ಕೊರಟಗೆರೆ: ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ ಯುವಕ ಜುಲೈ 29 ರಂದು ಕಾಣೆಯಾಗಿದ್ದು, ಕೊರಟಗೆರೆಯಲ್ಲಿ ತನ್ನ ತಂದೆ ನಡೆಸುತ್ತಿರುವ ಟೀ ಸ್ಟಾಲ್ ಗೆ ಹೋಗುವುದಾಗಿ ಹೇಳಿ ಬಂದು ತನ್ನ ತಂದೆಯ ಟಿ ಸ್ಟಾಲ್ ನಲ್ಲಿ ಟೀ ಕುಡಿದು ಮನೆಗೆ ಹೋಗುವುದಾಗಿ ಹೇಳಿ ಹೋದ ಇವರು ಸಂಜೆಯಾದರು ಮನೆಗೆ ಹೊಂದಿರುವುದಿಲ್ಲ.
ಗ್ರಾಮದ ಮಂಜುಳ ಶ್ರೀ ಕಂಠಯ್ಯ ಎಂಬವರ ಮೊದಲನೇಯ ಮಗ ನಂದೀಶ್(23) ಕಾಣೆಯಾದ ಯುವಕನಾಗಿದ್ದು, ಜುಲೈ 29 ರ ಬೆಳಿಗ್ಗೆ ಹೋದ ಈತ ಮರಳಿ ಬಂದಿಲ್ಲ. ನಂದೀಶ್ ಎಡಗೈಯಲ್ಲಿ “ಅಮ್ಮ”ಎಂದು ಹಚ್ಚೆ ಗುರುತು ಇರುತ್ತದೆ. 5ಅಡಿ 6 ಅಂಗುಲ ಎತ್ತರ, ಎಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮಾತು ಬರುವುದಿಲ್ಲ ಹಾಗೂ ಕಿವುಡನಾಗಿರುತ್ತಾನೆ.
ನಾಪತ್ತೆಯಾದ ದಿನ ದಿನ ಹಳದಿ ಬಣ್ಣದ ಕೆಂಪು ಗೀರಿನ ರೇಡಿಮೇಡ್ ಶರ್ಟ್ ಸಿಮೆಂಟ್ ಬಣ್ಣದ ಬರ್ಮುಡಾ ಧರಿಸಿರುತ್ತಾನೆ.
ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಠಾಣೆಗೆ ತಿಳಿಸಬೇಕು ಅಥವಾ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರವಾಣಿ ಸಂಖ್ಯೆ :-ಸಿಪಿಐ 9480802954 ಪಿಎಸ್ ಐ 9480802988 ,9448561740,7760494164ಈ ಸಂಖ್ಯೆಗೆ ಕರೆ ಮಾಡಿ ತಿಳಿಸಲು ಮನವಿ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್ . , ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz