Author: admin

ಬೆಂಗಳೂರು: ಗ್ರಾಮವೊಂದರಲ್ಲಿ ಯೇಸುವಿನ ಪ್ರತಿಮೆಯನ್ನು ಕೆಡವಿರುವುದು ದಕ್ಷಿಣ ಭಾರತದ ರಾಜ್ಯದಲ್ಲಿ ಕ್ರಿಶ್ಚಿಯನ್ನರ ಮೇಲೆ ಹೆಚ್ಚುತ್ತಿರುವ ದಾಳಿಗೆ ಇತ್ತೀಚಿನ ಉದಾಹರಣೆ ಎಂದು ಕರ್ನಾಟಕದ ಕ್ಯಾಥೋಲಿಕ್ ಬಿಷಪ್‌ ಗಳು ಹೇಳಿದ್ದಾರೆ. ಕೋಲಾರದಲ್ಲಿನ ಪ್ರತಿಮೆಯನ್ನು “ಅತ್ಯಂತ ಅಸಭ್ಯ ಮತ್ತು ನೋವಿನ ರೀತಿಯಲ್ಲಿ” ಮತ್ತು ಸರಿಯಾದ ನ್ಯಾಯಾಲಯದ ಆದೇಶವಿಲ್ಲದೆ ಕೆಡವಲಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಆರ್‌ಸಿಬಿಸಿ) ವಕ್ತಾರ ಫಾದರ್ ಫೌಸ್ಟಿನ್ ಲೋಬೋ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಆರ್ಚ್‌ಡಯಾಸಿಸ್ ಅಡಿಯಲ್ಲಿ ಬರುವ ಕೋಲಾರವು ರಾಜ್ಯದ ರಾಜಧಾನಿ ಬೆಂಗಳೂರಿನ ಈಶಾನ್ಯಕ್ಕೆ ಸುಮಾರು 65 ಕಿಮೀ ದೂರದಲ್ಲಿದೆ. ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ಆಡಳಿತವು ಸ್ಥಳೀಯ ಕ್ರೈಸ್ತರ ವಿರೋಧದ ನಡುವೆ ಫೆಬ್ರವರಿ 15 ರಂದು ಗೋಕುಂಟೆ ಗ್ರಾಮದಲ್ಲಿ 20 ಅಡಿ ಎತ್ತರದ ಯೇಸುವಿನ ಪ್ರತಿಮೆಯನ್ನು ಕೆಡವಿತು. “ಧ್ವಂಸಗೊಳಿಸುವಿಕೆಯ ವೀಡಿಯೊವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಯಿತು ಮತ್ತು ಹಿಂದೂ ಪರವಾದ ಸರ್ಕಾರಿ ಯಂತ್ರಗಳ ಪುನರಾವರ್ತಿತ ಕೃತ್ಯಗಳಿಂದ ಕ್ರಿಶ್ಚಿಯನ್ನರು ನಿಜವಾಗಿಯೂ ಗಾಬರಿಗೊಂಡಿದ್ದಾರೆ ಮತ್ತು ನೋವಿನಿಂದ ಕೂಡಿದ್ದಾರೆ” ಎಂದು ಫಾದರ್ ಲೋಬೋ…

Read More

ಹೆಚ್.ಡಿ.ಕೋಟೆ: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯಿಂದ  ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಹಾಡಿ ಎ. ಕಾಲೋನಿಯಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಿಬ್ಬಂದಿಗಳ ಜೊತೆ ಹಿರೇಹಳ್ಳಿ ಹಾಡಿಯ ಮುಖಂಡರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಹಿರೇಹಳ್ಳಿ ಹಾಡಿಯ ಚಿಕ್ಕ ಮಕ್ಕಳು ಕೂಡ ಶ್ರಮದಾನದಲ್ಲಿ ಪಾಲ್ಗೊಂಡರು. ಹಿರೇಹಳ್ಳಿ ಹಾಡಿಯ ಮನೆಯ ಮುಂಭಾಗ ಬೆಳೆದಿರುವಂತಹ ಗಿಡಗಂಟಿಗಳನ್ನು ಕಡಿದು. ಒಂದು ಕಡೆ ಶೇಖರಣೆ ಮಾಡಿ ಬೆಂಕಿ ಹಚ್ಚಲಾಯಿತು. ಹಿರೇಹಳ್ಳಿ ಹಾಡಿಯ ಪ್ರಮುಖ ಎರಡು ಬೀದಿಗಳಲ್ಲಿರುವ ಕಳೆಗಳನ್ನು ಸ್ವಚ್ಛಗೊಳಿಸಲಾಯಿತು. ಚರಂಡಿಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ, ಕಸಗಳನ್ನು ಹೊರೆತೆಗೆದು ಚರಂಡಿ ನೀರನ್ನು ಹಾಡಿಯಿಂದ ಹೊರಗಡೆ ಹೋಗುವಂತೆ ಸ್ವಚ್ಛತೆ ಮಾಡಿದರು.  ಇದೇ ವೇಳೆ ಚರಂಡಿ ನೀರಿನ ಬಗ್ಗೆ ಹಾಗೂ ಮನೆಯ ಮುಂಭಾಗ ಬೆಳೆದಿರುವಂತಹ ಗಿಡಗಂಟಿಗಳಿಂದ ಬರುವಂತಹ ರೋಗಗಳ ಬಗ್ಗೆ ಹಾಡಿ ಜನತೆಗೆ ಅರಿವು ಮೂಡಿಸಿದರು. ಬಳಿಕ ಹಿರೇಹಳ್ಳಿ ಹಾಡಿಯ ಮುಖಂಡ ಬಸವರಾಜ ಅವರು ಮಾತನಾಡಿ,  ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯು…

Read More

ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಮತ್ತು ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ , ಎಜುಕೇಶನ್, ಅಂಡ್ ರಿಸರ್ಚ್ ಫೌಂಡೇಸ್ಷನ್ ಸಹಹೋಗದೊಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ತರಬೇತಿ ಹಾಗೂ ಪರವಾನಗಿ ಆಂದೋಲನ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.ಪ್ರಭಾವತಿ, ಬದಲಾಗುತ್ತಿರುವ  ಆಧುನಿಕ ಜಗತ್ತಿನಲ್ಲಿ, ಅಸುರಕ್ಷಿತ ಆಹಾರ ಪದ್ಧತಿ, ಸ್ವಚ್ಚತೆ ಇಲ್ಲದೆ ಇರುವ ಪರಿಸರದಲ್ಲಿ ಆಹಾರ ಉತ್ಪಾದನೆ, ಕಲಬೆರಕೆ, ಅಸುರಕ್ಷಿತ ಪ್ಯಾಕಿಂಗ್ ಮತ್ತು ಸಾಗಾಣಿಕೆ , ಆತಾಂತ್ರಿತವಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ  ಇತ್ಯಾದಿ ಕಾರಣಗಳಿಂದ ನಾವು ತೆಗೆದುಕೊಳ್ಳುವ ಆಹಾರ  ಗುಣಮಟ್ಟವಿಲ್ಲದೇ ಹಲವಾರು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲ ವಿಧದ ವ್ಯಾಪಾರಿಗಳು ಖಡ್ಡಾಯವಾಗಿ ನೋಂದಣಿ ಹಾಗೂ ಪರವಾನಗಿ ಮಾಡಿಸಲೇ ಬೇಕು ಎಂದರು. ಈ ಸಂದರ್ಭದಲ್ಲಿ, ಸೀನಿಯರ್ ಫುಡ್ ಸೆಫ್ಟಿ ಆಫಿಸರ್ , ನಾರಾಯಣಪ್ಪ, ತುರುವೇಕೆರೆ ತಾಲ್ಲೂಕು ವರ್ತಕರ ಸಂಘದ ಮಲ್ಲಿಕಾರ್ಜುನ್ ಹಾಗೂ ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್  ಎಜುಕೇಶನ್  ರಿಸರ್ಚ್…

Read More

ಕೊರಟಗೆರೆ : ಅಣ್ಣ-ತಂಗಿಯ ಅನೈತಿಕ ಸಂಬಂಧಕ್ಕೆ ತಾಯಿ ಅಡ್ಡ ಬರುತ್ತಾರೆ ಎಂಬ ಕಾರಣಕ್ಕೆ  ಮಲಗಿದ್ದ ತಾಯಿಯನ್ನು ಮಧ್ಯರಾತ್ರಿ ಉಸಿರುಕಟ್ಟಿಸಿ ಕೊಲೆ ಮಾಡಿದ ವಿಲಕ್ಷಣ ಘಟನೆಯನ್ನು ಕೊರಟಗೆರೆ ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊರಟಗೆರೆ ಪಟ್ಟಣದ ಸಜ್ಜನರ ಬೀದಿ ಕೃಷ್ಣಾಚಾರ್ ಎಂಬವರ ಪತ್ನಿ 45 ವರ್ಷ ವಯಸ್ಸಿನ ಸಾವಿತ್ರಮ್ಮ ಹತ್ಯೆಗೀಡಾದವರಾಗಿದ್ದಾರೆ.  ಸಾವಿತ್ರಮ್ಮನ ಮಗಳು ಶೈಲಜಾ ಹಾಗೂ ಸಾವಿತ್ರಮ್ಮನ ತಂಗಿಯ ಮಗ ಪುನೀತ್ ಹತ್ಯೆ ಆರೋಪಿಗಳಾಗಿದ್ದಾರೆ. ಸಂಬಂಧದಲ್ಲಿ ಅಣ್ಣ ತಂಗಿಯಾಗಿದ್ದ ಪುನೀತ್ ಮತ್ತು ಶೈಲಜಾ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ಸಂಬಂಧಕ್ಕೆ ಸಾವಿತ್ರಮ್ಮ ಅಡ್ಡವಾಗುತ್ತಿದ್ದಾರೆ ಎಂಬ ಕಾರಣಕ್ಕೆ ಮಲಗಿದ್ದ ವೇಳೆ ಇಬ್ಬರೂ ಸೇರಿ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ನೀರಿನ ಸಂಪಿನೊಳಗೆ ಮೃತದೇಹವನ್ನು ಹಾಕಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಸಂಬಂಧಿಕರು ಕೂಡ  ಸಾವಿತ್ರಮ್ಮ ನೀರಿನ ಸಂಪಿಗೆ ಬಿದ್ದ ಮೃತಪಟ್ಟಿರಬಹುದು ಎಂದು ನಂಬಿದ್ದರು. ಹಾಗಾಗಿ ಮರಣೋತ್ತರ ಪರೀಕ್ಷೆ ನಡೆಸದೆಯೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಮೇಲೆ ಅನುಮಾನಗೊಂಡು…

Read More

ಹಿರಿಯೂರು: ಕಾರು ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿ, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು –ಹಿರಿಯೂರಿನ   ರಾಷ್ಟ್ರೀಯ ಹೆದ್ದಾರಿ 4ರ ಕೆ ಆರ್ ಹಳ್ಳಿ ಗೇಟ್ ಬಳಿಯಲ್ಲಿ ನಡೆದಿದೆ. ಬೆಂಗಳೂರಿನ ನಂಜುಡೇಶ್ವರ ನಗರದ ನಂದಿನಿ ಬಡಾವಣೆ ನಿವಾಸಿಗಳು ಅಪಘಾತಕ್ಕೀಡಾದವರಾಗಿದ್ದು, ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಆದಿವಾಲ ಗ್ರಾಮದ ಸಮೀಪ ರವಿಡಾಬಾ ಹೋಟೆಲ್ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇಬ್ಬರು  ಮೃತಪಟ್ಟು, ಮೂವರಿಗೆ ಗಂಭೀರ ಗಾಯವಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆ ಯ ಪಿ ಎಸ್ ಐ ಶಶಿಕಲಾ ಡಬ್ಲೂ,  ಪರಿಶೀಲನೆ ನಡೆಸಿದ್ದು, ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ:  ಮುರುಳಿಧರನ್  ಆರ್. ಹಿರಿಯೂರು ( ಚಿತ್ರದುರ್ಗ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಿಬೇಕಾಗುತ್ತದೆ ಎಂದು ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಬಿ ಬಿ ಎಂ ಪಿ ರಾಜಣ್ಣ ಎಚ್ಚರಿಸಿದರು . ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಸಮೀಪ ನಡೆದ ಕಾಡುಗೊಲ್ಲ ಸಭೆಯಲ್ಲಿ ಬಿ ಜೆ ಪಿ ಮುಖಂಡರಾದ ಸಿದ್ದೇಶ್ ಯಾದವ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷಾತೀತ ಕಾಡುಗೊಲ್ಲ ಮುಖಂಡರ ಸಭೆಯಲ್ಲಿ ಮಾತನಾಡಿದ ರಾಜಣ್ಣ, ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ . ಆದರೂ ಆಡಳಿತ ನಡೆಸಿದವರು ನಮ್ಮನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡವರೇ ಹೊರತು, ಕಾಡುಗೊಲ್ಲ ಸಮುದಾಯದ ಬೇಡಿಕೆಯನ್ನು ಈಡೇರಿಸಲಿಲ್ಲ. ಹೀಗಾಗಿ ಚುನಾವಣೆ ಬಹಿಷ್ಕಾರದಂತಹ ದಿಟ್ಟ ತೀರ್ಮಾನ ಕೈಗೊಳ್ಳಲು ಚಿಂತನೆನಡೆಸಿದ್ದೇವೆ ಎಂದರು. ಎಸ್ಟಿ ಮೀಸಲಾತಿಗಾಗಿ ರಾಜಕೀಯ ವ್ಯತ್ಯಾಸಗಳನ್ನು ಬದಿಗಿಟ್ಟು ಹೋರಾಟ ನಡೆಸೋಣ. ರಾಜಕೀಯ ಕಾರಣಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ನಮ್ಮ ಹಕ್ಕನ್ನು ಪಡೆಯಲು ಅನಿವಾರ್ಯವಾಗಿ ಬೀದಿಗೆ ಇಳಿಯಬೇಕಾಗಿದೆ ಎಂದು ಅವರು ಕರೆ ನೀಡಿದರು. ಬಿಜೆಪಿ ಸರ್ಕಾರದಲ್ಲಿ ಕಾಡುಗೊಲ್ಲರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ…

Read More

ಕರ್ನಾಟಕ ಬಂಜಾರ ಜಾಗೃತಿ ದಳ ವತಿಯಿಂದ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯ್ಕ್  ಅಧ್ಯಕ್ಷತೆಯಲ್ಲಿ  283ನೇ ಶ್ರೀ ಸಂತ ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮ  ಬೆಳಗುಂಬ ತಾಂಡದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭೋಗ್ ಪೂಜಾ ಕಾರ್ಯಕ್ರಮ, ಧಾರ್ಮಿಕ ಜಾಗೃತಿ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ  ನಡೆಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಯರಾಂ ನಾಯ್ಕ, ಮಹಿಳಾ ಘಟಕ ಅಧ್ಯಕ್ಷೆ ಶಾಂತಾ ಜಯರಾಂ, ಯುವ ಘಟಕ ಅಧ್ಯಕ್ಷ ಮಂಜಾನಾಯ್ಕ್, ಸಂಘಟನೆ ಕಾರ್ಯದರ್ಶಿ ಉಮೇಶ್ ನಾಯ್ಕ್ ಹಾಗೂ ದೇವಸ್ಥಾನ ಮಂಡಳಿ ಕಾರ್ಯಧ್ಯಕ್ಷ  ದೇವರಾಜ್ ನಾಯ್ಕ್ ಹಾಗೂ ಊರಿನ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಯಾವ ಕಾಲೇಜಿನಲ್ಲಿ ಮೊದಲಿನಿಂದಲೂ ಸಿಡಿಸಿ ಕಮಿಟಿಗಳು ಹಿಜಾಬ್ ಹಾಕಬೇಕು ಬೇಡ ಅಂತ ತೀರ್ಮಾನ ತೆಗೆದುಕೊಂಡಿದ್ದಾರೆ ಆ ಕಾಲೇಜುಗಳಿಗೆ  ಕೋರ್ಟ್ ಆದೇಶ ಅನ್ವಯವಾಗುತ್ತದೆ ಎಂದು ತುಮಕೂರು ವೆಲ್ಫೇರ್ ಪಾರ್ಟಿ  ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ತಿಳಿಸಿದರು. ತುಮಕೂರು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿಗಳಿಗೆ ಹೈಕೋರ್ಟ್ ಮಧ್ಯಾಂತರ ಆದೇಶದ ಬಗ್ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು,  ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ಸ್ಕೂಲಿಗೆ ಬರುವ ಮಕ್ಕಳಿಗೆ ಹಿಜಾಬ್ ಇಲ್ಲದೆ  ಬರಬೇಕು ಅಂತ ಹೇಳಿದ್ದಾರೆ.  ಅದಕ್ಕಾಗಿ ಹೈಕೋರ್ಟಿನ ಮಧ್ಯಂತರ ಆದೇಶ ಏನಿದೆ ಅದನ್ನು ವಿವರವಾಗಿ ತಿಳಿಸಿದ್ದೇವೆ  ಎಂದರು. ಮೊದಲಿನಿಂದಲೂ ಯಾವ ಕಾಲೇಜಿನಲ್ಲಿ ಹಿಜಾಬ್ ಮತ್ತು ದುಪಟ್ಟ ಹಾಕಿ ಬರಲಾಗುತ್ತಿತ್ತು ಅಲ್ಲಿ ಅವಕಾಶ ನೀಡಬೇಕು ಎಂದು  ನ್ಯಾಯಮೂರ್ತಿಗಳ ಮಧ್ಯಂತರ ತೀರ್ಪಿನಲ್ಲಿ ಇದೆ ಎಂದು ಹೇಳಿದ ಅವರು, ಈ ವಿಚಾರವಾಗಿ ನಾವು ಉಪವಿಭಾಗಾಧಿಕಾರಿಗಳಿಗೆ ವಿವರವಾಗಿ ತಿಳಿಸಿ, ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿದ್ದೇವೆ ಎಂದರು. ತುಮಕೂರು ನಗರದಲ್ಲಿ ಒಂದು ಎಜುಕೇಶನ್ ನಲ್ಲಿ ಹಿಂದುಳಿದ ಹೆಣ್ಣು…

Read More

ತುಮಕೂರು ಗ್ರಾಮಾಂತರ: ಗೂಳೂರು ಹೋಬಳಿ ನೇರಳಾಪುರ ಕೆರೆಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 3-4 ವರ್ಷದ ಹೆಣ್ಣು ಚಿರತೆ ಬಿದ್ದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಟರಾಜು, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮೊಹಮದ್ ಉಮರ್ ರಬ್ಬಾನಿ ಸಿಬ್ಬಂದಿಗಳಾದ ಬಾಲಕೃಷ್ಣೇಗೌಡ ಹೊಳಕಲ್ ಗಂಗಪ್ಪ ಮುಂತಾದವರು ಈ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಜಿಲ್ಲಾ ಪಂಚಾಯತ್ ತುಮಕೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ನೇಹ ಜೀವನ ಫೌಂಡೇಶನ್ ಸಹಯೋಗದಲ್ಲಿಂದು ಗುಬ್ಬಿ ತಾಲೂಕಿನ  ಇಡಗೂರು ಗ್ರಾಮ‌ ಪಂಚಾಯಿತಿಯಲ್ಲಿ  ಜಲ ಜೀವನ್ ಮಿಷನ್ ಯೋಜನೆ ಕುರಿತು   ವಿಶೇಷ ಗ್ರಾಮಸಭೆ  ಸ್ವ ಸಹಾಯ‌ ಸಂಘದ ಮಹಿಳೆಯರಿಂದ ಜಾಥಾ ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಕಿರುಚಿತ್ರ  ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮಸಭೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಗೋವರ್ಧನ್ ಅವರು, ಜಲ ಜೀವನ್‌ ಮಿಷನ್ ಯೋಜನೆಯ ಗುರಿ ಉದ್ದೇಶಗಳು, ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಮತ್ತು ಸುರಕ್ಷಿತ ನೀರಿನ ಅವಶ್ಯಕತೆ, ಮೀಟರ್ ಅಳವಡಿಕೆ ಮಹತ್ವ, ಸಮುದಾಯವಂತಿಕೆ, ಗ್ರಾಮ‌ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರ ಜವಾಬ್ದಾರಿಗಳು, FTK ಅನುಕೂಲಗಳು, ನೀರಿನ ಪರೀಕ್ಷಾ ವಿಧಾನ, ಶೌಚಾಲಯ ಬಳಕೆ, ಬಚ್ಚಲುಗುಂಡಿ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಮೊದಲಾದ ವಿಷಯಗಳನ್ನು ಚರ್ಚೆ ಮಾಡಲಾಯಿತು. ಮಾಹಿತಿ‌ ಶಿಕ್ಷಣ ತಜ್ಞರಾದ ಸುಜಾತ ಅವರು ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಕಿರುಚಿತ್ರ ಪ್ರದರ್ಶಿಸಿ ಗ್ರಾಮಗಳ ಶುಚಿತ್ವದ…

Read More