Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ತುರುವೇಕೆರೆ: ತಾಲೂಕಿನ ಮಾಯಸಂದ್ರ , ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದಿನ ಅಧ್ಯಕ್ಷ ನಂದೀಶ್ ಮತ್ತು ಉಪಾಧ್ಯಕ್ಷರಾಗಿದ್ದ ಗಿರೀಶ್ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಟೇಲ್ ನಟರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಲ್.ಲೋಕೇಶ್ ಅವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಾದ ಪಟೇಲ್ ನಟರಾಜ್ ಮತ್ತು ಉಪಾಧ್ಯಕ್ಷರಾದ ಎಂ.ಎಲ್.ಲೋಕೇಶ್ ರವರನ್ನು ಶ್ರೀಧರ್ ಗೌಡ, ಎನ್.ಸಿ. ನಂಜುಂಡಸ್ವಾಮಿ, ರಾಘವೇಂದ್ರ ರವರು, ಪುಷ್ಪ ಮಾಲೆ ಹಾಕಿ ಅಭಿನಂದಿಸಿದರು. ಇದೇ ವೇಳೆ ಮಾತನಾಡಿದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ತಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪಂಚಾಕ್ಷರಿ, ಪುಟ್ಟೇಗೌಡ, ಗಂಗಾಧರ್ ಮುಂತಾದವರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ಸರಗೂರು: ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ನಡೆದ ಪ್ರತಿಭಟನೆಯು ಬಹಳ ಯಶಸ್ವಿಯಾಗಿದ್ದು, ಸರಗೂರು ತಾಲೂಕಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಇದುವರೆಗೂ ಸರಗೂರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆದ ಉದಾಹರಣೆ ಇಲ್ಲ. ಈ ಪ್ರತಿಭಟನೆಗೆ ಆರು ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಿದ್ದರು ಎಂದು ಗ್ರಾಮೀಣ ಮಹೇಶ್ ಹೇಳಿದರು. ಸರಗೂರಿನಲ್ಲಿ ಇರುವ ಅತಿಥಿಗೃಹದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ, ಸರಗೂರು ಘಟಕ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಮಾಜಿ ಪ.ಪಂ.ಅಧ್ಯಕ್ಷ ಶಿವಣ್ಣ ಸರಗೂರು ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ನಾನು ಬರುತ್ತಿನಿ ಎಂದಿದಕ್ಕೆ ಅವನ ವಿರುದ್ಧ ಸರಗೂರು ನಲ್ಲಿ ಪ್ರತಿಭಟನೆ ಮಾಡಿದ್ದೇವೆ. ಮಲ್ಲಿಕಾರ್ಜುನ ಗೌಡನನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಗ್ರಾ.ಪಂ. ಸದಸ್ಯ ಬೆಟ್ಟಸ್ವಾಮಿ ಮಾತನಾಡಿ, ಸಂವಿಧಾನ ಸಂರಕ್ಷಣಾ ಸಮಿತಿಯ ಎಲ್ಲಾ ಸದಸ್ಯರು ಗ್ರಾಮಗಳಿಗೆ ಭೇಟಿಕೊಟ್ಟಾಗ ಜನರು ಬೆಂಬಲಿಸಿ ಸಹಕಾರ ನೀಡಿದರು. ಪರಿಣಾಮವಾಗಿ ಬೃಹತ್ ಪ್ರತಿಭಟನೆ ಯಶಸ್ಸಿ ನಡೆದಿದೆ. ಇದೆ ಸಂದರ್ಭದಲ್ಲಿ ಪೋಲಿಸ್ ಇಲಾಖೆಯವರು…
ಕೊರಟಗೆರೆ: ತಾಲ್ಲೂಕಿನಲ್ಲಿ ಚನ್ನರಾಯನದುರ್ಗ ಗ್ರಾಮವು ಒಂದು ದೊಡ್ಡ ಹೋಬಳಿ ಕೇಂದ್ರ ಈ ಚನ್ನರಾಯನದುರ್ಗಕ್ಕೆ ಏಳು ಸುತ್ತಿನ ಕೋಟೆ ಎಂದು ಕರೆಯಲಾಗುತ್ತದೆ. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ಮಧುಗಿರಿಯ ಪಾಳೆಗಾರನಾದ ಚಿಕ್ಕಪ್ಪ ಗೌಡ ಎಂಬ ಅರಸ ತನ್ನ ಆಳ್ವಿಕೆಯನ್ನು ನಡೆಸಿದ್ದ ನಂತರ, ಮೈಸೂರು ಸಂಸ್ಥಾನದ ಚಿಕ್ಕದೇವರಾಯ ಅರಸನ ಆಳ್ವಿಕೆಯಲ್ಲಿ ಈ ಚೆನ್ನರಾಯನದುರ್ಗ ಗ್ರಾಮವು ಒಂದು ಬಹುಮುಖ್ಯ ಭಾಗವಾಗಿತ್ತು. ಆದರೆ ಇಂತಹ ಇತಿಹಾಸವುಳ್ಳ ಈ ಚೆನ್ನರಾಯನದುರ್ಗ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಶುದ್ಧಕುಡಿಯುವ ನೀರಿನ ಕೊರತೆಯು ಸಹ ಹೆಚ್ಚಾಗಿ ಕಂಡು ಬರುತ್ತಿದೆ. ಇದರ ವಿರುದ್ಧ ಸ್ಥಳೀಯ ಜನನಾಯಕರ ಹಾಗೂ ಅಧಿಕಾರಿಗಳ ವಿರುದ್ಧ ಚೆನ್ನರಾಯನದುರ್ಗ ಗ್ರಾಮದ ಗ್ರಾಮಸ್ಥರು ಹಿಡಿಶಾಪ ವನ್ನು ಹಾಕುತ್ತಿದ್ದಾರೆ.. ಸುಮಾರು 4 ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಅಂದಾಜು 10 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿತ್ತು ಅದರಂತೆ ಶಾಸಕರ ಮಾರ್ಗದರ್ಶನದಲ್ಲಿ ಶುದ್ದ ಕುಡಿಯುವ ನೀರಿನ…
ಮಧುಗಿರಿ: 2023ರ ವಿಧಾನ ಸಭಾ ಚುನಾವಣೆಗೆ ಮಧುಗಿರಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಮಾಜ ಸೇವಕ ಮಧು ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು. ಯಾವ ಪಕ್ಷ ತನ್ನನ್ನು ಗುರುತಿಸುತ್ತದೋ ಆ ಪಕ್ಷದಿಂದ ತಾನು ಸ್ಪರ್ಧಿಸುವುದಾಗಿ ತಿಳಿಸಿದ ಅವರು, ಯಾವುದೇ ಪಕ್ಷಗಳು ತನ್ನನ್ನು ಗುರುತಿಸದಿದ್ದರೆ, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಮಧು ತಿಳಿಸಿದರು. ವರದಿ: ಅಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಹಾಸನ: ಸಚಿವ ಸಂಪುಟ ವಿಸ್ತರಣೆ ಸದ್ದು ಕೇಳಿಸುತ್ತಿದ್ದಂತೆಯೇ, ಶಾಸಕ ಪ್ರೀತಂ ಗೌಡ ಅವರ ಹೆಸರು ಕೇಳಿ ಬಂದಿದ್ದು, ಹಾಸನದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ದೊರಕ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಪ್ರೀತಂ ಗೌಡ ಅವರು ಜನಸಾಮಾನ್ಯರ ಕೈಗೆಟಕುವ ಶಾಸಕರಾಗಿದ್ದಾರೆ. ಜನರ ಯಾವುದೇ ಸಮಸ್ಯೆಗಳಿಗೂ ತಕ್ಷಣವೇ ಅವರು ಸ್ಪಂದಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕರೆ, ಕೇವಲ ಹಾಸನ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹಾಸನ ನಗರ ಲಿಖಿತ್ ಗೌಡ ಅಭಿಪ್ರಾಯಪಟ್ಟಿದ್ದಾರೆ. ಪ್ರೀತಂ ಗೌಡ ಅವರು, ಹಾಸನದ ಅಭಿವೃದ್ಧಿಗಾಗಿ ದಿನನಿತ್ಯ ಶ್ರಮಿಸುತ್ತಿದ್ದಾರೆ. ನಗರದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸಹಕಾರಿಯಾಗುವಂತೆ ತಮ್ಮ ಶಾಸಕರ ಅನುದಾನದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಿದ್ದಾರೆ. ಆಟೋ ಚಾಲಕರಿಗೆ ನೆರವಾಗುವ ನಿಟ್ಟಿನಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣ ಮಾಡಿದ್ದಾರೆ ಎಂದು ಅವರು ಹೇಳಿದರು. ಈ ಹಿಂದೆ ಹಾಸನದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು…
ಹೆಚ್.ಡಿ.ಕೋಟೆ: ತಾಲೂಕಿನ ಕಟ್ಟೆ ಮನುಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಾರು 35 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಎ.ಎಸ್.ಐ ದೊರೆಸ್ವಾಮಿ, ನಿಮ್ಮ ಗುರಿಯನ್ನು ತಲುಪುವವರೆಗೂ ಆದಷ್ಟು ಮೊಬೈಲ್ ಗಳಿಂದ ದೂರವಿರಿ ಹಾಗೂ ಉತ್ತಮವಾದ ವಿಚಾರಗಳ ಕಡೆ ಗಮನಹರಿಸಬೇಕು. ಉತ್ತಮವಾದ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ತಾವು ಪಡೆದ ವಿದ್ಯೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭವಿಷ್ಯದಲ್ಲಿ ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕಾದರೆ, ಇಂದೇ ದೊಡ್ಡ ದೊಡ್ಡ ಗುರಿಯನ್ನು ಹೊಂದಿಕೊಳ್ಳಬೇಕು ಎಂದು ಅವರು ಇದೇ ವೇಳೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯ ಮಾತುಗಳನ್ನಾಡಿದರು. ಈ ವೇಳೆ ರಕ್ಷಣಾ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಚಂದ್ರಿಕಾ ದೊರೆಸ್ವಾಮಿ, ಸೃಷ್ಠಿ ಆರ್ಟ್ಸ್ ನ ಕುಮಾರ್, ವನಸಿರಿ ಶಂಕರಣ್ಣ, ಕಾಳಪ್ಪ, ಪ್ರದೀಪ್ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುಮಕೂರು: ತಾಲೂಕಿನ ಹೆಬ್ಬೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ನಲ್ಲಿ ಕೆಮಿಕಲ್ ಮಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಹಾಗೂ ಸಾರ್ವಜನಿಕರು ಪೆಟ್ರೋಲ್ ಬಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಆದರೂ ಸಹ ಈ ರೀತಿ ಪೆಟ್ರೋಲ್ ನಲ್ಲಿ ಕೆಮಿಕಲ್ ಮಿಕ್ಸ್ ಮಾಡುವ ಮೂಲಕ ವಾಹನ ಸವಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹ ವೈರಲ್ ಆಗಿದೆ. ವರದಿ: ಮಾರುತಿ ಪ್ರಸಾದ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಪಾವಡಗ: ತಾಲೂಕು ನಿಡಿಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹರಿಹರ ಪುರದಿಂದ ಸಿರಾ ಮುಖ್ಯರಸ್ತೆ ಸುಮಾರು ನಾಲ್ಕೈದು ಕಿ.ಮೀ. ದೂರದವರೆಗೆ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿದೆ. ಈ ಹೊಂಡ ಗುಂಡಿಯ ರಸ್ತೆಯಿಂದಾಗಿ ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಗ್ಯಾರೆಂಟಿ ಇಲ್ಲದಂತಾಗಿದೆ. ಮಳೆ ನಿಂತರೂ ಇನ್ನೂ ಹೊಂಡ ಗುಂಡಿಗಳ ರಸ್ತೆಗಳನ್ನು ದುರಸ್ತಿ ಮಾಡದೇ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದು, ಸಾರ್ವಜನಿಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ತಕ್ಷಣವೇ ರಸ್ತೆಯನ್ನು ಸರಿಪಡಿಸಿ, ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಬೇಕು ಎಂದು ಗ್ರಾಮಸ್ಥರಾದ ನಾಗರಾಜಪ್ಪ, ನಾಗೇಂದ್ರ ಮತ್ತಿತರು ಒತ್ತಾಯಿಸಿದರು. ವರದಿ: ನಂದೀಶ್ ಕೊತ್ತೂರು, ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಲನಚಿತ್ರದ ಮುಹೂರ್ತ ಸಮಾರಂಭ ನಗರದ ರೇಣುಕಾಂಬ ಸ್ಟುಡಿಯೋ ದಲ್ಲಿ ನೆರೆವೇರಿತು. ತಂಡಕ್ಕೆ ಆಶೀರ್ವದಿಸಲು ನಿರೀಕ್ಷೆಗಿಂತ ಜನ ಸೇರಿದ್ದು ಚಿತ್ರತಂಡಕ್ಕೆ ಸಂತಸ ತಂದು ಕೊಟ್ಟಿದೆ. ಎಲ್ಲಾ ಮಾಧ್ಯಮ ಮಿತ್ರರು ಶುಭಕೋರಿದರು ತಮ್ಮ ಚಿತ್ರದ ಪೋಸ್ಟರ್ ಗಳಿಂದ ಗಾಂಧಿ ನಗರದಲ್ಲಿ ಭಾರಿ ಸದ್ದು ಮಾಡುತ್ತಿದ್ದು ಹಿಂದೆಂದೂ ಕಾಣ ಸಿಗದ ಸಸ್ಪೆನ್ಸ್ ಕ್ರೈಂ ಥ್ರಿಲರ್ ಕಥೆ ಇದಾಗಿದೆ. ಸಿನಿಮಾ ನೋಡುವ ಪ್ರೇಕ್ಷಕ ಪ್ರಭುವಿಗೆ ಮನೋರಂಜನೆ ಕಟ್ಟಿಟ್ಟ ಬುತ್ತಿ ಜೊತೆಗೆ ಪ್ರತಿಯೊಂದು ದೃಶ್ಯದಲ್ಲೂ ಟ್ವಿಸ್ಟ್ ಇರುತ್ತೆ ಎಂಬುದು ಚಾರ್ಜ್ ಶೀಟ್ ನಿರ್ದೇಶಕರಾದ ಗುರುರಾಜ್ ಕುಲಕರ್ಣಿಯವರ ಅನಿಸಿಕೆ. ಅಂದಹಾಗೆ ಚಾರ್ಜ್ ಶೀಟ್ ಚಿತ್ರವನ್ನು ಡಾ.ಸುನೀಲ್ ಕುಂಬಾರ್ ಮತ್ತು ಚೆನ್ನೈನ S R ರಾಜನ್ ನಿರ್ಮಿಸುತ್ತಿದ್ದು ಪಶ್ಚಿಮ ಬಂಗಾಳದ ಉಮಾ ಚಕ್ರಬೋರ್ತಿ ಸಹ ನಿರ್ಮಾಪಕರಾಗಿದ್ದಾರೆ. ಕಥೆ ಸ್ವತಃ ನಿರ್ಮಾಪಕರಾದ ಡಾ. ಸುನೀಲ್ ಕುಂಬಾರ್ ಬರೆದಿದ್ದು ಚಿತ್ರಕತೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಗುರುರಾಜ್ ಕುಲಕರ್ಣಿ ಮಾಡುತ್ತಿದ್ದಾರೆ. ರಂಗಸ್ವಾಮಿ ಛಾಯಾಗ್ರಾಹಣ, M ತಿರ್ಥ್ತೋ ಸಂಗೀತ, ಥ್ರಿಲರ್ ಮಂಜು ಸಾಹಸ ಚಿತ್ರಕ್ಕಿದ್ದು ಪ್ರಮುಖ ಪಾತ್ರದಲ್ಲಿ…
ಬೆಂಗಳೂರು: ಮೇಕೆದಾಟು ಯೋಜನೆ, ಗಡಿ ಬಿಕ್ಕಟ್ಟು ಸೇರಿದಂತೆ ರಾಜ್ಯ ಎದುರಿಸುತ್ತಿರುವ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕಾದರೆ 2023ರಲ್ಲಿ ರಾಷ್ಟ್ರೀಯ ಪಕ್ಷಗಳಿಲ್ಲಲ್ಲದ, ಕನ್ನಡಿಗರದ್ದೇ ಸರಕಾರ ಬರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಲವಾಗಿ ಪ್ರತಿಪಾದಿಸಿದರು. ಬೆಂಗಳೂರಿನಲ್ಲಿ ಬುಧವಾರ ಕನ್ನಡಪರ ಹೋರಾಟಗಾರರ ಜತೆ ನಾಡು ನುಡಿ ನೆಲ ಜಲ ಇತ್ಯಾದಿ ಸವಾಲುಗಳಿಗೆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಕ್ತ ಮಾತುಕತೆ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ನ್ಯಾಯಯುತ ಹಕ್ಕುಗಳನ್ನು ಸಾಧಿಸಿಕೊಳ್ಳಲು ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕನ್ನಡಪರ ಹೋರಾಟಗಾರರು ಕೂಡ ವಿಧಾನಮಂಡಲಕ್ಕೆ ಬರಲೇಬೇಕು” ಎಂದು ಕರೆ ನೀಡಿದರು. ಕನ್ನಡಪರ ಸಂಘಟನೆಗಳನ್ನು ರಾಜಕೀಯಕ್ಕೆ ಆಹ್ವಾನಿಸುವ ಬಗ್ಗೆ ತಮ್ಮದೇ ಆದ ವಿಚಾರ ಸರಣಿ ಮಂಡಿಸಿದ ಮಾಜಿ ಮುಖ್ಯಮಂತ್ರಿಗಳು, ಕನ್ನಡಕ್ಕೆ ಅಪಮಾನವಾದಾಗ ಮಾತ್ರ ನೀವು ಬೀದಿಗೆ ಇಳಿಯುವುದಲ್ಲ. ಪ್ರತಿನಿತ್ಯ ಜನರೊಂದಿಗೆ ಬೆರೆಯಿರಿ. ಅವರ ಸಮಸ್ಯೆಗಳಿಗೆ ದನಿಯಾಗಿ. ಆ ಮೂಲಕವೇ ರಾಜಕೀಯಕ್ಕೂ ಬನ್ನಿ ಎಂದು ಹೇಳಿದರು. ರಾಜ್ಯದ ಸಂಪನ್ಮೂಲ ಲೂಟಿಯಾಗುತ್ತಿದೆ. ನೂರಕ್ಕೆ ಶೇ.70ರಷ್ಟು…