Author: admin

ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ನಿವಾಸಕ್ಕೆ ಡಾ.ಸಂತೋಷ ಭಾರತಿ ಶ್ರೀಪಾದ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕ ಗಣ್ಯರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸರ್ಕಾರ ಇಂದು ಯುವಕರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದುತ್ವದ ಆಧಾರದ ಮೇಲೆ ಬಂದಿರುವ ಸರ್ಕಾರ ಹಿಂದೂ ಯುವಕರ ಮೇಲೆ ದಾಳಿ ನಡೆಯುತ್ತಿದ್ದರೂ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಸರ್ಕಾರದ ಗುಪ್ತಚರ ಇಲಾಖೆ ವಿಫಲವಾಗಿದೆ. ಘಟನೆ ಹಿಂದೆ ಇರುವವರನ್ನು ಬೇರು ಸಮೇತ ಕಿತ್ತುಹಾಕಬೇಕು. ಶಿವಮೊಗ್ಗದಲ್ಲಿ ಗಾಂಜಾ, ಡ್ರಗ್ಸ್ ನಿಲ್ಲಿಸಬೇಕೆಂದು ಹೇಳಿದರು. ಡಾ.ಸಂತೋಷ್ ಭಾರತಿ ಶ್ರೀಪಾದ ಸ್ವಾಮೀಜಿ ಮಾತನಾಡಿ, ಇದನ್ನು ಸ್ವಾಭಿಮಾನವಾಗಿ ತೆಗೆದುಕೊಳ್ಳದೆ ಯುದ್ಧವಾಗಿ ತೆಗೆದುಕೊಳ್ಳಬೇಕಾಗಿದೆ. ನಾವು ಒಬ್ಬ ಯೋಧನನ್ನು ಕಳೆದುಕೊಂಡಿದ್ದೇವೆ. ಕೊಲೆ ಮಾಡಿದವರಿಗೆ ಶಿಕ್ಷೆ ಕೊಡಲು ಆಗಲಿಲ್ಲವೆಂದರೆ ನಾವು ಕೊಡುತ್ತೇವೆ.…

Read More

ಕೊರಟಗೆರೆ: ಕರ್ನಾಟಕ ರಾಜ್ಯ ರೈತ ಸಂಘವು ಕೊರಟಗೆರೆ ತಾಲ್ಲೂಕಿನ ಮಾರಗೊಂಡನಹಳ್ಳಿ, ವಜ್ಜನಕುರಿಕೆ, ಪಾತಗಾನಹಳ್ಳಿ ಗ್ರಾಮಗಳಲ್ಲಿ ನೂತನ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಯ ನಂತರ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ,   ಪ್ರಪಂಚದ ಸಮಾರು  700 ದೇಶಗಳಲ್ಲಿ ವಿದ್ಯಾರ್ಥಿಗಳು ರೈತರಿಗೆ ಸಂಬಂಧಿಸಿದ ಅಧ್ಯಯನಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುವುದರೊಂದಿಗೆ ಸಾಕಷ್ಟು  ಸಾಧನೆ ಮಾಡಿರುವಂತಹದ್ದು ನಮ್ಮ ಕಣ್ಣು ಮುಂದೆಯೇ ಸಾಕಷ್ಟು ಉದಾಹರಣೆಗಳಿವೆ.  ನೀವು ಸರಳವಾಗಿ ರೈತಸಂಘದ  ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದರೆ ರೈತ ಸಂಘದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಮತ್ತು ಹೋರಾಟಗಳಲ್ಲಿ ಭಾಗವಹಿಸಿದರೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು. ರೈತ ಸಂಘದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರಾಗಿ ಭಾಗವಹಿಸುವಾಗ ಹಸಿರು ಶಾಲು, ಹಸಿರು ಸೇನೆಯ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಎಲ್ಲಾ ಹಕ್ಕುಗಳು ನೇರವಾಗಿ ಅವರಿಗೆ ತಲುಪುವಂತೆ ಮಾಡುವುದೇ ರೈತ ಸಂಘದ ಮುಖ್ಯ ಕರ್ತವ್ಯ ಎಂದು ಅವರು ಹೇಳಿದರು. ರೈತ ಸಂಘದಲ್ಲಿ ಕಾರ್ಯಕರ್ತನಾದ ಮೇಲೆ ಸಂಘದಲ್ಲಿ ಇದ್ದು ಸಂಘವನ್ನು ದುರ್ಬಳಕೆ ಮಾಡಿಕೊಳ್ಳದೆ ಸಂಘದ ತತ್ವ ಮತ್ತು…

Read More

ವಿಜಾಪುರಜಿಲ್ಲೆ: ಕೊಲ್ಹಾರ ಪಟ್ಟಣ ಹಾಗೂ ಕೊಲ್ಹಾರ ತಾಲ್ಲೂಕು ವ್ಯಾಪ್ತಿಯ ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತವಾಗಿ ಹೋರಾಟ ಮಾಡಲಾಗುವುದು ಎಂದು ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ಬಾಲಗೊಂಡ ಹೇಳಿದರು. ಪಟ್ಟಣದಲ್ಲಿ ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಾಗಲಕೋಟೆ ನಂತರ ಎರಡನೆಯ ಅತಿ ದೊಡ್ಡ ಪಟ್ಟಣವಾದ ಕೊಲ್ಹಾರ ಪಟ್ಟಣ ಸ್ಥಳಾಂತರವಾಗಿ ಅನೇಕ ವರ್ಷಗಳು ಕಳೆಯುತ್ತಾ ಬಂದರು ಕೂಡ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಪುನರ್ವಸತಿ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ಸಂತ್ರಸ್ತರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಸರಕಾರಕ್ಕಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳ ತಪ್ಪಿತಸ್ಥರು: ಪುನರ್ವಸತಿ ಅಧಿಕಾರಿಗಳು ತಪ್ಪು ಮಾಡಿ ಸುಖಾಸುಮ್ಮನೆ 1117 ಜನ ಸಂತ್ರಸ್ತರ ಮೇಲೆ ಪ್ರಕರಣದ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮಗೆ ಪುನರ್ವಸತಿ ಅಧಿಕಾರಿಗಳು ನೀಡಿದ ನಿವೇಶನಗಳು ಬೇಡ! ಅವರು…

Read More

ತುಮಕೂರು: ತುಮಕೂರು ಗ್ರಾಮಾಂತರ ಕೆಸರುಮಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚನಹಳ್ಳಿ ಗ್ರಾಮದ ಶ್ರೀ ತಿರುಮಲ ರಂಗನಾಥಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಡಿ.ಸಿ. ಗೌರಿಶಂಕರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕರಾದ ಡಿ.ಸಿ. ಗೌರಿಶಂಕರ್ ರವರು ವೈಯಕ್ತಿಕವಾಗಿ 3,50,000 (ಮೂರುವರೆ ಲಕ್ಷ) ರೂಗಳ  ಧನಸಹಾಯ ಮಾಡಿದ್ದು,  ದೇವಾಲಯದ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ವತಿಯಿಂದ 10,00,000 (ಹತ್ತು ಲಕ್ಷ) ರೂಗಳನ್ನು ಬಿಡುಗಡೆ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕರಾದ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಮಾಚನಹಳ್ಳಿ ಗ್ರಾಮಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಹೊರತುಪಡಿಸಿ ಸುಮಾರು 20,00,000 (ಇಪ್ಪತ್ತು ಲಕ್ಷ) ವೆಚ್ಚದಲ್ಲಿ ಸಿಸಿ ರಸ್ತೆ 12,00,000 (ಹನ್ನೆರೆಡು ಲಕ್ಷ) ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಶಾಸಕರ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವರದಿ: ಎ.ಎನ್.ಪೀರ್,   ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ತುಮಕೂರು:  ತುರುವೇಕೆರೆ ಪಟ್ಟಣದಲ್ಲಿ, ಕಾಂಗ್ರೆಸ್ ಮುಖಂಡ ಚೌದ್ರಿ ಟಿ, ರಂಗಪ್ಪ ನವರ ನೇತೃತ್ವದಲ್ಲಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ  ರಾಷ್ಟ್ರ ಧ್ವಜಕ್ಕೆ ಮಾಡಿದ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿತು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ , ನೂರಾರು ಸಂಖ್ಯೆಯ ಪಕ್ಷದ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ,  ತಾಲ್ಲೂಕು ತಹಸೀಲ್ದಾರ್ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಈಶ್ವರಪ್ಪ ವಿರುದ್ಧ ಘೋಷಣೆ ಕೂಗುತ್ತಾ,  ಬಿತ್ತಿ ಪತ್ರಗಳನ್ನು ಹಿಡಿದು ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ, ವಜಾಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎ. ಐ.ಸಿ.ಸಿ. ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ,  ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಡಿ.ಕೆ. ಅವರ ತಂದೆಯವರ ಬಗ್ಗೆಯೂ ಅಸಂವಿಧಾನಿಕ ಪದವನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ದೇಶದ್ರೋಹದ ಮಾತುಗಳನ್ನಾಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇವರನ್ನು ಈ ಕೂಡಲೇ  ರಾಜ್ಯಸರ್ಕಾರವು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಶಾಸಕ ಸ್ಥಾನವನ್ನು ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು. ಬಿ.ಎಸ್.ವಸಂತಕುಮಾರ್, ಟಿ.ಎನ್. ಶಿವರಾಜ್, ಸಮಾಜ…

Read More

ಚಿತ್ರದುರ್ಗ: ನಾನು ಅಧಿಕಾರದಲ್ಲಿರುವವರೆಗೆ  ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವುದಾಗಿ ಹಿರಿಯೂರು ತಾಲ್ಲೂಕಿನ ನಗರಸಭೆ ಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಜೆ.ಆರ್.ಅಜಯ್ ಕುಮಾರ್ ಹೇಳಿದರು. ಸ್ಥಾಯಿ ಸಮಿತಿಗೆ ನನ್ನನ್ನು ಆಯ್ಕೆ ಮಾಡಿದ  ಮಾಜಿ ಸಚಿವರಾದ ಡಿ.ಸುಧಾಕರ್ ಹಾಗೂ ಎಲ್ಲಾ ನಾಯಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.  31 ಜನ ಸದಸ್ಯರು ಹಾಗೂ ಐದು ಜನ ನಾಮ ನಿರ್ದೇಶಕರ ಸಹಕಾರದಿಂದ ನಾನು ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಸರ್ಕಾರಿ ಕೆಲಸಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಕೆಲಸ ನಿರ್ವಹಿಸುವುದಾಗಿ ಅವರು ಇದೇ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಪೌರಾಯುಕ್ತರಾದ ಡಿ.ಉಮೇಶ್ , ಸಿಬ್ಬಂದಿ ವರ್ಗದವರಾದ ಜಯಣ್ಣ, ನಿರಂಜನಿ, ಅಶೋಕ್, ಸುನಿಲ್  ಹಾಗೂ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ನಗರಸಭೆ ಸದಸ್ಯರಾದ ಶಿವರಂಜನಿ, ಜಗದೀಶ್, ಮದಲಿಮೇರಿ, ಜಬೀವುಲ್ಲಾ, ಸನಾವುಲ್ಲಾ, ಈರಲಿಂಗೆಗೌಡ, ಮಮತ, ಮದಲಿಮೇರಿ, ಸುರೇಖಾ ಮಣಿ,  ಹಾಗೂ ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾದ ಸಾದತ್ ವುಲ್ಲಾ ಹಾಗೂ ಪ್ರಭುಯಾದವ್ , ಕೃಷ್ಣಪೂಜಾರಿ ಉಪಸ್ಥಿತರಿದ್ದರು.…

Read More

ಮಾಯಸಂದ್ರ: ಇತ್ತೀಚಿಗಷ್ಟೇ ನಿಧನರಾದ ಕಲಾ ತಪಸ್ವಿ ರಾಜೇಶ್ ರವರಿಗೆ ಇಂದು ಮಾಯಸಂದ್ರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ  ಕ.ಸಾ.ಪ ಮಾಯಸಂದ್ರ ಘಟಕದ ಸ್ಥಾಪಕ ಅಧ್ಯಕ್ಷರಾದ ಎನ್.ಆರ್.ಜಯರಾಮ್,  ರಾಜಕುಮಾರ್, ಕಲ್ಯಾಣ್ ಕುಮಾರ್ ರವರ ಸಮಕಾಲೀನ ನಟರಾದ ರಾಜೇಶ್ ರವರ ನಿಧನದಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ.  ‘ದೇವರ ದುಡ್ಡು’  ಚಿತ್ರದಲ್ಲಿ ಅವರ ಅಭಿನಯ ನೆನೆದು  ಇದೇ ವೇಳೆ ಅವರು ಭಾವುಕರಾದರು. ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಮಾಯಸಂದ್ರ ಕ.ಸಾ.ಪ ಘಟಕದ  ನೂತನ ಅಧ್ಯಕ್ಷರಾದ  ಪಿ.ಎನ್ ಜವರೇಗೌಡ ರವರ ನೇತೃತ್ವದಲ್ಲಿ ನೂತನ ಸಮಿತಿಯ ರಚನೆಯಾಯಿತು. ಈ ಕಾರ್ಯಕ್ರಮದಲ್ಲಿ CN ನಂಜುಂಡಯ್ಯ, ಶ್ರೀಧರ್ ಮೂರ್ತಿ, ಪ್ರಕಾಶ್ CP, ಶಿವಲಿಂಗೇಗೌಡರು, SDMC ಅಧ್ಯಕ್ಷರಾದ ಕರಿಬಸವಪ್ಪ, ಹನುಮಂತಯ್ಯ, ಮುನಿರಾಜು, ಲೀಲಾವತಿ ಗಿಡ್ಡಯ್ಯ, MS ಶಿವರಾಮಯ್ಯನವರು,ವೇಗಣ್ಣ, ಯತೀರಾಜು, ಗಿರಿಧರ್, ರವೀಂದ್ರ ಮುಂತಾದವರು ಭಾಗವಹಿಸಿದ್ದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ಶಿವಮೊಗ್ಗ  ನಗರದಲ್ಲಿ ಭಾನುವಾರ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧ ಪ್ರತ್ಯಕ್ಷ ವರದಿ ಸಾಕ್ಷಿಗಳಿಲ್ಲದೇ, ಎಫ್ ಐಆರ್ ದಾಖಲಿಸುವ ಮುನ್ನೆವೇ ಸಚಿವ ಈಶ್ವರಪ್ಪ ನವರು ಮುಸಲ್ಮಾನ ಗುಂಡಾಗಳು ಕೊಲೆ ಮಾಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದು ಖಂಡನೀಯ. ಸಚಿವರ ಹೇಳಿಕೆಯಿಂದ ಕೋಮು ಸೌಹಾರ್ದಯಕ್ಕೆ ಧಕ್ಕೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಅಧ್ಯಕ್ಷರು ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಯುವಕನ ಅಂತಿಮಯಾತ್ರೆ ವೇಳೆ ಕೋಮು ಘರ್ಷಣೆ ಉಂಟಾಗಿ ಹಲವರ ಮನೆ, ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿ ಯುವಕರ ಗುಂಪು ದಾಂಧಲೆ ನಡೆಸಿದ್ದಾರೆ. ಅನೇಕ ವಾಹನಗಳಿಗೆ ಬೆಂಕಿಯನ್ನು ಹಚ್ಚಿ ಪುಂಡಾಟ ಮೆರೆದಿದ್ದಾರೆ. ಇದಕ್ಕೆ ಸಚಿವ ಈಶ್ವರಪ್ಪನವರೇ  ನೇರ ಹೊಣೆ. ಅವರ ಹೇಳಿಕೆಯಿಂದಲೇ ಈ ದುರ್ಘಟನೆಯಾಗಿದೆ. ತಮ್ಮದೇ ಸರ್ಕಾರ ಇರುವಾಗ ಇಂತಹ ಘಟನೆಗಳು ನಡೆಯದ ಹಾಗೆ ನೋಡುವ ಬದಲು, ಕೋಮು ಪ್ರಚೋದನ ಹೇಳಿಕೆ ನೀಡಿ ಕೋಮು ಗಲಭೆ ಮಾಡಿಸಿದ್ದು ದುರ್ದೈವ. ಈ ಕೊಲೆಯ…

Read More

ಪಾವಗಡ:  ತಾಲ್ಲೂಕು ಕೇಂದ್ರದಿಂದ ಡಿಜಿಟಲ್ ಸದಸ್ಯತ್ವ ನೋಂದಣಿ ತರಬೇತಿ ಕಾರ್ಯಾಗಾರವನ್ನು ಪಾವಗಡ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಶಂಕರ್ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಸುಮಾ ಅನಿಲ್ ಹಾಗೂ ನೋಂದಣಿ ಚೀಫ್ ಎನ್ರೋಲರ್ ಗಳಾಗಿ ಆಯ್ಕೆಗೊಂಡಿರುವ ಹನುಮೇಶ್, ನಾಗೇನಹಳ್ಳಿ ಭಾಸ್ಕರ್ ನಾಯ್ಡು, ಗೋವಿಂದ್ ಯಾದವ್, ಮದನ್ ರೆಡ್ಡಿ, ರಂಜಿತ್, ಸುಮನ್, ಸವಿತಾ, ಬಿಂದು ಮಾದವ್ ರಾವ್, ಗೌತಮಿ, ಮಂಜುಳ ಮತ್ತು ಸಾಮಾಜಿಕ ಜಾಲತಾಣದ ಸದಸ್ಯ ಓಂಕಾರ ನಾಯಕ, ಪಾಪಣ್ಣ ವಿ.ಹೆಚ್.ಪಾಳ್ಯ,ಹರೀಶ್ ಮಣಿ ಮಹೇಶ್ ಮತ್ತಿತರರು ಇದ್ದರು. ವರದಿ: ದೇವರಹಟ್ಟಿ ನಾಗರಾಜು,  ಕಸಬಾ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಿರಿಯೂರು: ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯ ಆವರಣದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ಮಾಜಿ ಶಾಸಕ, ಮಾಜಿ ಸಚಿವ ಡಿ.ಸುಧಾಕರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಆರ್ . ನಾಗೇಂದ್ರ ನಾಯ್ಕ, ಪಕ್ಷ ಅಂತ ಬಂದರೆ ನಾವುಗಳೆಲ್ಲರೂ ಸಹ ಒಂದೇ ಕುಟುಂಬದವರಾಗಿರಬೇಕು. ಯಾವುದೇ ಸಮಯ ಸಂದರ್ಭ ಬಂದರೂ ಸಹ ನಮ್ಮಲ್ಲಿ ಇರುವ ಒಗ್ಗಟ್ಟನ್ನು ಮತ್ತೊಬ್ಬರಿಗಾಗಿ ಬಿಟ್ಟುಕೊಡಬಾರದು. ಮುಂದಿನ ದಿನಗಳಲ್ಲಿ ಬರುವಂತಹ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಭಿನ್ನಾಭಿಪ್ರಾಯಗಳನ್ನು ತೊರೆದು ಕೆಲಸ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಕೆಪಿಸಿಸಿ ಸದಸ್ಯರಾದ ಅಮೃತೇಶ್ವರ್ ಮಾತನಾಡಿ, ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರೂ ಸಹ ಪಕ್ಷದ ಪರವಾಗಿ ಇನ್ನು ಅತಿ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ನಿಷ್ಠೆಯಿಂದ ದುಡಿಯಬೇಕು ಎಂದು ತಿಳಿಸಿದರು. ಹಿರಿಯೂರು ಬ್ಲಾಕ್…

Read More