Subscribe to Updates
Get the latest creative news from FooBar about art, design and business.
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
- ಬೀದರ್ | 12 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ
- ಕುಣಿಗಲ್ | ಬೈಕ್ ಗೆ ಕಾರು ಡಿಕ್ಕಿ: ದಂಪತಿಯ ದಾರುಣ ಸಾವು
- ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
- ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
- ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
- ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
Author: admin
ಗುಬ್ಬಿ: ತಾಲ್ಲೂಕಿನಲ್ಲಿ ಮಿತಿ ಮೀರಿದ ಅಕ್ರಮ ಮಧ್ಯ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ನಮಗೆ ತಿಳಿದಿಲ್ಲವೆಂಬತೆ ವರ್ತಿಸುತ್ತಿದ್ದಾರೆ ಎಂದು ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ತಾಳೇಕೊಪ್ಪ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ನಮ್ಮ ಗ್ರಾಮದಲ್ಲಿ ಸುಮಾರು 15 ಕಡೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ .ನಾವು ಹಲವು ಬಾರಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಿಲ್ಲ. ನೆಪ ಮಾತ್ರಕ್ಕೆ ಗ್ರಾಮಕ್ಕೆ ಬೇಟಿ ನೀಡುವ ಅಬಕಾರಿ ಅಧಿಕಾರಿಗಳು ಮಧ್ಯ ಮಾರಾಟ ಮಾಡುವವರನ್ನು ಹಿಡಿಯುವಂತೆ ನಾಟಕ ವಾಡಿ ನಂತರ ಗ್ರಾಮದ ಹೊರ ಭಾಗದಲ್ಲಿ ಮಾರಾಟ ಗಾರರಿಂದ ಹಣ ಪಡೆದು ಬಿಟ್ಟು ಹೋಗುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ತಾಳೇಕೊಪ್ಪ ನಿವಾಸಿ ಮಹಿಳೆಯರು ಮಾತನಾಡಿ, ನಮ್ಮ ಗಂಡದಿರು ನಿತ್ಯ ವು ಕುಡಿದು ಬರುತ್ತಿದ್ದು ಮದ್ಯ ಕುಡಿಯುವ ಆಸೆಯಿಂದ ಮನೆಯಲ್ಲಿ ಇರುವ ದಿನಸಿ ಸಾಮಾಗ್ರಿ…
ತುಮಕೂರು: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ತೆರವುಗೊಳಿಸಿ ಅವಮಾನಿಸಿದ ನ್ಯಾಯಾಧೀಶ್ ಮಲ್ಲಿಕಾರ್ಜುನ ಗೌಡ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಧಾನ ಸೌಧ ಚಲೋ, ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ನಡೆಯಿತು. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ರಾಯಚೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪಾಟೀಲ್ ರಾಯಚೂರು ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಅವಮಾನ ಮಾಡಿದ್ದಾರೆ. ಈ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ತೀರ್ವ ಗೊಂಡಿದ್ದು ಇದನ್ನು ರಾಜ್ಯ ಸರ್ಕಾರವಾಗಲಿ ಅಥವಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಲಿ ಗಂಭೀರವಾಗಿ ಪರಿಗಣಿಸದೆ ಆರೋಪಿ ನ್ಯಾಯಾಧೀಶರ ಮೇಲೆ ದೂರು ದಾಖಲಿಸದೆ ಇರುವುದರಿಂದ ರಾಜ್ಯದ ಅಂಬೇಡ್ಕರ್ ಅನುಯಾಯಿಗಳಲ್ಲಿ ಮತ್ತಷ್ಟು ಆಕ್ರೋಶ ಭುಗಿಲೆದ್ದಿದೆ ಎಂದರು. ರಾಜ್ಯದಲ್ಲಿನ ಎಲ್ಲ ದಲಿತ ಸಂಘಟನೆಗಳು ಒಟ್ಟಿಗೆ ಸೇರಿ ಸಂವಿಧಾನ ಸಂರಕ್ಷಣೆ ಮಹಾ ಒಕ್ಕೂಟ ವೆಂಬ ಐಕ್ಯ ವೇದಿಕೆಯನ್ನು ಹುಟ್ಟಿಹಾಕಿ, ಈ…
ತಿಪಟೂರು: ಸ್ಥಗಿತಗೊಂಡಿರುವ ರಾಗಿ ಖರೀದಿಯ ಪ್ರಕ್ರಿಯೆಯನ್ನು ಪುನರಾರಂಭಿಸುವಂತೆ ಹಾಗೂ ಸಣ್ಣ ಹಿಡುವಳಿದಾರರು ಹಾಗೂ ದೊಡ್ಡ ಹಿಡುವಳಿ ರೈತರು ಬೇಳೆದಿರುವ ರಾಗಿಯನ್ನು ಕೇಂದ್ರ ಸರ್ಕಾರವು ನೋಪೆಡ್ ಮೂಲಕ ಖರೀದಿ ಮಾಡಲು ಭಾರತೀಯ ಕಿಸಾನ್ ಸಂಘದ ತುಮಕೂರು ಜಿಲ್ಲಾ ಸಹಕಾರ್ಯದರ್ಶಿ ಮನೋಹರ್ ರಂಗಾಪುರ ಅವರು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಸಂಘಟನಾ ಮಂತ್ರಿ ದಿನೇಶ್ ಕುಲಕರ್ಣಿ ಅವರಿಗೆ ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಮನವಿ ಮಾಡಿದರು. ಕರ್ನಾಟಕ ರಾಜ್ಯದ ಸುಮಾರು ಹತ್ತರಿಂದ ಹನ್ನೆರಡು ಜಿಲ್ಲೆಯಲ್ಲಿ ರಾಗಿ ಬೆಳೆಯನ್ನು ಬೆಳೆಯುತ್ತಿದ್ದು ಇತ್ತೀಚಿನ ಅತಿವೃಷ್ಟಿಯಿಂದಾಗಿ ಬೆಳೆಯು ನಾಶವಾಗಿದ್ದು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗೂ ಈಗ ಖರೀದಿ ಪ್ರಕ್ರಿಯೆ ಮತ್ತು ನೋಂದಾಣಿ ಪ್ರಕ್ರಿಯೆಯನ್ನು ಸ್ಥಗಿತಗೊಂಡಿರುವುದರಿಂದ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಂದು ತಿಳಿಸಲಾಯಿತು . ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಸಂಘಟನಾ ಮಂತ್ರಿ ದಿನೇಶ್ ಕುಲಕರ್ಣಿ ಮಾತನಾಡಿ, ಅತಿ ಶೀಘ್ರದಲ್ಲಿ ಭಾರತ ಸರ್ಕಾರದ ಕೃಷಿ ಮಂತ್ರಾಲಯಕ್ಕೆ ಮನವಿ ಸಲ್ಲಿಸಿ ನೋಂದಣಿ ಪ್ರಕ್ರಿಯೆ ಮತ್ತು ರಾಗಿ ಖರೀದಿಗೆ ಅವಕಾಶ ನೀಡುವಂತೆ ಮನವಿ…
ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನಕ್ಕೆ ಮುನ್ನ ಕೊನೆಯ ದಿನ ಪ್ರಚಾರ ನಡೆಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಮತದಾರರಿಗೆ ತಲಾಕ್, ತಲಾಖ್, ತಲಾಖ್ ಎಂದು ಹೇಳುವಂತೆ ಮನವಿ ಮಾಡಿದರು. ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅಸಾದುದ್ದೀನ್ ಓವೈಸಿ, ‘ಎಸ್ ಪಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಯೋಗಿ-ಅಖಿಲೇಶ್ ಬೇರ್ಪಟ್ಟ ಸಹೋದರರು ಎಂದು ತೋರುತ್ತದೆ. ಇಬ್ಬರ ಮನಸ್ಥಿತಿಯೂ ಒಂದೇ. ಇಬ್ಬರೂ ಕ್ರೂರ ಮತ್ತು ದುರಹಂಕಾರಿಗಳು. ಅವರು ತಮ್ಮನ್ನು ತಾವು ನಾಯಕರೆಂದು ಪರಿಗಣಿಸುವುದಿಲ್ಲ, ಚಕ್ರವರ್ತಿಗಳೆಂದು ಪರಿಗಣಿಸಿದ್ದಾರೆ” ಎಂದು ಓವೈಸಿ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ. ತಮ್ಮ ಚುನಾವಣಾ ರ್ಯಾಲಿಗಳಲ್ಲಿ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಮಾತನಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ‘ಮೋದಿ ತ್ರಿವಳಿ…
ಕನ್ನಡ ಚಿತ್ರರಂಗದ ಹಿರಿಯ ನಟ, ‘ಕಲಾ ತಪಸ್ವಿ’ ರಾಜೇಶ್(Kalatapasvi Rajesh) ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ 2.30ಕ್ಕೆ ರಾಜೇಶ್ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 89 ವರ್ಷದ ಹಿರಿಯ ನಟ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ 6 ಗಂಟೆವರೆಗೂ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ರಾಜೇಶ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟ ರಾಜೇಶ್(Kannada senior actor Rajesh) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ರಾಜ್ಯದ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಶನಿವಾರ ಏರಿಳಿತ ಕಂಡಿದೆ. ಕರ್ನಾಟಕ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 51,509 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್(Market)ಗಳಲ್ಲಿ ಇತ್ತೀಚಿನ(18-04-2022)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ತಾಲೂಕು ಅಡಿಕೆ ಗರಿಷ್ಠ ಬೆಲೆ (ಫೆಬ್ರವರಿ 18, 2022) ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) ರಾಶಿ ಅಡಿಕೆ 45,899 ರೂ. ಚನ್ನಗಿರಿ (ದಾವಣಗೆರೆ ಜಿಲ್ಲೆ) ರಾಶಿ ಅಡಿಕೆ 46,500 ರೂ. ದಾವಣಗೆರೆ (ದಾವಣಗೆರೆ ಜಿಲ್ಲೆ) ರಾಶಿ ಅಡಿಕೆ 46,329…
ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿಸಿದೆ. ಪಾಕಿಸ್ತಾನ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ, ಭಾರತದಲ್ಲಿ ವಾಹನ ಇಂಧನ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 93 ಡಾಲರ್ ದಾಟಿದೆ. ಆದರೆ ಮೂರು ತಿಂಗಳಿನಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತಜ್ಞರ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಹೆಚ್ಚು ಕಾಲ ಉಳಿಯುವುದಿಲ್ಲ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬರುವ ಸಾಧ್ಯತೆಯಿದೆ. ಮಾರ್ಚ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ.ಭಾರತೀಯ ಪೆಟ್ರೋಲಿಯಂ…
ಪಾವಗಡ: ತಾಲ್ಲೂಕಿನ ಚೆನ್ನಕೇಶವಪುರದ ಚೆನ್ನಕೇಶವ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಹಾಗೂ ಕುಕ್ಕೆ ಸುಬ್ರಮಣ್ಯ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚೆನ್ನಕೇಶವ ಸ್ವಾಮಿಯ ಹಾಗೂ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದಂತಹ ವ್ಯಾಸರಾಜ ಗುರುಗಳ ಬಗ್ಗೆ ಸ್ವಾಮೀಜಿಗಳು ಮಾತನಾಡಿದರು. ಇದೇ ವೇಳೆ ಶ್ರೀಪ್ರಾಣ ದೇವರಾದ ಆಂಜನೇಯ ಸ್ವಾಮಿಯ ದರ್ಶನ ಪಡೆದು, ದೇವರ ಪವಾಡಗಳನ್ನು ಹಾಗೂ ಮಹಿಮೆಗಳನ್ನು ತಿಳಿದುಕೊಂಡು ಸಂತೋಷ ಪಟರು. ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಸ್ತರಾದ ಗೋಪಾಲ್ ರಾವ್ ಹಾಗೂ ಸಿ.ಎನ್ ಆನಂದ್ ರಾವ್, ನಾಗರಾಜು ಸ್ವಾಮಿ, ಅಜಯ್ ನಾಗೇಶ್, ಬಿಂದು ಮಾಧವ್ ರಾವ್, ಉಭಯ ಶ್ರೀ ಗಳನ್ನು ಭಕ್ತಿಯಿಂದ ದೇವಸ್ಥಾನದ ಸಂಪ್ರದಾಯದಂತೆ ಸ್ವಾಗತಿಸಿ ದೇವರ ದರುಶನವನ್ನು ಮಾಡಿಸಿ ಗೌರವಿಸಿದರು. ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ, ದಬ್ಬೆಘಟ್ಟ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾoಕ್ಷೆಯ ” ಗ್ರಾಮ್ ಒನ್” ಕೇಂದ್ರವನ್ನು ಉದ್ಘಾಟಿಸಲಾಯಿತು. ನಾಡಕಚೇರಿಯಲ್ಲಿ ಸಿಗಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳ ಅರ್ಜಿಯನ್ನು ಇಲ್ಲಿ ಸಲ್ಲಿಸ ಬಹುದಾಗಿದೆ. ಜನರು ನಾಡಕಚೇರಿಯಲ್ಲಿ, ಅಥವಾ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸರತಿಯ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ. ಈ ಸೇವೆಯನ್ನು ಉದ್ಘಾಟಿಸಿದ ಮಾತನಾಡಿದ ಪ್ರಕಾಶ್, ಸರ್ಕಾರಿ ಕೆಲಸದ ದಿನಗಳಲ್ಲಿ ನಿರಂತರವಾಗಿ ನಾವು ಸೇವೆಯನ್ನು ಒದಗಿಸಲು ಬದ್ಧರಾಗಿದ್ದು, ಸರ್ಕಾರದ ಮಹತ್ವಾಕಾoಕ್ಷೆಯ ಸೇವೆಯನ್ನು ಸರ್ಕಾರದ ನಿಯಮಮಾವಳಿಗಳ ಮೂಲಕ ಸರ್ಕಾರಿ ನಿಗದಿತ ಶುಲ್ಕವನ್ನು ಪಡೆದು ಸೇವೆಯನ್ನು ಒದಗಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಅವರ ತಂದೆ ನಂಜಪ್ಪ,ತಾಯಿ ರoಗಮ್ಮ ಪಟೇಲ್ ನಾಗರಾಜ್ , ದಲಿತ ಸಂಚಾಲಕರಾದ ಬಿ.ಪುರ ತಮ್ಮಯ್ಯ , ಶಿವರಾಂ ಎಲೆಕೊಪ್ಪಇತರರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆಯಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಿ.ಸುಧಾಕರ್ ರವರ ನೇತೃತ್ವದಲ್ಲಿ ಜೆ.ಆರ್. ಅಜಯ್ ಕುಮಾರ್ ರವರು ಅವಿರೋಧವಾಗಿ ಆಯ್ಕೆಯಾದರು . ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ನೂತನವಾಗಿ ಆಯ್ಕೆಯಾಗಿರುವ ಅಜಯ್ ಕುಮಾರ್ ರವರಿಗೆ ಶುಭಾಶಯ ತಿಳಿಸಿದರು . ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಎಲ್ಲಾರಿಗೂ ಸಿಹಿ ಹಂಚಿ ನಗರಸಭೆ ಮುಂದೆ ಪಟಾಕಿ ಸಿಡಿಸಿ, ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಗೆ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯೂರು ತಾಲ್ಲೂಕಿನ ನಗರಸಭೆ ಪೌರಯುಕ್ತ ಡಿ. ಉಮೇಶ್, ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ಗೊಂಡು, ಈ ಚುನಾವಣೆ ಪ್ರಕ್ರಿಯೆ ಯಲ್ಲಿ ಹಿರಿಯೂರು ನಗರಸಭೆ ಯಲ್ಲಿ ಒಟ್ಟು 33 ಜನ ಸದಸ್ಯರುಗಳಲ್ಲಿ 30 ಜನ ಭಾಗವಹಿಸಿದರು. ಇದರಲ್ಲಿ ಒಬ್ಬರು ಸೂಚಕರು ,…