ಆಸ್ಟ್ರೇಲಿಯಾದ ಸಿಡ್ನಿಯ ಬೀದಿಯಲ್ಲಿ ಕುತೂಹಲದಿಂದ ಕಾಣುವ ಜೀವಿ ಪತ್ತೆಯಾಗಿದ್ದು, ಭ್ರೂಣವನ್ನು ಹೋಲುವ ವಿಲಕ್ಷಣ ‘ಏಲಿಯನ್ ತರಹದ’ ಜೀವಿ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ
ಭ್ರೂಣವನ್ನು ಹೋಲುವ ಈ ವಿಚಿತ್ರ ಪ್ರಾಣಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ಬಳಕೆದಾರ ಹ್ಯಾರಿ ಹೇಯ್ಸ್ ಎಂಬುವವರು ಹಂಚಿಕೊಂಡಿದ್ದಾರೆ.
ಫೆಬ್ರವರಿ 28 ರಂದು ಬೆಳಿಗ್ಗೆ ಸಿಡ್ನಿಯ ಮಾರಿಕ್ವಿಲ್ಲೆ ಉಪನಗರದ ಮೂಲಕ ಜಾಗಿಂಗ್ ಮಾಡುತ್ತಿದ್ದಾಗ ಈ ವಿಚಿತ್ರವಾಗಿ ಕಾಣುವ ಜೀವಿಯನ್ನು (Alien) ಕಂಡಿದ್ದೇನೆ ಎಂದು ಹ್ಯಾರಿ ಹೇಯ್ಸ್ ತಿಳಿಸಿದ್ದಾರೆ.
ಈ ವಿಡಿಯೋ ಕ್ಲಿಪ್ 1,144 ಲೈಕ್ ಗಳನ್ನು ಪಡೆದಿದೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಅತ್ಯಂತ ಜನನಿಬಿಡ ನಗರವಾದ ಸಿಡ್ನಿಯಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ದೇಶದ ಪೂರ್ವ ಭಾಗದಾದ್ಯಂತ ಪ್ರವಾಹದಿಂದ ಸತ್ತವರ ಸಂಖ್ಯೆ ಶನಿವಾರ (ಮಾರ್ಚ್ 5) ದಂದು 17 ಕ್ಕೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB