Subscribe to Updates
Get the latest creative news from FooBar about art, design and business.
- ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
- ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
- ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
- ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
- ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
- ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
- ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
Author: admin
ತಿಪಟೂರು: ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ, ಸಚಿವ ಈಶ್ವರಪ್ಪರವರ ಹೇಳಿಕೆ ವಿರೋಧಿಸಿ, ಬೃಹತ್ ಪ್ರತಿಭಟನೆ ನಡೆಯಿತು. ನಗರಸಭಾ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಶಾಸಕ ಕೆ.ಷಡಕ್ಷರಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜ್ ಮತ್ತು ನಗರಸಭೆ ಸದಸ್ಯೆ ಮೇಘನ ಭೂಷಣ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರುಕೆಪಿಸಿಸಿ ಸದಸ್ಯ ಯೋಗೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಸುರೇಶ್, ಕೆಎಂಎಫ್ ನಿರ್ದೇಶಕ ಪ್ರಕಾಶ್, ನಗರಸಭಾ ಸದಸ್ಯರಾದ ಯೋಗೀಶ್, ವಿನುತಾ ತಿಲಕ್ ಕುಮಾರ್ ಮತ್ತು ಕೋಟೆ ಪ್ರಭು, ಎಪಿಎಂಸಿ ಸದಸ್ಯರಾದ ಬಜಗೂರು ಮಂಜುನಾಥ್, ರವೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರ ಮೂರ್ತಿ, ಪಿ ಎಲ್ ಡಿ ಅಧ್ಯಕ್ಷ ಪ್ರಕಾಶ್, ಯುವ ಮುಖಂಡ ನಿಖಿಲ್ ರಾಜ್, ಮುಖಂಡರುಗಳಾದ ಕಾಂತರಾಜ್, ರೇಣು, ಅಣ್ಣಯ್ಯ, ಯೋಗಾನಂದ್, ಪ್ರಕಾಶ್ ಯಾದವ್, ಪ್ರಸಾದ್, ಸಿದ್ದೇಶ್ ಲೋಕ್ ನಾಥ್ ಸಿಂಗ್, ಭರತ್, ಉಮೇಶ್, ಕುಮಾರಸ್ವಾಮಿ,ಬಸವರಾಜ್, ಹೇಮಂತ್ ಮತ್ತು ಸುನಿಲ್ ಸೇರಿದಂತೆ ಚುನಾಯಿತ…
ತುಮಕೂರು: ತುರುವೇಕೆರೆ ಪಟ್ಟಣದಲ್ಲಿ, ಕಾಂಗ್ರೆಸ್ ಮುಖಂಡ ಚೌದ್ರಿ ಟಿ, ರಂಗಪ್ಪ ನವರ ನೇತೃತ್ವದಲ್ಲಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಮಾಡಿದ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿತು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ,ನೂರಾರು ಸಂಖ್ಯೆಯ ಪಕ್ಷದ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ, ತಾಲ್ಲೂಕು ತಹಸೀಲ್ದಾರ್ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಈಶ್ವರಪ್ಪ ವಿರುದ್ಧ ಘೋಷಣೆ ಕೂಗುತ್ತಾ, ಬಿತ್ತಿ ಪತ್ರಗಳನ್ನು ಹಿಡಿದು ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ, ವಜಾಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎ. ಐ.ಸಿ.ಸಿ. ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಡಿ.ಕೆ. ಅವರ ತಂದೆಯವರ ಬಗ್ಗೆಯೂ ಅಸಂವಿಧಾನಿಕ ಪದವನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ದೇಶದ್ರೋಹದ ಮಾತುಗಳನ್ನಾಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇವರನ್ನು ಈ ಕೂಡಲೇ ರಾಜ್ಯಸರ್ಕಾರವು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಶಾಸಕ ಸ್ಥಾನವನ್ನು ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು. ಬಿ.ಎಸ್.ವಸಂತಕುಮಾರ್, ಟಿ.ಎನ್. ಶಿವರಾಜ್, ಸಮಾಜ ಸೇವಕ…
ನಂಜನಗೂಡು: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆರವುಗೊಳಿಸಿ ಅವಮಾನಿಸಿದ ಘಟನೆಯ ವಿರುದ್ಧ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಗ್ರಾಮದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಸುತ್ತಮುತ್ತಲಿನ ಗ್ರಾಮವಾದ ಹಾದನೂರು ಮುಳ್ಳೂರು , ವಡೆಯನಪುರ ಹೇಡಿಯಾಲ ಗ್ರಾಮಸ್ಥರು ಬೆಂಬಲ ನೀಡಿದರು. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ನಂಜನಗೂಡು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ ರಾಜ್ ಮಾತನಾಡಿ, ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನಿಸಿದ ಬಗ್ಗೆ ಎಸ್ ಸಿ, ಎಸ್ ಟಿ ಶಾಸಕರು ಸಚಿವರು ಸದನದಲ್ಲಿ ಮಾತನಾಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಮಹೇಶ್ ಮಾತನಾಡಿ, ಮೊನ್ನೆ ನಡೆದ ವಿಧಾನಸೌಧ ಚಲೋ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿರವರು ಇನ್ನೂ ಮೂರು ದಿನಗಳಲ್ಲಿ ಅವನ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು…
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆ ಯುವಕನ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಿನ್ನೆರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆಯ ಹರ್ಷ ಅವರ ಮೃತದೇಹದ ಮೆರವಣಿಗೆ ಮೆಗ್ಗಾನ್ ಆಸ್ಪತ್ರೆಯಿಂದ ಬಸವನ ಬೀದಿಯ ಹರ್ಷ ನಿವಾಸದವರೆಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಂದು ಗುಂಪಿನಿಂದ ಕಲ್ಲು ತೂರಾಟ ನಡೆದಿದೆ. ರವಿವರ್ಮ ಬೀದಿ, ಸಿದ್ದಯ್ಯ ರಸ್ತೆ ಮುಂತಾದ ಕಡೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಉದ್ರಿಕ್ತರು ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು. ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು. ಮೆರವಣಿಗೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗವಹಿಸಿದ್ದು, ಹರ್ಷ ಅವರ ಅಂತ್ಯ ಸಂಸ್ಕಾರ ಬಿಎಸ್ ರಸ್ತೆಯ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ವರದಿ ಆಂಟೋನಿ…
ತಿಪಟೂರು: ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಸಂತ ಶ್ರೀ ಸೇವಾಲಾಲ್ ರವರ 283 ನೇ ಜಯಂತಿ ಆಚರಿಸಲಾಯಿತು. ನಗರದ ಕೆ.ಆರ್.ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮಕ್ಕೆ ಹಣ್ಣು ಮತ್ತು ಬ್ರೆಡ್ ಗಳನ್ನು ವಿತರಿಸಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ, ಸಿಹಿಯನ್ನು ವಿತರಿಸಲಾಯಿತು. ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಟರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಯೋಜಕ ಮತ್ತು ಅಧ್ಯಕ್ಷ ಬಿ.ಟಿ.ಕುಮಾರ್, ಪದಾಧಿಕಾರಿ ಬೆಸ್ಕಾಂ ಚೇತನ್ ,ಆಶ್ರಮದ ಕಲ್ಪನಾ, ವಿದ್ಯಾರ್ಥಿ ಘಟಕದ ರಾಖಿ ರಾಥೋಡ್ ಮತ್ತು ರಾಹುಲ್ ಸೇರಿದಂತೆ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಸಿರಾ: ಧ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿರಾ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪಾಂಡುರಂಗಪ್ಪ ಹೇಳಿದರು ಜಿಲ್ಲೆಯ ಸಿರಾ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಗತ್ತೇ ಒಂದು ಕುಟುಂಬ ಎನ್ನುವ ತತ್ತ್ವದಡಿ ಸೇವೆ ಮಾಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ. ಮನಸ್ಸು ಏರುಪೇರು ಆದಾಗ ಶಾರೀರಿಕವಾಗಿ ನಾವು ತೊಂದರೆಗೀಡಾಗುತ್ತೇವೆ. ಆರೋಗ್ಯವಂತರಾಗಿರಬೇಕಾದರೆ ಧ್ಯಾನ ಬಹಳ ಅವಶ್ಯಕವಿದೆ. ಮನಸ್ಸಿನ ಆರೋಗ್ಯ ಅಷ್ಟೇ ಮುಖ್ಯವಾಗಿದೆ. ಮನಸ್ಸು ಆರೋಗ್ಯವಾಗಿರಬೇಕಾದರೆ ಅಧ್ಯಾತ್ಮ ಜ್ಞಾನ ಒಳ್ಳೆಯ ಚಿಂತನೆಗಳು ಮುಖ್ಯವಾಗಿವೆ. ನಾವು ಏನು ನೋಡುತ್ತಿದ್ದೇವೋ ಇದೇನು ಶಾಶ್ವತವಲ್ಲ, ಧ್ಯಾನ ಒಂದು ಅದ್ಭುತವಾದ ಶಕ್ತಿ ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನ ಗೊಂದಲ ದೂರವಾಗುತ್ತವೆ ಎಂದರು. ಬ್ರಹ್ಮಕುಮಾರಿ ಆಧ್ಯಾತ್ಮಿಕ ಪ್ರವಚನಕ ರಾಜಯೋಗಿ ಡಾ.ಮಹೇಂದ್ರಪ್ಪ ಪಿ.ಹೆಚ್. ಮಾತನಾಡಿ, ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಧ್ಯಾನ ಮನಸ್ಸಿನ ಆರೋಗ್ಯವನ್ನು ಸದೃಢ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು…
ತುಮಕೂರು: ದಲಿತ ಸಮುದಾಯಗಳಾದ ಎಡ-ಬಲ ಸಮುದಾಯಗಳು ಒಂದಾಗದಿದ್ದರೆ , ಮುಂದಿನ ದಿನಗಳು ಕ್ಲಿಷ್ಟಕರ ದಿನಗಳಾಗಿ ಸಮುದಾಯಗಳನ್ನು ಕಾಡಲಿದೆ ಎಂದು ಆದಿಜಾಂಬವ ಬೃಹನಮಠದ ಸ್ವಾಮೀಜಿ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಎಡ-ಬಲ ಸಮುದಾಯಗಳ ಸಮನ್ವಯ ಸಮಿತಿಯ ವತಿಯಿಂದ ನಡೆದ ಎಡ-ಬಲ ಸಮುದಾಯಗಳ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದಾಗಬೇಕು ಆಗ ಅವಕಾಶಗಳು ತಮ್ಮನ್ನ ಹುಡುಕಿ ಬರುವುದು ಈ ಮೂಲಕ ಅಸ್ಪೃಶ್ಯ ಸಮಾಜಗಳು ಇತರ ಸಮುದಾಯಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಎಡಬಲ ಸಮುದಾಯಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಪಿ.ಎನ್ ರಾಮಯ್ಯ, ಶೋಷಿತ ಸಮುದಾಯಗಳಿಗೆ ಸಂವಿಧಾನವೇ ಆಧಾರ ಇಂದಿನ ದಿನದಲ್ಲಿ ಸಂವಿಧಾನ ಹಾಗೂ ಸಂವಿಧಾನದ ಬರೆದ ಮಹಾಪುರುಷರಿಗೆ ಅವಮಾನ ಮಾಡುತ್ತಿದ್ದಾರೆ ಹಾಗಾಗಿ ಇಂತಹ ಬೆಳವಣಿಗೆಗಳನ್ನು ತಡೆಯದೆ ಇದ್ದಲ್ಲಿ ಮುಂದಿನ ದಿನಗಳು ದಲಿತ ಸಮುದಾಯಗಳಿಗೆ ಮಾರಕವಾಗಲಿದೆ ಹಾಗಾಗಿ ಸಮುದಾಯಗಳನ್ನು ಒಟ್ಟುಗೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಎಡ-ಬಲ ಸಮನ್ವಯ ಸಮಿತಿ ಮುಂದಾಗಲಿದೆ. ಪ್ರಥಮ ಬಾರಿಗೆ…
ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ದೇಶದಲ್ಲಿ ಹೆಚ್ಚಿನ ಜನರು ಪ್ರಯೋಜನ ಪಡೆದಿದ್ದಾರೆ. ಆದರೆ, ಈ ಯೋಜನೆಯ ಎಲ್ಲಾ ಷರತ್ತುಗಳನ್ನು ಪೂರೈಸುವ ಅನೇಕ ಜನರಿದ್ದಾರೆ, ಆದರೆ ಇದುವರೆಗೆ ಅವರ ಖಾತೆಗೆ ಸಬ್ಸಿಡಿ ಹಣ ಬಂದಿಲ್ಲ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಖಾತೆಯಲ್ಲಿ ಸಬ್ಸಿಡಿ ಸಿಗದಿರಲು ಕಾರಣಗಳೇನು? ಇಲ್ಲಿದೆ ನೋಡಿ.. ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Yojana)ಯಡಿ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಮನೆ ನಿರ್ಮಿಸಲು ಅನುದಾನ ನೀಡಲಾಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ದುರ್ಬಲ ವರ್ಗದ ಜನರ ‘ಅಪ್ನಾ ಘರ್’ ಕನಸನ್ನು ನನಸಾಗಿಸಲು ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಫಲಾನುಭವಿಗಳಿಗೆ ಮೊದಲ ಬಾರಿಗೆ ಮನೆ ಖರೀದಿಸಲು ಸರ್ಕಾರದಿಂದ 2.67 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಆದರೆ ಈ ಯೋಜನೆಯ ಎಲ್ಲಾ ಷರತ್ತುಗಳನ್ನು ಪೂರೈಸುವ ಅನೇಕ ಜನರಿದ್ದಾರೆ, ಆದರೆ ಅವರ ಸಬ್ಸಿಡಿ ಇನ್ನೂ ಅಂಟಿಕೊಂಡಿದೆ.ಈ ಕಾರಣಗಳಿಂದ ಸಬ್ಸಿಡಿ ಸ್ಥಗಿತಗೊಳ್ಳುತ್ತದೆ ಅನೇಕ ಬಾರಿ ಅರ್ಜಿದಾರರು ಯೋಜನೆಗೆ ಅರ್ಜಿ(PM Awas…
ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಜೊತೆ ವೀಲಿಂಗ್ ಚೋರರ ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್ ಮಾಡುತ್ತಿದ್ದ ಪುಂಡನನ್ನು ಅಂದರ್ ಮಾಡಿದ್ದಾರೆ ಸಿಲಿಕಾನ್ ಸಿಟಿ ಪೊಲೀಸರು. ಹೋಂಡಾ ಡಿಯೋ ಬೈಕ್ ನಲ್ಲಿ ಡೆಡ್ಲಿ ವೀಲಿಂಗ್(Bike Wheeling) ಮಾಡುತ್ತಿದ್ದ ಪುಂಡನ ವಿಡಿಯೋ ನೋಡಿ ಅಲರ್ಟ್ ಆದ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಆರ್.ಟಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಕಡೆಗೂ ಪುಂಡ ಲಾಕ್ ಆಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.ಪುಂಡನಿಗೆ ರೀಲ್ಸ್ ಚಟ! ಬಂಧಿತ ಆರೋಪಿಯನ್ನು 20 ವರ್ಷದ ವಿಜಯ್ ಎಂದು ಗುರುತಿಸಲಾಗಿದೆ. ಈತನಿಗೆ ರೀಲ್ಸ್(Reels) ಮಾಡುವ ಹ್ಯಾಬಿಟ್ ಇತ್ತು. ಅಲ್ಲೋ, ಇಲ್ಲೋ ನಿಂತು ಎಲ್ಲರಂತೆ ಈತನೂ ರೀಲ್ಸ್ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈತ ಮಾಡಿದ್ದೇ ಬೇರೆ. ಬೈಕ್ ಜೊತೆ ಸರ್ಕಸ್ ಮಾಡುತ್ತಾ, ಬ್ಯುಸಿ ರೋಡ್‌ನಲ್ಲೇ ವೀಲಿಂಗ್ ಮಾಡಿ ಎಲ್ಲರಿಗೂ ಟಾರ್ಚರ್ ಕೊಡುತ್ತಿದ್ದ. ಹೀಗೆ ರೀಲ್ಸ್ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಶೇರ್…
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೇತ್ರದಾನದ ಬಗ್ಗೆ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಎಂದೆಂದಿಗೂ ಜೀವಂತ. ಹೀಗೆ ಕನ್ನಡದ ಪ್ರತಿಷ್ಠಿತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ದಂಪತಿ ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ‘ನೇತ್ರದಾನ ಮಹಾದಾನ'(Eye Donation) ಎಂಬ ಮಾತಿದೆ. ಈ ಮಾತಿಗೆ ಮತ್ತಷ್ಟು ಮಹತ್ವ ತಂದುಕೊಟ್ಟವರೇ ವರನಟ ಡಾ.ರಾಜ್‌ಕುಮಾರ್(Dr.Rajkumar). ವರನಟ ರಾಜ್‌ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಹಾಗೇ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ತಮ್ಮ ನೇತ್ರದಾನ ಮಾಡಿ ಕನ್ನಡಿಗರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಹೀಗೆ ಮಹಾನ್ ನಟರು ಮೂಡಿಸಿರುವ ನೇತ್ರದಾನದ ಅರಿವು ಇಂದು ದೊಡ್ಡ ಜ್ಯೋತಿಯಾಗಿ ಕನ್ನಡಿಗರ ಹೃದಯದಲ್ಲಿ ಬೆಳಗುತ್ತಿದೆ. ಜನಮೆಚ್ಚಿದ ಶಿಬಿರ: ಅಂದಹಾಗೆ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ಗೋವಿಂದೇಗೌಡರ ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು…