Author: admin

ಪಹಲ್ಗಾಮ್​ ನಲ್ಲಿ ನಡೆದ ಭಯೋತ್ಪಾದಕ ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ. ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಈ ಕಾರ್ಯಾಚರಣೆ ನಡೆದಿದೆ.  ಕೆಲ ಭಯೋತ್ಪಾದಕರು ಬಾರಾಮುಲ್ಲಾದ ಉರಿ ನಾಲಾದ ಸರ್ಜೀವನ್ ಸಾಮಾನ್ಯ ಪ್ರದೇಶದ ಮೂಲಕ ಒಳನುಸುಳಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡ ಭಾರತೀಯ ಸೇನೆ ಸುಮಾರು ಎರಡು–ಮೂರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿರುವಾಗ ಬುಧವಾರ ಎನ್‌ಕೌಂಟರ್ ಮಾಡಲಾಗಿದೆ ಎಂದು ತಿಳಿಸಿದೆ. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ, ಇಬ್ಬರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಕೊರಟಗೆರೆ: ಬಹುವರ್ಷದ ಪಟ್ಟಣದ ಜನರ ಕನಸಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರಕಾರದ ಕೈಸೇರಿದೆ. ಪಪಂಯ 15ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೆ 25 ಕೋಟಿ ಅನುದಾನದ ಪ್ರಸ್ತಾವನೆಯ ರೂಪುರೇಖೆ ಸಿದ್ದವಿದೆ ಎಂದು ಪಪಂ ಸದಸ್ಯರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಏರ್ಪಡಿಸಲಾಗಿದ್ದ 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ 4 ಕೋಟಿಯ ಒಳಾಂಗಣ ಕ್ರೀಡಾಂಗಣ 40 ದಿನದೊಳಗೆ ಉದ್ಘಾಟನೆ ಮಾಡ್ತಿನಿ. ಕ್ರೀಡಾಂಗಣ ಅಭಿವೃದ್ದಿಗೆ ಮತ್ತೆ 3 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೊರಟಗೆರೆ ಪಟ್ಟಣದ ಸರ್ವೆ ನಂ.181ರಲ್ಲಿ 5 ಎಕರೆ ಭೂಮಿಯಲ್ಲಿ 100 ಸೈಟ್ ವಿಂಗಡಿಸಿ ಹಂಚುವ ಕೆಲಸ ಮಾಡ್ತೀವಿ. ಪಪಂ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಬಡಜನರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು. ಕಡ್ಡಾಯ ಸಿಸಿಟಿವಿಗೆ ಸೂಚನೆ: ರಾಜ್ಯದ…

Read More

ತುಮಕೂರು: ಜಿಲ್ಲೆಯ ಹೊಸಕೋಟೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಪ್ರಕಾರ ಆಚರಿಸಲಾಯಿತು. ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ ಕುಂಭಮೇಳದ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಯುತ ಆಚರಣೆ ನಡೆಸಲಾಯಿತು. ಈ ಬಾರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ವಿಶೇಷ ಗಮನ ಹರಿಸಿ, ಡಿಜೆ ಸೇರಿದಂತೆ ಶಬ್ದ ಮಾದಕ ಸಾಧನಗಳಿಂದ ದೂರವಿದ್ದು, ಸಂಸ್ಕೃತಿಪರ ಹಾಗೂ ಶಾಂತಿಯುತ ಆಚರಣೆಗೆ ಆದ್ಯತೆ ನೀಡಿದರು. “ಅಂಬೇಡ್ಕರ್ ಜಯಂತಿ ಎಂದರೆ ಡಿಜೆ ಅಲ್ಲ, ಆದರೆ ಆಚಾರವಿಧಿ, ಸಂವಿಧಾನ, ಶ್ರದ್ಧೆ ಮತ್ತು ಸಂಸ್ಕೃತಿಯ ಪ್ರತಿ ನಿಷ್ಠೆ” ಎಂಬ ಧೋರಣೆಯನ್ನು ಮುಂದಿರಿಸಿದರು. ಗ್ರಾಮದ ಯುವಕರು ಹಾಗೂ ‘ಜೈ ಭೀಮ್ ಯುವಕರ ಸಂಘ’ದ ಸದಸ್ಯರು, ಮುಂದಿನ ತಲೆಮಾರಿಗೆ ಉತ್ತಮ ಉದಾಹರಣೆಯಾಗುವಂತಹ ಮಾದರಿಯ ಆಚರಣೆ ರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಬಲ್ಲೇನಹಳ್ಳಿ ಗ್ರಾಮ ಪಂಚಾಯತಿ, ಹೊಸಕೋಟೆ ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರಿಗೆ ‘ಜೈ ಭೀಮ್ ಯುವಕರ ಸಂಘ’ದ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು. ವರದಿ :…

Read More

ಪಹಲ್ಗಾಮ್: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಣಿವೆಗಳಿಂದ ಕೂಡಿದ ಸುಂದರ ಪ್ರವಾಸಿ ತಾಣದಲ್ಲಿ ಉಗ್ರರು, ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದಾರೆ. ಕಂಡ ಕಂಡಲ್ಲಿ ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಕರ್ನಾಟಕ, ಒಡಿಶಾ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಕ್ಕೆ ತೆರಳಿದ್ದ 26ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದ ವಿಡಿಯೋದಲ್ಲಿ ಅನೇಕರು ಪ್ರಾಣ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ತನ್ನವರನ್ನು ಕಳೆದುಕೊಂಡ ಮಹಿಳೆಯರು ನೋವು, ದು:ಖದಲ್ಲಿ ಅಳುತ್ತಿರುವುದು ಕಂಡುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆ ಹಾಗೂ ವೈದ್ಯಕೀಯ ತಂಡಗಳು ಸಂತ್ರಸ್ತರಿಗೆ ನೆರವಾಗಿದ್ದಾರೆ. ಗಾಯಾಳುಗಳನ್ನು ಕುದುರೆಗಳ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಕನ್ನಡಿಗರ ಬಲಿ: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಸಾವನ್ನಪ್ಪಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಮತ್ತೋರ್ವ ಕನ್ನಡಿಗನ ಹತ್ಯೆ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ…

Read More

ಚಿಕ್ಕಮಗಳೂರು: ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ. ಸಂಜುನಾಯ್ಕ (26) ಮೃತ ದುರ್ದೈವಿಯಾಗಿದ್ದು, ರುದ್ರೇಶ್ ನಾಯ್ಕ (26) ಕೊಲೆ ಆರೋಪಿಯಾಗಿದ್ದಾನೆ. ಕೊಲೆ ತಪ್ಪಿಸಲು ಬಂದ ಅವಿನಾಶ್ ಎಂಬವರಿಗೂ ಆರೋಪಿ ರುದ್ರೇಶ್ ಹಲ್ಲಿನಿಂದ ಗಂಭೀರ ಗಾಯವಾಗುವಂತೆ ಕಚ್ಚಿರುವ ಘಟನೆ ನಡೆದಿದೆ. ಅಮೃತಾಪುರ ಸೇವಾಲಾಲ್ ಸಂಘದಲ್ಲಿನ ಚೀಟಿ ವ್ಯವಹಾರ ನಡೆಯುತ್ತಿದ್ದು, ಚೀಟಿ ಸರಿಯಾಗಿ ಕಟ್ಟದೇ ಸಂಜು ನಾಯ್ಕ ಗಲಾಟೆ ಮಾಡುತ್ತಿದ್ದ. ಗ್ರಾಮಸ್ಥರು ನೀನು ಚೀಟಿಗೆ ಬೇಡ ಎಂದು ವಾಪಸ್ ಕಳಿಸಿದ್ದರು ಎನ್ನಲಾಗಿದೆ. ಮನೆಗೆ ಬಂದ ಮೇಲೆ ಸಂಜುನಾಯ್ಕ ಚೀಟಿ ಸದಸ್ಯರ ಜೊತೆ ಫೋನಿನಲ್ಲಿ ಜಗಳ ಮಾಡಿದ್ದಾನೆ. ಬಳಿಕ ನೇರವಾಗಿ ಹೋಗಿ ಮತ್ತೆ ಜಗಳ ಮಾಡುವಾಗ ಚೀಟಿ ಸದಸ್ಯ ರುದ್ರೇಶ್ ದೊಣ್ಣೆಯಲ್ಲಿ ಬಲವಾಗಿ ಹೊಡೆದಿದ್ದು, ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಸಂಜು ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಲೆ ಆರೋಪಿ ರುದ್ರೇಶ್ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ…

Read More

ಬೆಂಗಳೂರು:  ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದರು. ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಈ ಘಟನೆ ನಡೆದಿದ್ದು, ತನ್ನ ಮೇಲೆ  ಹಲ್ಲೆ ನಡೆಸಲಾಗಿದೆ ಎಂದು ಮುಖಕ್ಕೆ ರಕ್ತ ಬರಿಸಿಕೊಂಡು ಅವರು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋದ ಆಧಾರದಲ್ಲಿ ಪೊಲೀಸರು ಯುವಕನ ವಿರುದ್ಧ ಎಫ್ ​​ಐಆರ್ ದಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಇದೀಗ ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ಸತ್ಯಾಂಶ ಬಯಲಾಗಿದೆ. ಸಿಸಿ ಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ, ಬದಲಾಗಿ ವಿಂಗ್ ಕಮಾಂಡರ್ ಬೋಸ್ ಯುವಕನ ಮೇಲೆ ರೌದ್ರಾವತಾರ ತಾಳಿ ಭೀಕರವಾಗಿ ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಎಷ್ಟೇ ಬಿಡಿಸಲು ಮುಂದಾದರೂ ಯುವಕನ ಮೇಲೆ ಮಾರಕ ದಾಳಿ ನಡೆಸಿದ್ದ ವಿಂಗ್ ಕಮಾಂಡರ್ ಬೋಸ್, ಯುವಕ ನೆಲಕ್ಕೆ ಬಿದ್ದರೂ ಆತನನ್ನು ಬಿಡದೇ ಕ್ರೂರವಾಗಿ ಆತನ ಮೇಲೆ ಎರಗಿರುವುದು ಕಂಡು ಬಂದಿದೆ. ಯುವಕನ ಮೇಲೆ…

Read More

ಬೀದರ್: ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ಆರೋಪದ ಮೇಲೆ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿ ಪಿಡಿಒ ಸುಗಂಧ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಸೋಮವಾರ ಆದೇಶ ಹೊರಡಿಸಿದ್ದಾರೆ. ಸಿಂಧನಕೇರಾ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಸುಭಾಷ ಅವರ ಮೇಲೆ ಪಿಡಿಒ ಸುಗಂಧ ಅವರು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹೆಚ್ಚಿನ ಒತ್ತಡ ಹಾಕಿದ್ದರಿಂದಾಗಿ ಅವರು ಸುಭಾಷ್ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಪಿಡಿಒ ಸುಗಂಧ ಅವರ ವಿರುದ್ಧ ಚಿಟಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದ ಪಿಡಿಒ ಅವರು ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡು ಬಂದಿದೆ. ಈ ಕುರಿತು ಹುಮನಾಬಾದ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸತ್ಯಾಸತ್ಯತೆಯ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತನ ಹಾಗೂ ನಿಷ್ಕಾಳಜಿತನ ತೋರುತ್ತಿರುವುದರಿಂದ ಹಾಗೂ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕಚೇರಿ ಕೆಲಸಗಳಿಗೆ ಅನಧಿಕೃತವಾಗಿ…

Read More

ಬೀದರ್ : ಬಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮುಚಳಂಬ್ ಗ್ರಾಮದ ನಿವಾಸಿ ಅವಿನಾಶ್ ಮಚಕುರೆ (16),ಕೋಟಗೆರಾ ಗ್ರಾಮದ ನಿವಾಸಿ ನಾಗೇಶ್ ಮಾನೆ (16) ಎಂದು ಗುರುತಿಸಲಾಗಿದೆ. ಮೃತ ಬಾಲಕರಿಬ್ಬರು ಸಂಬಂಧಿಕರಾಗಿದ್ದು, ಇತ್ತೀಚಿಗೆ ನಡೆದ ಹತ್ತನೇ ಪರೀಕ್ಷೆ ಬರೆದಿದ್ದರು. ಶಾಲೆ ರಜೆ ಇರುವ ಕಾರಣದಿಂದ ಭಾಗೇಶ್ ಎಂಬಾತ ಅವಿನಾಶ್ ಎಂಬುವವನ ಊರಾದ ಮುಚಳಂಬಕ್ಕೆ ಹೋಗಿದ್ದನು. ಇಂದು ಮದ್ಯಾಹ್ನ ಗೆಳೆಯರ ಜೊತೆಗೂಡಿ ಈಜಲು ಬಾವಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು, ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ ವರದಿ: ಅರವಿಂದ ಮಲ್ಲೀಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ದಾವಣಗೆರೆ: ನಾಪತ್ತೆಯಾಗಿದ್ದ ಜೋಡಿ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಜಿಟ್ಟಿನಕಟ್ಟೆ ಗ್ರಾಮದ ಮದ್ದನಸ್ವಾಮಿ(18), ಬಂಡ್ರಿ ಗ್ರಾಮದ ದೀಪಿಕಾ(18) ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇದೀಗ ಹರಪನಹಳ್ಳಿ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ಒಂದೇ ಮರದ ಕೊಂಬೆಗೆ ನೇಣುಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಇಬ್ಬರೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಯಾಗಿದ್ದು, ದೀಪಿಕಾ 438 ಹಾಗೂ ಮದ್ದನಸ್ವಾಮಿ 373 ಅಂಕ ಪಡೆದಿದ್ದರು. ಪ್ರೇಮಿಗಳು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಬೆಂಗಳೂರು: ರಾಜ್ಯದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಯ ಹಿಂದಿನ ಉದ್ದೇಶ ಮತ್ತು ಇತರ ವಿವರಗಳನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಗೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಮತ್ತು ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದರು. ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಏಕೆಂದರೆ, ಓಂ ಪ್ರಕಾಶ್ ಹಿರಿಯ ಅಧಿಕಾರಿಯಾಗಿದ್ದರು. ಸದ್ಯ ತನಿಖೆ ನಡೆಯುತ್ತಿದೆ ಎಂದು ಪರಮೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೊಬೈಲ್ ಫೋನ್‌ನಿಂದ ಯಾವುದೇ ಮಾಹಿತಿ ಲಭ್ಯವಾಗಿದೆಯೇ ಎಂದು ಕೇಳಿದಾಗ, ‘ನನಗೆ ಗೊತ್ತಿಲ್ಲ’. ತನಿಖೆಯ ಸಮಯದಲ್ಲಿ ಆ ಎಲ್ಲ ವಿಷಯಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More