Author: admin

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಿಸಿದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.  ಬದಲಾದ ಪರೀಕ್ಷಾ ದಿನಾಂಕ ಇಂತಿವೆ ಏಪ್ರಿಲ್ 22 ರಿಂದ ಪರೀಕ್ಷೆ ಆರಂಭವಾಗಲಿದ್ದು . ಮೊದಲ ದಿನ(22) ಲಾಜಿಕ್ ,  ಬ್ಯುಸಿನೆಸ್ ಸ್ಟಡೀಸ್.  23 ರಂದು ಗಣಿತ ಶಾಸ್ತ್ರ , ಶಿಕ್ಷಣ ಶಾಸ್ತ್ರ.  25ರಂದು ಎಕನಾಮಿಕ್ಸ್ . 26 ರಂದು ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ಕೆಮೆಸ್ಟ್ರಿ, ಬೇಸಿಕ್ ಮಾಥ್ಸ್. 27 ರಂದು ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಸಂಸ್ಕ್ರತ ಮತ್ತು ಫ್ರೆಂಚ್ ಭಾಷೆಗಳ ಪರೀಕ್ಷೆ. 28 ರಂದು ಕನ್ನಡ , ಅರೇಬಿಕ್ ಭಾಷೆ ಪರೀಕ್ಷೆ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು, ಅಗತ್ಯ ವಸ್ತುಗಳ ಬೆಲೆ ಏರಿಕೆ ಗಳ ನಡುವೆ ಬೀದಿಗೆ ಬೀಳುವಂತಾಗಿದೆ ಎಂದು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಇಂಧನ ಬೆಲೆ, ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಜನಸಾಮಾನ್ಯರ ಬದುಕು ತೀರ ಕಷ್ಟದಲ್ಲಿದೆ ಆದರೂ ಸಹ ಇದನ್ನು ಅರಿಯದ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನ ಹಾಗೂ ಗ್ಯಾಸ್ ಸಿಲೆಂಡರ್ ಗಳನ್ನು ಕುದುರೆಗಾಡಿಯಲ್ಲಿ ಹೊತ್ತು ತಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ…

Read More

ತುಮಕೂರು: ಬಿಜೆಪಿಯನ್ನು ಕಟುವಾಗಿ ಖಂಡಿಸುವ ಧೈರ್ಯ ಕಾಂಗ್ರೆಸ್ ಗೆ ಇಲ್ಲ, ಆದರೆ ಆ ಧೈರ್ಯ ಕುಮಾರಸ್ವಾಮಿ ತೋರಿದ್ದಾರೆ. ಹಾಗಾಗಿ  ಕುಮಾರಸ್ವಾಮಿಗೆ ನಾನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ. ತುಮಕೂರು ನಗರದ  ಖಾಸಗಿ ಹೊಟೇಲ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ. ಆಜಾನ್ ಕೂಗೋದು ನಿನ್ನೆ ಮೊನ್ನೆಯದಲ್ಲ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವೆಲ್ಲ ಭಾಷಣ ಮಾಡುವಾಗ ಆಜಾನ್ ಕೇಳಿದ್ರೆ ಮಧ್ಯ ಭಾಷಣ ನಿಲ್ಲಿಸಿ ಗೌರವಿಸುತ್ತೇವೆ. ಇಂಥಹುದರಲ್ಲಿ ಬಿಜೆಪಿ ವಿವಾದ‌ ಸೃಷ್ಟಿಸಿದೆ. ಬಿಜೆಪಿ ಧೋರಣೆ ಖಂಡಿಸಲು ಕಾಂಗ್ರೆಸ್ ಗೆ ಧೈರ್ಯ ಇಲ್ಲ  ಎಂದು ಅವರು ಸ್ವಪಕ್ಷವನ್ನು ಟೀಕಿಸಿದರು. ಎಚ್‌.ಡಿ.ಕುಮಾರ್ ಸ್ವಾಮಿ ಮಾತ್ರ ಮುಲಾಜಿಲ್ಲದೆ ಖಂಡಿಸ್ತಾರೆ. ಈ‌ ವಿಚಾರಕ್ಕೆ ಕುಮಾರ್ ಸ್ವಾಮಿಯನ್ನು ಅಭಿನಂದಿಸುತ್ತೇನೆ. ಯಾರೋ ಪೊಲಿಗಳು ಭಿತ್ತಿಪತ್ರ ಹಂಚಿ ಬಿಡುತ್ತಾರೆ. ಅದಕ್ಕೆಲ್ಲಾ ಬೆಲೆ ಕೊಡೊಕಾಗುತ್ತಾ ಎಂದು  ಕುಮಾರಸ್ವಾಮಿ ಹೇಳುವ ತಾಕತ್ತು ತೋರಿದ್ದಾರೆ. ಅವರಿಗೆ ಧನ್ಯವಾದಗಳು. ನಾವು…

Read More

ತಿಪಟೂರು: ನಗರದ ಕಲಾಕೃತಿ ತಂಡದಿಂದ ನಗರದ ಕೆ.ಆರ್.ಬಡಾವಣೆ ಬಯಲು ರಂಗಮಂದಿರದಲ್ಲಿ ಏಪ್ರಿಲ್ 8 ರಿಂದ ಹತ್ತರವರೆಗೆ ಕಲಾಕೃತಿ ನಾಟಕೋತ್ಸವ 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಕಾರ್ಯದರ್ಶಿ ತಿಪಟೂರು ಕೃಷ್ಣ ತಿಳಿಸಿದರು. ಇತ್ತೀಚೆಗೆ ಕೊರೊನಾ ಆಘಾತದಿಂದ ಕರುನಾಡಿನ ಸಮಸ್ತ ಜನತೆಗೆ ಹೊಸತನ ಖುಷಿ  ನೀಡಲು ಮನರಂಜನೆಗಾಗಿ ಕಲಾಕೃತಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ನಾಟಕೋತ್ಸವವನ್ನು ಮಾಜಿ ಶಾಸಕ ಕೆ.ಷಡಕ್ಷರಿ ಉದ್ಘಾಟಿಸುವರು. ಉಪವಿಭಾಗಾಧಿಕಾರಿಗಳು ದಿಗ್ವಿಜಯ ಬೋರ್ಡ್ ಕೆ ಸಾಧಕರನ್ನು ಸನ್ಮಾನಿಸುವರು. ಇಂದು ಸಂಜೆ ಮುದ್ದಣ್ಣ ಪ್ರಮೋಷನ್ ಪ್ರಸಂಗ ನಾಟಕವು ನಡೆಯಲಿದ್ದು, ಡಾಕ್ಟರ್ ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ಸಚಿವ ಬಿ.ಸಿ.ನಾಗೇಶ್ ಅವರಿಂದ ಸಾಧಕರಿಗೆ ಸನ್ಮಾನ ಎರಡನೇ ದಿನ ಬಾಹುಬಲಿ ವಿಜಯಂ ನಾಟಕ ನಡೆಯಲಿದ್ದು, ಹತ್ತನೇ ತಾರೀಕು ಸಂಜೆ ಸಮಾರೋಪ ನಡೆಯಲಿದೆ. ಮಾಜಿ ಶಾಸಕ ನಂಜಾಮರಿ ಹಾಗೂ ತಹಸಿಲ್ದಾರ್ ಚಂದ್ರಶೇಖರ್, ಉಪಾಧ್ಯಕ್ಷ ಬಿ.ಎಸ್. ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್ ಹಾಗೂ ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪ ಅಧೀಕ್ಷಕರು ಸಿದ್ದಾರ್ಥ ಗೊಯಲ್ ಐಪಿಎಸ್…

Read More

ಸರಗೂರು: ತಾಲೂಕು ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರಿಗೆ ಕೇಂದ್ರ ಸರ್ಕಾರ ನೀಡುವ ವಿಶಿಷ್ಟ ಗುರುತಿನ ಚೀಟಿ UDID ಕಾರ್ಡ್ ಪಡೆಯಲು ಸರಗೂರು ತಾಲ್ಲೂಕು MRW ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಮನವಿ ಮಾಡಿದರು.  ಇಂದು ಸರಗೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ UDID ಕಾರ್ಡ್ ಕ್ಯಾಂಪ್ ಇದ್ದು,  ಇದರಲ್ಲಿ 138 ಜನಕ್ಕೊ ಹೆಚ್ಚು ವಿಕಲಚೇತನರ ಭಾಗವಹಿಸಿ, ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರು. ಮಧ್ಯಾಹ್ನ ಸರಗೂರು ಪಟ್ಟಣ ಪಂಚಾಯಿತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರವನ್ನುದ್ದೇಶಿಸಿ ಮಾತನಾಡಿದ  ಹೆಚ್.ಡಿ.ಕೋಟೆ ತಾಲೂಕಿನ THO ರವಿಕುಮಾರ್, ಎಲ್ಲಾ ವಿಕಲಚೇತನ ರು UDID  ಕಾರ್ಡ್ ಪಡೆದುಕೊಳ್ಳಿ ಎಂದು ತಿಳಿಸಿದರು. ವೈದ್ಯಾಧಿಕಾರಿಗಳು ತಪಾಸಣೆ ಮಾಡಿದರು,ಸರಗೂರು ತಾಲೂಕು ಮಟ್ಟದ M.RW ಜವರಾಜು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದರು.  ಸರಗೂರು ತಾಲೂಕಿನ ಎಲ್ಲಾ ಗ್ರಾಮಿಣ ಪುನರ್ ವಸತಿ(V.R.W) ಕಾರ್ಯಕರ್ತರು ಹಾಗೂ ಸರಗೂರು ವೈದ್ಯಾಧಿಕಾರಿಗಳು ಹಾಜರಿದ್ದರು.  ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಗುಬ್ಬಿ: ತಾಲ್ಲೂಕಿನ ಗೊಲ್ಲಹಳ್ಳಿ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಮುಂಜಾನೆಯೇ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶ್ರೀ ಸಿದ್ದಲಿಂಗಶ್ವರ ಸ್ವಾಮಿ ಅವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು . ಮಧ್ಯಾಹ್ನ 1 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಅವರ ತೆರನ್ನು ಸಾವಿರಾರು  ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಜಾತ್ರಾ ಮಹೋತ್ಸವದಲ್ಲಿ ಗೋಡೆಕೆರೆ ಶ್ರೀ ಮೃತಂಜಯ  ಸ್ವಾಮೀಜಿ ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಸ್ವಾಮೀಜಿ ತೆವಡೆ ಹಳ್ಳಿ ಮಠದ ಗೊಸಲ ಚನ್ನಬಸವಶ್ವರ ಸ್ವಾಮೀಜಿ, ಮುಖಂಡರಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಸಿ.ಪ್ರಕಾಶ್, ಎಸ್.ಡಿ.ದಿಲೀಪ್ ಕುಮಾರ್, ಪತ್ರೆ ದಿನೇಶ್, ಕಿಡಿಗಣ್ಣಪ್ಪ, ಯತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಬ್ಬಿ: ಜನತೆಯ ಸಮಸ್ಯೆಗೆ ಸ್ಪಂದಿಸಬೇಕಾದ ರಾಜ್ಯ ಸರಕಾರ ಜನತೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದು  ಜನತೆಯನ್ನು ಧರ್ಮದ ಹೆಸರಿನಲ್ಲಿ ಎತ್ತಿ ಕಟ್ಟುತ್ತಿರುವುದು ಸರಿಯಲ್ಲ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ  ವಿವಿಧ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದ ಗೃಹ ಮಂತ್ರಿಗಳು ಬೆಳಿಗ್ಗೆ ಒಂದು ಹೇಳಿಕೆ ಸಂಜೆ ಬದಲಿ ಹೇಳಿಕೆ ನೀಡಿ ರಾಜ್ಯದ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಇದರಿಂದ ಗೃಹಮಂತ್ರಿಗಳು  ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಹಾಗಾಗಿ ಮೂರು ವರ್ಷಗಳಿಂದ ತಿರಸ್ಕಾರಕ್ಕೆ ಒಳಗಾಗಿರುವ ನಾನು ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು . ವರದಿ:  ಮಂಜುನಾಥ್,  ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಮಧುಗಿರಿ:  ರೈಲಿಂಗ್ಸ್(ತಡೆಬೇಲಿ)ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಿಡಿಗೇಶಿ ಹೋಬಳಿ  ನೀಲಿಹಳ್ಳಿ ಸಮೀಪ ನಡೆದಿದೆ. ಮಿಡಿಗೇಶಿ ಕಡೆಯಿಂದ ಮಧುಗಿರಿ  ಕಡೆಗೆ ಬರುತ್ತಿದ್ದ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿದ ಬೈಕಗ ರೈಲಿಂಗ್ಸ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಡಕಶಿರಾ ತಾಲೂಕು  ಗಂಗಳವಾಯಿ ಪಾಳ್ಯ ಮೈಲಾರಪ್ಪ ಎಂಬವರ ಪುತ್ರ 35 ವರ್ಷ ವಯಸ್ಸಿನ ಮಧು ಅಪಘಾತದಲ್ಲಿ ಮೃತಪಟ್ಟವರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಸರ್ದಾರ್ ಹಾಗೂ ಮಿಡಿಗೇಶಿ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.  ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು :  ಏಪ್ರಿಲ್ 10ರಂದು  ರಾಜ್ಯದ ಮಾಜಿ  ಉಪ ಮುಖ್ಯಮಂತ್ರಿಯಾದ  ಜಿ. ಪರಮೇಶ್ವರ್ ಅವರ ಸವ್ಯಸಾಚಿ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಅಖಿಲ ಕರ್ನಾಟಕ ಜಿ ಪರಮೇಶ್ವರ್ ಯುವ ಸಂಘದ ಪದಾಧಿಕಾರಿಗಳೆಲ್ಲರೂ ಭಾಗವಹಿಸುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ಮಧುಕರ್ ರಂಗನಾಥ್ ಮನವಿ ಮಾಡಿದರು. ಅಖಿಲ ಕರ್ನಾಟಕ ಪರಮೇಶ್ವರ್ ಸೇನೆ ರಾಜ್ಯಾದ್ಯಂತ ಇದೆ. ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಮತ್ತು ಸಾಮಾಜಿಕ ಜಾಲತಾಣ ಸದಸ್ಯರು .  ಪರಮೇಶ್ವರ್ ಸೈನ್ಯದ ಪದಾಧಿಕಾರಿಗಳು ಹತ್ತನೇ ತಾರೀಕು ಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆಯುವಂತಹ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಯಶಸ್ಸು ಗೊಳಿಸಬೇಕು ಎಂದರು. ರಾಜ್ಯ ಕಾರ್ಯದರ್ಶಿ ಎನ್  ಕೆ ರವಿಕುಮಾರ್  ಮಾತನಾಡಿ,  ಪರಮೇಶ್ವರ ರವರ ಗೌರವಗ್ರಂಥ ಸವ್ಯಸಾಚಿ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲ ಹಿರಿಯರು ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ವಿಚಾರವಂತರು ಕಾರ್ಯಕ್ರಮಕ್ಕೆ ಎಲ್ಲಾ ಜಾತ್ಯಾತೀತ ನಾಯಕರುಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ವರದಿ: ಎ.ಎನ್. ಪೀರ್  ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ತುರುವೇಕೆರೆ: ಮುನಿಯೂರು ಗ್ರಾಮದಲ್ಲಿ ನಡೆದ  “ದೇವರ ದಾಸಿಮಯ್ಯ ‘” ರವರ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ ಅವರಿಗೆ ಆಮಂತ್ರಣ, ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಜನಾಂಗದವರು ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸಿ ,ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕ ದಂಡಿನಶಿವರ ಆಕ್ರೋಶ ವ್ಯಕ್ತಪಡಿಸಿದರು. ತುರುವೇಕೆರೆ ಪಟ್ಟಣದ, ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ತಾಲ್ಲೂಕು ತಹಶೀಲ್ದಾರರು  ನೇರ ಹೊಣೆಗಾರರು. ಇವರು ಅನೇಕ ಬಾರಿ ದಲಿತ ವಿರೋಧಿ ನಡೆಯಲ್ಲೇ ಬಂದಿದ್ದಾರೆ.  ಆದ್ದರಿಂದ ತಹಸೀಲ್ದಾರರನ್ನು ಕೂಡಲೇ ವರ್ಗಾವಣೆ ಮಾಡಿ ಇವರ ಮೇಲೆ ,ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು. ಛಲವಾದಿ ,ಮಹಾ ಸಭಾದ ತಾಲ್ಲೂಕು ಅಧ್ಯಕ್ಷರಾದ  ಡೊಂಕಿಹಳ್ಳಿ ರಾಮಣ್ಣ ಮಾತನಾಡಿ,     ತಾಲ್ಲೂಕು  ತಹಸೀಲ್ದಾರ್ ನಯಿಮ್ ಉನ್ನಿಸ್ಸ  ಅಧಿಕಾರ ವಹಿಸಿಕೊಂಡ ತಕ್ಷಣ ದಲಿತರಿಗೆ ಸ್ಪಂದಿಸುತ್ತಿದ್ದರು. ಆದರೆ ಕಳೆದ ನಾಲ್ಕು…

Read More