ್ನು ತಮ್ಮ ಆಹಾರವಾಗಿ ಮತ್ತು ಕುಡಿಯುವ ನೀರಾಗಿ  ಬಳಸುತ್ತಿದ್ದಾರೆ. ಜನರು ಮಾತ್ರವಲ್ಲದೇ ಅಮಾಯಕ  ಮೂಕ ಪ್ರಾಣಿಗಳು ಧೂಳು ಸೇವಿಸುವಂತಾಗಿದೆ. ಇದರಿಂದ ಜನರು ಪ್ರಾಣ ಭೀತಿಯಲ್ಲಿ ದಿನ  ನಿತ್ಯ ಜೀವನ ಕಳೆಯುವಂತಾಗಿದೆ. ಪ್ರತಿನಿತ್ಯ ಕ್ರಷರ್ ನಿಂದ ಸಿಡಿಸುವ ಸಿಡಿ ಮದ್ದುಗಳಿಂದಾಗಿ ಶಬ್ಧ ಮಾಲಿನ್ಯಉಂಟಾಗುವುದಷ್ಟೇ ಅಲ್ಲದೇ ಪಕ್ಕದಲ್ಲೇ ಇರುವ ಗ್ರಾಮಗಳಿಗೆ ಒಂದುನರಕವಾಗಿ ಪರಿಣಮಿಸಿದೆ. ಸದಾ ಧೂಳಿನಿಂದ ಕೂಡಿಕೊಂಡಿರುವ ಈ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿ ಜನರು ಬೇರೆ ಪ್ರದೇಶಗಳಿಗೆ  ಹೋಗುವುದೊಂದೇ ಬಾಕಿ ಉಳಿದಿದೆ. ಬಿಕ್ಕೆಗುಟ್ಟೆ ಗ್ರಾಮದಲ್ಲಿನ ಜನರು ಒಂದಿಲ್ಲೊಂದು ಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ, ಸತ್ತವರಿಗೆ ಮಣ್ಣು ಹಾಕುತ್ತಿದ್ದಾರೆ. ಇನ್ನೊಂದೆಡೆ ಮೂಕ ಪ್ರಾಣಿಗಳ ವೇದನೆಯನ್ನು ಕೇಳುವವರು ಯಾರು?  ಅವುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ತಿನ್ನುವ ಹುಲ್ಲಿನ ಮೇಲೆ…

Read More

ಹಿರಿಯೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ 230 ನೇ ಪುಣ್ಯಸ್ಮರಣೆಗೆ ಹಿರಿಯೂರು ನಗರದ ಜಾಮೀಯ ಮಸೀದಿಯ ಕಾರ್ಯದರ್ಶಿ ಮಹಮ್ಮದ್ ರಫೀಉಲ್ಲಾ   ಹಾಗೂ ಅಧ್ಯಕ್ಷರಾದ ಬಿ.ಎಸ್.ನವಾಬ್ ಸಾಬ್ ರವರ ಅಧ್ಯಕ್ಷತೆಯಲ್ಲಿ  ಚಾಲನೆ ನೀಡಲಾಯಿತು. ಹಿರಿಯೂರು ನಗರದ ದರ್ಗಾದಲ್ಲಿ ಟಿಪ್ಪು ಸುಲ್ತಾನ್ ಗೆ  ಪೂಜೆ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಟಿಪ್ಪು ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷ ಸಮೀವುಲ್ಲಾ,  ಟಿಪ್ಪು ಸುಲ್ತಾನ್ ಕೊಡುಗೆಯನ್ನು ಯುವಜನರಿಗೆ ತಿಳಿಸಬೇಕಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯಾವುದೇ ವ್ಯಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇದಲ್ಲದೆ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಿಟ್ಟ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಅಪಾರವಾದ ದೇಶ ಪ್ರೇಮ, ಆಡಳಿತ ಕೌಶಲ್ಯ, ಹೀಗೆ ಇವರ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು. ಭಾರತವನ್ನು ಆಕ್ರಮಿಸಿದ್ದ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸಲು ಮುಂದಾದ ಮೊದಲ ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್. ಅವರ ತಂದೆ ಹೈದರಾಲಿ ಮೈಸೂರು ರಾಜ್ಯದ ಸಂರಕ್ಷಣೆಗೆ ಯುದ್ಧ ಮಾಡಿದವರು.…

Read More

ತುಮಕೂರು: ವಿದ್ಯಾರ್ಥಿನಿಯ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದಲ್ಲಿ ಶಿಕ್ಷನೋರ್ವನನ್ನು ಅಮಾನತು ಮಾಡಿದ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ. ಸುರೇಶ್ ಎಂಬಾತ ಅಮಾನತ್ತಾದ ಶಿಕ್ಷಕನಾಗಿದ್ದು, ದೊಡ್ಡಹಟ್ಟಿ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದಾನೆ. ಈತ ವಿದ್ಯಾರ್ಥಿಗಳ ಪೋಷಕರ ನಂಬರ್ ಪಡೆದು, ಅಶ್ಲೀಲ ಸಂದೇಶಗಳನ್ನು ಈ ಶಿಕ್ಷಕ ರವಾನಿಸುತ್ತಿದ್ದ ಎನ್ನಲಾಗಿದೆ. ಶಾಲೆಯ ಬಳಿಕ ತಾಯಂದಿರ ವಾಟ್ಸಾಪ್ ಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಈ ಶಿಕ್ಷಕನ ವಿರುದ್ಧ ಗ್ರಾಮದ ಮಹಿಳೆಯರು ಡಿಡಿಪಿಐಗೆ ದೂರು ನೀಡಿದ್ದರು. ಶಿಕ್ಷಕ ಸುರೇಶ್ ಗ್ರಾಮದ ಯುವಕರೊಂದಿಗೆ ಸೇರಿಕೊಂಡು ಪ್ರತಿನಿತ್ಯ ಪಾರ್ಟಿ ಮಾಡಿ ಮಾಡುತ್ತಿರುವ ಆರೋಪ ಕೂಡ ಜೇಲಿ ಬಂದಿದ್ದು, ಈ ಬಗ್ಗೆ ತನಿಖೆಯ ಬಳಿಕ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ಶಿಕ್ಷಕನನ್ನು ಅಮಾನತುಗೊಳಿಸಿ ಕ್ರಮಕೈಗೊಂಡಿದ್ದಾರೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುರುವೇಕೆರೆ: ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಸಾರಿಗೆಹಳ್ಳಿಯಲ್ಲಿ ನಡೆದಿದೆ‌. ಯೋಗಾನಂದ (45) ಎಂಬ ವ್ಯಕ್ತಿ ಬೆಳಿಗ್ಗೆ 7:30ರ ಹೊತ್ತಿಗೆ ಹೆಂಡತಿ ಮತ್ತು ಮಗುವಿನ ಜೊತೆ ಈಜಲು ಹೋಗಿದ್ದು, ಈಜಲಾಗದೆ, ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತುರುವೇಕೆರೆ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ನೀರಿನಿಂದ ಶವವನ್ನು  ಹೊರ ತೆಗೆದಿದ್ದಾರೆ. ಈ ವೇಳೆ ದಂಡಿನ ಶಿವರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. ವರದಿ : ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More