ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತ ದೇಹ ಗುರುವಾರ ರಾತ್ರಿ 1:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ.
2:30ರ ವೇಳೆಗೆ ಮಂಜುನಾಥ್ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಬಳಿಕ ಒಂದು ಬಸ್, ಒಂದು ಆಂಬ್ಯುಲೆನ್ಸ್ ಮೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ತರಲಾಗುತ್ತದೆ.
ಬೆಳಗ್ಗೆ 7:30 — 8 ಗಂಟೆಗೆ ಶಿವಮೊಗ್ಗ ತಲಪಲಿದ್ದು, ಮನೆಗೆ ಆಗಮಿಸುತ್ತಿದ್ದಂತೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಕರ್ನಾಟಕದ ಶಿವಮೊಗ್ಗ ಮಂಜುನಾಥ್ ತನ್ನ ಪತ್ನಿ ಪಲ್ಲವಿ ಮತ್ತು ಅವರ ಚಿಕ್ಕ ಮಗನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಡೆದ ಉಗ್ರರ ದಾಳಿಯಲ್ಲಿ ಮಂಜುನಾಥ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಮ್ಮನ್ನು ಕೊಲ್ಲು ಎಂದು ಭಯೋತ್ಪಾದಕರಿಗೆ ಪತ್ನಿ ಪಲ್ಲವಿ ಹೇಳಿದಾಗ ‘ಮೋದಿಗೆ ಹೇಳು’ ಎಂದು ಭಯೋತ್ಪಾದಕ ಹೇಳಿದ್ದ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW