Subscribe to Updates
Get the latest creative news from FooBar about art, design and business.
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
- ತುಮಕೂರು | ಅಂಬೇಡ್ಕರ್ ಯುವ ಸೇನೆಯಿಂದ 208ನೇ ಭೀಮ-ಕೋರೆಗಾಂವ್ ವಿಜಯ ದಿನಾಚರಣೆ
- ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು ಒತ್ತಾಯ
Author: admin
ಬೆಂಗಳೂರು: ನಾವಿಲ್ಲಿ ಕಷ್ಟದಲ್ಲಿದ್ದೇವೆ. ನೀವು ಹೇಗೆ ಸಂಭ್ರಮಿಸುತ್ತೀರಿ ಎಂದು ಪತಿಗೆ ಗುಂಡು ಹೊಡೆದೇ ಬಿಟ್ಟರು ಎಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭರತ್ ಅವರ ಪತ್ನಿ ಡಾ. ಸುಜಾತಾ ಕಣ್ಣೀರು ಹಾಕಿದ್ದಾರೆ. ನಾವು ಮಂಗಳವಾರ ಬೆಳಿಗ್ಗೆ ಪಹಲ್ಗಾಮ್‌ಗೆ ಹೋಗಿದ್ದೆವು. ಅಲ್ಲಿಂದ ನಾವು ಪೈನ್ ಮರಗಳಿಂದ ಆವೃತವಾದ ಬೈಸರನ್ ಎಂಬ ದೊಡ್ಡ ಹುಲ್ಲುಗಾವಲು ತಲುಪಿದೆವು. ಅದು ಮಿನಿ ಸ್ವಿಟ್ಜರ್ ಲ್ಯಾಂಡ್‌ನಂತೆ ಕಾಣುತ್ತಿತ್ತು. ಪ್ರವಾಸಿಗರು ಸಾಂಪ್ರದಾಯಿಕ ಕಾಶ್ಮೀರಿ ಉಡುಪನ್ನು ಧರಿಸಿ ಫೋಟೋಗಳನ್ನು ತೆಗೆದುಕೊಳ್ಳಲು ಹಲವಾರು ಟೆಂಟ್ ಗಳಿದ್ದವು. ಮಧ್ಯಾಹ್ನ 1.30 ಆಗಿದ್ದರಿಂದ ಹಸಿವಾಗಿತ್ತು. ಹೀಗಾಗಿ ಹಿಂತಿರುಗಲು ನಿರ್ಧರಿಸಿದ್ದೆವು. ಈ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಶಬ್ಧ ಕೇಳಿಸಲು ಆರಂಭವಾಯಿತು. ಮೊದಲಿಗೆ ಪಟಾಕಿ ಶಬ್ಧವಿರಬೇಕು, ಕಾಡು ಪ್ರಾಣಿಗಳ ಹೆದರಿಸಲು ಸಿಡಿಸುತ್ತಿರಬಹುದು ಎಂದೇ ಎಲ್ಲರೂ ಭಾವಿಸಿದ್ದೆವು. ಆದರೆ, ಶಬ್ಧ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಳಿಕ ದಾಳಿ ನಡೆಸಲಾಗಿದೆ ಎಂಬುದು ನಮಗೆ ತಿಳಿಯಿತು. ಅಡಗಿಕೊಳ್ಳಲು ಟೆಂಟ್ ಕಡೆಗೆ ಓಡಿದೆವು. ನಮ್ಮಿಂದ ಸುಮಾರು 500…
ತುಮಕೂರು: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ POCSO ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ತುಮಕೂರು ಮಹಿಳಾ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿದ್ದು, ಬಾಲನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ಹಾಸ್ಟೆಲ್ ನಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ. ಮೇ 24, 2022ರಂದು ರಾತ್ರಿ ಸುಮಾರು 7:30 ಗಂಟೆಗೆ ಬಸವರಾಜ್ ಎಂಬಾತನ ಮೊಬೈಲ್ ಮೂಲಕ ನೊಂದ ಬಾಲಕ ತನ್ನ ತಂದೆಗೆ ಕರೆ ಮಾಡಿದ್ದ. ಬಳಿಕ ಬಸವರಾಜು ಬಾಲಕನಿಗೆ ಕುರ್ ಕುರೆ ಮತ್ತು ಚಿಕನ್ ಕೊಡಿಸುವುದಾಗಿ ಕರೆದೊಯ್ದು ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಾಲಕ ಬಳಿಕ ತನಗೆ ಅನಾರೋಗ್ಯ ಎಂದು ಊರಿಗೆ ಬಂದಿದ್ದು, ಆತನ ಆರೋಗ್ಯ ಹದಗೆಟ್ಟಿದೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಬಾಲಕ ತನ್ನ ತಂದೆಯ ಬಳಿಯಲ್ಲಿ ನಡೆದ ಘಟನೆಯನ್ನು…
ಬೆಳಗಾವಿ: ಬೆಳಗಾವಿ ಮತ್ತು ಮಹಾರಾಷ್ಟ್ರದ ನೆರೆಯ ಕಾಗಲ್ ತಾಲ್ಲೂಕಿನಿಂದ ಕುರುಬ ಕುಟುಂಬಗಳ ಇಬ್ಬರು ಯುವಕರು ಕುರಿ ಕಾಯುತ್ತಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಬೆಳಗಾವಿಯ ನಾನಾವಾಡಿಯಲ್ಲಿ ವಾಸವಿರುವ ಮಹಾರಾಷ್ಟ್ರದ ಎಮಗೆ ಗ್ರಾಮದ ಬೀರಪ್ಪ ಸಿದ್ದಪ್ಪ ಡೋಣಿ ದೇಶಕ್ಕೆ 551 ನೇ ರ‍್ಯಾಂಕ್ ಗಳಿಸಿದ್ದರೆ, ಬೆಳಗಾವಿಯ ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಅವರು 910 ನೇ ರ‍್ಯಾಂಕ್ ಗಳಿಸಿದ್ದಾರೆ. ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ನೆರೆಯ ಎಮಗೆ ಗ್ರಾಮದ ಸಿದ್ದಪ್ಪ ಮತ್ತು ಬಾಲವ್ವ ಡೋಣಿ ಅವರ ಮೂರನೇ ಮಗ ಬೀರಪ್ಪ. ಬೀರಪ್ಪ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗಲೇ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ತಾವು ಐಎಎಸ್ ಪಾಸ್ ಮಾಡಿರುವ ಸುದ್ದಿ ಕೇಳಿ ಸಂಭ್ರಮಿಸಿದರು. ಕುರಿಗಳನ್ನು ಮೇಯಿಸುತ್ತಾ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬೀರಪ್ಪ ಅವರು ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಅವರ ಈ ಸಾಧನೆ ಅವರ ಕುಟುಂಬ ಮತ್ತು ಗ್ರಾಮಸ್ಥರಿಗೆ ಬಹಳ…
ಪಾವಗಡ: ಜಮ್ಮು–ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಉಗ್ರರು ಅಟ್ಟಹಾಸ ಮೆರೆದಿದ್ದು ದಾಳಿಯಲ್ಲಿ ಸುಮಾರು 27 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಭಾರತ ದೇಶಾದ್ಯಂತ ಆಕ್ರೋಶದ ಜ್ವಾಲೆ ಒತ್ತಿ ಉರಿಯುತ್ತಿದ್ದು, ಅದರಂತೆ ಪಾವಗಡ ಪಟ್ಟಣದಲ್ಲಿ ಭಾರತೀಯ ಜನತಾ ಭಾರತಿ ಪಾರ್ಟಿ ಬಜರಂಗದಳ ಸಂಘಟನೆಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಿ ಜಿಹಾದಿಗಳ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಬುಧವಾರ ಸಂಜೆ 6:30 ಸಂದರ್ಭದಲ್ಲಿ ಪಟ್ಟಣದ ಶನಿ ಮಹಾತ್ಮ ವೃತ್ತದಲ್ಲಿ ಮೇಣದಬತ್ತಿ ಬೆಳಕಿ ಮೇಣದಬತ್ತಿ ಬೆಳಗಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ಇದಕ್ಕೂ ಮೊದಲು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಹನುಮಂತ ರಾಯಪ್ಪ, ರವಿ ಪಾವಗಡ ಬಿಜೆಪಿ ಮಂಡಲದ ಅಧ್ಯಕ್ಷ ದೊಡ್ಡ ಹಳ್ಳಿ ಅಶೋಕ್ ಮಾತನಾಡಿದರು. ಪ್ರತಿಭಟನೆಯಲ್ಲಿ ಬಜರಂಗದಳದ ಜಿಲ್ಲಾ ಪ್ರಮುಖ ಸುಮನ್, ತಾಲೂಕು ಪ್ರಮುಖ ರವಿ, ಶ್ರೀರಾಮಸೇನೆಯ ಕಾವಲಗೆರೆ ರಾಮಾಂಜಿ, ತಾಳೆಮರದಹಳ್ಳಿ ಮಂಜುನಾಥ್, ತರಕಾರಿ ಕೃಷ್ಣಪ್ಪ, ಮುಖಂಡರಾದ ಗೋಲ್ಡನ್ ಮಂಜು, ಮಂಜು ವಾಸು, ಸರೋಜಮ್ಮ, ಸೇರಿದಂತೆ ಹಲವರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರಿನ…
ತುಮಕೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಮೃತದೇಹವನ್ನು ಬೆಂಗಳೂರು ಮೂಲಕ ಶಿವಮೊಗ್ಗಕ್ಕೆ ತುಮಕೂರು ಮೂಲಕ ಕೊಂಡೊಯ್ಯಲಾಯಿತು. ತುಮಕೂರಿನ ಜಾಸ್ ಟೋಲ್ ಗೇಟ್ ಬಳಿ ಬಂದ ಪಾರ್ಥಿವ ಶರೀರಕ್ಕೆ ಬಿಜೆಪಿ ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷರು ಹೆಬ್ಬಾಕ ರವಿಶಂಕರ್ ಹಾರ ಹಾಕಿ ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ತೆಗೆದುಕೊಳ್ಳುವಂತಹ ಯಾವುದೇ ರೀತಿಯ ಕಠಿಣ ನಿರ್ಧಾರಕ್ಕೆ ನಾವು ಬೆಂಬಲವಾಗಿ ನಿಂತಿದ್ದೇವೆ ಎಂದರು. ಮಂಜುನಾಥ್ ಅವರ ಕುಟುಂಬದ ಎದುರೇ ಭಯೋತ್ಪಾದಕರು ಮಂಜುನಾಥ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಇದು ಹೇಯ ಕೃತ್ಯವಾಗಿದೆ ಎಂದು ಹೇಳಿದರು. ಆಂಬ್ಯುಲೆನ್ಸ್ ಮೂಲಕ ತೆರಳಿದ ಮಂಜುನಾಥ್ ಮೃತದೇಹದ ಜೊತೆಯಲ್ಲಿ ಅವರ ಪತ್ನಿ ಹಾಗೂ ಕುಟುಂಬದವರು ಕೂಡ ಸಾಗಿದರು. ಮಂಜುನಾಥ್ ಮೃತ ದೇಹವು ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಚನ್ನಗಿರಿ ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸ್ಥಳೀಯ ಕುದುರೆ ರೈಡರ್ ಬಲಿಯಾಗಿದ್ದು, ಸೈಯದ್ ಆದಿಲ್ ಹುಸೇನ್ ಶಾ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಉಗ್ರರ ಕೈಯಿಂದ ರೈಫಲ್ ಕಸಿದುಕೊಳ್ಳಲು ಈ ವ್ಯಕ್ತಿ ಯತ್ನಿಸಿದ್ದು, ಈ ವೇಳೆ ಸೈಯದ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸೈಯದ್ ಆದಿಲ್ ಪಹಲ್ಗಾಮ್ ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್‌ಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬದ ಏಕೈಕ ಜೀವನಾಧಾರ ಸೈಯದ್ ಆಗಿದ್ದರು. ಇವರು ವೃದ್ಧ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಸಿದ ಉಗ್ರರ ರೇಖಾಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಫೋಟೋ ಬಿಡುಗಡೆ ಮಾಡಲಾಗಿದೆ. ಹಲವು ವರದಿಗಳಲ್ಲಿ ಭಯೋತ್ಪಾದಕರ ಈ ಫೋಟೋವನ್ನು ಬಿಡುಗಡೆಗೊಳಿಸಲಾಗಿದೆ. ಪಿಟಿಐ ಪ್ರಕಾರ, ಭಯೋತ್ಪಾದಕರು “ಮೂಸಾ, ಯೂನಸ್ ಮತ್ತು ಆಸಿಫ್” ಎಂಬ ಕೋಡ್ ನೇಮ್ ಅನ್ನು ಬಳಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿರುವ ಸುಂದರ ಪ್ರದೇಶವಾದ ಬೈಸರನ್ ಕಣಿವೆಯಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಬೆಂಗಳೂರು: ಜಮ್ಮು–ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 28ಕ್ಕೂ ಹೆಚ್ಚು ಜನ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್ ಕೂಡಾ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದು, ಇದೀಗ ದಾಳಿಯ ಸಂದರ್ಭದಲ್ಲಿ ಉಗ್ರರು ಹೇಳಿದ ಮಾತು ಏನೆಂದು ಮೃತ ಭರತ್ ಅತ್ತೆ ಹೇಳಿದ್ದಾರೆ. ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್ ಅವರನ್ನು ಅವರ ಪತ್ನಿ ಮತ್ತು ಮೂರು ವರ್ಷದ ಮಗನ ಮುಂದೆಯೇ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಇನ್ನು ದಾಳಿಯ ನಂತರ ಮಗಳೊಂದಿಗೆ ಮಾತನಾಡಿದ ಭರತ್ ಭೂಷಣ್ ಅವರ ಅತ್ತೆ, ‘ಭಯೋತ್ಪಾದಕರು ಆಧಾರ್ ತೋರಿಸಿ, ಮುಸ್ಲಿಂ ಆದ್ರೆ ಬಿಡ್ತೀನಿ, ನೀವು ಹಿಂದೂಗಳೇ ಎಂದು ಕೇಳಿ, ನಂತರ ನೆಲಕ್ಕೆ ಬೀಳುವವರೆಗೂ ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ತುಮಕೂರು ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸಲು ಪಕ್ಷ ಭೇದ ಮರೆತು ಸಹಕರಿಸಬೇಕಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತ ದೇಹ ಗುರುವಾರ ರಾತ್ರಿ 1:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ. 2:30ರ ವೇಳೆಗೆ ಮಂಜುನಾಥ್ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಬಳಿಕ ಒಂದು ಬಸ್, ಒಂದು ಆಂಬ್ಯುಲೆನ್ಸ್ ಮೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ತರಲಾಗುತ್ತದೆ. ಬೆಳಗ್ಗೆ 7:30 — 8 ಗಂಟೆಗೆ ಶಿವಮೊಗ್ಗ ತಲಪಲಿದ್ದು, ಮನೆಗೆ ಆಗಮಿಸುತ್ತಿದ್ದಂತೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಕರ್ನಾಟಕದ ಶಿವಮೊಗ್ಗ ಮಂಜುನಾಥ್ ತನ್ನ ಪತ್ನಿ ಪಲ್ಲವಿ ಮತ್ತು ಅವರ ಚಿಕ್ಕ ಮಗನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಡೆದ ಉಗ್ರರ ದಾಳಿಯಲ್ಲಿ ಮಂಜುನಾಥ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಮ್ಮನ್ನು ಕೊಲ್ಲು ಎಂದು ಭಯೋತ್ಪಾದಕರಿಗೆ ಪತ್ನಿ ಪಲ್ಲವಿ ಹೇಳಿದಾಗ ‘ಮೋದಿಗೆ ಹೇಳು’ ಎಂದು ಭಯೋತ್ಪಾದಕ ಹೇಳಿದ್ದ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…