Subscribe to Updates
Get the latest creative news from FooBar about art, design and business.
- ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
- ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
- ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು
- ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭ
- ತುಮಕೂರು ಹಾಲು ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ
- ಮೇ 3 ರಿಂದ 10 ರವರೆಗೆ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಚಾಂಪಿಯನ್ ಶಿಪ್: ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ
- 2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ
Author: admin
ತುಮಕೂರು: ಅಮಾನಿಕೆರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಕುರಿತು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಕ್ರೇಜಿಸ್ಟಾರ್ ಅಭಿಮಾನಿಗಳು, ಕನ್ನಡ ಸಿನಿಚಿತ್ರರಂಗಕ್ಕೆ ವಿ.ರವಿಚಂದ್ರನ್ ಹೊಸರಂಗು ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇಲ್ಲದೇ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನಲ್ಲಿ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ ಎಂದರು. ರವಿಚಂದ್ರನ್ ಅವರು, ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರ ಮಗ. ತಂದೆಯಾದ ಎನ್.ವೀರಸ್ವಾಮಿ ಅವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ…
ಕೊರಟಗೆರೆ: ಪಟ್ಟಣದಲ್ಲಿನ ಕಸಾಯಿ ಖಾನೆಗಳ ಮೇಲೆ ಕೊರಟಗೆರೆ ಸಿಪಿಐ ಸಿದ್ದೇರಾಮೇಶ್ವರ ನೇತೃತ್ವದ ಪೊಲೀಸರ ತಂಡದಿಂದ ದಿಢೀರ್ ದಾಳಿ ನಡೆಸಿ 4 ಜನ ಆರೋಪಿಗಳ ಜೊತೆಯಲ್ಲಿ 6 ಪುಟ್ಟ ಪುಟ್ಟ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನಲ್ಲಿರುವ 4 ಕಸಾಯಿ ಖಾನೆ ಹಾಗೂ ಒಂದು ಮನೆ ಮೇಲೆ ಗೌಗ್ಯಾನ್ ಪೌಂಡೇಷನ್ ದೂರಿನ ಅನ್ವಯ ಕೊರಟಗೆರೆಯ ಪೊಲೀಸರ ತಂಡ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಸರ್ಕಾರ ಗೋ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರೂ ನಿಗೂಢವಾಗಿ ಎಗ್ಗಿಲ್ಲದೆ ಗೋ ಮಾಂಸ ಮಾರಾಟ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗೌ ಗ್ಯಾನ್ ಪೌಂಡೇಷನ್ ಸ್ವಯಂ ಸೇವಕರ ತಂಡದ ದೂರಿನ ಮೇಲೆ ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 4 ಟನ್ ಗೂ ಅಧಿಕ ದನದ ಮಾಂಸ ವಶಪಡಿಸಿಕೊಂಡ ಪೊಲೀಸರು, 4 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೇ 6 ಗೋವುಗಳನ್ನು ಹಾಗೂ ಚಿಕ್ಕ ಚಿಕ್ಕ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಉಳಿದಂತೆ ಕರುಗಳ ಸಾಗಾಣಿಕೆಗೆ…
ತುಮಕೂರು: ಆರೆಸ್ಸೆಸ್ ನವರು ಮೂಲತಃ ಭಾರತದವರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದು, ಟೀಕಾ ಪ್ರಹಾರ ನಡೆಸಿದರು. ತುಮಕೂರು ನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ . ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವಲ್ ಹಾಕಿದ್ದೀರಿ. ಮುಂದೆ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಕಳ್ಳರ ಸಂಘ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆಯಿಲ್ಲ ಎಂದು ಟೀಕಿಸಿದರು. ನಿಮ್ಮನ್ನು ರಾಜಕೀಯದಲ್ಲಿ ಬೆಳೆಸಿದ ದೇವೇಗೌಡರನ್ನು ತುಳಿಯುವ ಕೆಲಸ ಮಾಡಿದೀರಿ. ನಿಮ್ಮಿಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಿದೆ ನಿಮಗೆ ಧನ್ಯವಾದಗಳು ಎಂದರು. ಸಿದ್ದರಾಮಯ್ಯ ಅವರು ಹೆಸರು ಬದಲಾವಣೆ…
ತುಮಕೂರು: ಮಳೆಗಾಲದಲ್ಲಿ ಸಾಮಾನ್ಯವಾಗಿ ಹಾವುಗಳು ಸಿಕ್ಕಿದ ಸ್ಥಳಗಳಲ್ಲೆಲ್ಲ ನುಗ್ಗಿ ಕುಳಿತುಕೊಳ್ಳಲು ಆರಂಭಿಸುತ್ತವೆ. ಈ ಪೈಕಿ ಹೆಚ್ಚಾಗಿ ನಾವು ಧರಿಸುವ ಶೂಗಳ ಒಳಗೆ ಹಾವುಗಳು ಬೆಚ್ಚಗೆ ಕುಳಿತುಕೊಳ್ಳುವುದೇ ಹೆಚ್ಚು. ಇಂತಹ ಘಟನೆಯೊಂದು ತುಮಕೂರು ನಗರದ ಹೊರವಲಯದ ರಂಗಾಪುರದಲ್ಲಿ ನಡೆದಿದೆ. ವರದಿಗಳ ಪ್ರಕಾರ ರಂಗನಾಥ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಮನೆ ಮುಂದೆ ಬಿಚ್ಚಿಟ್ಟಿದ್ದ ಶೂ ಒಳಗಡೆ ಹಾವು ನುಗ್ಗಿದ್ದು, ಬೆಳಿಗ್ಗೆ ಶೂ ಹಾಕಲು ಮುಂದಾದ ವೇಳೆ ಹಾವು ಬುಸುಗುಟ್ಟುವ ಶಬ್ಧ ಕೇಳಿ ಬಂದಿದ್ದು, ಶೂ ಒಳಗೆ ನೋಡಿದಾಗ ಹಾವು ಕಂಡು ಬಂದಿದೆ. ರಂಗನಾಥ್ ಅವರು ಹಾವಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶೂವನ್ನು ಸರಿಯಾಗಿ ನೋಡದೇ ಧರಿಸಿದ್ದರೆ, ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿತ್ತು. ಇನ್ನೂ ಹಾವನ್ನು ತಕ್ಷಣವೇ ಉರಗ ರಕ್ಷಕ ದಿಲೀಪ್ ಅವರನ್ನು ಕರೆಸಿ, ರಕ್ಷಣೆ ಮಾಡಲಾಗಿದ್ದು, ಅವರು ಹಾವನ್ನು ಹಿಡಿದು ದೇವರಾಯನದುರ್ಗ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಶೂ ಒಳಗೆ ಹಾವು ಕುಳಿತಿರುವ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಮನೆಯ ಹೊರಗಡೆ ಶೂಗಳನ್ನು…
ಗುಬ್ಬಿ: ವೈಯಕ್ತಿಕ ದ್ವೇಷದಿಂದ ಕಿಡಿಗೇಡಿಗಳು 100ಕ್ಕೂ ಅಧಿಕ ಅಡಿಕೆ ಮರಗಳನ್ನು ಕತ್ತರಿಸಿ ಹಾಕಿರುವ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ. ನಟರಾಜು ಎಂಬುವರ ತೋಟದಲ್ಲಿ ಕಿಡಿಗೇಡಿಗಳು ಸುಮಾರು 100ಕ್ಕೂ ಅಧಿಕ ಅಡಿಕೆ ಮರಗಳನ್ನು ಕಡಿದು ಹಾಕಲಾಗಿದೆ. ಶನಿವಾರ ತಡರಾತ್ರಿ ನಡೆದಿದ್ದು, ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಬೆಳಗ್ಗೆ ನಟರಾಜು ಅವರು ತೋಟಕ್ಕೆ ತೆರಳಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಶನಿವಾರ ತಡರಾತ್ರಿ ವೇಳೆ ಕಿಡಿಗೇಡಿಗಳು ಅಡಿಕೆ ಮರವನ್ನು ಕತ್ತರಿಸಿ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಬೆಂಗಳೂರು: ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು BJP ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರ್.ಎಸ್.ಎಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ BJP ಎಂಬ ರಾಜಕೀಯ ಪಕ್ಷವನ್ನು ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರ್.ಎಸ್.ಎಸ್ ತೀರ್ಮಾನಿಸಿದೆ? ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು? ಆರ್.ಎಸ್.ಎಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳಲ್ಲವೇ? ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು…
ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಶುಕ್ರವಾರ ನೇಮಕವಾಗಿದ್ದಾರೆ. ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಕಮಿಷನರ್ ಆಗಿದ್ದ ವಂದಿತಾ ಶರ್ಮಾ ಅವರಿಗೆ ಪದೋನ್ನತಿ ನೀಡಲಾಗಿದೆ. ಮೇ 31 ಕ್ಕೆ ಪಿ.ರವಿಕುಮಾರ್ ನಿವೃತ್ತರಾಗಲಿದ್ದಾರೆ. 1986-ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ವಂದಿತಾ ಶರ್ಮಾ ಥೆರೇಸಾ ಭಟ್ಟಾಚಾರ್ಯ, ಮಾಲತಿ ದಾಸ್ ಮತ್ತು ರತ್ನ ಪ್ರಭಾ ಅವರ ನಂತರ ಈ ಸ್ಥಾನವನ್ನು ಅಲಂಕರಿಸಿದ ನಾಲ್ಕನೇ ಮಹಿಳೆಯಾಗಿದ್ದಾರೆ. ವಂದಿತಾ ಶರ್ಮಾ ಅವರ ಪತಿ ಹಣಕಾಸು ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿಯಾಗಿದ್ದು, ಅವರ ಹೆಸರೂ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿ ಬಂದಿದೆ. ವರದಿ: ಮುರುಳಿಧರನ್ ಆರ್ ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಬೆಂಗಳೂರು: ಎಸ್ ಡಿ ಪಿ ಐ ಸಂಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಬೆಂಬಲವಿದೆ. ಈ ಸಂಘಟನೆ ಕಾಂಗ್ರೆಸ್, ಕಮ್ಯೂನಿಸ್ಟರು ಬೆಳೆಸಿದ ಕೂಸು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಈ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸಂಘಟನೆಗಳ ಮೇಲಿನ ಕೇಸ್ ಗಳನ್ನು ವಜಾ ಮಾಡಿದ್ದರು ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ. ಆರ್.ಎಸ್.ಎಸ್ ಮೂಲ ಪ್ರಶ್ನಿಸಿರುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಶಿ, ಆರ್.ಎಸ್.ಎಸ್ ಮೂಲ, ಬಿಜೆಪಿ ಮೂಲವನ್ನು ಕೇಳುವ ಸಿದ್ದರಾಮಯ್ಯನವರ ಮೂಲವನ್ನೇ ಜನ ಕಿತ್ತುಕೊಂಡಿದ್ದಾರೆ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಕೊಪ್ಪಳ: ಯಾವುದೇ ಕಾರಣಕ್ಕೆ ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ, ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಕೊಪ್ಪಳದಲ್ಲಿ ಈ ಸಂಬಂಧ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪಾಲನೆ ಮಾಡದವರಿಗೆ ಶಾಲೆಗೆ ಪ್ರವೇಶವಿಲ್ಲ. ಹಠ ಮಾಡಲು ಅವರಿಗೆ ಹೇಗೆ ಹಕ್ಕಿದೆಯೋ ಹಾಗೆಯೇ ಒಳಗೆ ಬಿಡದೇ ಇರಲು ಕಾನೂನೂ ಸಹ ಇದೆ ಎಂದು ಹೇಳಿದ್ದಾರೆ. ಒಂದಷ್ಟು ಜನರು ಈ ರೀತಿ ಮತ್ತೆ ಪ್ರಚಾರಕ್ಕೆ ತಂದು ದೇಶದ ಅಶಾಂತಿ ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಪ್ರಯತ್ನ ಇದರಲ್ಲೂ ನಡೆದಿದೆ ಎಂದು ಆರೋಪಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಂಗಳೂರು: ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಊಟ ಮತ್ತು ಮದ್ಯ ತರಲು ಬೈಕ್ ನಲ್ಲಿ ತೆರಳಿದ್ದ ಸಾಫ್ಟ್‍ವೇರ್ ಎಂಜಿನಿಯರ್ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಕಾಂತ್(23) ಮೃತ ಸಾಫ್ಟ್‍ವೇರ್ ಎಂಜಿನಿಯರ್ ಎಂದು ತಿಳಿದು ಬಂದಿದೆ. ಐದು ಮಂದಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಲುವಾಗಿ ಶ್ರೀಕಾಂತ್ ಬೈಕ್ ತೆಗೆದುಕೊಂಡು ಊಟ ಮತ್ತು ಮದ್ಯ ತರಲು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಹೋಗುತ್ತಿದ್ದಾಗ ರಾತ್ರಿ 12:30ರ ಸುಮಾರಿನಲ್ಲಿ ಕಾಮಾಕ್ಯ ಬಸ್ ನಿಲ್ದಾಣ ಸಮೀಪ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಶ್ರೀಕಾಂತ್ ತಲೆಗೆ ತೀವ್ರ ಪೆಟ್ಟಾಗಿದೆ. ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಸ್ನೇಹಿತರು ತಕ್ಷಣ ಶ್ರೀಕಾಂತ್‍ನನ್ನು ಡಿಜಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…