Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ಪಾವಗಡ: ಪಟ್ಟಣದಲ್ಲಿ 7 ವರ್ಷಗಳಿಂದ ಪತ್ರಿಕೆ ವಿತರಣೆಯಲ್ಲಿ ತೊಡಗಿದಂತಹ ಅನಿಲ್ ಕುಮಾರ್ ಅವರಿಗೆ ಹೆಲ್ಪ್ ಸೊಸೈಟಿ ವತಿಯಿಂದ ಆರ್ಥಿಕ ಸಹಾಯ ಮಾಡಲಾಯಿತು. ಈ ವೇಳೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂಶಶಿಕಿರಣ್ ಅವರು ಮಾತನಾಡಿ, ಪಾವಗಡ ತಾಲೂಕಿನಲ್ಲಿ ಇಂತಹ ಹಲವು ಪ್ರತಿಭೆಗಳಿವೆ, ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. ಇನ್ನು ಆರ್ಥಿಕ ನೆರವನ್ನು ಪಡೆದ ಅನಿಲ್ ಕುಮಾರ್ ಮಾತನಾಡಿ, ನಮ್ಮನ್ನು ಗುರುತಿಸಿ ಈಗ ವಿದ್ಯಾಭ್ಯಾಸಕ್ಕೆ ನೆರವು ನೀಡಿದಂತೆ ಹೆಲ್ಪ್ ಸೊಸೈಟಿಯವರಿಗೆ ಅಭಾರಿಯಾಗಿರುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಹೆಲ್ಪ್ ಸೊಸೈಟಿ ಯ ಪದಾಧಿಕರಿಗಳಾದ ರಾಕೇಶ, ಮಂಜುನಾಥ್, ಅನಿಲ್ ಕುಮಾರ್ ಆದಿ ಕೇಶವ, ಸಾಗರ, ಸೇರಿ ಹಲವರು ಇದೇ ವೇಳೆ ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ನಗರಸಭೆಯ ಆಡಳಿತ ವರ್ಗ ಹಾಗು ನಗರಸಭೆಯ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ವಿಶ್ವನಾಥ್ ನಗರಸಭೆ ಪೌರಾಯುಕ್ತರ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತಾಲ್ಲೂಕು ಘಟಕ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಗರಸಭೆ ಪೌರಾಯುಕ್ತರ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರಿಂದ ಚುನಾಯಿತಗೊಂಡ ಸದಸ್ಯರಿಗೆ ಮಾಹಿತಿ ನೀಡದೇ ಕೆ.ಎಂ.ಕೊಟ್ಟಿಗೆಯಿಂದ ನಂಜಯ್ಯನ ಕೊಟ್ಟಿಗೆ ಹತ್ತಿರ ರಸ್ತೆ ಮರುಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದು, ಈ ಬಗ್ಗೆ ಮಾಹಿತಿ ಕೇಳಲು ನಗರಸಭೆ ಸದಸ್ಯರಾದ ಅಂಬಿಕಾ ಅವರ ಪತಿಯಾದ ಬಿಜೆಪಿ ಪಕ್ಷದ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ಸಿದ್ದು ಆರಾಧ್ಯ ರವರು ನಗರದ ಆಡಳಿತ ಅಧಿಕಾರಿಗಳ ಬಳಿ ತೆರಳಿದಾಗ, ನಿಮಗೆ ಏಕೆ ನಾವು ಮಾಹಿತಿ ನೀಡಬೇಕು? ನಿಮಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ, ಎಂದು ಉತ್ತರ ನೀಡಿದ್ದಾರೆ…
ತುಮಕೂರು: ನಗರದ 16ನೇ ಮತ್ತು 5 ವಾರ್ಡ್ ನಲ್ಲಿ ಮೇಘ ಗ್ಯಾಸ್ ಹೈಡ್ರೋಕಾರ್ಬನ್ ವಿಭಾಗದ ವತಿಯಿಂದ ನೈಸರ್ಗಿಕ ಅನಿಲ ಗ್ಯಾಸ್ ಸೋರಿಕೆಯಾದಾಗ ಅಪಾಯದಿಂದ ಹೇಗೆ ಪಾರಾಗುವುದು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ಮಾಡಲಾಯಿತು. ಮ್ಯಾಕ್ ಡ್ರೀಲ್ ಲೆವಲ್ 3 ಹಂತದ ಗ್ಯಾಸ್ ಸೋರಿಕೆಯ ಪ್ರತ್ಯಾಕ್ಷಿಕೆಯನ್ನು ಜುಡಿಷಿಯಲ್ ಹೆಡ್ ಮುನ್ಸಿ, ಡಿಸ್ಟ್ರಿಕ್ಟ್ ಫೈಯರ್ ಆಫೀಸರ್, ಸಿದ್ಧಾರ್ಥ ಮೆಡಿಕಲ್ ಕಾಲೇಜು, ಮೇಘಾ ಗ್ಯಾಸ್ ನಿಯಂತ್ರಣ ಘಟಕ ಇವರ ಸಹಯೋಗದೊಂದಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆದರೆ ಈ ವೇಳೆ ಮೇಘ ಗ್ಯಾಸ್ ನ ದೂರವಾಣಿ ಸಂಪರ್ಕ ಸಂಖ್ಯೆ 9100031303 ಮತ್ತು ಟೋಲ್ ಫ್ರೀ ಸಂಖ್ಯೆ 1800123180 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಮೇಘ ಗ್ಯಾಸ್ ನ ಲಿಂಗರಾಜು ತಿಳಿಸಿದ್ದಾರೆ. ವರದಿ: ಮಾರುತಿ ಪ್ರಸಾದ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ವಿಶೇಷಾಧಿಕ ವೋಲ್ಟೇಜ್ ವಿದ್ಯುತ್ ಮಾರ್ಗಗಳ ಸಮೀಪದಲ್ಲಿ ಅಥವಾ ಕೆಳಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಗರದ ಗೆದ್ದಲಹಳ್ಳಿ ಪ್ರಮುಖ ರಸ್ತೆಯಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಹೈಟೆನ್ಷನ್ ವಿದ್ಯುತ್ ತಂತಿಯಿಂದಾಗಬಹುದಾದ ಅನಾಹುಗಳ ಬಗ್ಗೆ ಅರಿವು ಮೂಡಿಸಲಾಯಿತು. ನಿಮ್ಮ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಕರ ಪತ್ರ ವಿತರಣೆ ಮಾಡಿ ಅರಿವು ಮೂಡಿಸಲಾಯಿತು. ಈ ಕುರಿತು ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ್, ನಗರದ ಮೇಳೆಕೋಟೆಯಿಂದ ಬಡ್ಡಿಹಳ್ಳಿಯ ವರೆಗೂ ಇರುವ ಹೈಟೆನ್ಷನ್ ವಿದ್ಯುತ್ ತಂತಿ ಯ ಕೆಳಗೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ, ಬಟ್ಟೆ ಒಣಗಿಸುವುದು ಸೇರಿದಂತೆ ಇತರೆ ಕಾರ್ಯಗಳನ್ನು ಲೈನ್ ಕೆಳಗೆ ನಿರ್ವಹಿಸದಂತೆ ನೋಟಿಸ್ ಜಾರಿ ಮಾಡಿ ತಿಳಿಹೇಳಿ ಅರಿವು ಮೂಡಿಸಲಾಗುತ್ತಿದೆ ಎಂದರು. ನಗರದಲ್ಲಿ ಎಲ್ಲಿ ಹೈಟೆನ್ಷನ್ ವಿದ್ಯುತ್ ಪೂರೈಕೆಯಾಗುತ್ತಿದೆಯೋ ಆ ಭಾಗದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಹೈಟೆನ್ಷನ್ ವಿದ್ಯುತ್ ತಂತಿಯ…
ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ಶ್ರೀಆಂಜನೇಯ ಗರ್ಭಗುಡಿಯ ಪ್ರಾಣದೇವರ ಪೂಜೆಗೆ ಪರಿಚಾರಕ ಕೃಷ್ಣಚಾರ್ ಅವರಿಗೆ ಅವಕಾಶ ನೀಡಲಾಗಿದ್ದು, ಬ್ರಹ್ಮರಥೋತ್ಸವದ ಉತ್ಸವಮೂರ್ತಿಗೆ ದೇವರಾಯನ ದುರ್ಗದ ಅರ್ಚಕ ಲಕ್ಷ್ಮೀನಾರಾಯಣ್ ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಮುಜರಾಯಿ ಇಲಾಖೆ, ಆಂಜನೇಯ ವ್ಯವಸ್ಥಾಪನಾ ಸಮಿತಿ ಮತ್ತು ಸ್ಥಳೀಯ ಭಕ್ತರ ಭಾವನೆಗಳಿಗೆ ತಾತ್ಕಾಲಿಕವಾಗಿ ಸಮಾಧಾನ ಪಡಿಸುವ ಕೆಲಸ ಮಾಡಿದೆ. ಕೊರಟಗೆರೆ ತಾಲ್ಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ನೇಮಕಾತಿ ವಿಚಾರದಲ್ಲಿ ಸೃಷ್ಟಿಯಾಗಿದ್ದ ಗೊಂದಲ ತಾತ್ಕಾಲಿಕವಾಗಿ ಮುಕ್ತಾಯವಾಗಿದೆ. ಬ್ರಹ್ಮ ರಥೋತ್ಸವ ಕಾರ್ಯಕ್ರಮ ಮುಗಿದ ಬಳಿಕ ದೇವರಾಯನ ದುರ್ಗದ ಅರ್ಚಕ ಲಕ್ಷ್ಮೀನಾರಾಯಣ್ ಮತ್ತೆ ಹಿಂದಕ್ಕೆ ತೆರಳಿದ್ದಾರೆ. ಪ್ರಸ್ತುತ ಇರುವ ಪರಿಚಾರಕರೇ ಆಂಜನೇಯ ಪ್ರಾಣದೇವರ ಅರ್ಚಕರಾಗಿ ಪೂಜಾ ಕಾರ್ಯಕ್ರಮ ನೇರವೆರಿಸಲಿದ್ದಾರೆ. 5 ಸಾವಿರ ವರ್ಷಗಳ ಇತಿಹಾಸವುಳ್ಳ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮತ್ತು ಉತ್ಸವ ಕಾರ್ಯಕ್ರಮಗಳು ಸ್ಥಗೀತ ಆಗಿರುವ ಇತಿಹಾಸವೇ ಇಲ್ಲ. ಕೊರೊನಾ ರೋಗದ ನೆಪದಿಂದ ಈಗ ಮೊದಲ ಸಲ ಬ್ರಹ್ಮ ರಥೋತ್ಸವ ಸರಕಾರದ ಆದೇಶದಂತೆ ರದ್ದಾಗಿ ಕೊರೊನಾ ನಿಯಮ…
ಮಧುಗಿರಿ: ಯುವಕರು ರಾಜಕೀಯದಲ್ಲಿ ಸಕ್ರಿಯರಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯೆ ರಾಜೇಂದ್ರ ರಾಜಣ್ಣ ಕರೆ ನೀಡಿದರು. ಪಟ್ಟಣದ ಎಂ.ಎನ್.ಕೆ. ಸಮುದಾಯಭವನದಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಾಹಿತಿ ತಂತ್ರಜ್ಞಾನ ಪ್ರಗತಿಯಲ್ಲಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮಾಹಿತಿ ತಕ್ಷಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಡಿಜಿಟಲ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಮಧುಗಿರಿಯಲ್ಲಿ ಪ್ರಾರಂಭಿಸಲಾಗಿದ್ದು, 252 ಬೂತ್‍ಗಳಿಂದ 70 ಸಾವಿರ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದರು. ಬಿ.ಜೆ.ಪಿ ಪಕ್ಷದ ಜನ ವಿರೋಧಿ ನೀತಿಯಿಂದಾಗಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಕೆ.ಎನ್.ರಾಜಣ್ಣ ಸಚಿವರಾಗಲಿದ್ದಾರೆ ಎಂದ ಅವರು, ನನ್ನನ್ನು ವಿಧಾನಪರಿಷತ್ ಸದಸ್ಯನ್ನನ್ನಾಗಿ ಮಾಡಲು ಕ್ಷೇತ್ರದ ಎಲ್ಲಾ ಮುಖಂಡರು ಕಾರ್ಯಕರ್ತರು ಶ್ರಮಿಸಿದ್ದು, ನಾನು ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು. ಹಿಜಾಬ್ ವಿಚಾರದಲ್ಲಿ ಬಿಜೆಪಿ ಪಕ್ಷದವರು ಯುವ ಜನತೆಯನ್ನು…
ಬೆಂಗಳೂರು : ನಗರದ ಅರಕೆರೆ ವಾರ್ಡಿನ ಮಾಜಿ ಬಿಬಿಎಂಪಿ ಸದಸ್ಯರಾದ ಮುರಳಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಬಡಬಗ್ಗರಿಗೆ ಸಹಾಯವನ್ನು ಹಾಗೂ ಅವರಿಗೆ ಬೇಕಾದ ಆಹಾರದ ಸಾಮಗ್ರಿಗಳನ್ನು ಹಂಚಲಾಯಿತು. ಬೆಂಗಳೂರು ಡಿ ಎಸ್ ಎಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಬೇಗೂರು ಅಬ್ದುಲ್, ರಮೇಶ್ ಬಾಬು ( ಹುಳಿಮಾವು ಬಿಜೆಪಿ ಮುಖಂಡರು) ಹಾಗೂ ಸ್ನೇಹಿತರಾದ ಉಪೇಂದ್ರ, ರಾಮಕೃಷ್ಣ ರೆಡ್ಡಿ, ರಘು, ಶಾಜಿರ್, ಅನ್ಸರ್, ಶ್ರೀಧರ್ ಇನ್ನಿತರ ಶುಭಾಶಯಗಳನ್ನು ಕೋರಿದರು. ಡಿ ಎಸ್ ಎಸ್ ನಾಯಕರಾದ ಅಲ್ಪಸಂಖ್ಯಾತ ಅಧ್ಯಕ್ಷರು ಬೇಗೂರು ಅಬ್ದುಲ್ ಮಾತನಾಡಿ, ಮಾಜಿ ಬಿಬಿಎಂಪಿ ಸದಸ್ಯರಾದ ಮುರಳಿ ಅನೇಕ ರೀತಿಯಲ್ಲಿ ಜನರಿಗೆ ನೆರವಾಗುತ್ತಿದ್ದಾರೆ, ಇವರ ಜೊತೆ ಹುಳಿಮಾವು ಬಿಜೆಪಿ ಮುಖಂಡರಾದ ರಮೇಶ್ ಬಾಬು ರವರು ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಪರ ಕಾರ್ಯಕ್ರಮಗಳನ್ನು ಅವರಿಗೆ ಅನುಕೂಲವಾಗುವಂತೆ ಸಹಾಯವನ್ನು ಮಾಡುತ್ತಿದ್ದಾರೆ. ಮುರಳಿ ಅವರಿಗೆ ಇನ್ನಷ್ಟು ಜನರ ಸೇವೆಯನ್ನು ಮಾಡಲು ಅವರಿಗೆ ಬೇಕಾದ ಎಲ್ಲಾ ರೀತಿಯ ಬೆಂಬಲವನ್ನು ವ್ಯಕ್ತಪಡಿಸುವುದಾಗಿ ಹೇಳಿದ…
ಪಾವಗಡ: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ಕನಸಿನ ಯೋಜನೆ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಅಂಗವಾಗಿ ಇಂದು ಅದರ ತರಬೇತಿ ಕಾರ್ಯಾಗಾರವನ್ನು ಮಧುಗಿರಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ, ಪಾವಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಕೆಪಿಸಿಸಿ ವತಿಯಿಂದ ಆಗಮಿಸಿದ್ದ ತರಬೇತುದಾರ ಅನಿಲ್ ಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸುಜಿತ್, ನಗರ ಘಟಕದ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಮಣಿ ಪಿ.ಎಲ್., ಈಶ್ವರ್, ಭಾಸ್ಕರ್ ನಾಯ್ಡು, ಪಾಪಣ್ಣ ವಿ.ಹೆಚ್.ಪಾಳ್ಯ,ಹರೀಶ್ ಗೋವಿಂದ್ ಯಾದವ್, ಮದನ್ ರೆಡ್ಡಿ, ತಿಪ್ಪೇಸ್ವಾಮಿ, ಅನಿಲ್, ರಾಮಾಂಜಿ, ಹನುಮೇಶ ಸೇರಿದಂತೆ ಇನ್ನು ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ವರದಿ: ರಾಮಪ್ಪ ಸಿ.ಕೆ.ಪುರ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ರಸ್ತೆಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ವಿದೇಶಿ ಪ್ರಜೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಠಾಣೆ ಮುಂಭಾಗದ ಮುಖ್ಯರಸ್ತೆಯಲ್ಲಿ ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಐವರಿ ಕೋಸ್ಟ್ ಪ್ರಜೆ ಮಚ್ಚು ಹಿಡಿದು ಓಡಾಡುತ್ತಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಾ ಸಾರ್ವಜನಿಕರನ್ನು ಬೆದರಿಸುತ್ತಿದ್ದನು. ವಿಷಯ ತಿಳಿದು ಎಎಸ್ ಐ ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಅವರ ಮೇಲೆ ಕೈನಿಂದ ಹಲ್ಲೆ ಮಾಡಿದ್ದಾನೆ. ಆದರೂ ಪ್ರಾಣವನ್ನು ಲೆಕ್ಕಿಸದೆ ಪೊಲೀಸರು ಆತನನ್ನು ಹಿಡಿದು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಯಾವ ವೀಸಾದಲ್ಲಿ ಆತ ಭಾರತಕ್ಕೆ ಬಂದಿದ್ದಾನೆ. ಬೆಂಗಳೂರಿಗೆ ಯಾವಾಗ ಬಂದ, ಎಲ್ಲಿ ವಾಸವಾಗಿದ್ದಾನೆ, ವೃತ್ತಿ ಏನು ಎಂಬಿತ್ಯಾದಿ ವಿಷಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ವಿಚ್ಛೇದಿತ ಮಹಿಳೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿ ಕೊಂಡು ಮೋಸ ಮಾಡಿರುವ ವ್ಯಕ್ತಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 30 ವರ್ಷದ ನೊಂದ ಮಹಿಳೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಪತಿಗೆ ವಿಚ್ಛೇಧನ ನೀಡಿದ್ದ ಮಹಿಳೆ ಇಬ್ಬರು, ಮಕ್ಕಳೊಂದಿಗೆ ಇಂದಿರಾನಗರದಲ್ಲಿ ಪ್ರತ್ಯೇಕ ವಾಸವಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಆ ಮಹಿಳೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಪರಿಚಯವಾಗಿದೆ.ಈ ವ್ಯಕ್ತಿ ಆ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿ ವಿವಾಹವಾಗುವುದಾಗಿ ನಂಬಿಸಿ ಸಂಪರ್ಕ ಬೆಳೆಸಿದ್ದಾನೆ. ತದನಂತರ ಮದುವೆ ವಿಚಾರ ಬಂದಾಗಲೆಲ್ಲ ಒಂದೊಂದು ಸಬೂಬು ಹೇಳುತ್ತಾ ನುಣುಚಿಕೊಳ್ಳುತ್ತಿದ್ದ.2020, ಡಿಸೆಂಬರ್ 10ರಂದು ಸಬ್‍ರಿಜಿಸ್ಟಾರ್ ಕಚೇರಿಯಲ್ಲಿ ವಿವಾಹಕ್ಕೆ ಸಿದ್ದತೆ ಮಾಡಿಕೊಂಡಾಗಲೂ ನೆಪ ಹೇಳಿ ದಿನಾಂಕ ಮುಂದೂಡಿದ್ದ. ತದನಂತರವೂ ಸಂಪರ್ಕ ಬೆಳೆಸಿಕೊಂಡಿದ್ದ ವ್ಯಕ್ತಿ ತನಗೆ ವಂಚಿಸಿದ್ದಾನೆ ಎಂದು ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ…