ತುರುವೇಕೆರೆ: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾಗರಿಕ ವೇದಿಕೆ ವಿವಿಧ ಸಂಘ ಸಂಸ್ಥೆಗಳು ಆಶ್ರಯದಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ತಾಲೂಕಿನವರಾದ ಪ್ರೊ.ಪುಟ್ಟ ರಂಗಪ್ಪ ಅವರ “ತುಮಕೂರಿನ ವೀರವನಿತೆಯರು” ಎಂಬ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಯ್ಯ ಉದ್ಘಾಟಿಸಿದರು. ಖ್ಯಾತ ಲೇಖಕಿ. ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ “ವೀರವನಿತೆಯರು” ಕೃತಿಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ಮಾಡುವ ಮೊದಲು ಸಂವಿಧಾನದ ಚಿಕ್ಕ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಬೇಕು ಎಂದು ಸಲಹೆ ನೀಡಿದರು.
ಈ ಸಮಾಜ ಒಂದು ಬೆಟ್ಟದಂತೆ. ಈ ಬೆಟ್ಟದಲ್ಲಿ ವಾಸಮಾಡುವ ನಾವುಗಳು ಅಂದರೆ ಮನುಷ್ಯ ಜಾತಿ, ಬೆಟ್ಟದಲ್ಲಿ ಬರುವ ಆಗುಹೋಗುಗಳು ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ. ಈ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಧೈರ್ಯ ನಮ್ಮಲ್ಲಿರಬೇಕು. ಎಂದರು.
ಈ ಸಂದರ್ಭ ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಲೇಖಕ ಪುಟ್ಟ ರಂಗಪ್ಪ, ಕಲಾಶ್ರೀ ಕವಿಯತ್ರಿ ತುಮಕೂರು, ಧನಪಾಲ್, ಶಿವಮೂರ್ತಿ, ಬೋರೇಗೌಡ್ರು, ಉಷಾ ಶ್ರೀನಿವಾಸ್, ಮಹಿಳಾ ಸಂಘಗಳ ಒಕ್ಕೂಟ ತುರುವೇಕೆರೆ, ಸಿ ಐಟಿ ಯು ಸತೀಶ್, ಷಣ್ಮುಗಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy