Subscribe to Updates
Get the latest creative news from FooBar about art, design and business.
- ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
- ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
- ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು
- ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭ
- ತುಮಕೂರು ಹಾಲು ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ
- ಮೇ 3 ರಿಂದ 10 ರವರೆಗೆ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಚಾಂಪಿಯನ್ ಶಿಪ್: ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ
- 2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ
Author: admin
ಸರಗೂರು: ಕಾಡಾನೆಗಳು ದಾಳಿ ನಡೆಸಿ ಹತ್ತಿ ಬೆಳೆ ನಾಶ ಮಾಡಿರುವ ಘಟನೆ ತಾಲ್ಲೂಕಿನ ಹಳೆಯೂರು ಗ್ರಾಮದ ಜಮೀನುವೊಂದರಲ್ಲಿ ನಡೆದಿದೆ. ಗ್ರಾಮದ ಗಣೇಶ್ ಎಂಬ ರೈತರು ತಮ್ಮ ಸುಮಾರು 6 ಎಕೆರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಆದರೆ ಕಾಡಾನೆಗಳು ಜಮೀನಿಗೆ ದಾಳಿ ಮಾಡಿದ್ದು, ಸುಮಾರು 2 ಎಕರೆ ಹತ್ತಿ ಬೆಳೆ ನಾಶವಾಗಿದೆ. ಇದರಿಂದಾಗಿ ತಮಗೆ ಸುಮಾರು 1.50 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ರೈತ ಗಣೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮೊಳೆಯೂರು ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಂಗಳೂರು: ನಮ್ಮ ಸಂಘಟನೆಯ ಮೂಲವನ್ನು ಪ್ರಶ್ನಿಸುವ ಮಾನ್ಯ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಮೂಲ ಯಾವುದು ಎಂದು ಸ್ವಲ್ಪ ಬಿಡಿಸಿ ಹೇಳಿದರೆ ಅಸಲಿ ಕಥೆ ದೇಶದ ಜನತೆಗೆ ಗೊತ್ತಾಗುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಸಂಘಟನೆಯ ಮೂಲವನ್ನು ಪ್ರಶ್ನಿಸುವ ಮಾನ್ಯ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಮೂಲ ಯಾವುದು ಎಂದು ಸ್ವಲ್ಪ ಬಿಡಿಸಿ ಹೇಳಿದರೆ ಅಸಲಿ ಕಥೆ ದೇಶದ ಜನತೆಗೆ ಗೊತ್ತಾಗುತ್ತೆ. ಇಲ್ಲದಿದ್ದರೆ ನಾವು ಬಿಚ್ಚಿಡಬೇಕಾಗುತ್ತದೆ ಎಂದರು. ಆರ್.ಎಸ್.ಎಸ್ ಈ ನೆಲದ ಮೂಲ ಅಲ್ಲ ಎಂದು ನಮಗೆ ನಿಮ್ಮಿಂದಾಗಲೀ ಇಲ್ಲವೇ ನಕಲಿ ಕಾಂಗ್ರೆಸ್ ಪಕ್ಷದಿಂದ ಪ್ರಮಾಣಪತ್ರ ಬೇಕಾಗಿಲ್ಲ. ನಮ್ಮ ಸಂಘಟನೆಯ ಹಿನ್ನಲೆ ಏನೆಂಬುದು ಶತಕೋಟಿ ಭಾರತೀಯರಿಗೆ ಗೊತ್ತಿರವಾಗ ನಿಮ್ಮಿಂದ ಇಂತಹ ಟೀಕೆ ಅನಿರೀಕ್ಷಿತವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್ ಈ ನೆಲದ ಮೂಲದಿಂದಲೇ ಬೆಳೆದು ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ನೀವು ಟೀಕೆ ಮಾಡಿದಷ್ಟು ಎತ್ತರಕ್ಕೆ ಬೆಳೆಯುತ್ತದೆ . ನಮ್ಮ…
ತುಮಕೂರು: ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಕಾಂಗ್ರೆಸ್ ನಲ್ಲಿ ಸಕ್ರಿಯ ಕಾರ್ಯಕರ್ತ, ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದರು ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ನಗರದಲ್ಲಿ ಶನಿವಾರ ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು , 1921ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು ಸಂಪೂರ್ಣವಾಗಿ ಆಯೋಜನೆ ಮಾಡಿದವರು ಹೆಡಗೇವಾರ್ ಎಂದರು. ಹೆಡಗೇವಾರ್ ತೀರಿಕೊಳ್ಳುವವರಿಗೂ ಯಾವುದೇ ರಾಜಕೀಯ ಸೂಚನೆ ಕೊಟ್ಟಿರಲಲ್ಲ. ಆರ್ ಎಸ್ ಎಸ್ ಸಂಘಟನೆ ಕಟ್ಟಿದ್ದರು ಎಂದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕೇಶವ ಬಲಿರಾಮ್ ಹೆಡಗೇವಾರ್ ಅವರು ಅನುಶೀಲನಾ ಸಮಿತಿಯ ಸದಸ್ಯರಾಗಿದ್ದರು. ಇಂದಿನ ಕೆಲವರಿಗೆ ಅನುಶೀಲನಾ ಸಮಿತಿ ಎಂದರೆ ಏನು ಅಂತ ಗೊತ್ತಿರಲಿಕ್ಕಿಲ್ಲ ಎಂದೂ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಕೊರಟಗೆರೆ: ಹೆಜ್ಜೇನು ದಾಳಿಯಿಂದ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ಸಾರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಹುಲವಂಗಲ ಗ್ರಾಮದ ಗ್ರಾಪಂ ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿ(65) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪುಟ್ಟಸಂದ್ರದ ರೈ ಸೋಮಣ್ಣ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯಲ್ಲಿ ಸಂಕೇನಹಳ್ಳಿ ಗ್ರಾಮದ ಜಯಪ್ರಕಾಶ್ ಮತ್ತು ಶರತ್ ಎಂಬವರಿಗೆ ಗಾಯಗಳಾಗಿದ್ದು, ಅವರಿಗೆ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಎಸ್ಸಾರ್ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ಆಲದ ಮರದಲ್ಲಿ ನಾಲ್ಕು ಹೆಜ್ಜೇನು ಗೂಡುಗಳಿದ್ದು, ಈಗಾಗಲೇ ಸಾಕಷ್ಟು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ತಹಶೀಲ್ದಾರ್ ನಹೀದಾ, ಕೋಳಾಲ ಪಿಎಸೈ ಮಹಾಲಕ್ಷ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಕೊಟ್ಟಾಯಂ: ಕೊಟ್ಟಾಯಂನಲ್ಲಿ ಕ್ರೀಮ್ ಬನ್ ನಲ್ಲಿ ಕ್ರೀಂ ಇಲ್ಲ ಎಂದು ಆರೋಪಿಸಿ ಬೇಕರಿ ಮಾಲೀಕನನ್ನು ದುಷ್ಕರ್ಮಿಗಳು ಥಳಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ಇದೇ ಬೇಕರಿಯಲ್ಲಿ ಟೀ ಕುಡಿದ ವೃದ್ಧನಿಗೂ ತಂಡ ಹಲ್ಲೆ ನಡೆಸಿದೆ. ಇಲ್ಲಿನ ವೈಕಂ ತಾಲೂಕು ಆಸ್ಪತ್ರೆ ಬಳಿ ಇರುವ ಟೀ ಅಂಗಡಿಗೆ ಆರು ಯುವಕರು ಟೀ ಕುಡಿಯಲು ಬಂದಿದ್ದರು. ಈ ವೇಳೆ ಕ್ರೀಂ ಬನ್ ನಲ್ಲಿ ಕ್ರೀಂ ಇಲ್ಲವೆಂದು ಹೇಳಿ ಬೇಕರಿ ಮಾಲಿಕ ಶಿವಕುಮಾರ್, ಅವರ ಪತ್ನಿ ಕವಿತಾ, ಮಕ್ಕಳಾದ ಕಾಶಿನಾಥನ್ ಮತ್ತು ಸಿದ್ಧಿ ವಿನಾಯಕ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾ ಕುಡಿಯಲು ಬಂದ 95 ವರ್ಷದ ವೇಲಾಯುಧನ್ ಎಂಬವರಿಗೆ ಬಿಸಿ ಇಲ್ಲದ ಟೀ ಕುಡಿಯುತ್ತೀಯಾ? ಎಂದು ಪ್ರಶ್ನಿಸಿ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಮದಾಗಿ ವೇಲಾಯುಧನ್ ಅವರ ಸೊಂಟಕ್ಕೆ ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಪೊಲೀಸರು ದಾಳಿಕೋರರನ್ನು ಮರವಂತುರುತ್ತು ನಿವಾಸಿಗಳು ಎಂದು ಗುರುತಿಸಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ…
ಸಿಂಗಾಪುರ: ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ಸಿಂಗಾಪುರ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಇದರಿಂದ ಶುದ್ಧ ನೀರಿನ ನಷ್ಟ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.ಈಗ ಹೊಸ ಬಿಯರ್ ಅನ್ನು ಸಿಂಗಾಪುರದಲ್ಲಿ ನ್ಯೂಬ್ರೂ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಿಯರ್‌ನ ರುಚಿ ಅತ್ಯುತ್ತಮವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿಯೂ ಈ ಕಲ್ಪನೆಯ ಹಿಂದೆ ಇದೆ. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಬಿಯರ್ ಅನ್ನು ಮೂತ್ರದಿಂದ ಹಲವಾರು ಶುದ್ಧೀಕರಣ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಸಿಹಿನೀರಿನ ಕೊರತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಈ ಕಲ್ಪನೆಯು ಒಳ್ಳೆಯದು ಎಂದು ಅಧಿಕಾರಿಗಳು ಹೇಳುತ್ತಾರೆ. ಈಗ ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಮೂತ್ರ ಬಿಯರ್ ಲಭ್ಯವಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ವಾರ ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಹಿರಿಯೂರು ನಗರಸಭೆ ನಿರ್ಮಾಣದ ರಸ್ತೆಯ ಕಾಮಗಾರಿಯ ನಿಜ ಬಣ್ಣ ಇದೀಗ ಬಯಲಾಗಿದೆ. ಮಹಾಮಾರಿ ಕೊರೋನಾದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಆದರೆ ಹಿರಿಯೂರು ತಾಲ್ಲೂಕಿನ ನಗರಸಭೆಯಿಂದ ನಿರ್ಮಾಣ ಮಾಡಿರುವ ರಸ್ತೆ ಕಾಮಗಾರಿ ಕಳಪೆ ಮಾಡಿ, ಹಿರಿಯೂರು ನಗರಸಭೆಯ ಸಾಮಾನ್ಯ ನಿಧಿ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ರೂ. 25,00000 ಹಣ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಂದ ಹಾಗೆ ಗುತ್ತಿಗೆದಾರರು ನಿರ್ಮಿಸಿದ ಆ ಅಂದದ ರಸ್ತೆ ಬಗ್ಗೆ ನಿಮಗೆ ಹೇಳ್ತೀವಿ ನೋಡಿ. ಕಣ್ಣು ಹಾಯಿಸಿದಷ್ಟು ದೂರ ಬಿರುಕು, ಅಲ್ಲಲ್ಲಿ ಮಂಡಿ ಆಳದ ಗುಂಡಿ, ಹೊಳೆಯಂತೆ ಹರಿಯುವ ನೀರು. ನಡೆದುಕೊಂಡು ಹೋಗಲು ಪ್ರಯಾಸಪಡಬೇಕಾದ ಪರಿಸ್ಥಿತಿ. ಇದೆಲ್ಲಾ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಹಿರಿಯೂರು ನಗರದ ವೇದಾವತಿ ನಗರದಿಂದ ಹಿಡಿದು ಮೈಸೂರು ರಸ್ತೆ, ಚರ್ಚ್ ರಸ್ತೆ , ಗಾಂಧಿ ಸರ್ಕಲ್…
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಚಿಕ್ಕರಸನಹಳ್ಳಿ ಗ್ರಾಮದಲ್ಲಿ ಬೆಳ್ಳಬೆಳಗ್ಗೆಯೇ ಆಹಾರವನ್ನು ಅರಸಿ ಬಂದಂತಹ 2 ಕರಡಿಗಳು ಊರಿನ ಹೊರ ಭಾಗದಲ್ಲಿ ಇರುವಂತಹ ಗ್ರಾಮಠಾಣ ಜಮೀನಿನಲ್ಲಿ ಇರುವ ಹಳೆ ಬಾವಿ ಹೊಂಡದಲ್ಲಿ ಅವಿತು ಕುಳಿತಿರುವ ಘಟನೆ ಇಂದು ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕರಡಿಗಳನ್ನು ನೋಡಿ ಊರಿನ ಹಿರಿಯರ ಗಮನಕ್ಕೆ ತಂದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆಯನ್ನು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮಧುಗಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿಕೊಂಡು.ಎರಡು ಕರಡಿಗಳ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಕೊರಟಗೆರ ಆರಕ್ಷಕ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ನೀಡಿದ್ದಾರೆ. ಅಪಾಯದ ವಾತಾವರಣ ವಿರುವುದರಿಂದ ಗಡಿಬಿಡಿ ಗೊಂದಂತಹ ಊರಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ನಂತರ ಘಟನೆಯ ಬಗ್ಗೆ ತಹಶೀಲ್ದಾರ್…
ತುಮಕೂರು: ಜಿಲ್ಲೆಯ ಕುಣಿಗಲ್ ಹಾಗೂ ತುರುವೇಕೆರೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕುಣಿಗಲ್ ಪಟ್ಟಣದ ಉಪ್ಪಾರ ಬೀದಿ ನಿವಾಸಿ ಅಶ್ವಥ್ (42) ತಮ್ಮ ಮನೆಯಲ್ಲೇ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶ್ವಥ್ ಹಲವು ದಿನಗಳಿಂದ ರಕ್ತದ ಒತ್ತಡದಿಂದ ಬಳಲುತ್ತಿದ್ದರು. ಜತೆಗೆ ಅವರ ಮಗ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಮನನೊಂದ ಅವರು, ತನ್ನ ಪತ್ನಿ ಹಾಗೂ ಮಕ್ಕಳನ್ನು ತಿರುಪತಿಗೆ ಕಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಘಟನೆಯಲ್ಲಿ ತುರುವೇಕೆರೆ ತಾಲೂಕು ದೆಬ್ಬೇಘಟ್ಟ ಹೋಬಳಿ ದೇವನಾಯಕನಹಳ್ಳಿ ಗ್ರಾಮದ ಕೆಂಪರಾಜು (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಪರಾಜು ಮೂಲತಃ ದೇವನಾಯಕನಹಳ್ಳಿ ಗ್ರಾಮದವರಾಗಿದ್ದು, ಕಳೆದ ಐದು ವರ್ಷಗಳಿಂದ ಕುಣಿಗಲ್ ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ನಡುವೆ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಅನಾರೋಗ್ಯದಿಂದ ಬೇಸತ್ತ ಅವರು,, ಕುಣಿಗಲ್ ಪಟ್ಟಣದ ಶಿಕ್ಷಕರ ಭವನದ ಕಿಟಕಿಗೆ ಹಗ್ಗ ಬಿಗಿದುಕೊಂಡು…
ನವದೆಹಲಿ: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೋಷಿ ಎಂದು ಕ್ಲೀನ್ ಚಿಟ್ ನೀಡಲಾಗಿದೆ. ಸುದೀರ್ಘ ವಿಚಾರಣೆ ನಡೆಸಿದ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಆರ್ಯನ್ಖಾನ್ ವಿರುದ್ಧ ಆರೋಪ ಸಾಬೀತು ಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಲಾಗಿದೆ. ಆರ್ಯನ್ ಖಾನ್ ಜತೆಗಿದ್ದ ಇತರ ನಾಲ್ವರ ವಿರುದ್ಧವೂ ಪ್ರಕರಣವನ್ನು ಕೈ ಬಿಡಲಾಗಿದೆ. ಕಳೆದ ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಷಾರಾಮಿ ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದು, ಅದರಲ್ಲಿ ಮಾದಕ ವಸ್ತು ಬಳಕೆಯಾಗುತ್ತಿದೆ ಎಂಬ ಸುಳಿವು ಆಧರಿಸಿ ದಾಳಿ ನಡೆಸಿದ ಎನ್ಸಿಬಿ ಆರ್ಯನ್ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5