Subscribe to Updates
Get the latest creative news from FooBar about art, design and business.
- ಮತಗಳ್ಳತನ: ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿ.ಕೆ. ಶಿವಕುಮಾರ್
- ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿಯಾಗಲಿ: ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
Author: admin
ಮಧುಗಿರಿ: ‘ನಾಕುತಂತಿ’ ‘ಮೀಟಿದ’ ‘ನಾದಲೀಲೆ’ಯ ಗಾರುಡಿಗ ಯುಗದ ದನಿ ಬೇಂದ್ರೆ ಎಂದು ಹಿರಿಯ ಸಾಹಿತಿ ಪ್ರೊಪೆಸರ್ ಮೊ .ಲ.ನ.ಮೂರ್ತಿ ತಿಳಿಸಿದರು. ಪಟ್ಟಣದ ಟಿ.ವಿ.ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ದ.ರಾ.ಬೇಂದ್ರೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಸಿ ಕಾವ್ಯಪರಂಪರೆ ಮುಂದುವರೆಸಿಕೊಂಡು ಸ್ವಂತಿಕೆಯನ್ನು ತೋರಿದ ಕವಿ ನೋವನ್ನು ಅರಗಿಸಿಕೊಂಡು ಪಟ್ಟಪಾಡನ್ನೆಲ್ಲ ಹುಟ್ಟುಹಾಡನ್ನಾಗಿ ಜನಕೆ ನೀಡಿದರು. ನಂತರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದರು ಎಂದರು. ಬೇಂದ್ರೆ ಕುರಿತು ಮಾತನಾಡಿದ ಉಪನ್ಯಾಸಕ ಎಚ್.ನರಸಿಂಹರಾಜು ನೆಲಮೂಲ ಸಂಸ್ಕೃತಿಯ ಕಸುವನ್ನು ಕನ್ನಡಕಾವ್ಯಕ್ಕೆ ತಂದಿತ್ತ ಕವಿ ಜನಸಾಮಾನ್ಯರ ಭಾಷೆಯನ್ನು ಕಾವ್ಯಕ್ಕೆ ಕೊಟ್ಟ ಕೀರ್ತಿ ಅವರದು, ತಿಳಿದು ಬದುಕಿರಿ, ತುಳಿದು ಬದುಕದಿರಿ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆ ಕನ್ನಡ ಕಾವ್ಯಕ್ಕೆ ಹೊಸ ರೂಪರೇಖೆಗಳನ್ನು ತಂದುಕೊಟ್ಟ ವರಕವಿ. ಅವರ ಕಾವ್ಯ ಪ್ರಭಾವ ಮುಂದಿನ ಕವಿಗಳ ಮೇಲೆ ಆಗಿರುವುದನ್ನು ಅಲ್ಲಲ್ಲಿ ಕಾಣಬಹುದಾಗಿದೆ ಎಂದರು. ಉಪನ್ಯಾಸಕರಾದ ಗೋವಿಂದರಾಜು, ಮಣಿಕಂಠ, ವಿನುಕುಮಾರ್ ಬೇಂದ್ರೆಯ ‘ಮೇಘಧೂತ’ ಅನುವಾದ ಕುರಿತು ಮಾತನಾಡಿದರು.…
ಭಾರತದಲ್ಲಿ ಬಹಳ ರಾಜ್ಯಗಳಲ್ಲಿ ಹೈಲಿ ಎಜುಕೇಟೆಡ್, ಸಾಕ್ಷರತಾ ಪ್ರಮಾಣ ಬಹಳ ಹೆಚ್ಚಿರುವ ರಾಜ್ಯಗಳಿವೆ. ಹಾಗೆಯೇ ಈ ರಾಜ್ಯಗಳು ತುಂಬಾ ಸುರಕ್ಷಿತ ಅಂತಾನೂ ಹೇಳಲಾಗಿದೆ. ಭಾರತದಲ್ಲಿ ಮತ್ತೊಂದೆಡೆ ಉತ್ತರಪ್ರದೇಶ, ಹರಿಯಾಣ, ದೆಹಲಿ, ಜಾರ್ಖಂಡ್ ಹೀಗೆ ಕೆಲ ರಾಜ್ಯಗಳಲ್ಲಿ ಕ್ರೈಂ ರೇಟ್ ಕೇಳಿದ್ರೆ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ. ಆದ್ರೆ ಕ್ರೈಂ ರೇಟ್ ಬಹಳ ಕಡಿಮೆ ಇರುವಂತಹ ಭಾರತದ ಟಾಪ್ 9 ರಾಜ್ಯಗಳ ಬಗ್ಗೆ ತಿಳಿಯೋಣ. ಜಿವಿಐ ಇಂಡೆಕ್ಸ್ ನ ವರದಿಯ ಆದಾರದಲ್ಲಿ ಸುರಕ್ಷಿತ ರಾಜ್ಯಗಳ ಪಟ್ಟಿ ನೋಡೋದಾದ್ರೆ ( ಜಿವಿಐ ಇಂಡೆಕ್ಸ್ ಪ್ರತಿ ವರ್ಷ ಅಪರಾಧಗಳ ಪ್ರಮಾಣ , ಪ್ರಮುಖವಾಗಿ ಮಹಿಳೆಯರ ಮೇಲಿನ ದೌರ್ಜನ್ಯದ ಆಧಾರದ ಮೇಲೆ ನಡೆಸಲಾಗುವ ಸಮೀಕ್ಷೆಯ ವರದಿ) – ಈ ವರದಿಯಲ್ಲಿ ಹಿಂದಿನ ವರ್ಷಗಳ ಅಪರಾಧಗಳು ಹಾಗೂ ಈಗಿನ ಅಪರಾಧ ಪ್ರಮಾಗಳನ್ನೂ ತಾಳೆ ಹಾಕಿ ಬಳಿಕವೇ ರಿಪೋರ್ಟ್ ರಿಲೀಸ್ ಮಾಡಲಾಗುತ್ತದೆ. ಅಂದ್ರೆ ಜಿವಿಐ ರೇಟ್ ಹೆಚ್ಚಿದ್ದಷ್ಟು ಸುರಕ್ಷತಾ ಪ್ರಮಾಣ ಹೆಚ್ಚಾಗಿರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು. 09. ತಮಿಳುನಾಡು…
ಪ್ರಪಂಚದ ಶ್ರೀಮಂತ ಟೂರ್ನಿ ಎಂದೇ ಹೆಸರಾಗಿರುವ IPL ಟೂರ್ನಿಯ 15ನೇ ಆವೃತ್ತಿಗಾಗಿ ದಿನಾಂಕ ಘೋಷಿಸಿದ BCCI , ಇದೇ ತಿಂಗಳು ಅಂದರೆ ಫೆಬ್ರವರಿ 12 & 13 ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೇ ನಡೆಯಲಿದ್ದು ಅದಕ್ಕಾಗಿ 590 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 590 ಆಟಗಾರರಲ್ಲಿ 228 ಕ್ಯಾಪ್ಡ್ ಮತ್ತು 355 ಅನ್ ಕ್ಯಾಪ್ಡ್ ಮತ್ತು 7 ಅಸೋಸಿಯೇಟ್ ನೇಷನ್ಸ್’ಗೆ ಸೇರಿದವರಾಗಿದ್ದಾರೆ. ಎರಡು ಹೊಸ IPL ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ & ಟೀಮ್ ಅಹ್ಮದಾಬಾದ್ ಕೂಡಾ ಭಾಗವಹಿಸಲಿವೆ. ಈ ಹರಾಜಿನಲ್ಲಿ ಎಲ್ಲಾ ತಂಡದ ಮಾಲೀಕರು ಮತ್ತು ಮುಖ್ಯ ಕೋಚ್’ಗಳು ಭಾಗವಹಿಸಿ ತಮ್ಮ ತಂಡಕ್ಕೆ ಬೇಕಾದಂತಹ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆಯು ಪ್ರತಿ ವರ್ಷವೂ ಸಹ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈ ಬಾರಿ, ಕೊವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ. ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಫೆಬ್ರವರಿ 17ರಂದು ನೆರವೇರಲಿದೆ. ಫೆ.5ರಂದು ಕಂಕಣಧಾರಣೆ, 19ರಂದು ಕರ್ಪೂರದಾರತಿ, 21ರಂದು ಕಂಕಣ ವಿಸರ್ಜನೆ ನಡೆಯಲಿದೆ. ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಶ್ರೀಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಾಣವಾಗಿದೆ ಎಂಬುದು ನಂಬಿಕೆಯಾಗಿದೆ. ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ…
ಪಾವಗಡ: ತಾಲ್ಲೂಕಿನ ಕಸಬಾ ಹೋಬಳಿ ಗಡಿ ಭಾಗದ ಕನ್ನಮೆಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಪಾಳ್ಯ ಮತ್ತು ಹನುಮಯ್ಯಪಾಳ್ಯ ದಿಂದ ಹೊನ್ನಮೆಡಿ ಮತ್ತು ಕನ್ನಮೆಡಿಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಯಾಗಿ ಮಾರ್ಪಟ್ಟಿದೆ. ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು, ರಸ್ತೆಗೆ ಹಾಕಲಾಗಿರುವ ಜಲ್ಲಿಗಳು ಎದ್ದು, ಜಲ್ಲಿಕಲ್ಲಿನ ರಸ್ತೆಯಂತೆ ಕಂಡು ಬಂದಿದೆ. ರಸ್ತೆ ಸಂಪೂರ್ಣವಾಗಿ ಧೂಳುಮಯವಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣಿಕರು ಹಾಗೂ ಇಲ್ಲಿನ ಗ್ರಾಮಸ್ಥರು ದಿನನಿತ್ಯ ಧೂಳಿನಿಂದ ಕಂಗೆಡುವಂತಾಗಿದೆ. ರಸ್ತೆ ಅವ್ಯವಸ್ಥೆಯಿಂದ ಈ ಭಾಗದಲ್ಲಿ ಬಸ್ ಗಳ ಕೊರತೆ ಕೂಡ ಆಗಿದೆ. ಇದರಿಂದ ಶಾಲೆಗೆ ಹೋಗಲು ಕೂಡ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬರು ಮಾಧ್ಯಮದ ಜೊತೆಗೆ ಮಾತನಾಡುತ್ತಾ ದೂರಿದರು. ಹೊನ್ನಮೆಡಿ ಮಧ್ಯದಲ್ಲಿ ಇರುವ ಹಳ್ಳದ ಮೋರಿಯೊಂದು ಬಿದ್ದು ಸುಮಾರು ಎರಡು ಮೂರು ವರ್ಷಗಳು ಕಳೆದರೂ ಇಲ್ಲಿನ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಥಳೀಯ ಶಾಸಕರಂತೂ ಈ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ರಸ್ತೆಯಲ್ಲಿ ನಿರಂತರವಾಗಿ ಟಿಪ್ಪರ್ ಗಳು ಹೋಗುತ್ತಿದೆ. ಇದರಿಂದಾಗಿ…
ಚಿಕ್ಕನಾಯಕನ ಹಳ್ಳಿ: ಚಿಕ್ಕನಾಯಕನ ಹಳ್ಳಿ ತಹಶೀಲ್ದಾರ್ ತೇಜಸ್ವಿನಿ ಅವರ ವಿರುದ್ಧ ಅಟ್ರಾಸಿಟಿ ದೂರು ದಾಖಲಾಗಿದ್ದರೂ, ಈವರೆಗೆ ಅವರನ್ನು ಬಂಧಿಸಲಾಗಿಲ್ಲ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನ ಹಳ್ಳಿ ತಹಸೀಲ್ದಾರ್ ವಿರುದ್ದ ಅಟ್ರಾಸಿಟಿ ದೂರು ದಾಖಲಾಗಿ ನಾಲ್ಕು ದಿನಗಳು ಕಳೆದವು. ಆದರೆ ಆರೋಪಿತೆ ತಹಸೀಲ್ದಾರ್ ರನ್ನು ಇದುವರೆಗೂ ಬಂಧಿಸಿಲ್ಲ. ಗಂಭೀರ ಆರೋಪ ಹೊತ್ತಿರುವ ತಹಸೀಲ್ದಾರ್ ರನ್ನು KCSR ನಿಯಮದಂತೆ ಕೂಡಲೇ ಅಮಾನುತುಗೊಳಿಸುವಂತೆ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಇದುವರೆಗೂ ಅಮಾನತ್ತು, ವರ್ಗಾವಣೆ ಮಾಡಿರುವುದಿಲ್ಲ ಎಂದು ಅವರು ಹೇಳಿದರು. ತುರ್ತಾಗಿ ಸಂಬಂಧಿಸಿದ ಪೊಲೀಸ್ ಆಡಳಿತ ಆರೋಪಿತೆ ತಹಸೀಲ್ದಾರ್ ಅವರನ್ನು ಬಂಧಿಸದಿದ್ದರೆ , ಅಮಾನತ್ತುಗೊಳಿಸದಿದ್ದರೆ ಮುಂದಿನ ಕಾನೂನು ಹೋರಾಟ ಮುಂದಾಗಲಾಗುವುದು ಎಂದು ಜಿಲ್ಲಾಡಳಿತವನ್ನು ಅವರು ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ವೇದಿಕೆ…
ಮಧುಗಿರಿ: ಪುರಸಭೆ ವ್ಯಾಪ್ತಿಯಲ್ಲಿ ಕಂದಾಯ, ಟ್ರೇಡ್ ಲೈಸನ್ಸ್ ಮತ್ತು ಬೀದಿಬದಿ ವ್ಯಾಪಾರಿಗಳು ಪರವಾನಿಗೆ ಪಡೆಯದೆ ವ್ಯಾಪಾರ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ತಂಡ ಪಟ್ಟಣದ ಪ್ರತಿಯೊಂದು ಅಂಗಡಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಪರವಾನಿಗೆ ನವೀಕರಣ ಮಾಡಿದ ಘಟನೆ ಮಂಗಳವಾರ ನಡೆಯಿತು. ಕೊರೊನಾ ಕಾರಣದಿಂದಾಗಿ ಟ್ರೇಡ್ ಲೈಸೆನ್ಸ್ ನವೀಕರಣವನ್ನು ಕೆಲವು ಅಂಗಡಿಗಳ ಮಾಲೀಕರು ಮಾಡಿಸಿಕೊಂಡಿರದ ಕಾರಣ ಸ್ಥಳದಲ್ಲೇ ಪರಿಶೀಲನೆ ನಡೆಸಿ ಪರವಾನಿಗೆ ಆದೇಶವನ್ನು ಮುಖ್ಯಾಧಿಕಾರಿ ನೀಡಿದರು. ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಂಡು ದಂಡವನ್ನು ಹಾಕಲಾಯಿತು. ಪಟ್ಟಣದಲ್ಲಿರುವ ಬಹುತೇಕ ಮೊಬೈಲ್ ಅಂಗಡಿಯವರು ಟ್ರೇಡ್ ಲೈಸೆನ್ಸ್ ಪಡೆಯುವಂತೆ ಸಾಕಷ್ಟು ಬಾರಿ ಸೂಚನೆ ನೀಡಿದರೂ ಲೈಸೆನ್ಸ್ ಪಡೆದಿಲ್ಲ ಅಂದಾಗ ಮುಖ್ಯಾಧಿಕಾರಿಗಳು ಅಂತಹ ಅಂಗಡಿಗಳನ್ನು ಮುಚ್ಚಿಸಿ ಎಂದರು. ರಿಯಲ್ ಮಿ, ಸಂಗೀತ ಮೊಬೈಲ್ಸ್ ಮಾಲಿಕರುಗಳಿಗೆ ನೋಟಿಸ್ ನೀಡಿದೆ ಅವರು ಟ್ರೇಡ್ ಲೈಸೆನ್ಸ್ ಪಡೆದಿಲ್ಲ ಎಂದು ತಿಳಿಸಿದರು. ಈ ವೇಳೆ ಕಂದಾಯ ತನಿಖಾಧಿಕಾರಿಗಳು, ಆರೋಗ್ಯ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಳ್ಳಕೆರೆ ರಸ್ತೆಯಲ್ಲಿರುವ ಕೃಷಿ ಇಲಾಖೆಯಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಳ್ಳಲು ಆಗಮಿಸುತ್ತಿರುವ ರೈತರನ್ನು ಎನ್ ಒ ಸಿ ಮೊದಲಾದ ಕಾರಣಗಳನ್ನು ಮುಂದಿಟ್ಟು ಸತಾಯಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ. 50ರಿಂದ ನೂರು ಕಿ.ಮೀ. ದೂರದಿಂದ ಆಗಮಿಸುತ್ತಿರುವ ರೈತರು ಕೃಷಿ ಇಲಾಖೆಗೆ ಆಗಮಿಸಿದ ವೇ, ಎನ್ ಒ ಸಿ ಮೊದಲಾದ ಕಾರಣಗಳನ್ನು ನೀಡಿ ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ನಮಗೆ ಕೆಲಸವಾಗಿದೆ ಎಂದು ಧರ್ಮಪುರ ಹೋಬಳಿ ಸಕ್ಕರ ಗ್ರಾಮದ ವಾಸಿ ರೈತ ರಂಗಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳು ಸಹ ರೈತರ ಬಳಿ ನಿರ್ಲಕ್ಷ್ಯ ತನ ತೋರುತ್ತಿದ್ದು, ರೈತರ ಜೊತೆಗೆ ಅಗೌರವದಿಂದ, ತಿರಸ್ಕಾರ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ ರಂಗಸ್ವಾಮಿ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. ನನಗೆ ಮಾತ್ರವಲ್ಲ, ಕೃಷಿ ಇಲಾಖೆಗೆ ಬರುತ್ತಿರುವ ಪ್ರತಿಯೊಬ್ಬರಿಗೂ ಇಂತಹ ಅನುಭವವಾಗುತ್ತಿದೆ. ಇಲ್ಲಿನ ಅಧಿಕಾರಿಗಳು ರೈತರನ್ನು ಗದರಿ ದರ್ಪದಿಂದ ನಡೆದುಕೊಳ್ಳುವಂತಹ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಅವರು…
ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ 12ನೇ ಶತಮಾನದ ಬಸವಾದಿ ಶಿವಶರಣರಲ್ಲಿ ಅಗ್ರಗಣ್ಯರಾದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥರವರು ಉದ್ಘಾಟಿಸಿದರು. ಮಾಚಿದೇವರು ಸಾಕ್ಷಾತ್ ವೀರಭದ್ರನ ಅಪರಾವತಾರ ನೇರ ನಿಸ್ಟೂರ ನಡೆ ನುಡಿ ಕಾಯಕ ಸಂಪನ್ನರಾಗಿದ್ದ ಮಾಚಿದೇವರು ವಚನ ಸಾಹಿತ್ಯ ರಕ್ಷಣೆಯಲ್ಲಿ ಇತಿಹಾಸ ಸೃಷ್ಟಿಸಿದ ಮಹಾನ್ ಚೇತನ ಎಂದು ತಾಲ್ಲೂಕು ಮಡಿವಾಳ ಸಂಘದ ಅದ್ಯಕ್ಷರಾದ ಆರ್.ನಿಜಲಿಂಗಪ್ಪನವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ನುಡಿನಮನ ಸಲ್ಲಿಸಿದರು. ಮಡಿವಾಳ ಮಾಚಯ್ಯ ಪುರಾಣ ಪ್ರಸಿದ್ಧಿ ಒಮ್ಮೆದಕ್ಷ ಬ್ರಹ್ಮನು ಶಿವನನ್ನು ಹೊರತುಪಡಿಸಿ ಎಲ್ಲಾ ಮಹಾಗಣಂಗಳ ಆಹ್ವಾನಿಸಿ ಮಹಾರುದ್ರಯಾಗ ಮಾಡುತ್ತಿರುತ್ತಾನೆ. ಶಿವನ ಪತ್ನಿ ದಾಕ್ಷಾಯಿಣಿ ತನ್ನ ತಂದೆಯಾದ ದಕ್ಷಬ್ರಹ್ಮ ಕರೆಯದಿದ್ದರೂ, ಯಾಗಕ್ಕೆಶಿವನ ಮಾತು ಮೀರಿ ಹೊಗುತ್ತಾಳೆ. ಅವಮಾನ ತಾಳಲಾರದೆ ಯಜ್ಞಕುಂಡಕ್ಕೆ ಬಿದ್ದು ಆಹುತಿಯಾತ್ತಾಳೆ. ಇದರಿಂದ ಕುಪಿತಗೊಂಡ ಶಿವನ ಆದೇಶದಂತೆ ವೀರಭದ್ರ ದಕ್ಷನ ಸಂಹಾರ ಮಾಡುತ್ತಾನೆ. ದಕ್ಷನ ಸಂಹರಿಸಿ ವಿಜಯ ಸಂತಸದಲಿ ವೀರಭದ್ರ ಶಿವನ ಒಡ್ಡೋಲಗಕೆ ಆಗಮಿಸುವಾಗ ರಕ್ತಸಿಕ್ತ ಖಡ್ಗದ ಅಲಗು ಶಿವಶರಣ ವಸ್ತ್ರಗಳಿಗೆ…
ನಂಜನಗೂಡು: ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಹುಲಿಯೊಂದು ಕೊಂದು ಹಾಕಿದ್ದು, ಇದರಿಂದ ತಾಲ್ಲೂಕಿನ ಹೆಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಹದೇವನಗರ ಗ್ರಾಮದ ಸಾಕಮ್ಮ ಕೊಂ ಪಾಪಣ್ಣ ಎಂಬವರಿಗೆ ತೀವ್ರ ನಷ್ಟವಾಗಿದೆ. ಅಂದಾಜು 150000 ರೂ. ಬೆಲೆ ಬಾಳುವ ಹಾಲು ಕರೆಯುವ ಹಿಲಾತಿ ಹಸುಗಳನ್ನು ಬಂಡೀಪುರ ರಾಷ್ಟ್ರೀಯ ಹುಲಿ ಸುರಕ್ಷಿತ ಅರಣ್ಯದಿಂದ ಬಂದ ಹುಲಿಯೊಂದು ಕೊಂದು ತಿಂದು ಹಾಕಿದೆ. ಹಸುಗಳನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಇದೀಗ, ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದೆ. ಈ ಕುರಿತು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದರೆ, ಈ ಜಮೀನು ಅರಣ್ಯ ಪ್ರದೇಶದ ಭಾಗದಲ್ಲಿರುವುದರಿಂದ ಯಾವುದೇ ಪರಿಹಾರ ನೀಡಲು ಬರುವುದಿಲ್ಲವೆಂದು ನಿರ್ಲಕ್ಷಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತನದ ಉತ್ತರದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದು, ಆದರೆ ಸ್ಥಳೀಯರ ನೆರವಿನಿಂದ ಅವರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ. ಕುಟುಂಬದ ಸದಸ್ಯರು ಮಾನಸಿಕವಾಗಿ ತೀವ್ರ ನೊಂದಿದ್ದು, ಅವರಿಗೆ ತಕ್ಷಣವೇ ಪರಿಹಾರ ನೀಡುವ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಇಲಾಖಾಧಿಕಾರಿಗಳು ಮಾಡಬೇಕು. ಆ ಕುಟುಂಬಕ್ಕೆ ಏನಾದರೂ…