Author: admin

ಹಿರಿಯೂರು: ಅಭಿಮತ ವಾರಪತ್ರಿಕೆ ಯ ಹದಿನಾರನೇಯ ವರ್ಷದ ಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ  ಜಿ.ಎಸ್.ಮಂಜುನಾಥ್ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು,  ಪೌರಕಾರ್ಮಿಕರು  ಹಗಲಿರುಳು  ಸ್ವಚ್ಚತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು,  ಕಳೆದ 2019 ರಲ್ಲಿ ಪ್ರಥಮವಾಗಿ ಕೊರೊನಾ ಎಂಬ ಮಹಾಮಾರಿಯು ಅಪ್ಪಳಿಸಿದಾಗ ಎರಡೂವರೆ ತಿಂಗಳು , ಮೂರು ತಿಂಗಳು ನಾವು ಯಾರು ಸಹ ಮನೆಯಿಂದ ಹೊರಗಡೆ ಬರಲು ಸಹ ಭಯ ಪಡುತ್ತಿದ್ದೆವು . ಆ ಸಮಯದಲ್ಲಿಯೂ ಪೌರಕಾರ್ಮಿಕರು ಹಗಲಿರುಳು ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಡಾಕ್ಟರ್ ಗಳು , ನರ್ಸ್ ಗಳು , ರಾಜಕೀಯ ವ್ಯಕ್ತಿಗಳು, ಬಿಟ್ಟರೆ ಯಾರು ಸಹ ಅಂತಹ ಸಂದರ್ಭದಲ್ಲಿ ಹೊರಗಡೆ ಬರಲು ಸಾಧ್ಯವೆ ಇಲ್ಲ.  ಐದು ಮೀಟರ್ , ಹತ್ತು ಮೀಟರ್ ದೂರ ಇರುವಂತಹ ಪರಿಸ್ಥಿತಿ ಉಂಟಾಗಿತ್ತು.  ಅಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ದಿನನಿತ್ಯ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಯಾವುದೇ ಸರ್ಕಾರಗಳು ಬಂದರೂ, ಪೌರಕಾರ್ಮಿಕರ ಸಮಸ್ಯೆಗಳು ಪರಿಹಾರವಾಗದೇ ಬೆಟ್ಟದಂತೆ ನಿಂತಿದೆ. …

Read More

ತುಮಕೂರು: ಬಿಸಿಯೂಟ ನೌಕರರ ಕಡಗಣನೆ ಖಂಡಿಸಿ , ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್  ವತಿಯಿಂದ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತುಮಕೂರು ಜಿಲ್ಲಾ ಬಿಸಿಯೂಟ ತಯಾರಕರ ಫೆಡರೇಶನ್ ನ  ಜಿಲ್ಲಾ ಸಂಚಾಲಕರಾದ ಕಾಂತರಾಜು ರವರು ತಿಳಿಸಿದ್ದಾರೆ. 2003 ನೇ ಇಸವಿಯಿಂದ ಇಲ್ಲಿಯವರೆಗೂ ಸತತ 19 ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿರುವ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಅಂದಿನಿಂದ ಇಲ್ಲಿಯವರೆಗೂ ₹200 ಹಾಗೂ 300 ರೂಗಳ ಗೌರವದೊಂದಿಗೆ ಕೆಲಸ ನಿರ್ವಹಿಸಲು ಶುರುಮಾಡಿದ ನೌಕರರಿಗೆ ಇದುವರೆಗೂ ಸರ್ಕಾರ ಕೇವಲ 2,600 ಹಾಗೂ 2,700 ರೂಗಳ ಸಂಬಳ ನೀಡಿ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಆದರೆ ಸರ್ಕಾರದ ನಿಯಮದ ಪ್ರಕಾರ ನಿಗದಿಮಾಡಿರುವ ಕನಿಷ್ಠ ವೇತನಕ್ಕೆ ಆಗ್ರಹಿಸಿ ಇದುವರೆಗೂ ಹಲವು ಬಾರಿ ಮನವಿ ಮಾಡಿದರೂ ಸಹ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು…

Read More

ಪಾವಗಡ: ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್. ಹೊಸಕೋಟೆ ಗ್ರಾಮದ ಯುವಕ ಸಾವಿನಲ್ಲೂ ಸಹ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದು, ಈ ತ್ಯಾಗಿ ಯುವಕನ ಮನೆಗೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಕೆಲ ದಿನಗಳ ಹಿಂದೆ ಪಾವಗಡ ಪಟ್ಟಣದ ಹೊರವಲಯದಲ್ಲಿ ಆರ್. ಹೊಸಕೋಟೆ ಗ್ರಾಮದ 39 ವರ್ಷದ ಯುವಕ ಹನುಮಂತರಾಯಪ್ಪ ಅಪಘಾತಕ್ಕಿಡಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಪಡೆಯುವಾಗ ಚಿಕಿತ್ಸೆ  ಫಲಕಾ ರಿಯಾಗದೆ ಸಾವನ್ನಪ್ಪಿದ್ದು, ಸಾವಿನಲ್ಲೂ ಸಹ ಪೋಷಕರು ಯುವಕನ ಮೂತ್ರಪಿಂಡ ಹಾಗೂ ಅಂಗಾಂಗಗಳನ್ನು 4 ರೋಗಿಗಳಿಗೆ ದಾನ ಮಾಡಿ, ಅಮೂಲ್ಯ ಜೀವಗಳನ್ನು ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಸಾರ್ಥಕತೆ ಮೆರೆದ ಯುವಕನ ಕುಟುಂಬಕ್ಕೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಆರ್ಥಿಕ ಸಹಾಯ ನೀಡಿ, ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಸದಸ್ಯರಾದ…

Read More

ಸಿರಾ: ಆರೋಗ್ಯ ಇಲಾಖೆ ತಾಲ್ಲೂಕಿನಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ಸಿರಾ ತಾಲ್ಲೂಕು ಶಾಸಕ ಡಾ.ರಾಜೇಶ್ ಗೌಡ ಚಾಲನೆ ನೀಡಿದರು. ಸಿರಾ ನಗರದ ಸಪ್ತಗಿರಿ ಬಡಾವಣೆಯಲ್ಲಿ ಐದು ವರ್ಷದ ಒಳಗಿನ ಮಗುವಿಗೆ ಪೊಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತ, ತಾಲೂಕು ವೈದ್ಯಾಧಿಕಾರಿಗಳು ಡಾ.ಮೋಹನ್, ಡಾ. ಡಿ.ಎಂ.ಗೌಡ,ಡಾ ರಾಮಕೃಷ್ಣ ಅರೋಗ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯು ತಾಲ್ಲೂಕಿನಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಗುರಿಯನ್ನು ಹೊಂದಿದೆ. ಕೊರೋನಾ ಮೂರನೇ ಅಲೆಯಿಂದಾಗಿ ಕಳೆದ ಜನವರಿ ತಿಂಗಳಿನಲ್ಲಿ ನಡೆಯಬೇಕಾದ ಪೊಲಿಯೋ ಅಭಿಯಾನವನ್ನು ಮುಂದೂಡಲಾಗಿತ್ತು. ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯು ಕಾರ್ಯಕರ್ತರನ್ನು ಬಳಸಿಕೊಂಡು ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ. ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು. ವರದಿ: ಎ.ಎನ್. ಪೀರ್ ,…

Read More

ಹಿರಿಯೂರು:  ನಗರದ  ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಎಂ.ಸುರೇಖಾಮಣಿ ಅವರ ನೇತೃತ್ವದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಾಜಿ ಸಚಿವ ಡಿ. ಸುಧಾಕರ್ ನೇಮಕಾತಿ ಪತ್ರ ವಿತರಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ಪುಷ್ಪಾ ಅಮರ್ ನಾಥ್  ಮತ್ತು ಚಿತ್ರದುರ್ಗ ಜಿಲ್ಲಾ  ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗೀತಾನಂದಿನಿಗೌಡ ಆದೇಶದ ಮೇರೆಗೆ ನೇಮಕಾತಿ ಪತ್ರ ವಿತರಿಸಲಾಯಿತು. ಹಿರಿಯೂರು ನಗರದ  31  ವಾರ್ಡ್ ಗಳು ಹಾಗೂ 31  ಗ್ರಾಮ ಪಂಚಾಯತಿಯ ಅಧ್ಯಕ್ಷರು , ಉಪಾಧ್ಯಕ್ಷರು,  ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ .ಸುಧಾಕರ್,  ತಕ್ಷಣದಿಂದಲೇ ಈ ಆದೇಶ ಜಾರಿಯಾಗಿದ್ದು,  ಪದಾಧಿಕಾರಿಗಳು ನಿಷ್ಠ ಹಾಗೂ ಪ್ರಾಮಾಣಿಕತೆಯಿಂದ ತಮಗೆ ವಹಿಸಿದ ಜವಾಬ್ದಾರಿಯನ್ನು ನಾಯಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿ ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್…

Read More

ಗುಬ್ಬಿ: ತಾಲ್ಲೂಕು ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವಾದ ಪಲ್ಸ್  ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿಗಳಾದ ಡಾ. ದೀಪಕ್ ಗೋಲ್ಚ ರವರು,  ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಲ್ಸ್ ಪೋಲಿಯೊ ಲಸಿಕೆಯನ್ನು 5 ವರ್ಷಗಳ ಒಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಹಾಕಿಸಬೇಕು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು ಇದೆ ಸಂದರ್ಭದಲ್ಲಿ ಫಾರ್ಮಷಿಷ್ಟ್ ಅಧಿಕಾರಿ NH ಉಮೇಶ್ ರವರು ಮಾತನಾಡಿ,  ಪಲ್ಸ್ ಪೋಲಿಯೊ ಲಸಿಕೆಯನ್ನು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡಲಾಗುತ್ತಿದೆ . ಎಲ್ಲರೂ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ,  ಪೋಲಿಯೊ ಮುಕ್ತ ಸಮಾಜ ನಿರ್ಮಾಣ ಮಾಡಿ.  ಪೋಲಿಯೊ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ವಂದಂತಿಗಳಿಗೆ ಕಿವಿಕೊಡಬೇಡಿ ಲಸಿಕೆಯನ್ನು ಹಾಕಿಸದಿದ್ದರೆ ಬೆಳೆಯುತ್ತಿರುವ ಮಕ್ಕಳಲ್ಲಿ ಅಂಗವಿಲತೆಯಾಗುವ ಸಾಧ್ಯತೆ ಇರುತ್ತದೆ  ಎಂದು ಜಾಗೃತಿ ಮೂಡಿಸಿದರು. ಇದೆ ಸಂದರ್ಭದಲ್ಲಿ ಸಮಾಜ ಸೇವಕರು, ,  ಶ್ರೀ ಜೈ…

Read More

ಮಧುಗಿರಿ: ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ  ರಾತ್ರೋರಾತ್ರಿ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಶನಿವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿದೆ. ಮಲ್ಲೇರಂಗಪ್ಪ(57) ಕರಡಿಯ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಇವರು  ಕಡು ಬಡತನ ಹೊಂದಿದ ಕುಟುಂಬದ ರೈತರಾಗಿದ್ದು, ವ್ಯವಸಾಯದಿಂದ ಜೀವನ ನಡೆಸುತ್ತಿದ್ದಾರೆ. ಕರಡಿಯ ದಾಳಿಯಿಂದಾಗಿ ಇವರ ತಲೆಯ ಮೇಲ್ಭಾಗ ಹಾಗೂ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಸುತ್ತಮುತ್ತ ಹಳ್ಳಿಗಳಲ್ಲಿ ಈ ಹಿಂದೆ ಕುರಿಗಳ ಮೇಲೆ ದಾಳಿ ಮಾಡಿದ್ದು, ಹಾಗೆ ರಸ್ತೆಯಲ್ಲಿ ಹೋಗುವಾಗ ವಾಹನ ಸವಾರರಿಗೂ ಸಹ ಕಾಣಿಸಿಕೊಂಡಿದೆ  ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಅರಣ್ಯಾಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು  ಸಾಮಾಜಿಕ ಕಾರ್ಯಕರ್ತ ಜಲಾಲ್ ಭಾಷಾ ಐಡಿಹಳ್ಳಿ ಮನವಿ ಮಾಡಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು:  ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಾ ತ್ಮಕ ಕಾನೂನುಗಳನ್ನು ಭಾರತ ದೇಶದ ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನಿಗೆ ಗೌರವ ಕೊಡದವರು ದೇಶ ಬಿಟ್ಟು ಹೊರಗಡೆ ಹೋಗ ಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯ ಪಟ್ಟರು. ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಡಿ ದೇಶಕ್ಕೆ ಅನ್ವಯ ವಾಗುವಂತೆ ಏಕರೂಪ ನಾಗರಿಕ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ಹಿಂದೂಗಳು, ಮುಸ ಲ್ಮಾನರು, ಕ್ರೈಸ್ತರು  ಸೇರಿದಂತೆ ಎಲ್ಲ ಸಮುದಾಯದವರು ಸಹಕಾರ ನೀಡಬೇಕು ಎಂದು ವಿನಂತಿಸಿಕೊoಡರು. ಶಿವಮೊಗ್ಗದಲ್ಲಿ ಭಜ ರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿದ್ದು, ಅಲ್ಲಿನ ಸ್ಥಿತಿಗತಿಯ ವೀಕ್ಷಣೆಗೆ ನಮ್ಮ ನಾಲ್ಕೈದು  ಜನ ಸ್ನೇಹಿತರು ಭೇಟಿ ನೀಡಿ, ಪರಿಶೀಲಿಸಿ, ಮೃತನ ಕುಟುಂ ಬಕ್ಕೆ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇದು ಶ್ಲಾಘನೀಯ ಎಂದರು. ನಮ್ಮ ಒಂದು ತಿಂಗಳ ಗೌರವಧನವನ್ನು ಮೃತನ ಕುಟುಂಬದ ಖಾತೆಗೆ ಜಮಾ ಮಾಡುತ್ತಿದ್ದು ನಮ್ಮ ಸ್ನೇಹಿ…

Read More

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕಿನ ಮದಲೂರು ಕೆರೆಯಲ್ಲೊಂದು ಹೃದಯವಿದ್ರಾವಕ ಘಟನೆ  ನಡೆದಿದ್ದು,  ಜಾನುವಾರು ತೊಳೆಯಲು ಕೆರೆಗೆ ಇಳಿದಿದ್ದ ಅಣ್ಣ ತಮ್ಮ ನೀರಲ್ಲಿ ಮುಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಂಗಾಧರ(28), ಹನುಮಂತ (23)  ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಣ್ಣ ತಮ್ಮ ಇಬ್ಬರು  ಜಾನುವಾರುಗಳನ್ನು ಸ್ನಾನ ಮಾಡಿಸಲೆಂದು ಮದಲೂರು ಕೆರೆ ಬಳಿಗೆ ಬಂದಿದ್ದಾರೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.   ಜಾನುವಾರಗಳನ್ನು ಸ್ನಾನ ಮಾಡಿಸುತ್ತಿದ್ದ ವೇಳೆ ತಮ್ಮ ಆಯತಪ್ಪಿ ನೀರಿಗೆ ಬಿದ್ದಿದ್ದು, ಈ ವೇಳೆ ತಮ್ಮನನ್ನು ಕಾಪಾಡಲು  ಅಣ್ಣ ನೀರಿಗೆ ಜಿಗಿದ್ದಿದ್ದಾನೆ. ಈ ವೇಳೆ ಸೆಳೆಗೆ ಸಿಲುಕಿ ಇಬ್ಬರೂ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಸಿರಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರಗಿಸಿದ್ದಾರೆ. ವರದಿ: ಎ.ಎನ್. ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಮಸ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಪಲ್ಸ್  ಪೋಲಿಯೊ ಕಾರ್ಯಕ್ರಮ ನಡೆಯಿತು. ಮಸ್ಕಲ್ ಗ್ರಾಮದಲ್ಲಿನ ಮಸ್ಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳ ವೀರೇಶ್  ಹಾಗೂ ಉಪಾಧ್ಯಕ್ಷರಾದ ವೈ ನಾಗರಾಜು ಅವರ ನೇತೃತ್ವದಲ್ಲಿ  ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ವೀರೇಶ್ ,  ಉಪಾಧ್ಯಕ್ಷರಾದ ವೈ.ನಾಗರಾಜ್,  ಆಶಾ,  ಕಾರ್ಯಕರ್ತರಾದ ಶಿವಮ್ಮ, ಅಂಗನವಾಡಿ ಕಾರ್ಯಕರ್ತರಾದ ಕರಿಯಮ್ಮ, ನಳಿನ, ಪವಿತ್ರ, ವನಜಾಕ್ಷ, ವಸಂತಮ್ಮ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ:  ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ- ದಾವಣಗೆರೆ ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More