ತುರುವೇಕೆರೆ: ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿಯ ಸೊಪ್ಪನಹಳ್ಳಿ ಹಳ್ಳದಲ್ಲಿ ಮಾರುತಿ ಓಮ್ನಿ ಕಾರು ಸಹಿತ ಕೊಚ್ಚಿ ಹೋಗಿದ್ದ ವೃದ್ಧ ಪಟೇಲ್ ಕುಮಾರ್ ಎಂಬವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ತಾಲ್ಲೂಕಿನ ಕಲ್ಲೂರು ಕ್ರಾಸ್ ರಸ್ತೆಯಲ್ಲಿ ಕೊಂಡಜ್ಜಿ ಕ್ರಾಸ್ ಹತ್ತಿರ ಸೂಪ್ಪನಹಳ್ಳಿ ಹಳ್ಳದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಮಾರುತಿ ಓಮ್ನಿ ಕಾರು ಕೊಚ್ಚಿ ಕೊಂಡು ಹೋದ ಘಟನೆ ನಡೆದಿತ್ತು.
ಘಟನೆ ವೇಳೆ ಕಾರಿನಲ್ಲಿದ್ದ 70 ವರ್ಷ ವಯಸ್ಸಿನ ಪಟೇಲ್ ಕುಮಾರಯ್ಯ ಎಂಬವರು ನೀರು ಪಾಲಾಗಿ, ಚಾಲಕ ಸೇರಿದ್ದಂತೆ ಇಬ್ಬರನ್ನು ಪಾರಾಗಿದ್ದರು.
ನಿನ್ನೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಕೊಚ್ಚಿ ಹೋಗಿರುವ ವೃದ್ಧನ ಪತ್ತೆಗೆ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ರಾಜ್ಯ ವಿಪತ್ತು ದಳ (SDRF) ಕಾರ್ಯಾಚರಣೆ ಸುತ್ತಿದೆ.
ಸ್ಥಳದಲ್ಲಿ ತಹಸೀಲ್ದಾರ್ ರೇಣುಕುಮಾರ್, ಪಿ ಎಸ್ ಐ ರಾಮಚಂದ್ರಪ್ಪ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಬೀಡು ಬಿಟ್ಟಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy