Author: admin

ಮೈಸೂರು: ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೈಮುಲ್ ಅಧಿಕಾರಿಗಳು ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಮುಲ್ ಅಧ್ಯಕ್ಷ ಪ್ರಸನ್ನ, ಈ ಪ್ರಕರಣದಲ್ಲಿ ಮುರುಗೇಶ್, ಅಶ್ವಿನಿ, ಸಂತೋಷ್, ಕುಮಾರ್ ಎಂಬುವವರ ವಿರುದ್ಧ ನೇರವಾಗಿ ಎಸ್ಪಿಗೆ ದೂರು ನೀಡಿದ್ದು, ಈ ಸಂಬಂಧ ಎಫ್‌ ಐಆರ್ ಕೂಡ ದಾಖಲಾಗಿದೆ ಎಂದು ತಿಳಿಸಿದರು. ನಾನು ಕೂಡಾ ಸ್ಥಳ ಪರಿಶೀಲನೆ ಮಾಡಿ ಬಂದಿದ್ದು, ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೇ ಭಾಗಿಯಾದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ನಮ್ಮ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೇವೆಯಿಂದಲೇ ವಜಾ ಮಾಡುತ್ತೇವೆ, ಜೈಲಿಗೂ ಕಳುಹಿಸುತ್ತೇವೆ. ಅನೇಕ ದಿನಗಳಿಂದ ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಎಂಬುದು ತಿಳಿದು ಬಂದಿದ್ದು, ಅಲ್ಲಿಗೂ ನಾವು ಭೇಟಿ ನೀಡಿ,…

Read More

ಬೆಳಗಾವಿ: ಜಿಲ್ಲೆಯ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು  ಭಗ್ನಗೊಳಿಸಿರುವ ಘಟನೆ ನಡೆದಿದೆ ಮೂರ್ತಿಯ ಮುಖದ ಭಾಗವನ್ನು ಕಿಡಿಗೇಡಿಗಳು ತಲ್ವಾರ್ ನಿಂದ ವಿರೂಪಗೊಳಿಸಿದ್ದಾರೆ. ಪ್ರತಿಮೆಯಲ್ಲಿದ್ದ ಖಡ್ಗವನ್ನು ಕಿತ್ತು ಹಾಕಿದ್ದಾರೆ. ಬೆಳಗ್ಗಿನ ಜಾವ 3ರ ಸುಮಾರಿಗೆ ಈ ಕೃತ್ಯ ನಡೆಸಿರುವ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ತಿಲಕವಾಡಿ ಠಾಣೆ ಪೊಲೀಸರು, ಪ್ರತಿಮೆಯನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ  ರಾಯಣ್ಣ ಅಭಿಮಾನಿ ಸಂಘಟನೆಗಳು ತಿಲಕವಾಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಮೈಸೂರು: ಲೋಕಾಯುಕ್ತ ಇರುತ್ತಿದ್ದರೆ, ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಹೆಚ್.ವಿಶ್ವನಾಥ್ ಹೇಳಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಅವರು ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅನುಭವಿಗಳು. ಸದನದಲ್ಲಿ ಮಾತನಾಡುವುದನ್ನು ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಸಮಂಜಸವಲ್ಲ.40% ಕಮಿಷನ್ ಬಗ್ಗೆ ತನಿಖೆಯಾಗಬೇಕು ಅನ್ನೋದನ್ನು ಸದನದ ಒಳಗೆ ಕೇಳಬೇಕು. ಅದಕ್ಕೆ ಪೂರಕ ಸಾಕ್ಷಿ ದಾಖಲೆಯೊಂದಿಗೆ ಕೇಳಬೇಕು. ನೀವು ಮಾತ್ರ ಸತ್ಯವಂತರು‌ ಬಿಜೆಪಿ ಪರ್ಸೆಂಟೇಜ್ ಎಂದು ಅವರು ಹೇಳುತ್ತಾರೆ. ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತೇನೆ ಎಂದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕೆ ಶಿವಕುಮಾರ್ ರಿಂದ 7 ಸಾವಿರ ಕೋಟಿ ಸೋಲಾರ್ ಟೆಂಡರ್ ಕೇವಲ 3 ನಿಮಿಷದಲ್ಲಿ ಮುಗಿಸಿದ್ದರು. ಸತ್ಯವಂತ ಸಿದ್ದರಾಮಯ್ಯ ಲೋಕಾಯುಕ್ತ ಏಕೆ ಸ್ಕ್ಯ್ರಾಪ್ ಮಾಡಿದಿರಿ.? ಲೋಕಾಯುಕ್ತ ಬಿ. ಎಸ್. ಯಡಿಯೂರಪ್ಪ ಅವರನ್ನು ಸಿಎಂ ಆಗಿದ್ದಾಗಲೇ ಜೈಲಿಗೆ ಹಾಕಿತ್ತು. ಅರ್ಕಾವತಿ ರೀ ಡೂ ಹೊಸ ಹೆಸರು ನೀಡಿದಿರಿ. ಲ್ಯಾಂಡ್ ಡೀ ನೋಟಿಫಿಕೇಶನ್‌…

Read More

ಬೆಂಗಳೂರು: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಅವರು ಬೈದಾಡಿಕೊಳ್ಳುತ್ತಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಸಿಎಂ ಇಬ್ರಾಹಿಂ, ತಿರುಚಿದ ವಿಡಿಯೋವನ್ನು ವೈರಲ್ ಮಾಡಲಾಗಿದ್ದು, ಈ ವಿಡಿಯೋವನ್ನೇ ಬ್ರಾಡ್ ಕಾಸ್ಟ್ ಮಾಡಲಾಗಿದೆ. ಇದು ಭಾರೀ ನೀಚವಾಗಿರುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರಿಗೆ ಧೈರ್ಯವಾಗಿ ಎದುರಿಗೆ ಬಂದು ನಿಂತು ಹೋರಾಟ ಮಾಡುವ ಶಕ್ತಿ ಇಲ್ಲವೋ, ಅಂತಹ ಜನ ಈ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಲು ಕಾರಣವಾಗಿದೆ. ಈ ಬಗ್ಗೆ ನಿನ್ನೆಯೇ ನಾನು ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಅಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಈ ವಿಡಿಯೋದಲ್ಲಿ ಏನು ಬಿಂಬಿಸಲಾಗಿದೆ ಅದು ತಪ್ಪು ಎಂದರು. ಈ ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದವರ ವಿರುದ್ಧ ನಾನು ಈಗಾಗಲೇ ಸೈಬರ್ ಠಾಣೆಗೆ ದೂರು ದಾಖಲಿಸಿದ್ದು,…

Read More

ತಿಪಟೂರು: ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತಿಪಟೂರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ, ಸೂಗೂರುವತಿಯಿಂದ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಮತ್ತು ಉಚಿತ ಚಿಕಿತ್ಸಾ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ಸುಮಾರು 300 ಜಾನುವಾರುಗಳಿಗೆ ಆರೋಗ್ಯ ತಪಾಸಣೆ, ಜಂತು ನಾಶಕ ವಿತರಣೆ, ಖನಿಜ ಮಿಶ್ರಣ ವಿತರಣೆ ನಡೆಸಲಾಯಿತು. ಶಿಬಿರದಲ್ಲಿ‌‌ ಪ್ರದರ್ಶಿಸಲಾದ ಅತ್ಯುತ್ತಮ ಮಿಶ್ರತಳಿ ಹಸುಗಳಿಗೆ ಮತ್ತು ಕರುಗಳಿಗೆ ಬಹುಮಾನ ವಿತರಿಸಲಾಯಿತು. ಹುಣಸೇಘಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ  ದಕ್ಷಿಣ ಮೂರ್ತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಶುಆಸ್ಪತ್ರೆ, ತಿಪಟೂರಿನ ಸಹಾಯಕ ನಿರ್ದೇಶಕರಾದ ಡಾ. ನಂದೀಶ್ ಕೆ.ಜೆ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಪಶುಪಾಲಕರಿಗೆ ಜಾನುವಾರುಗಳಲ್ಲಿ ಲಸಿಕೆಯ ಮಹತ್ವ‌ ಮತ್ತು ಕರುಗಳ ಪಾಲನೆ ಬಗ್ಗೆ ತಿಳಿಸಿದರು. ಸಭೆಯಲ್ಲಿ ಸೂಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸೋಮಶೇಖರ್, ಕಾರ್ಯದರ್ಶಿ ಸುರೇಶ್, ಗ್ರಾಮಪಂಚಾಯತಿ ಉಪಾದ್ಯಕ್ಷರಾದ ಜಯಂತಿ, ಸದಸ್ಯರಾದ ಮಾದೇವಯ್ಯ, ಶಿವಗಂಗಮ್ಮ, ಕವಿತ, ಮುಖಂಡರಾದ ದೇವರಾಜು ಉಪಸ್ಥಿತರಿದ್ದರು. ಪಶುವೈದ್ಯರಾದ ಡಾ.ಮೃತ್ಯುಂಜಯ, ಡಾ.ಪರ್ವೇಜ್ ಪಾಶ,…

Read More

ತುಮಕೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ  ಶುಕ್ರವಾರ ಪ್ರತಿಭಟನೆ ನಡೆಸಿ, ತುಮಕೂರಿನ ಪ್ರಭಾರ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು. ರಾಜ್ಯಾಧ್ಯಕ್ಷ ರಂಗನಾಥ್ ತುಮಕೂರು, ಡಿಎಸ್ ಎಸ್ ಮುಖ್ಯಸ್ಥರಾದ ನಿಧಿಕುಮಾರ್ ಹಾಗೂ ಗೋವಿಂದಣ್ಣ ರಾಜ್ಯ ಕಾರ್ಯದರ್ಶಿ ರಮೇಶ G R , ಪ್ರಧಾನ ಕಾರ್ಯದರ್ಶಿ ರಘು ತುಮಕೂರು,  ಜಿಲ್ಲಾ ಗೌರವಾಧ್ಯಕ್ಷರಾದ ರಮೇಶ್ N,  ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಜ.ಬಿ. ಗ್ರಾಮಾಂತರ ಅಧ್ಯಕ್ಷರಾದ ಗಿರಿ ಸ್ವಾಮಿ, ಕಾನೂನು ಸಲಹೆಗಾರರ ರಜನಿಕಾಂತ್, ಕೊರಟಗೆರೆ ಕಾರ್ಯದರ್ಶಿ ರಾಜಣ್ಣ, ಕುಣಿಗಲ್ ತಾಲೂಕ್ ಅಧ್ಯಕ್ಷರಾದ ವರದರಾಜ್ , ಹೆಬ್ಬೂರು ಹೋಬಳಿ ಅಧ್ಯಕ್ಷರಾದ ಚೇತನ್ ಕುಮಾರ್ ಹಾಗೂ ತುಮಕೂರು ಜಿಲ್ಲೆ ಪರಮೇಶ್ವರ್ ಯುವ ಸೈನ್ಯ ಮುಖಂಡರು ಭಾಗವಹಿಸಿದ್ದರು. ವಿಡಿಯೋ ನೋಡಿ: ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ ಗ್ರಾಮದ  ಚಿಕ್ಕಬಸವಯ್ಯ ಬಿನ್ ಚನ್ನಬಸವಯ್ಯ ಎಂಬವರ ಮನೆಗೆ ದಾಳಿ ನಡೆಸಿದ ಕೊರಟಗೆರೆ ಅರಣ್ಯಧಿಕಾರಿಗಳು ಒಂದು ಕೆ.ಜಿ. 50 ಗ್ರಾಂ. ಕರಡಿಯ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದ್ದು,  ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕ ಬಳಸಿರುವ  ಆಯುಧ ಹಾಗೂ ಕರಡಿಯ ದೇಹದ ಭಾಗಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಡಿಸೆಂಬರ್ 10ರಂದು  ಬೆಳಗ್ಗೆ 9 ಗಂಟೆಯ ವೇಳೆಗೆ ಗೌಜಗಲ್ ಗ್ರಾಮದ ಚನ್ನಬಸವಯ್ಯ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕರಡಿ ಮಾಂಸ ವಶಪಡಿಸಿಕೊಂಡಿದ್ದು,  ಬಳಿಕ  11ರಂದು  ಇಲ್ಲಿಮ ಗೌಜಕಲ್ಲು ಎಂಬಲ್ಲಿನ ಖಾಸಗಿ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿರುವುದನ್ನು ಪತ್ತೆ ಹಚ್ಚಲಾಗಿದ್ದು, ಕರಡಿಯ ಇತರ ದೇಹದ ಭಾಗಗಳು ಅಲ್ಲಿ ದೊರೆತಿದ್ದು, ಕೃತ್ಯಕ್ಕೆ ಬಳಸಿರುವ ಮಚ್ಚು ಕೂಡ ಸ್ಥಳದಲ್ಲಿ ದೊರೆತಿತ್ತು. ಘಟನೆಗೆ ಸಂಬಂಧಿಸಿದಂತೆ ಚನ್ನಬಸಯ್ಯ ಸೇರಿದಂತೆ 6ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ವಿರುದ್ಧ  ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ ನಿಮ್ಮ…

Read More

ಮಧುಗಿರಿ: ಪಟ್ಟಣದ  ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಜಾಗೃತಿ ವೇದಿಕೆ, ಮಧುಗಿರಿ ತಾಲೂಕು ಘಟಕ ವತಿಯಿಂದ ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಪುಂಡರು ನಾಡಧ್ವಜ ಕನ್ನಡ ಬಾವುಟವನ್ನು ಸುಟ್ಟಿರುತ್ತಾರೆ, ಇಂತಹ ಕಿಡಿಗೇಡಿಗಳ ಮೇಲೆ ಸರ್ಕಾರ ಕೂಡಲೇ  ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ರಾಜ್ಯದಲ್ಲಿ ಎಂ.ಇ.ಎಸ್. ಮತ್ತು ಶಿವಸೇನೆಯ ಸಂಘಟನೆಯನ್ನು ನಿಷೇಧಿಸಬೇಕು.  ಈ ಕೃತ್ಯ ಎಸಗಿದ ಶಿವಸೇನೆ ಮತ್ತು ಎಂ.ಇ.ಎಸ್. ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.  ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಸಾದ್, ಶಿವಲಿಂಗಯ್ಯ, ರಾಮಾಂಜಿನಮ್ಮ, ರತ್ನಮ್ಮ, ಐಡಿಹಳ್ಳಿ ಬಾಲು, ರಾಜು ರೋಹಿತ್, ಮಹೇಶ್, ಇಲಿಯಸ್, ಪ್ರಭು ಮತ್ತಿತರು ಹಾಜರಿದ್ದರು. ವರದಿ: ಅಬಿದ್ ಮಧುಗಿರಿ  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ:…

Read More

ತುಮಕೂರು: ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ನಗರದ ಊರುಕೆರೆಯ ಬಳಿಯಿಂದ ಕ್ಯಾತ್ಸಂದ್ರ ಟೋಲ್ ನ ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಹಾಗೂ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಅಡ್ಡಲಾಗಿ ಕೂತು ಪ್ರತಿಭಟನೆ ನಡೆಸಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ಪ್ರತಿ ದಿನ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರ ಗೋಳು ಹೇಳತೀರದ್ದಾಗಿದೆ. ಇದೇ…

Read More

ಬೆಳಗಾವಿ: ಎಸ್ಸಿ, ಎಸ್ಟಿ ಜನಾಂಗಗಳ ಭೂಮಿ ಹಕ್ಕು ಹೋರಾಟಕ್ಕೆ ಮರು ಚಾಲನೆ ದೊರೆತಿದ್ದು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘಗಳ ಜಂಟಿ ಆಶ್ರಯದಲ್ಲಿ, ಡಾ.ವೆಂಕಟಸ್ವಾಮಿ ನೇತೃತ್ವದಲ್ಲಿ ಬೆಳಗಾವಿ ಚಲೋ ನಡೆಯಿತು. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ನಿಂದ ಮೆರವಣಿಗೆ ನಡೆಸಿ, ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇಧ(PTCL Act-1978) ಕಾಯ್ದೆಯ ಸಮಗ್ರ ತಿದ್ದುಪಡಿ ಮಸೂದೆ ಅಂಗೀಕರಿಸಲು ಒತ್ತಾಯಿಸಲಾಯಿತು.  ಬೃಹತ್ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಭೂಮಿ ಹಕ್ಕು ಕೇಳಿ ಘೋಷಣೆ ಕೂಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಡಾ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ  ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಯಲದಬಾಗಿ ರಾಜಣ್ಣ ಮತ್ತು ಸಂಘದ ಪದಾಧಿಕಾರಿಗಳು ಭಾಗಿಯಾಗಿಯಾಗಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More