Subscribe to Updates
Get the latest creative news from FooBar about art, design and business.
- ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
- ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
- ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
- ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ; ಎಫ್ ಐಆರ್ ದಾಖಲು
- ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಮೊರೆ ಹೋದ ಸಿಎಂ ಡಿಕೆಶಿ
- KPSC ಅಕ್ರಮ ಹಾಗೂ ಬಿಡದಿ ಟೌನ್ ಶಿಪ್ ವಿವಾದ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ BJP–JDS ಸಜ್ಜು
- ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ?: ಪರಿಶೀಲಿಸುವುದು ಹೇಗೆ? ತಪ್ಪದೇ ಈ ಸುದ್ದಿ ಓದಿ
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
Author: admin
ಪಾವಗಡ: ದಲಿತ ನೌಕರೆ ತಂದ ತಿಂಡಿ, ಚಾ ಕಾಫಿ ಇವರ ಗಂಟಲಲ್ಲಿ ಇಳಿಯಲ್ವಂತೆ? ನೀನು ಚಾ ತಿಂಡಿ ತಂದ್ರೆ, ನಾನು ತಿನ್ನಲ್ಲ ಎಂದು ಜಾತಿಯ ಹೆಸರೆತ್ತಿ ದಲಿತ ನೌಕರರೊಬ್ಬರನ್ನು ಗ್ರಾಮ ಪಂಚಾಯತ್ನ ಸದಸ್ಯೆ ನಿಂದಿಸಿರುವ ಘಟನೆ ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಹರಿಹರಪುರ ಸದಸ್ಯೆ ಅರುಂಧತಿ ನಾಗಲಿಂಗಪ್ಪ ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯತ್ ಸಭೆಗಳು ನಡೆದಾಗ ನೌಕರೆ ದಲಿತ ಹೆಣ್ಣು ಮಗಳಾದ ಧಾಮಸ ಅವರು, ಹೊಟೇಲ್ ನಿಂದ ತಿಂಡಿ ತಂದು ಕೊಟ್ಟಾಗ ನೀನು ತಂದ ಊಟ ತಿಂಡಿಯನ್ನು ನಾವು ತಿನ್ನುವುದಿಲ್ಲ, ಎಂದು ಜಾತಿಯ ಹೆಸರೆತ್ತಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದೇ ಅಲ್ಲದೇ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ. ಘಟನೆಯ ಹಿನ್ನೆಲೆ: ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಮಾರಣ್ಣ ಎಂಬುವವರು 15 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು…
ಕೊರಟಗೆರೆ: ತುಮಕೂರು ಉಪವಿಭಾಗಾಧಿಕಾರಿ ಅಜಯ್ ಕುಮಾರ್ ಅವರು ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರನ್ನು ಹೊರಗಿಟ್ಟು ಕಚೇರಿಯೊಳಗೆ ತನ್ನ ಹುಟ್ಟು ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಘಟನೆ ನಡೆದಿದ್ದು, ಘಟನೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಉಪವಿಭಾಗಾಧಿಕಾರಿ ಅಜಯ್ ಕುಮಾರ್ ಅವರು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಪ ವಿಭಾಗಾಧಿಕಾರಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದಲಿತ ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜು ಒತ್ತಾಯಿಸಿದ್ದಾರೆ. ಎಸಿ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜ್, ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾದ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಕ್ರಮವಹಿಸಲು ಒತ್ತಾಯಿಸಿದ್ದಾರೆ. ವಿಶ್ವ ಮಾನವ ಹಕ್ಕುಗಳ ಹೋರಾಟಗಾರರಾದ ಕೊರಟಗೆರೆ ನವೀನ್ ಕುಮಾರ್ ಮಾತನಾಡಿ, ಮಳೆಯಿಂದಾಗಿ ಜನರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಪರಿಹಾರ, ಮನೆಗಳ ದುರಸ್ತಿ ಕ್ರಮಕ್ಕೆ ಮುಂದಾಗದೇ ಉಪವಿಭಾಗಾಧಿಕಾರಿಯವರು ಕಚೇರಿ ವೇಳೆಯಲ್ಲಿ ಸರ್ಕಾರಿ ಕಚೇರಿಯಲ್ಲಿಯೇ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.…
ಕೊರಟಗೆರೆ: ಕೆರೆಯಲ್ಲಿ ಈಜಲು ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಹನುಮಂತಪುರದ ಪ್ರಿಯದರ್ಶಿನಿ ಕಾಲೇಜ್ ಹಿಂಭಾಗದಲ್ಲಿರುವ ಹೊಸಕೆರೆಯಲ್ಲಿ ನಡೆದಿದೆ. ಬಿ ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿರುವ ಗೌತಮ್ ಸಿಂಗ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಒಟ್ಟು 12 ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ಹೋಗಿದ್ದು, ಈ ಪೈಕಿ ಇಬ್ಬರಿಗಷ್ಟೇ ಈಜು ಬರುತ್ತಿತ್ತು ಎನ್ನಲಾಗಿದೆ. ಈಜು ಬರುತ್ತಿದ್ದವರು ಆಳ ನೀರಿನಲ್ಲಿ ಈಜುತ್ತಿದ್ದು, ಇದನ್ನು ಕಂಡ ಇತರ ವಿದ್ಯಾರ್ಥಿಗಳು ಕೂಡ ಆಳ ನೀರಿನತ್ತ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ಗೌತಮ್ ಸಿಂಗ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿರುವುದರಿಂದ ಡಿ.ಕೆ. ಶಿವಕುಮಾರ್ ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡ ನೋಟಿಸ್ ನೀಡಿತ್ತು. ಹೀಗಾಗಿ ಮೈಸೂರು ಕಾರ್ಯಕ್ರಮದಲ್ಲಿದ್ದ ಡಿ.ಕೆ.ಶಿವಕುಮಾರ್ ಭಾನುವಾರವೇ ಬೆಂಗಳೂರಿಗೆ ವಾಪಸ್ ಆಗಿ ದೆಹಲಿಯತ್ತ ಪ್ರಯಾಣ ಬೆಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಆಂಧ್ರಪ್ರದೇಶ : ಸರಸಕ್ಕೆ ಬಂದ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ 55 ವರ್ಷದ ಪ್ರಿಯತಮೆ ಈ ಕೃತ್ಯವೆಸಗಿದ್ದಾಳೆ. 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ ಮಹಿಳೆ ಕತ್ತರಿಸಿದ್ದಾಳೆ. ಇಬ್ಬರ ನಡುವೆ 10 ವರ್ಷಗಳಿಂದ ವಿವಾಹೇತರ ಅಕ್ರಮ ಸಂಬಂಧ ಬೆಳೆದಿತ್ತು. ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋದಾಗ ಮಹಿಳೆ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಬ್ಲೇಡ್ ನಿಂದ ಆತನ ಮರ್ಮಾಂಗ ಕತ್ತರಿಸಿದ್ದಾಳೆ. ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ ದಲಿತ ಬಾಲಕಿ ಸಾವನ್ನಪ್ಪಿದ್ದಾಳೆ. ಈ ತಿಂಗಳ ಆರಂಭದಲ್ಲಿ ಕುನ್ವರ್‌ಪುರ ಗ್ರಾಮದಲ್ಲಿ ಹದಿಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಸಂತ್ರಸ್ತೆಯನ್ನು ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿತ್ತು. 12 ದಿನಗಳವರೆಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂತ್ರಸ್ತೆ ಇಂದು ಸಾವನ್ನಪ್ಪಿದ್ದಾಳೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಲಕ್ನೋದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತ ಬಾಲಕಿಯ ಶವವನ್ನು ಪಿಲಿಭಿತ್‌ನಲ್ಲಿರುವ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 7 ರಂದು ಪಿಲಿಭಿತ್ ಜಿಲ್ಲೆಯ ಮಾಧವ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್ ಪ್ರಭು ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ-ಖೇರಿ ಜಿಲ್ಲೆಯ (ರಾಜ್ಯ ರಾಜಧಾನಿಯಿಂದ…
ಬೆಂಗಳೂರು ಸೆಪ್ಟಂಬರ್ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದ ಬಡಾವಣೆಗಳಲ್ಲಿ ಮಳೆಯಿಂದ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆಯ ಕಡಿವಾಣಕ್ಕೆ ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಿದೆ. ಈ ಹಿಂದೆ ನಾಲ್ಕು ವರ್ಷದಿಂದಲೂ ನಗರದ ನ್ಯೂ ಬಿಇಎಲ್ ರಸ್ತೆಯ ಟೋನಿಡಾಲರ್ಸ್ ಕಾಲೋನಿಯಲ್ಲಿ ಮಳೆಗಾದಲ್ಲಿ ಜಲಾವೃತ ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಈ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಇಲ್ಲಿನ ರಾಜಕಾಲುವೆ (ಚರಂಡಿಯನ್ನು) ಅಗಲಗೊಳಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸುಮಾರು 60 ಮರಗಳನ್ನು ಧರೆಗುರುಳಿಸಲು ನಿರ್ಧರಿಸಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಕಾಲೋನಿಯಲ್ಲಿ ಕೊಳಚೆ ಸಹಿತ ದುರ್ನಾತ, ಗಬ್ಬು ವಾಸನೆ ಬೀರುವ ನೀರು ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಹೀಗಾಗಲೂ ಈ ಭಾಗದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯದಿರುವುದು ಎಂದು ಸ್ಥಳಿಯರು ದೂರಿದ್ದರು. ಈ ಬಗ್ಗೆ ಗಮನ ಹರಿಸಿರುವ ಬಿಬಿಎಂಪಿ ಅಧಿಕಾರಿಗಳು ಪಕ್ಕದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಚೇರಿಯ ಸಮೀಪದ ಮಳೆನೀರು ಚರಂಡಿಯನ್ನು ವಿಸ್ತರಿಸಲು ಪಾಲಿಕೆ ಮುಂದಾಗಿದೆ. ಇಲ್ಲಿನ…
ಧಾರವಾಡ, ಸೆಪ್ಟೆಂಬರ್, 19: ಮಹಾಮಾರಿ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕೃಷಿ ಮೇಳ ನಿಂತು ಹೋಗಿತ್ತು. ಇದೀಗ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕೃಷಿ ಮೇಳವನ್ನು ಸೆಪ್ಟೆಂಬ 17ರಿಂದ ಆರಂಭಿಸಿದೆ. ಸೆಪ್ಟೆಂಬರ್ 20ರವರೆಗೆ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಅದ್ಧೂರಿಯಾಗಿ ಈ ಮೇಳ ನಡೆಯಲಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ದೀಪ ಬೆಳಗುವುದರ ಮೂಲಕ ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳಕ್ಕೆ ಚಾಲನೆ ನೀಡಿದ್ದರು. ‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿದ್ದು, ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್ ಹೊಡೆತದಿಂದ ರದ್ದಾಗಿದ್ದ ಕೃಷಿ ಮೇಳಕ್ಕೆ ಈ ಬಾರಿ ಮತ್ತೆ ಕಳೆ ಬಂದಂತಾಗಿದೆ. ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮಳಿಗೆಗಳು ಕಂಗೊಳಿಸುತ್ತಿವೆ. ನಾಲ್ಕು ದಿನಗಳವರೆಗೂ ನಡೆಯುವ ಈ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿ ಹಾಗೂ ಕೃಷಿ ಪೂರಕ…
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಪಡೆದ ಮೇಲೂ ಸಚಿವ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕ್ಲೀನ್ ಚಿಟ್ ಸಿಕ್ಕಿದರೂ ಮಂತ್ರಿಗಿರಿ ಸಿಗದಿದ್ದಕ್ಕೆ ಅಸಮಾಧಾನವಿದೆ. ಹೀಗಾಗಿ ನಾನು ಸದನಕ್ಕೆ ಹೋಗುತ್ತಿಲ್ಲ. ಮುಚ್ಚುಮರೆ ಇಲ್ಲದೇ ಹೇಳತ್ತೀನಿ ಎಂದರು. ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಕೇಂದ್ರದ ನಾಯಕರಿಗೆ ಬಿಟ್ಟಿದ್ದು ನನಗೆ ಕ್ಲೀನ್ ಚಿಟ್ ನೀಡಿದ ಮೇಲೂ ಸಚಿವ ಸ್ಥಾನ ನೀಡಲು ವಿಳಂಬವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ. ಹೊಸೂರ ಗ್ರಾಮದ ಪಾಂಡಪ್ಪ ದುಂಡಪ್ಪ ಜಟಕನ್ನವರ (35)ವರ್ಷದ ಮೃತದೇಹ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಲು ಯತ್ನಿಸಿದ ಶಂಕೆ ವ್ಯಕ್ತವಾಗಿದೆ.ಹೊಸೂರ ಫೂಲ್ ಬಳಿ ಶವ ಬಿಸಾಕಿ ಹೋಗಿರುವ ದುಷ್ಕರ್ಮಿಗಳು ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ. ಕಟಕೋಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy