Author: admin

ತುಮಕೂರು: ತುಮಕೂರು ಜಿಲ್ಲೆಯ ವಿವಿಧೆಡೆಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವಾರು ಅನಾಹುತಗಳು ಸಂಭವಿಸಿದ್ದು, ಜಾನುವಾರು ಮೈ ತೊಳೆಯಲು ಹೋದ ಯುವಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಬಂಗೆನಹಳ್ಳಿ ಕೆರೆಯಲ್ಲಿ ನಡೆದಿದೆ. ಗುಬ್ಬಿಯ ಹರಿವೇಸಂದ್ರ ಗ್ರಾಮದ ನಿವಾಸಿ ಮನೋಜ್ (22) ಮೃತ ಯುವಕ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಗ್ರಾಮದ ಕೆರೆಯಲ್ಲಿ ಜಾನವಾರು ಮೈ ತೊಳೆಯಲು ಹೋದ ಮನೋಜ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಬೆಲ್ಲದ ಮೇಲೆ ಶೇ.5 ಜಿಎಸ್ಟಿ ವಿಧಿಸಿರುವುದನ್ನು ವಾಪಸ್ ಪಡೆಯಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಗುರುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸುಮಲತಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಸಲ್ಲಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿನ ಕಬ್ಬು ಬೆಳೆಗಾರರಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿನ ಬೆಳೆಗಾರರಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ದರ (ಎಫ್ ಆರ್ ಪಿ) ಕಡಿಮೆಯೇ ಇದೆ ಎಂದಿದ್ದಾರೆ. ಉತ್ತರದ ರಾಜ್ಯಗಳನ್ನು ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಇರುವ ಬೆಲ್ಲ ತಯಾರಿಕಾ ಘಟಕಗಳ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ವಿವರಿಸಿದರು. ಮಂಡ್ಯ ಜಿಲ್ಲೆ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕೂಡ ಕಬ್ಬು ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ವಿತ್ತ ಸಚಿವರಿಗೆ ವಿವರಿಸಿದರು.

Read More

ಕೊರಟಗೆರೆ: ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಗರ್ ಹುಕ್ಕುಂ ಸಮಿತಿ ಸಭೆಯನ್ನು ರದ್ದು ಪಡಿಸಲಾಗಿದೆ. ಬಗರ್ ಹುಕ್ಕುಂ ಸಮಿತಿ ಸಭೆಯನ್ನು ರದ್ದುಪಡಿಸಿದ ಶಾಸಕ ಡಾ ಜಿ ಪರಮೇಶ್ವರ್, ಭಾರೀ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಣ ಭೀಕರ ಮಳೆಗೆ ಚನ್ನಸಾಗರ ಗ್ರಾಮಕ್ಕೆ ನೀರು ನುಗ್ಗಿ ಜನ ತತ್ತರಿಸಿದ್ದರು. ಆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಡಾ. ಜಿ ಪರಮೇಶ್ವರ್ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಕುಟುಂಬಗಳಿಗೆ ಇಂದು ಸಂಜೆಯೊಳಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದರು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದವಸ ಧಾನ್ಯ ಹಾನಿಯಾಗಿ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾದ ಕಾರಣ ಸೂಕ್ತ ಪರಿಹಾರ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ ನೀಡಿದರು. ವರದಿ: ಮಂಜುಸ್ವಾಮಿ.ಎಂ.ಎನ್ ., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಕೊರಟಗೆರೆ : ಲೈಸೆನ್ಸ್ ಇಲ್ಲದೆ ನಾಡ ಬಂದೂಕು ಹೊಂದಿದ್ದ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣೆ ಗ್ರಾಮದ ಮಂಜೇಶ್ ಬಿ.ಎಸ್(22) ಮತ್ತು ನರಸಿಂಹಮೂರ್ತಿ(40) ಬಂಧಿತ ಆರೋಪಿಗಳು . ಬಂಧಿತರಿಂದ ಎರಡು ನಾಡ ಬಂದೂಕು ಮತ್ತು 15 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಡೋಣೆ ಗ್ರಾಮದ ಮಂಜೇಶ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಬಂದೂಕು ಮತ್ತು ಸಿಡಿ ಮದ್ದುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಸಿಪಿಐ ಸಿದ್ದರಾಮೇಶ್ವರ ಪಿಎಸ್ ಐ ನಾಗರಾಜು.ಬಿ ಮತ್ತು ಸಿಬ್ಬಂದಿಗಳಾದ ಧರ್ಮ ಪಾಲನಾಯಕ್, ಮೋಹನ್, ನಜರುಲ್ಲಾ, ದಯಾನಂದ್, ಗಂಗಾಧರಪ್ಪ, ನರಸಿಂಹಮುರ್ತಿ, ಸೈಯದ್, ದೊಡ್ಡಲಿಂಗಯ್ಯ‌ ದಾಳಿನಡೆಸಿ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿ:  ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ : ಮಳೆಯಆರ್ಭಟದಿಂದ ಚನ್ನಸಾಗರ ಗ್ರಾಮವೇ ಜಯಮಂಗಲಿ ನದಿಯ ನೀರಿನಲ್ಲಿ ಮುಳುಗಿದೆ. 80 ಮನೆಗಳ ಗೋಡೆಗಳು ಬಿರುಕುಬಿಟ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ರೈತರು ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಧವಸದಾನ್ಯ ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ. ಮಧುಗಿರಿ ಆಡಳಿತ ಮತ್ತು ತುಮಕೂರು ಜಿಲ್ಲಾಡಳಿತ ತಕ್ಷಣ ರೈತರ ನೆರವಿಗೆ ಧಾವಿಸಬೇಕಾಗಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿ ಕೊಡಗದಾಲ ಗ್ರಾಪಂ ವ್ಯಾಪ್ತಿಯ ಚನ್ನಸಾಗರ ಗ್ರಾಮದಲ್ಲಿ ಒಟ್ಟು 80ಕ್ಕೂ ಅಧಿಕ ಕುಟುಂಬಗಳಿವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400 ಕ್ಕೂ ಅಧಿಕ ಜನತೆ ವಾಸವಿದ್ದಾರೆ. ಸ್ಥಳೀಯವಾಗಿ ಸರಕಾರಿ ಶಾಲೆ ಅಂಗನವಾಡಿ ಕೇಂದ್ರವಿದ್ದು, ಮಳೆಯ ನೀರಿನಲ್ಲಿ ಮುಳುಗಡೆ ಆಗಿ ಸಮಸ್ಯೆ ಸೃಷ್ಟಿಯಾಗಿದೆ. ಚನ್ನಸಾಗರ ಗ್ರಾಮದ 80ಮನೆಯಲ್ಲಿ ರೈತರು ಶೇಖರಣೆ ಮಾಡಿದ್ದ ರಾಗಿ, ಭತ್ತ ಮತ್ತು ದಿನಸಿ ವಸ್ತುಗಳು ಸಂಪೂರ್ಣ ನಾಶವಾಗಿದೆ. ಜಯಮಂಗಳಿ ನದಿಯ ನೀರು ಮನೆಯೊಳಗೆ ನುಗ್ಗಿರುವ ಪರಿಣಾಮ ಮನೆಯ ಆವರಣ ಕೆಸರು ಗದ್ದೆಯಾಗಿದೆ. ವಿದ್ಯಾರ್ಥಿಗಳ ಪುಸ್ತಕ ಮತ್ತು ರೈತರ ದಾಖಲೆಗಳು ಸಂಪೂರ್ಣ…

Read More

ಕೊರಟಗೆರೆ:  ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ  ಯುವಕ ಜುಲೈ 29 ರಂದು ಕಾಣೆಯಾಗಿದ್ದು, ಕೊರಟಗೆರೆಯಲ್ಲಿ ತನ್ನ ತಂದೆ ನಡೆಸುತ್ತಿರುವ ಟೀ ಸ್ಟಾಲ್ ಗೆ ಹೋಗುವುದಾಗಿ ಹೇಳಿ ಬಂದು ತನ್ನ ತಂದೆಯ ಟಿ ಸ್ಟಾಲ್ ನಲ್ಲಿ ಟೀ ಕುಡಿದು ಮನೆಗೆ ಹೋಗುವುದಾಗಿ ಹೇಳಿ ಹೋದ ಇವರು ಸಂಜೆಯಾದರು ಮನೆಗೆ ಹೊಂದಿರುವುದಿಲ್ಲ. ಗ್ರಾಮದ ಮಂಜುಳ ಶ್ರೀ ಕಂಠಯ್ಯ ಎಂಬವರ  ಮೊದಲನೇಯ ಮಗ ನಂದೀಶ್(23) ಕಾಣೆಯಾದ ಯುವಕನಾಗಿದ್ದು,   ಜುಲೈ 29 ರ ಬೆಳಿಗ್ಗೆ  ಹೋದ ಈತ ಮರಳಿ ಬಂದಿಲ್ಲ.  ನಂದೀಶ್ ಎಡಗೈಯಲ್ಲಿ “ಅಮ್ಮ”ಎಂದು ಹಚ್ಚೆ ಗುರುತು ಇರುತ್ತದೆ. 5ಅಡಿ 6 ಅಂಗುಲ ಎತ್ತರ, ಎಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮಾತು ಬರುವುದಿಲ್ಲ ಹಾಗೂ ಕಿವುಡನಾಗಿರುತ್ತಾನೆ. ನಾಪತ್ತೆಯಾದ ದಿನ ದಿನ ಹಳದಿ ಬಣ್ಣದ ಕೆಂಪು ಗೀರಿನ ರೇಡಿಮೇಡ್ ಶರ್ಟ್  ಸಿಮೆಂಟ್ ಬಣ್ಣದ ಬರ್ಮುಡಾ ಧರಿಸಿರುತ್ತಾನೆ. ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಠಾಣೆಗೆ ತಿಳಿಸಬೇಕು ಅಥವಾ ಈ…

Read More

ಕೊರಟಗೆರೆ: ವರುಣನ ರುದ್ರಾವತಾರ ಮುಂದುವರೆದಿದ್ದು ವೃದ್ದೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕೊರಟಗೆರೆ ತಾಲ್ಲೂಕಿನ ಕುರುಡುಗನಹಳ್ಳಿ ಗ್ರಾಮದ ಲಕ್ಷ್ಮಮ್ಮ  ಕೋಂ ವೀರಕ್ಯಾತಪ್ಪ ಎಂಬ 70 ವರ್ಷದ ವೃದ್ದೆಯು ತನ್ನ ಜಮೀನಿಗೆ ಹೋಗಿ ವಾಪಸ್ ಬರುವ ಮಾರ್ಗ ಮಧ್ಯೆಯ ಹುಂಜಿನ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣವೇ ಕೊರಟಗೆರೆ ಆರಕ್ಷಕ ಠಾಣೆಯ ಸಿಪಿಐ ಸಿದ್ದರಾಮೇಶ್ವರ್ ಮತ್ತು ಆರಕ್ಷಕ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರ ಸಹಕಾರದಿಂದ ವೃದ್ಧೆಯ ಮೃತ ದೇಹವನ್ನು ಹುಡುಕಿ ಹೊರತೆಗೆದಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಮಂಜುಸ್ವಾಮಿ.ಎಂ.ಎನ್ .,  ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ಮಳೆರಾಯನ ಆರ್ಭಟದಿಂದ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಪಾತ್ರದ ಸೇತುವೆಗಳು ಸಂಪೂರ್ಣ ಜಲಾವೃತವಾಗಿದೆ. ಕೊರಟಗೆರೆ ಕ್ಷೇತ್ರದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮಣ್ಣಿನ ಮನೆಗಳು ಕುಸಿದಿವೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾಂತರ ರೂ ನಷ್ಟವಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ಹುಟ್ಟಿ ಹರಿಯುವ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಪಾತ್ರದ 175ಕ್ಕೂ ಅಧಿಕ ಕೆರೆ-ಕಟ್ಟೆಗಳು ಭರ್ತಿಯಾಗಿವೆ. 25ವರ್ಷಗಳ ನಂತರ ಮಾವತ್ತೂರು ಕೆರೆಯ ಕೋಡಿ ಬಿದ್ದಿರುವ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೊಂದು ಕಡೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಗ್ರಾಮೀಣ ಪ್ರದೇಶದ ರೈತರಿಗೆ ಸಮಸ್ಯೆ ಎದುರಾಗಿದೆ. ಗ್ರಾಮೀಣ ಪ್ರದೇಶದ ತೋಟದ ಮನೆಗಳಲ್ಲಿ ವಾಸಿಸುತ್ತೀರುವ ರೈತರಿಗೆ ಈಗಾಗಲೇ ಸಂಕಷ್ಟ ಎದುರಾಗಿದೆ. ಮತ್ತೆ ಮಳೆಯಾದರೇ ಅನಾಹುತ ಎದುರಾಗುವ ಸಾಧ್ಯತೆಯೇ ಹೆಚ್ಚಾಗಿದೆ. ರೈತಾಪಿವರ್ಗ ತೋಟದ ಮನೆಗಳನ್ನು ತೊರೆದು ಗ್ರಾಮಗಳಿಗೆ ಆಗಮಿಸುವಂತೆ ಈಗಾಗಲೇ ಕಂದಾಯ, ಪೊಲೀಸ್ ಇಲಾಖೆ ಮತ್ತು ಗ್ರಾಪಂ ಅಧಿಕಾರಿವರ್ಗ ಮನವಿ ಮಾಡಿದೆ. ಮಳೆರಾಯನ ಆರ್ಭಟದಿಂದ ಸಂಕಷ್ಟ ಎದುರಾಗಿರುವ…

Read More

ತುರುವೇಕೆರೆ: ತಾಲ್ಲೂಕಿನ ಕಲ್ಲೂರು ಕ್ರಾಸ್ ರಸ್ತೆಯಲ್ಲಿ ಕೊಂಡಜ್ಜಿ ಕ್ರಾಸ್ ಹತ್ತಿರ ಸೂಪ್ಪನಹಳ್ಳಿ ಹಳ್ಳದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಮಾರುತಿ ಓಮ್ನಿ ಕಾರು ಕೊಚ್ಚಿ ಕೊಂಡು ಹೋದ ಘಟನೆ ನಡೆದಿದೆ. ಘಟನೆ ವೇಳೆ ಕಾರಿನಲ್ಲಿದ್ದ 70 ವರ್ಷ ವಯಸ್ಸಿನ ಪಟೇಲ್ ಕುಮಾರಯ್ಯ ಎಂಬವರು ನೀರು ಪಾಲಾಗಿದ್ದು, ಚಾಲಕ ಸೇರಿದ್ದಂತೆ ಇಬ್ಬರನ್ನು ದಾರಿ ಹೋಕರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಕೊಚ್ಚಿ ಹೋಗಿರುವ ವೃದ್ಧನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಈವರೆಗೆ ಕಾರೂ ಕೂಡ ಪತ್ತೆಯಾಗಿಲ್ಲ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಗುಬ್ಬಿ: ತಾಲೂಕಿನ ಅಂಕಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಮುಂಬಡ್ತಿ ಹೊಂದಿದ ಡಾ.ಎಸ್.ಕೃಷ್ಣಪ್ಪ ವಿದ್ಯಾರ್ಥಿನಿಯರ ಮೆಚ್ಚಿನ ಶಿಕ್ಷಕರಾಗಿದ್ದು, ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಶಿಕ್ಷಕರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ. ನಿರಂತರ 22 ವರ್ಷಗಳಿಂದ ನಗರದ ಎಂಪ್ರೆಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಡಾ.ಕೃಷ್ಣಪ್ಪ ಅವರು ಇತ್ತೀಚೆಗಷ್ಟೇ ಹಂಪಿ ವಿವಿಯಿಂದ ಪಿ.ಹೆಚ್.ಡಿ. ಪದವಿ ಪಡೆದಿದ್ದರು. ಶಿಕ್ಷಕರ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆಯಲ್ಲಿ ಕೃಷ್ಣಪ್ಪ ಗುರುತಿಸಿಕೊಂಡಿದ್ದರು. ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಿಕ್ಷಕರನ್ನು ಹೋಗ ಬೇಡಿ ಸರ್ ಎಂದು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯರು ಹಾಗೂ ಶಾಲೆಯ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More