Author: admin

ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಹೋಬಳಿ ಅರೆ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2022 23ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಪೋಷಕರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಶಾಲೆಯ ಪ್ರಾಂಶುಪಾಲರಾದ ಪರಣ್ಣರವರು ಸಭೆಯಲ್ಲಿ ಹಾಜರಿದ್ದ ಮಕ್ಕಳ ಪೋಷಕರುಗಳಿಗೆ ಈ ಸಭೆಯನ್ನು ಕರೆದಿರುವ ಉದ್ದೇಶ ಹಾಗೂ ಮಕ್ಕಳಿಗೆ ಕೊಡ ಬೇಕಾದ ಊಟ ಉಪಚಾರ ನಮ್ಮ ಕಡೆಯಿಂದ ಮಕ್ಕಳಿಗೆ ಆಗಬೇಕಾದ ಅನುಕೂಲಗಳು ಪಾಠ ಪ್ರವಚನದ ಬಗ್ಗೆ ಕುಲಂಕುಶವಾಗಿ ತಿಳಿಸಿಕೊಟ್ಟರು. ಈ ಸಭೆಯಲ್ಲಿ ಶಿಕ್ಷಕರುಗಳಾದ ಡಿ ಪಿ ವೇಣುಗೋಪಾಲ್, ವಿನೋದ್ ಕುಮಾರ್, ಹರ್ಷವರ್ಧನ್, ಮಂಜುನಾಥ್, ರವಿಕಿರಣ್, ರಾಘವೇಂದ್ರ ಶಿಕ್ಷಕಿಯರುಗಳಾದ ಶಿಲ್ಪಾ ಶ್ರೀ, ಸಬಿ ಹಾಬಾನು, ಆಶಾ , ಶ್ಯಾಮ್ ಸುಂದರ್ ಮತ್ತಿತರರು ಭಾಗವಹಿಸಿದ್ದರು. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಸರಗೂರು: ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ನೆರೆಯಿಂದಾಗಿ 15ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ವಾಸಿಸಲು ಯೋಗ್ಯ ಮನೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಕಂದಾಯ ಇಲಾಖಾಧಿಕಾರಿಗಳು ಮನಬಂದಂತೆ ಪರಿಹಾರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಬಿನಿ ಜಲಾಶಯ ನಿರ್ಮಾಣಗೊಂಡ ಬಳಿಕ ಗ್ರಾಮವನ್ನು ಸ್ಥಳಾಂತರ ಮಾಡಲಾಗಿದ್ದು, ಗ್ರಾಮದಲ್ಲಿರುವ ಮನೆಗಳು ಸಂಪೂರ್ಣವಾಗಿ ಮಣ್ಣಿನಿಂದ ನಿರ್ಮಾಣಗೊಂಡಿರುವ ಮನೆಗಳಾಗಿವೆ. ಹೀಗಾಗಿ ಮಳೆಗೆ ಮಣ್ಣಿನ ಗೋಡೆಗಳು ಹಾಗೂ ಮೇಲ್ಛಾವಣಿ ಕುಸಿದಿದೆ. ಗ್ರಾಮದ ಸಣ್ಣಮ್ಮ ಬಸವನಾಯಕ, ಸಿದ್ದಮ್ಮ ಬಸವರಾಜು, ದೇವಮ್ಮ ಚಿಕ್ಕನಾಯಕ, ಕಾಳನಾಯಕ ತಿಮ್ಮನಾಯಕ, ಸುಧಾ ಶಿವಪ್ಪ, ನಾಗಮ್ಮ ಪುಟ್ಟಲಿಂಗನಾಯಕ, ದೇವಮ್ಮರಾಮನಾಯಕ, ಸವಿತಾ ರೇವಣ್ಣ, ಜಯಶ್ರೀ ಮಹೇಶ್, ಕಮಲಮ್ಮ ಇಂದ್ರನಾಯಕ ಅವರ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡದೇ ಮೀನಾಮೇಷ ಎಣ ಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೇವಮ್ಮರಾಮನಾಯಕ ಅವರಿಗೆ ವಿಕಲಚೇತನ ಮಗನಿದ್ದು, ಜೀವನಕ್ಕಾಗಿ ಕೂಲಿನಾಲಿ ಮಾಡುತ್ತಿದ್ದಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ 5 ಸಾವಿರ ರೂ.…

Read More

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಮಾವತ್ತೂರು  ಗ್ರಾಮದ ದೊಡ್ಡಕೆರೆಗೆ ಬಿಜೆಪಿ ಮುಖಂಡರದ ಕೆ.ಎಂ.ಮುನಿಯಪ್ಪರವರು ರೈತರೊಂದಿಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, 25 ವರ್ಷಗಳ ನಂತರ ಕೂಡಿಬಿದ್ದ ಮಾವತ್ತೂರು ಕೆರೆ ತುಂಬಿ,  ಹರಿಯುತ್ತಿರುವ ನದಿಗಳು ಮತ್ತು ಕೆರೆಗಳಿಗೆ ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ರೈತರ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ ಎಂದು ಹೇಳಿದರು. ಬಯಲು ಸೀಮೆಯ ಭಾಗವಾದ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಅದರಲ್ಲೂ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ನೀರು ತುಂಬಿರುವ  ಹಿನ್ನೆಲೆಯಲ್ಲಿ ಕೆರೆಗಳನ್ನು ಪೂಜಿಸುವುದು ಕರ್ತವ್ಯವಾಗಿದೆ ಎಂದರು. ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ ವರ್ಷ ಕೆರೆಗಳು ತುಂಬುವ ಮೂಲಕ ರೈತರಿಗೆ ದಯೆ ತೋರಲಿ ಈ ನಿಟ್ಟಿನಲ್ಲಿ ಕ್ಷೇತ್ರದ ಅನ್ನದಾತರ ಬೆನ್ನೆಲುಬಾಗಿ…

Read More

ತುರುವೇಕೆರೆ: ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿಯ ಸೊಪ್ಪನಹಳ್ಳಿ ಹಳ್ಳದಲ್ಲಿ ಮಾರುತಿ ಓಮ್ನಿ ಕಾರು ಸಹಿತ ಕೊಚ್ಚಿ ಹೋಗಿದ್ದ ವೃದ್ಧ ಪಟೇಲ್ ಕುಮಾರ್ ಎಂಬವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ತಾಲ್ಲೂಕಿನ ಕಲ್ಲೂರು ಕ್ರಾಸ್ ರಸ್ತೆಯಲ್ಲಿ ಕೊಂಡಜ್ಜಿ ಕ್ರಾಸ್ ಹತ್ತಿರ ಸೂಪ್ಪನಹಳ್ಳಿ ಹಳ್ಳದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಮಾರುತಿ ಓಮ್ನಿ ಕಾರು ಕೊಚ್ಚಿ ಕೊಂಡು ಹೋದ ಘಟನೆ ನಡೆದಿತ್ತು. ಘಟನೆ ವೇಳೆ ಕಾರಿನಲ್ಲಿದ್ದ 70 ವರ್ಷ ವಯಸ್ಸಿನ ಪಟೇಲ್ ಕುಮಾರಯ್ಯ ಎಂಬವರು ನೀರು ಪಾಲಾಗಿ, ಚಾಲಕ ಸೇರಿದ್ದಂತೆ ಇಬ್ಬರನ್ನು ಪಾರಾಗಿದ್ದರು. ನಿನ್ನೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಕೊಚ್ಚಿ ಹೋಗಿರುವ ವೃದ್ಧನ ಪತ್ತೆಗೆ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ರಾಜ್ಯ ವಿಪತ್ತು ದಳ (SDRF) ಕಾರ್ಯಾಚರಣೆ ಸುತ್ತಿದೆ. ಸ್ಥಳದಲ್ಲಿ ತಹಸೀಲ್ದಾರ್ ರೇಣುಕುಮಾರ್, ಪಿ ಎಸ್ ಐ ರಾಮಚಂದ್ರಪ್ಪ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಬೀಡು ಬಿಟ್ಟಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ತಿಪಟೂರು: ಉತ್ತಮ ಆಹಾರ ಪದ್ಧತಿಯಿಂದ ರೋಗಗಳಿಂದ ದೂರವಿರಬಹುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಲಕ್ಷ ವೆಚ್ಚದ 5 ಬೆಡ್ ಗಳ ಮರು ಆಧುನಿಕರಣ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ತಿಪಟೂರು ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯಲ್ಲಿ ಅತ್ಯಾಧುನಿಕರಣ ಸೌಕರ್ಯ ಹೊಂದಿರುವ ಆಸ್ಪತ್ರೆಯಾಗಿದೆ ಎಂದಿಗೂ ಸಹಕಾರದಿಂದ ಆಧುನಿಕ ಯಂತ್ರಗಳ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು. ತಿಪಟೂರು ತಾಲೂಕಿನಲ್ಲಿ ಡಯಾಲಿಸಿಸ್ ರೋಗಿಗಳು ಜಾಸ್ತಿ ಇದ್ದು, ಆಹಾರ ಪದ್ಧತಿಯಿಂದ ಜನರು ರೋಗವನ್ನು ದೂರವಿಡುವ ಪ್ರಯತ್ನ ಮಾಡಬೇಕು ಎಂದು ಇದೇ ವೇಳೆ ಸಲಹೆ ನೀಡಿದರು. ಮುಖ್ಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ರೈತರು ನಿಯಮತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾವೇ ಬೆಳೆದ ಆಹಾರ ಉಪಯೋಗಿಸಬೇಕು. ನಗುವ ವ್ಯಾಯಾಮ ಮಾಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರ್ ವೈದ್ಯರಾದ ರಕ್ಷಿತ ಗೌಡ ನೇತ್ರ ತಜ್ಞ ಡಾಕ್ಟರ್ ಸುರೇಶ್ ಬಿಸಲೇಹಳ್ಳಿ ಜಗದೀಶ್ ಮುಂತಾದವರು ಭಾಗವಹಿಸಿದ್ದರು. ವರದಿ:…

Read More

ತುಮಕೂರು: ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರಗಾನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಕುರುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಮೋರಗಾನಹಳ್ಳಿ ಗ್ರಾಮದ ವಿಶ್ವಣ್ಣ ಎಂಬುವರಿಗೆ ಸೇರಿದ ಕರು. ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕರುವನ್ನು ಕಟ್ಟಲಾಗಿತ್ತು. ಗುರುವಾರ ತಡರಾತ್ರಿ ದಾಳಿ ನಡೆಸಿರುವ ಚಿರತೆ ಕರುವನ್ನು ಎತ್ತೊಯ್ಯಲಾಗದೆ ಇದ್ದ ಜಾಗದಲ್ಲೆ ತಿಂದು ಹಾಕಿದೆ. ಗ್ರಾಮದ ಮಧ್ಯ ಭಾಗದಲ್ಲಿನ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿರುವುದರಿಂದ ಗ್ರಾಮದ ಜನ ಭಯಭೀತರಾಗಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾವಗಡ: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯ ಪರಿಣಾಮವಾಗಿ ತುಮಕೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ವಿಪರೀತ ಪ್ರವಾಹದ ಹಾವಳಿ ಉಂಟಾಗಿದೆ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಹೇಳಿದೆ. ಮಳೆ ಹಿನ್ನೆಲೆಯಲ್ಲಿ ಜಯಮಂಗಲಿ ನದಿಯ ಪ್ರವಾಹ ವಿಪರೀತವಾಗಿದ್ದು, ಅನೇಕ ಕಡೆ ಮನೆಗಳು ಕುಸಿದು ಬಿದ್ದಿವೆ. ಮಧುಗಿರಿ ತಾಲ್ಲೂಕಿನ ಸೂರನಾಗೇನಹಳ್ಳಿ ಮತ್ತು ಚನ್ನಸಾಗರ ಹಾಗೂ ಕೊರಟಗೆರೆ ತಾಲ್ಲೂಕಿನ ಅರಸಾಪುರ ಮುಂತಾದ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿರುವುದು ತಿಳಿದು ಬಂದಿದೆ. ಶ್ರೀರಾಮಕೃಷ್ಣ ಸೇವಾಶ್ರಮ ಎಂದಿನಂತೆ ಅನೇಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೊರರಾಜ್ಯಗಳಲ್ಲಿಯೂ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಕಳೆದ ಎರಡು ದಶಕಗಳಿಂದ ಏಕಪ್ರಕಾರವಾಗಿ ಪರಿಹಾರ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನ ನದಿ ದಂಡೆಯ ಭಾಗದಲ್ಲಿ ಅನೇಕ ನಷ್ಟ ಉಂಟಾಗಿರುವುದು ಇದೀಗ ತಿಳಿದು ಬಂದಿದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕೊರಟಗೆರೆ ತಾಲ್ಲೂಕಿನಿಂದ ಈ ಪರಿಹಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ. ಅತ್ಯಂತ ನಷ್ಟವನ್ನು ಅನುಭವಿಸಿರುವ ಕುಟುಂಬಗಳಿಗೆ ಟಾರ್ಪಾಲಿನ್, ದಿನಸಿ, ಹೊದಿಕೆ ಇತ್ಯಾದಿಗಳನ್ನು…

Read More

ಕಲಬುರಗಿ: ಭಾರೀ ಮಳೆಗೆ ಮಾದನಹಿಪ್ಪರಗಾ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಕಾಲೇಜಿನ ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಡೆದಿದ್ದು, ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಪಾಠ ಕೇಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ತಲೆಗೆ ಮೇಲ್ಛಾವಣಿಯ ಅವಶೇಷಗಳು ಬಿದ್ದಿದ್ದು, ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಗಾಯಗೊಂಡಿದ್ದರಿಂದ ಆತಂಕೊಳಗಾದ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಸರಿಪಡಿಸದೇ ಶಿಕ್ಷಣ ಇಲಾಖೆ ನಿರ್ಲಕ್ಷ್ಯವಹಿಸುತ್ತಿದ್ದು, ಬಡವರ ಮನೆಯ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬ ಆಕ್ರೋಶ ಕೇಳಿ ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಡುಗನಹಳ್ಳಿ ಗ್ರಾಮದ ವೀರಕ್ಯಾತಪ್ಪ ನವರ ಪತ್ನಿ ಲಕ್ಷ್ಮಮ್ಮ (70) ಎಂಬ ವೃದ್ದೆಯು ತನ್ನ ಜಮೀನಿಗೆ ಹೋಗಿ ವಾಪಸ್ ಬರುವ ಮಾರ್ಗ ಮಧ್ಯೆಯ ಸುವರ್ಣಮುಖಿ ನದಿ ಸೇರುವ ಹುಂಜಿನ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ನೆನ್ನೆ ಮಧ್ಯಾಹ್ನ ಮೃತಪಟ್ಟಿದ್ದರು. ಸ್ಥಳಕ್ಕೆ ಕೊರಟಗೆರೆ ಆರಕ್ಷಕ ಠಾಣೆಯ ಸಿದ್ದರಾಮೇಶ್ವರ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಹೊರತೆಗೆದು ಮೃತ ದೇಹವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಮಾಹಿತಿ ತಿಳಿದ ತಕ್ಷಣವೇ ಶಾಸಕ ಡಾ.ಜಿ ಪರಮೇಶ್ವರ್ ಮತ್ತು ತಹಶೀಲ್ದಾರ್ ನಹಿದಾ ಜಂ ಜಂ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮೃತ ವೃದ್ಧೆಯ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ನೀಡಿ ಧೈರ್ಯ ತುಂಬಿದರು. ವರದಿ:  ಮಂಜುಸ್ವಾಮಿ.ಎಂ.ಎನ್. ,  ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ: ದೇಶ ಹಾಗೂ ರಾಜ್ಯದ ಯುವಜನತೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಜ್ಞಾನವಿದ್ದಾಗ ಮಾತ್ರ ಮನುಷ್ಯತ್ವ ಗುಣವುಳ್ಳಲು ಸಾಧ್ಯ ಎಂದು ಸಾಹಿತಿ, ಸಂಸ್ಕೃತಿ ಚಿಂತಕರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿ, ಮೇಲ್ನೋಟಕ್ಕೆ ನಾವೆಲ್ಲರೂ ಮನುಷ್ಯರೇ, ಆದರೆ ಪ್ರತಿಯೊಬ್ಬ ಯುವಕರಲ್ಲಿ ಒಂದೊಂದು ರೀತಿಯ ಕಲಾವಿದ ಇರುತ್ತಾನೆ. ನಿಜವಾದ ಕಲಾವಿದ ಕಣ್ಣೀರು ಹಾಕುವುದು ಬೇಕಾಗಿಲ್ಲ ಆದರೆ ಅವನ ಅಂತರಾಳದಿಂದ ಕಣ್ಣೀರು ತೆಗೆಯಬೇಕಾಗುತ್ತದೆ. ನಮ್ಮ ದೇಶದಲ್ಲಿ ಇಂದು ಜಾತಿ ಮತ್ತು ಪಂತಗಳ ಪಟ್ಟಿ ಎಣಿಕೆ ಮಾಡಲು ನಾವೆಲ್ಲರೂ ಶುರು ಮಾಡಿದ್ದೇವೆ ಎಂದರು. ಪ್ರಾಣ ಯಾವ ಧರ್ಮ, ಮತ, ಪಕ್ಷಕ್ಕೆ ಸೀಮಿತವಲ್ಲಾ. ಯಾವುದೋ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಸತ್ತಾಗ ನಮಗೆ ಕರುಣೆ ಅನ್ನೋದು ಬರಬೇಕಲ್ವಾ ಹಾಗಾದರೆ ಇಂದು ನಾವು ಯಾವ ಕಡೆ ಸಾಗುತ್ತೀದ್ದೇವೆ ಎಂಬುದನ್ನು ಯುವಕರು ಒಮ್ಮೆ ಯೋಚಿಸುವುದು ಬಹುಮುಖ್ಯ ಎಂದು ಹೇಳಿದರು. ಸರಿಗಮಪ…

Read More