ತುರುವೇಕೆರೆ: ತಾಲ್ಲೂಕಿನ ಕಲ್ಲೂರು ಕ್ರಾಸ್ ರಸ್ತೆಯಲ್ಲಿ ಕೊಂಡಜ್ಜಿ ಕ್ರಾಸ್ ಹತ್ತಿರ ಸೂಪ್ಪನಹಳ್ಳಿ ಹಳ್ಳದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಮಾರುತಿ ಓಮ್ನಿ ಕಾರು ಕೊಚ್ಚಿ ಕೊಂಡು ಹೋದ ಘಟನೆ ನಡೆದಿದೆ.
ಘಟನೆ ವೇಳೆ ಕಾರಿನಲ್ಲಿದ್ದ 70 ವರ್ಷ ವಯಸ್ಸಿನ ಪಟೇಲ್ ಕುಮಾರಯ್ಯ ಎಂಬವರು ನೀರು ಪಾಲಾಗಿದ್ದು, ಚಾಲಕ ಸೇರಿದ್ದಂತೆ ಇಬ್ಬರನ್ನು ದಾರಿ ಹೋಕರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಕೊಚ್ಚಿ ಹೋಗಿರುವ ವೃದ್ಧನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಈವರೆಗೆ ಕಾರೂ ಕೂಡ ಪತ್ತೆಯಾಗಿಲ್ಲ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz